ದುಬೈನಲ್ಲಿ Black Diamond ಅನಾವರಣ: ಈ 555-ಕ್ಯಾರೆಟ್ ವಜ್ರದ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ..!

ಲಂಡನ್‌ನಲ್ಲಿ ನಡೆಯುವ ಹರಾಜಿನಲ್ಲಿ "ದಿ ಎನಿಗ್ಮಾ" ಹೆಸರಿನ ಕಪ್ಪು ವಜ್ರವು ಯಾವ ಬೆಲೆಗೆ ಹರಾಜಾಗುತ್ತದೆ ಎಂಬುದೇ ಸದ್ಯದ ಕೂತೂಹಲ.

Diamond

Diamond

  • Share this:
ವಜ್ರ ಎಂದರೆ ಅದೊಂದು ದುಬಾರಿ (Expensive) ಹಾಗೂ ಬೆಲೆಬಾಳುವ ವಸ್ತು. ವಜ್ರವನ್ನು (Diamond) ಇಷ್ಟಪಡದವರು ಯಾರಿದ್ದಾರೆ ಹೇಳಿ..? ಚಿನ್ನದ ಅಂಗಡಿಗೆ ಹೋದಾಗ ಬೆಳ್ಳಿ, ಬಂಗಾರದ ಮಧ್ಯೆ ಹೊಳೆಯುವ ಈ ವಜ್ರದ ಗತ್ತೇ ಬೇರೆ.. ಅಷ್ಟು ಭವ್ಯವಾಗಿರುತ್ತೆ ವಜ್ರದ ಪ್ರಕಾಶಮಾನ. ಅಪರೂಪದಲ್ಲಿ ಅಪರೂಪವಾದ ಸುಮಾರು 555-ಕ್ಯಾರೆಟ್‌ನ ಕಪ್ಪು(555-Carat Black) ವಜ್ರವನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ (Public Display) ಇಡಲಾಗಿದೆ. ಹೇಗಿದೆ ಆ ಕಪ್ಪು ವಜ್ರ, ಎಲ್ಲಿ ಅದರ ಪ್ರದರ್ಶನ ನಡೆಯಲಿದೆ ಮುಂತಾದ ಹೆಚ್ಚಿನ ವಿಚಾರಗಳ ಬಗ್ಗೆ ಒಂದು ವರದಿ ಇಲ್ಲಿದೆ.

ಲಂಡನ್‌ನಲ್ಲಿ ಹರಾಜಿಗೆ
ವಿಶ್ವದ ಅತಿದೊಡ್ಡ 555.55-ಕ್ಯಾರೆಟ್ ಇರುವ ಕಟ್ ಡೈಮಂಡ್ ಅನ್ನು ದುಬೈನಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಯಿತು. ಇದು ಅಕ್ಷರಶಃ ಭೂಮಿಯ ಮೇಲಿನ ವಜ್ರವೇ ಅಲ್ಲ ಬಾಹ್ಯಾಕಾಶದಿಂದ ಬಂದಿದೆ ಎಂದು ನಂಬಲಾಗಿದೆ. ಅಷ್ಟರ ಮಟ್ಟಿಗೆ ವಜ್ರವು ವಿಶಿಷ್ಟವಾಗಿದೆ. ಈ ವಜ್ರವನ್ನು "ದಿ ಎನಿಗ್ಮಾ" ಎಂದು ಹೆಸರಿಸಿದ್ದು, ಕಪ್ಪು ವಜ್ರವನ್ನು ದುಬೈನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಈ ವಜ್ರವನ್ನು ಫೆಬ್ರವರಿಯಲ್ಲಿ ಲಂಡನ್‌ನಲ್ಲಿ ಹರಾಜಿಗೆ ಇಡಲಿದ್ದು, ಮಾರಾಟಕ್ಕೂ ಮೊದಲು ಮಾಧ್ಯಮಗಳಿಗೆ ತೋರಿಸುವ ದೃಷ್ಠಿಯಿಂದ ದುಬೈನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಮಾರಾಟದಲ್ಲಿ "ದಿ ಎನಿಗ್ಮಾ" ಹೆಸರಿನ ಕಪ್ಪು ವಜ್ರವು ಕಡಿಮೆ ಎಂದರೂ 5 ಮಿಲಿಯನ್ ಡಾಲರ್‌ಗೆ ಮಾರಾಟವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Zodiac Sign: ಯಾವ ರಾಶಿಯವರು ವಜ್ರ ಧರಿಸಿದರೆ ಲಾಭ-ನಷ್ಟ; ಇಲ್ಲಿದೆ ಸಂಪೂರ್ಣ ಮಾಹಿತಿ

555.55-ಕ್ಯಾರೆಟ್ ವಜ್ರ
ದುಬೈನ ಆಭರಣ ತಜ್ಞ ಸೋಫಿ ಸ್ಟೀವನ್ಸ್, ಹೇಳುವ ಪ್ರಕಾರ 2.6 ಶತಕೋಟಿ ವರ್ಷಗಳ ಹಿಂದೆ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದಾಗ ಈ ವಜ್ರ ರಚನೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 555.55-ಕ್ಯಾರೆಟ್ ಹೊಂದಿರುವ ವಜ್ರವನ್ನು ಕತ್ತರಿಸುವುದು ಅತ್ಯಂತ ಕಷ್ಟಕರ.

ಆದರೂ ತಜ್ಞರು ಅದನ್ನು 55 ಮುಖದ ವಜ್ರದ ಆಭರಣವಾಗಿ ಪರಿವರ್ತಿಸಿದ್ದಾರೆ ಎಂದು ತಿಳಿಸಿದರು. ವಜ್ರದ ಆಕಾರವು ಮಧ್ಯ-ಪ್ರಾಚ್ಯ ಕಾಲದ ಖಮ್ಸಾದ ಪಾಮ್ ಚಿಹ್ನೆಯನ್ನು ಆಧರಿಸಿದೆ. ಈ ಚಿಹ್ನೆ ಶಕ್ತಿಯನ್ನು ಮತ್ತು ಅದು ರಕ್ಷಣೆಗಾಗಿ ನಿಂತಿದೆ ಎಂಬುದನ್ನು ಪ್ರತಿನಿಧಿಸುತ್ತದೆ ಎಂದು ಸೋಫಿ ಸ್ಟೀವನ್ಸ್ ಹೇಳಿದ್ದಾರೆ. ಅರೇಬಿಕ್ ಭಾಷೆಯಲ್ಲಿ ಖಮ್ಸ ಎಂದರೆ ಐದು. "ಆದ್ದರಿಂದ ವಜ್ರದಾದ್ಯಂತ ಐದನೇ ಸಂಖ್ಯೆಯ ಉತ್ತಮ ಥೀಮ್ ಹೊಂದಿದೆ" ಎಂದು ಹೇಳಿದರು.


View this post on Instagram


A post shared by Sotheby's (@sothebys)


ಕ್ಷುದ್ರಗ್ರಹದಿಂದ ಹೊರಹೊಮ್ಮಿರಬಹುದು
ಕಾರ್ಬೊನಾಡೊ ವಜ್ರಗಳೊಂದಿಗೆ, ಅವು ಭೂಮ್ಯತೀತ ಮೂಲದ ಮೂಲಕ ರೂಪುಗೊಂಡಿವೆ ಎಂದು ನಾವು ನಂಬುತ್ತೇವೆ, ಉಲ್ಕೆಗಳು ಭೂಮಿಗೆ ಡಿಕ್ಕಿ ಹೊಡೆದು ರಾಸಾಯನಿಕವಾಗಿ ರೂಪುಗೊಳ್ಳತ್ತವೆ ಅಥವಾ ವಾಸ್ತವವಾಗಿ ಉಲ್ಕೆಗಳಿಂದಲೇ ಹೊರ ಬರುತ್ತವೆ, ”ಎಂದು ಆಭರಣ ತಜ್ಞೆ ಸ್ಟೀವನ್ಸ್ ಹೇಳಿದರು. ಕಾರ್ಬೊನಾಡೊ ಎಂದೂ ಕರೆಯಲ್ಪಡುವ ಕಪ್ಪು ವಜ್ರಗಳು ಅತ್ಯಂತ ಅಪರೂಪ ಮತ್ತು ಬ್ರೆಜಿಲ್ ಮತ್ತು ಮಧ್ಯ ಆಫ್ರಿಕಾದಲ್ಲಿ ಮಾತ್ರ ನೈಸರ್ಗಿಕವಾಗಿ ಕಂಡುಬರುತ್ತವೆ.

ಕಾಸ್ಮಿಕ್ ಮೂಲದ ಸಿದ್ಧಾಂತದ ಪ್ರಕಾರ ಕಪ್ಪು ವಜ್ರವು ಕಾರ್ಬನ್ ಐಸೋಟೋಪ್‌ಗಳು ಮತ್ತು ಹೆಚ್ಚಿನ ಹೈಡ್ರೋಜನ್ ಅಂಶವನ್ನು ಆಧರಿಸಿದೆ. ಈ ಗಾತ್ರದ ನೈಸರ್ಗಿಕ ಮುಖದ ಕಪ್ಪು ವಜ್ರವನ್ನು ನೋಡುವುದು ಅತ್ಯಂತ ಅಪರೂಪದ ಘಟನೆಯಾಗಿದೆ. ಮತ್ತು ಅದರ ಮೂಲವು ನಿಗೂಢವಾಗಿದ್ದು, ಭೂಮಿಗೆ ಡಿಕ್ಕಿ ಹೊಡೆದ ಉಲ್ಕೆಯ ಪ್ರಭಾವದಿಂದ ಅಥವಾ ಕ್ಷುದ್ರಗ್ರಹದಿಂದ ಹೊರಹೊಮ್ಮಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ..

ಇದನ್ನೂ ಓದಿ: Viral News: ಬೆಲೆ ಗೊತ್ತಿಲ್ಲದೇ ₹20 ಕೋಟಿ ವಜ್ರದ ಉಂಗುರ ಬಿಸಾಡೋಕೆ ಹೊರಟಿದ್ಲು ಮಹಾತಾಯಿ!

ಕೂತೂಹಲ
ವಿಭಿನ್ನವಾದ ಈ ವಜ್ರ ಅತಿ ದೊಡ್ಡ ಕಟ್ ಡೈಮಂಡ್ ಎಂದು ಗಿನ್ನೆಸ್ ವಿಶ್ವ ದಾಖಲೆಯನ್ನೂ ಹೊಂದಿದೆ. ದುಬೈನಲ್ಲಿ ಪ್ರದರ್ಶನದ ಬಳಿಕ ವಜ್ರವನ್ನು ಲಾಸ್ ಏಂಜಲೀಸ್ ಮತ್ತು ಲಂಡನ್‌ಗೆ ಕೊಂಡೊಯ್ಯಲಾಗುತ್ತದೆ. ಫೆಬ್ರವರಿ 3ರಿಂದ 9 ದಿನಗಳ ಕಾಲ ಹರಾಜು ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಲಂಡನ್‌ನಲ್ಲಿ ನಡೆಯುವ ಹರಾಜಿನಲ್ಲಿ "ದಿ ಎನಿಗ್ಮಾ" ಹೆಸರಿನ ಕಪ್ಪು ವಜ್ರವು ಯಾವ ಬೆಲೆಗೆ ಹರಾಜಾಗುತ್ತದೆ ಎಂಬುದೇ ಸದ್ಯದ ಕೂತೂಹಲ.
Published by:vanithasanjevani vanithasanjevani
First published: