HOME » NEWS » Trend » MATTE PURPLE MAHINDRA THAR IS GRABBING EYEBALLS FOR ITS VIBRANT COLOR AND MODIFICATIONS STG SKTV

ಮ್ಯಾಟ್ ಫಿನಿಶಿಂಗ್‌ನ ನೇರಳೆ ಬಣ್ಣದ ಮಹೀಂದ್ರ ಥಾರ್‌ ರೂಪಕ್ಕೆ ಮನಸೋಲದವರಿಲ್ಲ..!

ಮಾರ್ಪಡಿಸಿದ ಮಹೀಂದ್ರಾ ಥಾರ್ ಹೊಸ ವಾಹನದ ಇನ್‌ಫೋರ್ಜ್ಡ್‌ ಐಎಫ್‌ಜಿ 39, 18-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ ಮತ್ತು ಫ್ರಂಟ್ ಬಂಪರ್‌ನಲ್ಲಿ ಪೂರಕ ಕ್ಲಾಡಿಂಗ್ ಹೊಂದಿಸಿರುವುದು ವಾಹನಕ್ಕೆ ವಿಂಟೇಜ್ ಲುಕ್ ನೀಡಿದೆ. ವಾಹನದ ಸಾಂಪ್ರದಾಯಿಕ ಗ್ರಿಲ್ ಅನ್ನು ಏಳು-ಸ್ಲ್ಯಾಟೆಡ್ ಲಂಬವಾಗಿ ಜೋಡಿಸಲಾದ ಗ್ರಿಲ್‌ನಿಂದ ಬದಲಾಯಿಸಿ ಮಾರ್ಪಾಡು ಮಾಡಲಾಗಿದೆ. ಇದು ಜೀಪ್ ರ‍್ಯಾಂಗ್ಲರ್ ಸ್ಪೋರ್ಟ್ ಎನ್ನುವಂತೆ ಭಾಸವಾಗುತ್ತದೆ.

news18-kannada
Updated:May 3, 2021, 2:36 PM IST
ಮ್ಯಾಟ್ ಫಿನಿಶಿಂಗ್‌ನ ನೇರಳೆ ಬಣ್ಣದ ಮಹೀಂದ್ರ ಥಾರ್‌ ರೂಪಕ್ಕೆ ಮನಸೋಲದವರಿಲ್ಲ..!
ನೇರಳೆ ಬಣ್ಣದ ಥಾರ್
  • Share this:
Trending Desk: ಥಾರ್ ಆಫ್‌ ರೋಡರ್..! ದೇಶಿಯ ವಾಹನ ತಯಾರಕ ಮಹೀಂದ್ರ ಅವರ ಈ ವಾಹನ ಎಂದಿನಿಂದಲೂ ಅದರ ಆಕರ್ಷಣೆಯನ್ನು ಉಳಿಸಿಕೊಂಡೇ ಬಂದಿದೆ. ಅದರಲ್ಲೂ ಮಾರುಕಟ್ಟೆ ನಂತರದ ಭಾಗಗಳು ಮತ್ತು ಗ್ರಾಹಕರ ಅನುಕೂಲಕ್ಕೆ ತಕ್ಕಂತಹ ಮಾರ್ಪಾಡುಗಳ ಸಾಧ್ಯತೆಗಳೊಂದಿಗೆ ಬರುತ್ತದೆ. ಮಾರ್ಪಾಡುಗಳೇ ಇದರ ಪ್ರಮುಖ ಭಾಗದಲ್ಲಿದ್ದರೂ ಇದರ ವಿಶೇಷತೆಗಳಿಂದ ಆ ಸಾಧ್ಯತೆಯನ್ನೂ ತಳ್ಳಿ ಹಾಕಿದೆ. ಇತ್ತೀಚಿನ ಪೀಳಿಗೆಯ ಮಹೀಂದ್ರಾ ಥಾರ್ ಹಲವಾರು ವೈಶಿಷ್ಟ್ಯಗಳಿಂದ ಸಮೃದ್ಧವಾಗಿದ್ದು, ಅದಕ್ಕೆ ಯಾವುದೇ ಮಾರ್ಪಾಡಿನ ಅಗತ್ಯವಿಲ್ಲ. ಆದರೂ ಕೊನೆಯ ತಲೆಮಾರಿನ ಮಹೀಂದ್ರಾ ಥಾರ್ ಅನುಕೂಲಕರ ವಿನ್ಯಾಸವನ್ನು ಒಳಗೊಂಡಿದ್ದು ಬಳಕೆದಾರರು ಸುಗಮವಾದ ಅನುಭವವನ್ನು ಹೊಂದಲು ಹಲವಾರು ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ಎರಡನೇ ತಲೆಮಾರಿನ ಥಾರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಎಸ್‌ಯುವಿ ನಮ್ಮ ಮಾರುಕಟ್ಟೆಯಲ್ಲಿ ಬಹುಬೇಗನೇ ಹಿಟ್ ಆಗಿತ್ತು. ಇದು ಹೊಸ ವಾಹನವಾಗಿದ್ದರೂ, ಹೊಸ ಥಾರ್‌ಗೆ ಸಾಕಷ್ಟು ನಂತರದ ಭಾಗಗಳು ಮತ್ತು ಕಿಟ್‌ಗಳು ಲಭ್ಯವಿದೆ, ಮತ್ತು ಖರೀದಿದಾರರು ವಿತರಣೆಯ ನಂತರವೇ ಅವುಗಳನ್ನು ಮಾರ್ಪಡಿಸುತ್ತಿದ್ದಾರೆ ಎನ್ನುವುದು ಇನ್ನೊಂದು ವಿಶೇಷ.

ಮಹೀಂದ್ರಾ ಅವರ ಹೊಸ ಪೀಳಿಗೆಯ ಥಾರ್ ಕಾರ್‌ನಲ್ಲಿ ಎಲ್ಲಾ ಅಭಾವಗಳನ್ನು ಸರಿ ಮಾಡಿದ್ದರೂ, ಥಾರ್‌ನಲ್ಲಿ ಮಾರ್ಪಾಡುಗಳನ್ನು ಮಾಡುವುದಕ್ಕೆ ಹೊಸ ಅವಕಾಶಗಳು ದೊರಕುತ್ತಲೇ ಇರುತ್ತದೆ. ಈ ವಾಹನವೂ ಮಾರುಕಟ್ಟೆಯಲ್ಲಿ ಹೊಚ್ಚ ಹೊಸದಾಗಿದ್ದು ಎಲ್ಲೆಡೆ ಚರ್ಚೆಗಳಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ಆಫ್ಟರ್ ಮಾರ್ಕೆಟ್ ಭಾಗಗಳು ಮತ್ತು ಬಾಡಿ ಕಿಟ್‌ಗಳು ಲಭ್ಯವಿದೆ.

ಈ ಗುಣ ವಿಶೇಷಣಗಳ ಪರಿಣಾಮ ವಾಹನದ ವಿತರಣೆಯ ಬಳಿಕ ಖರೀದಿದಾರರು ಹಲವಾರು ಕಸ್ಟಮೈಸ್ ಮಾರ್ಪಾಡು ಕಾರ್ಯಗಳನ್ನು ಪೂರೈಸಲು ಸಾಲುಗಟ್ಟಿ ನಿಂತಿದ್ದಾರೆ. ಈ ರೀತಿ ಮಾರ್ಪಾಡಿಗೆ ಒಳಪಟ್ಟಿರುವ ಮಹೀಂದ್ರಾ ಥಾರ್‌ನ ಈ ಉದಾಹರಣೆ ದೇಶದಾದ್ಯಂತ ಎಲ್ಲಾ ವಾಹನಗಳ ನಡುವೆ ಅತ್ಯುತ್ತಮ ಮಾರ್ಪಾಡುಗಳಲ್ಲಿ ಒಂದಾಗಿದೆ ಎನ್ನಲಾಗುತ್ತಿದೆ.

ಇಂಡಿಯನ್ ಆಟೋಸ್ ಬ್ಲಾಗ್ (Indian Autos Blog) ಪ್ರಕಾರ, ಈ ವಾಹನವನ್ನು ಸಾಹಿಬ್ನೂರ್ ಸಿಂಗ್ ಎನ್ನುವವರು ಹೊಂದಿದ್ದಾರೆ. ಅಲ್ಲದೇ ಮ್ಯಾಟ್ ಫಿನಿಶಿಂಗ್ ಹೊಂದಿರುವ ನೇರಳೆ ಬಣ್ಣದಿಂದ ಆವೃತ್ತವಾಗಿರುವ ಈ ವಾಹನ ಎಲ್ಲರನ್ನು ಸೆಳೆಯುತ್ತಿದೆ. ಈ ಬಣ್ಣವು ನೋಡಿದೊಡನೆ ವಾವ್ ಎನಿಸುವಂತಿದೆ. ಜೊತೆಗೆ ಕ್ಲಾಡಿಂಗ್ ಮತ್ತು ಥಾರ್‌ನ ಕಪ್ಪು ರೂಫ್ ಬಹಳ ಆಕರ್ಷಕವಾಗಿರುವುದಲ್ಲದೇ ಭಿನ್ನವಾಗಿದೆ.

ಈ ವಾಹನದ ಮತ್ತೊಂದು ವಿಶೇಷ ಅಂದರೆ ಯಾರಾದರೂ ಇದನ್ನು ಮೊದಲ ಬಾರಿಗೆ ನೋಡಿದ್ದಲ್ಲಿ, ಜೀಪ್ ರ‍್ಯಾಂಗ್ಲರ್ ಎಂದುಕೊಳ್ಳುವುದರಲ್ಲಿ ಸಂಶಯವಿಲ್ಲ.

ಮಾರ್ಪಡಿಸಿದ ಮಹೀಂದ್ರಾ ಥಾರ್ ಹೊಸ ವಾಹನದ ಇನ್‌ಫೋರ್ಜ್ಡ್‌ ಐಎಫ್‌ಜಿ 39, 18-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ ಮತ್ತು ಫ್ರಂಟ್ ಬಂಪರ್‌ನಲ್ಲಿ ಪೂರಕ ಕ್ಲಾಡಿಂಗ್ ಹೊಂದಿಸಿರುವುದು ವಾಹನಕ್ಕೆ ವಿಂಟೇಜ್ ಲುಕ್ ನೀಡಿದೆ. ವಾಹನದ ಸಾಂಪ್ರದಾಯಿಕ ಗ್ರಿಲ್ ಅನ್ನು ಏಳು-ಸ್ಲ್ಯಾಟೆಡ್ ಲಂಬವಾಗಿ ಜೋಡಿಸಲಾದ ಗ್ರಿಲ್‌ನಿಂದ ಬದಲಾಯಿಸಿ ಮಾರ್ಪಾಡು ಮಾಡಲಾಗಿದೆ. ಇದು ಜೀಪ್ ರ‍್ಯಾಂಗ್ಲರ್ ಸ್ಪೋರ್ಟ್ ಎನ್ನುವಂತೆ ಭಾಸವಾಗುತ್ತದೆ. ಮಾರ್ಪಡಿಸಿದ ಆಫ್‌ರೋಡರ್‌ ಜೀಪ್ ರ‍್ಯಾಂಗ್ಲರ್‌ನಂತೆಯೇ ಹೆಡ್ಲೈಟ್‌ಗಳ ಸುತ್ತಲೂ ಆಗಿರುವ ಬದಲಾವಣೆಗಳನ್ನು ಆಕರ್ಷವಾಗಿ ವಿನ್ಯಾಸ ಮಾಡಿದೆ.

ಅಲ್ಲದೇ ರ‍್ಯಾಂಗ್ಲರ್‌ನ ಗುಣ ಲಕ್ಷಣಗಳನ್ನೇ ಹೋಲುವಂತಹ ಈ ಹೊಸ ಮಾರ್ಪಡಿಸಿದ ಮಹೀಂದ್ರಾ ಥಾರ್ ಹೆಡ್ ಲ್ಯಾಂಪ್ ಕ್ಲಸ್ಟರ್ ಒಳಗೆ ವೃತ್ತಾಕಾರದ ಎಲ್ಇಡಿ, ಡಿಆರ್‌ಎಲ್‌ ಅನ್ನು ಸಹ ಇದರಲ್ಲಿ ಗಮನಿಸಬಹುದಾಗಿದೆ.
Published by: Soumya KN
First published: May 3, 2021, 2:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories