• Home
  • »
  • News
  • »
  • trend
  • »
  • Food Trend: ಈ ವರ್ಷ ಯಾವೆಲ್ಲಾ ವೆರೈಟಿ ಆಹಾರ ಫೇಮಸ್? ಏನಿದೆ 2022ರ ಟ್ರೆಂಡ್?

Food Trend: ಈ ವರ್ಷ ಯಾವೆಲ್ಲಾ ವೆರೈಟಿ ಆಹಾರ ಫೇಮಸ್? ಏನಿದೆ 2022ರ ಟ್ರೆಂಡ್?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Food Trend 2022: ಆಹಾರ ಪ್ಯಾಕೇಜಿಂಗ್ ಮತ್ತು ವಿತರಣೆಯಲ್ಲಿ ಸುಸ್ಥಿರತೆಯ ಬೇಡಿಕೆಯು 2022 ರಲ್ಲಿ ಹೆಚ್ಚಿನ ವೇಗವನ್ನು ಪಡೆಯುತ್ತದೆ. ಗ್ರಾಹಕರು ಹೆಚ್ಚು ಪರಿಸರ ಪ್ರಜ್ಞೆಯನ್ನು ಹೊಂದುತ್ತಿದ್ದಾರೆ ಮತ್ತು ಆಹಾರ ವಿತರಣಾ ಸೇವೆಗಳು ಈ ಪರಿಸರವನ್ನು ಉಳಿಸಲು ಅಪಾರ ಕೊಡುಗೆ ನೀಡುವ ಅಭ್ಯಾಸಗಳನ್ನು ಅನುಸರಿಸುತ್ತಿವೆ ಎಂಬುದನ್ನ ಖಚಿತಪಡಿಸಿಕೊಂಡು ಆಯ್ಕೆ ಮಾಡುತ್ತಾರೆ.

ಮುಂದೆ ಓದಿ ...
  • Share this:

ಸುಮಾರು ಎರಡು ವರ್ಷಗಳಿಂದ, ಎಂದರೆ ಈ ಕೋವಿಡ್-19 (Corona) ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತ ಹರಡಿರುವಾಗ ಬಹುತೇಕವಾಗಿ ಎಲ್ಲದರ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೋವಿಡ್-19 ಇಡೀ ಆಹಾರ (Food) ವ್ಯವಸ್ಥೆಯನ್ನು ವಿಶ್ವದಾದ್ಯಂತ ಅಸ್ತವ್ಯಸ್ತಗೊಳಿಸಿದೆ ಎಂದು ಹೇಳಬಹುದು. ಸಮಯದೊಂದಿಗೆ, ಸಂಕೀರ್ಣ ಆಹಾರ ವ್ಯವಸ್ಥೆಯು ನಿರಂತರವಾಗಿ ಬದಲಾಗುತ್ತಿದೆ. ಈ ಸಾಂಕ್ರಾಮಿಕ ರೋಗ ಬರುವ ಮೊದಲು ಸ್ಟಾರ್ಟರ್ ಗಳು, ಭಕ್ಷ್ಯಗಳು, ಸಿಹಿ ತಿಂಡಿಗಳ ಜೊತೆ ಮೃಷ್ಟಾನ್ನ ಭೋಜನವನ್ನು ಆಯ್ಕೆ ಮಾಡುವುದರಿಂದ ಹಿಡಿದು ಕಳೆದ ಎರಡು ವರ್ಷಗಳಲ್ಲಿ ಜನರ ಆಯ್ಕೆಗಳು ಮತ್ತು ಆದ್ಯತೆಗಳು ತುಂಬಾನೇ ಬದಲಾಗಿವೆ.


ಇಂದು, ಈ ಸಾಂಕ್ರಾಮಿಕ ರೋಗವು ಜನರನ್ನು ಜವಾಬ್ದಾರಿಯುತ ತಿನ್ನುವವರಾಗುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರು ಏನು ತಿನ್ನುತ್ತಾರೆ, ಎಲ್ಲಿ ತಿನ್ನುತ್ತಾರೆ ಮತ್ತು ಅದು ಅವರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ  ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಾರೆ.


ಈಗಾಗಲೇ ಜನರು 2022 ವರ್ಷವನ್ನು ಆರಂಭಿಸಿರುವುದರಿಂದ ಕೋವಿಡ್-19 ವೈರಸ್ ಹಿಂದಿನ ವರ್ಷದ ವಿಷಯವಾಗುತ್ತದೆ ಎಂಬುದನ್ನು ಊಹಿಸಿಕೊಳ್ಳುತ್ತಾ ಕೆಲವು ಪ್ರಮುಖ ಪ್ರವೃತ್ತಿಗಳೊಂದಿಗೆ ಆಹಾರ ಮತ್ತು ಪಾನೀಯ ಉದ್ಯಮಗಳನ್ನು ರೂಪಿಸುವಲ್ಲಿ ಮುಂದಾಗುತ್ತಿದ್ದಾರೆ.


1. ಕ್ಲೌಡ್ ಕಿಚನ್ ಗಳು ಅಗಾಧವಾಗಿ ಬೆಳೆಯುತ್ತಿವೆ


ಕ್ಲೌಡ್ ಕಿಚನ್ ಗಳು 2022 ರಲ್ಲಿ ಅಗಾಧವಾಗಿ ಬೆಳೆಯುತ್ತವೆ ಎಂದು ಅಂದಾಜಿಸಲಾಗುತ್ತಿದೆ. ಈ ವರ್ಷ ಹಲವಾರು ಕ್ಲೌಡ್ ಕಿಚನ್ ಗಳು ತಮ್ಮ ಕೊಡುಗೆಗಳನ್ನು ವಿಸ್ತರಿಸಲು ಅಥವಾ 'ಹೌಸ್ ಆಫ್ ಬ್ರ್ಯಾಂಡ್ಸ್' ಎಂದು ಕರೆಯಲ್ಪಡುವ ಅನೇಕ ಬ್ರ್ಯಾಂಡ್ಸ್ ಗಳನ್ನು ಪರಿಚಯಿಸಲು ದಾರಿ ಮಾಡಿ ಕೊಡುತ್ತದೆ.


ಇದನ್ನೂ ಓದಿ: ಮಕ್ಕಳ ಮೊಬೈಲ್ ಚಟ ತಪ್ಪಿಸಲು ಅಪ್ಪ ಮಾಡಿದ ಎಡವಟ್ಟು ಏನು ಗೊತ್ತಾ? ಇಡೀ ನಗರದ ಇಂಟರ್​ನೆಟ್ ಕಟ್!


2. ದೈನಂದಿನ ಆರೋಗ್ಯಕರ ಊಟ ವಿತರಣಾ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆ


ಪ್ರತಿ ವರ್ಷ ಶಿಕ್ಷಣ ಮತ್ತು ಉದ್ಯೋಗ ಉದ್ದೇಶಗಳಿಗಾಗಿ ಯುವಕರ ನಿರಂತರ ವಲಸೆ ಮತ್ತು ಅವರ ಕಡಿಮೆಯಾಗುತ್ತಿರುವ ಪಾಕಶಾಲೆಯ ಕೌಶಲ್ಯಗಳೊಂದಿಗೆ, ದೈನಂದಿನ ಆರೋಗ್ಯಕರ ಮತ್ತು ಗೃಹಬಳಕೆಯ ಊಟದ ವಿತರಣಾ ಸೇವೆಗಳ ಅಗತ್ಯವು ಹೆಚ್ಚಾಗುತ್ತಿದೆ. ಈಗ ಬಹುತೇಕರು ಮನೆಯಿಂದಲೇ ಕೆಲಸವನ್ನು ಮಾಡುತ್ತಿದ್ದು, ಇವರ ದೈನಂದಿನ ಆರೋಗ್ಯಕರ ಊಟದ ವಿತರಣಾ ಸೇವೆಗಳ ಬೇಡಿಕೆ ಹೆಚ್ಚಿದೆ ಎಂದು ಹೇಳಬಹುದು.


ಮನೆ ಮತ್ತು ಕೈಗೆಟುಕುವ ದರದಲ್ಲಿ ದೈನಂದಿನ ಆಹಾರವನ್ನು ತಯಾರಿಸುವುದು ಹೊಸ ಯುಗದ ಆಹಾರ ಮತ್ತು ತಂತ್ರಜ್ಞಾನ ಕಂಪನಿಗಳ ಸವಾಲಾಗಿದೆ. ಈ ಕಂಪನಿಗಳು ದೈನಂದಿನ ಯೋಜಿತ ಊಟದ ವಿತರಣಾ ಸೇವೆಯಲ್ಲಿರುವ ಬೇಡಿಕೆಗಳನ್ನು ಪೂರೈಸಲು ಚಂದಾದಾರಿಕೆ ನೇತೃತ್ವದ ವ್ಯವಹಾರ ಮಾದರಿಗಳನ್ನು ಪರಿಚಯಿಸುತ್ತಿದೆ. ಆದ್ದರಿಂದ, 2022 ದೈನಂದಿನ ಆಹಾರ ವರ್ಗದಲ್ಲಿ ಚಂದಾದಾರಿಕೆ ಆರ್ಥಿಕತೆಯ ಬೃಹತ್ ಅಳವಡಿಕೆಯನ್ನು ನೋಡುತ್ತದೆ.


3. ಡೈನ್-ಇನ್ ಕಡೆಗೆ ಶಿಫ್ಟ್


ಪ್ರಸ್ತುತ, ವಾರಾಂತ್ಯದಲ್ಲಿ ಜನರು ಹೆಚ್ಚಾಗಿ ಹೊರಗೆ ಹೋಗಿ ಊಟ ಮಾಡುವುದು, ಊಟವನ್ನು ಹೊರಗಡೆಯಿಂದ ಆರ್ಡರ್ ಮಾಡಿಕೊಳ್ಳುವುದು ಸಹಜ.


ಇದರಿಂದ ಈ ಆಹಾರ ವಿತರಣಾ ಕಂಪನಿಗಳು ಲಾಭ ಪಡೆದು, ಹೊರಗಿನ ಆಹಾರವು ಆಗಾಗ್ಗೆ ಮನೆಗಳನ್ನು ಪ್ರವೇಶಿಸುವುದರಿಂದ, ವಾರಾಂತ್ಯದ ಊಟವು ಆಹಾರ ವಿತರಣೆಯಿಂದ ಡೈನ್-ಇನ್ ಗೆ ಬದಲಾಗುತ್ತದೆ. ಇದರ ಪರಿಣಾಮವಾಗಿ, ಡೈನ್-ಇನ್ ಸ್ವರೂಪದಲ್ಲಿ ಅನೇಕ ನವೀನ ವಿಷಯಗಳನ್ನು ಅಲಂಕಾರಿಕ ಗ್ರಾಹಕರ ಕಲ್ಪನೆಗಳಿಗೆ ಪರಿಚಯಿಸಲಾಗುವುದು.


4. ಆರೋಗ್ಯಕರ ಆಹಾರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆ


ಆರೋಗ್ಯಕರ ಎಂದರೆ ಸಮತೋಲಿತ, ಮಧುಮೇಹ ಸ್ನೇಹಿ ಮತ್ತು ಕ್ರಿಯಾತ್ಮಕ ಆಹಾರ ಹಾಗೂ ಬೆಳೆಯುತ್ತಿರುವ ಮಕ್ಕಳು, ಹೊಸ ತಾಯಂದಿರು, ಕ್ರೀಡಾಪಟುಗಳು, ತೂಕ ಇಳಿಕೆ ಇತ್ಯಾದಿ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು 2022 ಅನ್ನು ರೂಪಿಸಲಾಗುವುದು.


ಜನರು ತಮ್ಮ ಆರೋಗ್ಯ ಮತ್ತು ತಮ್ಮ ದೇಹದ ಮೇಲೆ ಆಹಾರದ ಪರಿಣಾಮದ ಬಗ್ಗೆ ಹೆಚ್ಚು ಜಾಗೃತರಾಗಿರುವುದರಿಂದ, ಅವರು ತಮ್ಮ ಆಹಾರ, ಅದರ ಪೌಷ್ಠಿಕಾಂಶ ಮೌಲ್ಯಗಳು ಮತ್ತು ಇತ್ಯಾದಿಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ಹೊಂದಿರಲು ಬಯಸುತ್ತಾರೆ.


5. ಸುಸ್ಥಿರ ಆಹಾರ ಮತ್ತು ಪ್ಯಾಕೇಜಿಂಗ್ ಗೆ ಹೆಚ್ಚುತ್ತಿರುವ ಬೇಡಿಕೆ


ಆಹಾರ ಪ್ಯಾಕೇಜಿಂಗ್ ಮತ್ತು ವಿತರಣೆಯಲ್ಲಿ ಸುಸ್ಥಿರತೆಯ ಬೇಡಿಕೆಯು 2022 ರಲ್ಲಿ ಹೆಚ್ಚಿನ ವೇಗವನ್ನು ಪಡೆಯುತ್ತದೆ. ಗ್ರಾಹಕರು ಹೆಚ್ಚು ಪರಿಸರ ಪ್ರಜ್ಞೆಯನ್ನು ಹೊಂದುತ್ತಿದ್ದಾರೆ ಮತ್ತು ಆಹಾರ ವಿತರಣಾ ಸೇವೆಗಳು ಈ ಪರಿಸರವನ್ನು ಉಳಿಸಲು ಅಪಾರ ಕೊಡುಗೆ ನೀಡುವ ಅಭ್ಯಾಸಗಳನ್ನು ಅನುಸರಿಸುತ್ತಿವೆ ಎಂಬುದನ್ನ ಖಚಿತಪಡಿಸಿಕೊಂಡು ಆಯ್ಕೆ ಮಾಡುತ್ತಾರೆ.


ಇದನ್ನೂ ಓದಿ: ಪಿಜ್ಜಾಗಾಗಿ ಗಂಟೆಗಟ್ಟಲೆ ಕಾಯಬೇಕಾಗಿಲ್ಲ.. 2 ನಿಮಿಷದಲ್ಲಿ ತಯಾರಿಸ್ಬೋದು!


ಒಟ್ಟಿನಲ್ಲಿ ಹೇಳುವುದಾದರೇ 2022 ಮತ್ತು ಅದರಾಚೆ, ಆಹಾರ ಉದ್ಯಮವು ಆರೋಗ್ಯಕರ ಮತ್ತು ಕೈಗೆಟುಕುವ ಬೆಲೆಯಲ್ಲಿ ಊಟದ ಆಯ್ಕೆಗಳನ್ನು ಆಯ್ಕೆ ಮಾಡುವ ಮೂಲಕ ಗ್ರಾಹಕರು ತಮ್ಮ ಯೋಗ ಕ್ಷೇಮದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುವುದನ್ನ ನಾವು ನೋಡುತ್ತೇವೆ. Sprink.Online ಈ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದು ಮೇಲೆ ಹೇಳಿದ ಆಹಾರ ಪ್ರವೃತ್ತಿಗಳು ನಿಸ್ಸಂದೇಹವಾಗಿ ಆಹಾರ ಉದ್ಯಮದಲ್ಲಿ ಅಗ್ರ ಸ್ಥಾನದಲ್ಲಿರುತ್ತವೆ ಎಂದಿದೆ. ಮತ್ತು ಆಹಾರ ವಿತರಣಾ ಸೇವೆಗಳು ಗ್ರಾಹಕರ ಮನಸ್ಥಿತಿಗಳಲ್ಲಿ ಬದಲಾಯಿಸಲಾಗದ ಬದಲಾವಣೆಗಳಿಗೆ ಸರಿಹೊಂದುವ ಅದ್ಭುತ ಪ್ರಯತ್ನಗಳನ್ನು ಮುಂದುವರಿಸುತ್ತವೆ.

Published by:Sandhya M
First published: