Maruti Suzuki: ಇನ್ಮೇಲೆ ವರ್ಷಕ್ಕೆ 10 ಲಕ್ಷ ಹೊಸಾ ಮಾರುತಿ ಸುಜುಕಿ ಕಾರು ತಯಾರಾಗುತ್ತೆ, ಇದಕ್ಕಾಗಿ ರೆಡಿಯಾಗ್ತಿದೆ 18,000 ಕೋಟಿಯ ಕಾರ್ಖಾನೆ !

Maruti Suzuki: 700-1,000 ಎಕರೆಗಳ ವಿಸ್ತೀರ್ಣ ಹೊಂದಿರುವ ಹೊಸ ತಯಾರಿಕಾ ಘಟಕ ಗುರುಗ್ರಾಮ್‌ನಲ್ಲಿರುವ ಮಾರುತಿ ಸುಜುಕಿಯ ಬದಲಿ ಕಾರ್ಖಾನೆಯಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

Maruti Suzuki: ಮಾರುತಿ ಸುಜುಕಿ ಹರಿಯಾಣದಲ್ಲಿ 18,000 ಕೋಟಿಗಿಂತಲೂ ಮಿಗಿಲಾದ ಹೊಸ ಕಾರು ತಯಾರಿ ಕಾರ್ಖಾನೆಯ ಆರಂಭಕ್ಕೆ ಯೋಜನೆ ರೂಪಿಸಿದ್ದು ವಾರ್ಷಿಕ ಹತ್ತು ಲಕ್ಷ ಯುನಿಟ್‌ಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ ಎಂದು ಮಾರುತಿ ಸುಜುಕಿ ಚೇರ್‌ಮೆನ್ ಆರ್ ಸಿ ಭಾರ್ಗವ ಟೈಮ್ಸ್‌ ಆಫ್ ಇಂಡಿಯಾಗೆ ತಿಳಿಸಿದ್ದಾರೆ. 700-1,000 ಎಕರೆಗಳ ವಿಸ್ತೀರ್ಣ ಹೊಂದಿರುವ ಹೊಸ ತಯಾರಿಕಾ ಘಟಕ ಗುರುಗ್ರಾಮ್‌ನಲ್ಲಿರುವ ಮಾರುತಿ ಸುಜುಕಿಯ ಬದಲಿ ಕಾರ್ಖಾನೆಯಾಗಲಿದೆ.ಗುರುಗ್ರಾಮ್‌ನಲ್ಲಿ ಕಂಪೆನಿಯು ಹಳೆಯ ಕಾರು ತಯಾರಿ ಘಟಕ ಹೊಂದಿತ್ತು. ಆದರೆ ಸ್ಥಳಾವಕಾಶದ ಕೊರತೆಯಿಂದ ಮಾರುತಿ ಸುಜುಕಿ ಕಂಪೆನಿಯು ತನ್ನ ಕಾರ್ಖಾನೆಯನ್ನು ಹರಿಯಾಣಕ್ಕೆ ವರ್ಗಾಯಿಸಲಿದೆ ಎಂದು ಮುಖ್ಯಸ್ಥರು ತಿಳಿಸಿದ್ದಾರೆ.


ಹರಿಯಾಣ ರಾಜ್ಯದ ಹೊಸ ನೀತಿಯನ್ವಯ ವ್ಯವಹಾರ ಮತ್ತು ಫ್ಯಾಕ್ಟರಿ ಸ್ಥಾಪನೆಗಳಲ್ಲಿ 75% ಕಡ್ಡಾಯ ಉದ್ಯೋಗ ಮೀಸಲಾತಿಯನ್ನು ಸ್ಥಳೀಯರಿಗೆ ನೀಡುವ ಕುರಿತು ಕೂಡ ಕಂಪನಿ ಹೆಚ್ಚಿನ ಮುತುವರ್ಜಿ ವಹಿಸಿದೆ.


ನಾವು 17,000-18,000 ಕೋಟಿ ಹೂಡಿಕೆ ಮಾಡುವ ಯೋಜನೆಯನ್ನು ಹೊಂದಿದ್ದೇವೆ. 7.5 ಲಕ್ಷದಿಂದ 10 ಲಕ್ಷದವರೆಗೆ ವಾರ್ಷಿಕ ಕಾರು ಉತ್ಪಾದನಾ ಯೋಜನೆಯ ಗುರಿಯನ್ನು ಹೊಂದಿದ್ದೇವೆ. ಈ ಪ್ರಮಾಣದಲ್ಲಿ ಕಾರು ಉತ್ಪಾದನೆಯನ್ನು ಎದುರು ನೋಡುತ್ತಿದ್ದೇವೆ ಎಂದು ಭಾರ್ಗವ ತಿಳಿಸಿದ್ದಾರೆ. ನಾವು ಆದಷ್ಟು ಬೇಗನೇ ಹೊಸ ಸ್ಥಳಕ್ಕೆ ಶಿಫ್ಟ್ ಆಗಲಿದ್ದು ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದು ಮುಖ್ಯಸ್ಥರು ತಿಳಿಸಿದ್ದಾರೆ.


ಇದನ್ನೂ ಓದಿ: Maruti Suzuki: ಜುಲೈ 31 ರವರೆಗೆ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ಡಿಸ್ಕೌಂಟ್, ಕೊಳ್ಳುವವರಿಗೆ ರೈಟ್ ಟೈಮ್ !

ಹೊಸ ಕಾರ್ಖಾನೆ ಆರಂಭಕ್ಕೆ ಕೊರೋನಾದ ಕರಿನೆರಳು ವಿಳಂಬವನ್ನುಂಟು ಮಾಡಿತು. ಕಳೆದ ವರ್ಷ ಕೋವಿಡ್ ಕಾರಣದಿಂದ ನಮ್ಮ ಯೋಜನೆಯನ್ನು ತಟಸ್ಥಗೊಳಿಸಬೇಕಾಯಿತು. ಈಗ ಈ ಯೋಜನೆಯನ್ನು ಪುನಃ ಕೈಗೆತ್ತಿಕೊಂಡಿದ್ದೇವೆ. ಆದರೆ ಹೊಸ ಸಮಸ್ಯೆಯೊಂದು ತಲೆದೋರಿದ್ದು ಅದನ್ನು ನಿವಾರಿಸಬೇಕಾಗಿದೆ. ಹರಿಯಾಣದ ಸ್ಥಳೀಯ ಉದ್ಯೋಗ ನೇಮಕಾತಿ ನೀತಿ ಈಗ ಮಾರುತಿ ಸುಜುಕಿಯ ಹೊಸ ಫ್ಯಾಕ್ಟರಿ ಚಾಲನೆಗೆ ಸಮಸ್ಯೆಯನ್ನುಂಟು ಮಾಡಿದೆ. ನಾವು ಈ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡಿದ್ದೇವೆ ಮತ್ತು ಅವರೊಂದಿಗೆ ಮಾತನಾಡುತ್ತಿದ್ದೇವೆ. ರಾಜ್ಯ ಸರಕಾರವೇ ಈ ಸಮಸ್ಯೆಗೆ ಪರಿಹಾರವನ್ನೊದಗಿಸಬೇಕು. ಈ ಪರಿಹಾರದಿಂದ ಎಲ್ಲವೂ ಸುಸೂತ್ರವಾಗಬೇಕು ಎಂದು ತಿಳಿಸಿದ್ದಾರೆ.


CII ಒಳಗೊಂಡಂತೆ ಈಗಾಗಲೇ ಸಮಸ್ಯೆಯನ್ನು ಉನ್ನತ ಕೈಗಾರಿಕಾ ಚೇಂಬರ್‌ಗಳ ಮೂಲಕ ಪರಿಗಣಿಸಲಾಗಿದೆ. ಇದೇ ರೀತಿಯ ನೀತಿಗಳನ್ನು ಉದ್ಯಮದಲ್ಲಿ ತರುವುದು ಅಷ್ಟೊಂದು ಲಾಭದಾಯಕವಾಗಿರುವುದಿಲ್ಲ .ಹಾಗಾಗಿ ರಾಜ್ಯ ಸರಕಾರದೊಂದಿಗೆ ಮಾತುಕತೆಗಳು ನಡೆಯುತ್ತಿವೆ ಎಂದು ಭಾರ್ಗವ ತಿಳಿಸಿದ್ದಾರೆ.


300 ಎಕರೆಗಳ ಗುರುಗ್ರಾಮ್‌ ಪ್ಲಾಂಟ್ ಅನ್ನು ಕಂಪನಿಯು ಶಿಫ್ಟ್ ಮಾಡಲು ಬಯಸಿದ್ದು ಕೈಗಾರಿಕಾ ಉತ್ಪಾದನೆಗಳಿಗೆ ಸ್ಥಳಾವಕಾಶದ ಕೊರತೆ ಉಂಟಾಗುತ್ತಿರುವುದು ಮುಖ್ಯ ಕಾರಣವಾಗಿದೆ. ಕಟ್ಟಡದ ಸುತ್ತಲೂ ವಸತಿ ಸಂಕೀರ್ಣಗಳಿರುವುದರಿಂದ ಟ್ರಕ್‌ಗಳ ಓಡಾಟದಿಂದಾಗಿ ಸ್ಥಳೀಯರು ಕಷ್ಟವನ್ನು ಅನುಭವಿಸುತ್ತಿದ್ದಾರೆ. ದೊಡ್ಡ ಹೂಡಿಕೆಗಾಗಿ ಕಂಪೆನಿಯು ಇತರ ರಾಜ್ಯಗಳ ಜೊತೆಗೂ ಮಾತುಕತೆ ನಡೆಸಿದೆ. ಆದರೆ ಮಾರುತಿ ತನ್ನ ಹೆಚ್ಚಿನ ಆಸಕ್ತಿಯನ್ನು ಹರಿಯಾಣದ ಮೇಲೆ ತೋರಿಸಿದೆ. ಆದರೆ ಹರಿಯಾಣದಲ್ಲಿ ಉದ್ಯೋಗ ಮೀಸಲಾತಿ ಸಮಸ್ಯೆ ತಲೆದೋರಿರುವುದರಿಂದ ಕಂಪನಿಯು ಪ್ರಸ್ತುತ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುತ್ತಿದೆ.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: