ಗಣಿತವು ಕಬ್ಬಿಣದ ಕಡಲೆಕಾಯಿಯಾಗಿದ್ದರೂ ನಮ್ಮಲ್ಲಿರುವ ಜ್ಞಾನವನ್ನು ಒರೆಗೆ ಹಚ್ಚಲು ಸಹಕಾರಿಯಾಗಿರುತ್ತದೆ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಎಷ್ಟೇ ಪುಟ್ಟ ಲೆಕ್ಕವಿರಲಿ (Calculate) ಅದಕ್ಕೆ ಬುದ್ಧಿವಂತಿಕೆ ಖರ್ಚು ಮಾಡಿ ಪರಿಹರಿಸಬೇಕಾದ ಪ್ರಮೇಯ ಹೆಚ್ಚಾಗಿ ಬಂದೊದಗುತ್ತದೆ. ಲೆಕ್ಕ ನೋಡಲು ಸುಲಭವಾದರೂ ಅದನ್ನು ಪರಿಹರಿಸುವಾಗಲೇ ಕಷ್ಟ ಎನ್ನುವುದು ಅರಿವಿಗೆ ಬರುತ್ತದೆ. ಇದೀಗ ಇಂತಹುದೇ ಸವಾಲಿನ ಲೆಕ್ಕದ ಪ್ರಶ್ನೆಯೊಂದು ಇಂಟರ್ನೆಟ್‌ನಲ್ಲಿ (Internet) ಕಿಚ್ಚು ಹತ್ತಿಸಿದ್ದು, ಲೆಕ್ಕ ಸಣ್ಣದಾದರೂ ಪರಿಹರಿಸುವ ಚಲಾಕಿತನವನ್ನು ಇಲ್ಲಿ ತೋರಿಸಬೇಕಾಗಿದೆ. 2019ರಲ್ಲಿ ಟ್ವಿಟರ್‌ನಲ್ಲಿ (Twitter) ಈ ಪ್ರಶ್ನೆಯನ್ನು ಹಂಚಿಕೊಂಡಿರುವ ಗಣಿತ ಅಧ್ಯಾಪಕಿ ರೇಚಲ್ ಈ ಗಣಿತದ ಲೆಕ್ಕಕ್ಕೆ ಉತ್ತರ ನೀಡಬಲ್ಲಿರಾ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರನ್ನು ಪ್ರಶ್ನಿಸಿದ್ದಾರೆ.
ಕಾಣೆಯಾಗಿರುವ 1 ಡಾಲರ್ ಎಲ್ಲಿದೆ?:
ಬಾಲಕನು $97 ಡಾಲರ್ ಬೆಲೆಯ ಬ್ಯಾಗ್ ಖರೀದಿಸಲು ತನ್ನ ತಾಯಿಯಿಂದ $50 ಡಾಲರ್ ಮತ್ತು ತಂದೆಯಿಂದ $50 ಡಾಲರ್ ಅನ್ನು ಪಡೆದುಕೊಂಡಿದ್ದನು. ಖರೀದಿಯ ನಂತರ ಬಾಲಕನ ಬಳಿ $ 3 ಡಾಲರ್ ಉಳಿಯಿತು. ತಲಾ $1, $1 ಡಾಲರ್‌ನಂತೆ ಅಮ್ಮನಿಗೆ ಹಾಗೂ ಅಪ್ಪನಿಗೆ ಹಣ ನೀಡಿದನು ಹಾಗೂ $1 ಡಾಲರ್ ಅನ್ನು ತನಗಾಗಿ ಉಳಿಸಿಕೊಂಡನು. ಇದೀಗ ಅಪ್ಪ-ಅಮ್ಮನಿಗೆ $49+$49=$98 ಡಾಲರ್ ತೀರಿಸಬೇಕಾಗಿದ್ದು ಅವನ ಬಳಿ ಒಂದು ಡಾಲರ್ ಉಳಿದಿದೆ. ಇವೆಲ್ಲವನ್ನು ಕೂಡಿದಾಗ ಒಟ್ಟು $99 ಡಾಲರ್ ಸಾಲ ತೀರಿಸಬೇಕಾಗಿದೆ. ಹಾಗಾದರೆ ಸಾಲ ಪಡೆದುಕೊಂಡಿರುವ $100 ಡಾಲರ್‌ನಲ್ಲಿ ಕಾಣೆಯಾಗಿರುವ $1 ಡಾಲರ್ ಎಲ್ಲಿದೆ ಎಂಬುದು ಇಲ್ಲಿ ಪ್ರಶ್ನೆಯಾಗಿದೆ.
My PreCalc students love riddles... can you figure out where the other dollar went?? #MathRiddles pic.twitter.com/BclqW9nq98
— Rachel Frasier (@MsFrasierMHS) January 8, 2019
ಇದು ಎಣಿಕೆಯ ಟ್ರಿಕ್:
ಕೋರಾ ಬಳಕೆದಾರರೊಬ್ಬರು ಪ್ರಶ್ನೆಯನ್ನು ವಿವರಿಸುತ್ತಾ, ಸಮಸ್ಯೆ ಪ್ರಶ್ನೆಯಲ್ಲಿದೆ ಅಂದರೆ ನಾವು ಲೆಕ್ಕಾಚಾರ ಹಾಕಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ. ಸಾಲ ಪಡೆದಿರುವ ಹಣದ ಬಗ್ಗೆ ಈ ಪ್ರಶ್ನೆ ಇದೆಯೇ? ಖರ್ಚು ಮಾಡಿದ ಹಣದ ಬಗ್ಗೆ ಈ ಪ್ರಶ್ನೆ ಕೇಳಲಾಗಿದೆಯೇ? ಉಳಿದಿರುವ ಮೊತ್ತದ ಬಗ್ಗೆ ಪ್ರಶ್ನೆ ಕೇಳಲಾಗಿದೆಯೇ ಎಂದು ಮರುಪ್ರಶ್ನಿಸಿದ್ದಾರೆ.
ಪ್ರತಿಯೊಂದು ಪ್ರಶ್ನೆಗಳನ್ನು ಒಗ್ಗೂಡಿಸಿಕೊಂಡು ಅಂತಿಮ ಲೆಕ್ಕಾಚಾರವನ್ನು ಬಳಕೆದಾರರು ನೀಡಿದ್ದಾರೆ. ಸಾಲದ ಮೊತ್ತ + ಉಳಿದಿರುವ ಮೊತ್ತ = ಯಾವುದೇ ಅರ್ಥವನ್ನು ನೀಡುವುದಿಲ್ಲ. ಇಲ್ಲಿ ನಮಗೆ ಬೇಕಾಗಿರುವುದು ಹಣ ಎಲ್ಲಿ ಹೋಯಿತು ಎಂಬುದಾಗಿದೆ. $49 ಡಾಲರ್, ಹುಡುಗ ಅಮ್ಮನಿಂದ ಪಡೆದುಕೊಂಡಿದ್ದು, ಅಪ್ಪನಿಂದ $ 49 ಡಾಲರ್ ಅನ್ನು ಹುಡುಗ ಪಡೆದುಕೊಂಡಿದ್ದಾನೆ. $ 97 ಡಾಲರ್ ಅಂಗಡಿಯಲ್ಲಿ ಖರ್ಚಾಗಿದೆ ಎಂದು ಬಳಕೆದಾರರು ವಿವರಿಸಿದ್ದಾರೆ.
ಬಳಕೆದಾರರ ಉತ್ತರ:
ಮತ್ತೊಬ್ಬ ಬಳಕೆದಾರರು ಹುಡುಗನ ಪ್ರಶ್ನೆಗೆ ಉತ್ತರಿಸುತ್ತಾ, ತಪ್ಪಾದ ಎಣಿಕೆಯನ್ನು ಬಾಲಕ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. $100 ಡಾಲರ್ ಪಡೆದುಕೊಂಡು $2 ಡಾಲರ್ ಮರಳಿಸಿದ್ದಾನೆ, ಅಂದರೆ $98 ಡಾಲರ್ ಪಡೆದುಕೊಂಡಿದ್ದಾನೆ. ಹೀಗಾಗಿ ಪಡೆದುಕೊಂಡ $98 ಡಾಲರ್‌ನಲ್ಲಿ $97 ಡಾಲರ್ ಖರ್ಚುಮಾಡಿ $1 ಡಾಲರ್ ಹುಡುಗ ಉಳಿಸಿಕೊಂಡಿದ್ದಾನೆ. ಅಂದರೆ $1 ಡಾಲರ್ ಕಾಣೆಯಾಗುವ ಅವಕಾಶವೇ ಇಲ್ಲ. ಲೆಕ್ಕಾಚಾರ ತಪ್ಪಾಗಿರುವುದರಿಂದ $1 ಕಾಣೆಯಾದಂತೆ ಹುಡುಗನಿಗೆ ಭಾಸವಾಗಿದೆ. ಇನ್ನು ಹುಡುಗನ ಬಳಿ ಇರುವ $1, $98 ರ ಭಾಗವಾಗಿದೆ ಇದು $98 ಡಾಲರ್‌ಗೆ ಹೆಚ್ಚುವರಿಯಾಗಿ ಸೇರಿಸಿದ ಮೊತ್ತವಲ್ಲ. ಇನ್ನು $2 ಡಾಲರ್ ಈಗಾಗಲೇ ಮರುಪಾವತಿಯಾಗಿದ್ದು ಇದು ಲೆಕ್ಕಕ್ಕೆ ಒಳಪಡುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: 80 ವರ್ಷಗಳ ಬಳಿಕ ಭೇಟಿಯಾದ ಅಜ್ಜಿಯರು! ಜೀವದ ಗೆಳತಿಯರ ಆತ್ಮೀಯ ಕ್ಷಣವನ್ನು ನೀವೂ ನೋಡಿ
ಗಣಿತ ಶಿಕ್ಷಕಿ ನೀಡಿದ ಉತ್ತರ:
ಸ್ವತಃ ರೇಚಲ್ ಫ್ರೇಸಿಯರ್ ಈ ಪ್ರಶ್ನೆಗೆ ಉತ್ತರ ನೀಡಿದ್ದು ಅದು ಹೀಗಿದೆ. ಇಲ್ಲಿ ಕಾಣೆಯಾಗಿರುವ ಯಾವುದೇ ಡಾಲರ್ ಇಲ್ಲ ಎಂದು ಆಕೆ ತಿಳಿಸಿದ್ದು, $100 ಡಾಲರ್‌ನಲ್ಲಿ ಹುಡುಗನು $97 ಡಾಲರ್ ಖರ್ಚುಮಾಡಿದ್ದಾನೆ ಹಾಗೂ ಆತನ ಬಳಿ $3 ಡಾಲರ್ ಉಳಿಯಿತು. ಅಪ್ಪ ಹಾಗೂ ಅಮ್ಮನಿಗೆ ತಲಾ $1, $1 ಡಾಲರ್‌ನಂತೆ ಹುಡುಗನು ನೀಡಿದ್ದು ಇನ್ನುಳಿದ $1 ಡಾಲರ್ ಅನ್ನು ತನ್ನ ಬಳಿ ಇಟ್ಟುಕೊಂಡನು.
ಹುಡುಗನು ಅಪ್ಪ ಅಮ್ಮನಿಂದ $98 ಸಾಲ ಪಡೆದುಕೊಂಡಿದ್ದು $1 ಡಾಲರ್ ಅನ್ನು ಇರಿಸಿಕೊಂಡನು, ಹಾಗಾಗಿ ಹುಡುಗನು ನೀಡಬೇಕಾದುದನ್ನು ಲೆಕ್ಕ ಹಾಕಬಹುದು ಇದರಿಂದ $97 ಡಾಲರ್ ಮಾತ್ರ (ಬ್ಯಾಗಿನ ಬೆಲೆ) ಬಾಲಕ ಹಿಂತಿರುಗಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ