Maruti Suzuki: ಮಾರುತಿ ಸುಜುಕಿ ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸುವ ದೃಷ್ಟಿಯಿಂದ ತನ್ನ ಕೆಲವು ಮಾಡೆಲ್ ಕಾರುಗಳ ಮೇಲೆ 54000 ರೂಪಾಯಿವರೆಗಿನ ಭಾರಿ ಡಿಸ್ಕೌಂಟ್ ಅನ್ನು ಘೋಷಿಸಿದೆ. ಜುಲೈ ತಿಂಗಳ ರಿಯಾಯಿತಿ ಅಂಗವಾಗಿ ಹಣದಲ್ಲಿ ಡಿಸ್ಕೌಂಟ್, ಎಕ್ಸ್ಚೇಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ಗಳನ್ನೂ ಒಳಗೊಂಡಿದೆ ಎಂದು ಮಾರುತಿ ಸುಜುಕಿ ತಿಳಿಸಿದೆ. ಈ ಡಿಸ್ಕೌಂಟ್ ಕೇವಲ ಆಲ್ಟೊ, ಸ್ವಿಫ್ಟ್ ಮತ್ತು ಎಕೋ ಮಾಡೆಲ್ ಕಾರುಗಳಿಗೆ ಮಾತ್ರ ಸೀಮಿತವಾಗಿದ್ದು, ಎರ್ಟಿಗಾ ವಾಹನದ ಮೇಲೆ ಯಾವುದೇ ರೀತಿಯ ಡಿಸ್ಕೌಂಟ್ ಇರುವುದಿಲ್ಲ ಎಂದು ಕಂಪನಿ ಸ್ಪಷ್ಟ ಪಡಿಸಿದೆ.
ಪ್ರತಿ ಕಾರಿಗೆ ಲಭ್ಯವಿರುವ ಡಿಸ್ಕೌಂಟ್ ಗಳನ್ನೂ ಈ ಕೆಳಗೆ ನೀಡಲಾಗಿದೆ:
ಮಾರುತಿ ಆಲ್ಟೊ:
ಮಾರುತಿ ಆಲ್ಟೊ ತುಂಬಾ ಜನಪ್ರಿಯವಾದಂತಹ ಚಿಕ್ಕ ಕಾರು ಇದಾಗಿದ್ದು, ಇದನ್ನು 15000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ನೊಂದಿಗೆ ನೀಡಲಾಗುತ್ತಿದೆ ಮತ್ತು 3000 ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ. ಪೆಟ್ರೋಲ್ ಎಂಜಿನ್ ಮಾಡೆಲ್ ಕಾರಿನ ಮೇಲೆ 25000 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ ಮತ್ತು ಸಿಎನ್ಜಿ ಎಂಜಿನ್ ಕಾರಿನ ಮೇಲೆ 10000 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಮಾರುತಿ ಸೆಲೆರಿಯೊ ಮತ್ತು ಸೆಲೆರಿಯೊ ಎಕ್ಸ್:
ಈ ಎರಡು ಮಾರುತಿ ಸೆಲೆರಿಯೊ ಮತ್ತು ಸೆಲೆರಿಯೊ ಎಕ್ಸ್ ಕಾರುಗಳು 15000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ನೊಂದಿಗೆ ನೀಡಲಾಗುತ್ತಿದ್ದು, 3000 ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ. ಇವೆರಡು ಕಾರುಗಳ ಮೇಲೆ ಯಾವುದೇ ರೀತಿಯ ಹಣದ ಡಿಸ್ಕೌಂಟ್ ನೀಡಲಾಗುತ್ತಿಲ್ಲ.
ಮಾರುತಿ ಡಿಜೈರ್:
ಐದು ಜನರು ತುಂಬಾ ಆರಾಮಾಗಿ ಕುಳಿತುಕೊಂಡು ಹೋಗುವಂತಹ ಮಾರುತಿ ಡಿಜೈರ್ 20000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ನೊಂದಿಗೆ ನೀಡಲಾಗುತ್ತಿದ್ದು, 10000 ಹಣದ ಡಿಸ್ಕೌಂಟ್ ನೀಡಲಾಗುತ್ತಿದೆ.
ಮಾರುತಿ ಎಕೋ:
ಮಾರುತಿ ಎಕೋ ಮಿನಿ ವ್ಯಾನ್ ಅಂತಲೇ ಜನಪ್ರಿಯವಾಗಿದ್ದು, ಇದನ್ನು 15000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ನೊಂದಿಗೆ ನೀಡಲಾಗುತ್ತಿದೆ ಮತ್ತು 3000 ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಮಿನಿ ವ್ಯಾನ್ ಮೇಲೆ 10000 ರೂಪಾಯಿ ಹಣದ ಡಿಸ್ಕೌಂಟ್ ನೀಡಲಾಗುತ್ತಿದೆ.
ಮಾರುತಿ ಎಸ್ - ಪ್ರೆಸ್ಸೋ:
ಮಾರುತಿ ಎಸ್ - ಪ್ರೆಸ್ಸೋಪೆಟ್ರೋಲ್ ಎಂಜಿನ್ ಮಾಡೆಲ್ ಮೇಲೆ 25000 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ ಮತ್ತು ಸಿಎನ್ಜಿ ಎಂಜಿನ್ ಮಾಡೆಲ್ ಮೇಲೆ 10000 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ. ಇದಲ್ಲದೆ 15000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ನೊಂದಿಗೆ ನೀಡಲಾಗುತ್ತಿದೆ ಮತ್ತು 3000 ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.
ಮಾರುತಿ ಸ್ವಿಫ್ಟ್:
ಮಾರುತಿ ಸ್ವಿಫ್ಟ್ 20000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ನೊಂದಿಗೆ ನೀಡಲಾಗುತ್ತಿದೆ ಮತ್ತು 4000 ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ. ಎಲ್ಎಕ್ಸ್ಐ ಮಾಡೆಲ್ ಕಾರಿನ ಮೇಲೆ 10000 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದ್ದು, ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ ಪ್ಲಸ್ ಮಾಡೆಲ್ ಕಾರಿನ ಮೇಲೆ 15000 ರೂಪಾಯಿ ಡಿಸ್ಕೌಂಟ್ ಅನ್ನು ನೀಡಲಾಗುತ್ತಿದೆ. ಸ್ವಿಫ್ಟ್ ವಿಎಕ್ಸ್ಐ ಮೇಲೆ 30000 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ.
ಮಾರುತಿ ವಿಟಾರಾ ಬ್ರೀಝಾ:
ಈ ಕಾರನ್ನು 20000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ನೊಂದಿಗೆ ನೀಡಲಾಗುತ್ತಿದೆ ಮತ್ತು 4000 ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ. 15000 ರೂಪಾಯಿ ಡಿಸ್ಕೌಂಟ್ ಸಹ ಈ ವಾಹನ ಖರೀದಿ ಮಾಡುವವರಿಗೆ ನೀಡಲಾಗುತ್ತಿದೆ.
ಮಾರುತಿ ವ್ಯಾಗನ್ - ಆರ್:
ಪೆಟ್ರೋಲ್ ಎಂಜಿನ್ ಮಾಡೆಲ್ ಮೇಲೆ 15000 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ ಮತ್ತು ಸಿಎನ್ಜಿ ಎಂಜಿನ್ ಮಾಡೆಲ್ ಮೇಲೆ 5000 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ. ಇದಲ್ಲದೆ 3000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ನೊಂದಿಗೆ ನೀಡಲಾಗುತ್ತಿದೆ ಮತ್ತು 15000 ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ