ಗರ್ಲ್​ ಫ್ರೆಂಡ್ ಮೇಲಿನ ಸಿಟ್ಟನ್ನು ನಾಯಿ ಮೇಲೆ ತೀರಿಸಿದ ಭೂಪ

news18
Updated:September 14, 2018, 2:40 PM IST
ಗರ್ಲ್​ ಫ್ರೆಂಡ್ ಮೇಲಿನ ಸಿಟ್ಟನ್ನು ನಾಯಿ ಮೇಲೆ ತೀರಿಸಿದ ಭೂಪ
@Kaylee Belanger FB
news18
Updated: September 14, 2018, 2:40 PM IST
-ನ್ಯೂಸ್ 18 ಕನ್ನಡ

ಪ್ರೀತಿ ಕುರುಡು ಎನ್ನುವುದು ಕೇಳಿದ್ದೇವೆ. ಆದರೆ ಈ ಘಟನೆಯ ಬಳಿಕ ಹುಚ್ಚು ಪ್ರೀತಿಗೆ ಕಣ್ಣಿಲ್ಲ ಎಂಬುದಷ್ಟೇ ಅಲ್ಲ, ಮನುಷತ್ವ ಕೂಡ ಇರಲ್ಲ ಎಂಬುದು ದಿಟವಾಗಿದೆ. ತನ್ನ ಪ್ರೇಯಸಿಯೊಂದಿಗೆ ಬ್ರೇಕ್​ಅಪ್ ಮಾಡಿಕೊಂಡ ವ್ಯಕ್ತಿ ನಾಯಿಯೊಂದನ್ನು ಜೀವಂತ ಹೂಳಿದ ಘಟನೆ ಅಮೆರಿಕದ ಮ್ಯಾಸ್​ಚೂಸೆಟ್ಸ್​ನಲ್ಲಿ ನಡೆದಿದೆ. ಇಂತಹ ಅಮಾನವೀಯ ಕೃತ್ಯವನ್ನು ನಡೆಸಿರುವುದು 24 ವರ್ಷದ ರಿಚರ್ಡ್ ಪೀಕ್ವಾರ್ಡ್.​

@Kaylee Belanger FB


ತನ್ನ ಮಾಜಿ ಗೆಳೆತಿಯೊಂದಿಗೆ ಕೆಲ ದಿನಗಳ ಹಿಂದೆ ಪೀಕ್ವಾರ್ಡ್​ ಜಗಳವಾಡಿಕೊಂಡಿದ್ದ. ಇದರಿಂದ ಇಬ್ಬರ ನಡುವೆ ವೈಮನಸ್ಯ ಮೂಡಿ, ಗರ್ಲ್​ ಫ್ರೆಂಡ್ ಪ್ರೇಮ್ ಕಹಾನಿಗೆ ತೀಲಾಂಜಲಿ ಇಟ್ಟಿದ್ದರು. ಆದರೆ ಈ ಹಿಂದೆ ಮಾಜಿ ಗೆಳತಿ ಉಡುಗೊರೆಯಾಗಿ ನೀಡಿದ  ಸಾಕು ನಾಯಿ ಮಾತ್ರ ಪೀಕ್ವಾರ್ಡ್​ ಬಳಿಯಲ್ಲಿತ್ತು. ಇದು ಮನೆಯಲ್ಲಿದ್ದ ಬೇರೊಂದು ನಾಯಿಯೊಂದಿಗೆ ಕಿತ್ತಾಡಿಕೊಂಡಾಗ ಪೀಕ್ವಾರ್ಡ್ ಕೋಪಗೊಂಡಿದ್ದಾನೆ. ಅಷ್ಟೇ ಅಲ್ಲದೆ ಮಾಜಿ ಪ್ರಿಯತಮೆಯೊಂದಿಗಿನ ವಿರಸಕ್ಕೆ ನಾಯಿಯನ್ನು ಜೀವಂತವಾಗಿ ಹೂಳಿ ಸೇಡು ತೀರಿಸಿಕೊಂಡಿದ್ದಾನೆ.

@Kaylee Belanger FB


ಈ ಬಗ್ಗೆ ನೀನು ನೀಡಿದ ನಾಯಿ ನಿನ್ನೆ ರಾತ್ರಿ ತೀರಿಕೊಂಡಿದೆ ಎಂದು ಪೀಕ್ವಾರ್ಡ್​ ಮೆಸೇಜ್ ಮಾಡಿ ಮಾಜಿ ಪ್ರಿಯತಮೆಗೆ ತಿಳಿಸಿದ್ದಾನೆ. ಆದರೆ ಸಂಶಯಗೊಂಡ ಮಾಜಿ ಗರ್ಲ್​ ಫ್ರೆಂಡ್ ದೂರು ನೀಡಿದ್ದು, ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ನಡೆಸಿದ ಪೊಲೀಸರು ರಿಚರ್ಡ್ ಪೀಕ್ವಾರ್ಡ್ ಬಂಧಿಸಿ ವಿಚಾರಿಸಿದಾಗ ಅಸಲಿ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ. ಸದ್ಯ ಜಾಮೀನಿನ ಮೇಲೆ ಹೊರಗೆ ಬಂದಿರುವ ಪೀಕ್ವಾರ್ಡ್​ ವಿರುದ್ಧ ಪ್ರಾಣಿ ದಯಾ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Loading...

@Kaylee Belanger FB
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...