ಮದುವೆ (Marriage) ಅಂದ್ರೆ ಜೀವನದಲ್ಲಿ ಆಗುವ ದೊಡ್ಡ ತಿರುವು ಅಂತಲೇ ಹೇಳಬಹುದು. ಯಾಕಂದ್ರೆ ಅಲ್ಲಿಯ ತನಕ ನಾನು ಎಂದು ಇರುವವರು ನಾವು ಎಂದು ಬದಲಾವಣೆ ಹೊಂದುವ ಸಮಯ. ಎರಡು ರೀತಿಯ ಮದುವೆ ಇರುತ್ತೆ. ಒಂದು ಲವ್ ಮ್ಯಾರೇಜ್ ಇನ್ನೊಂದು ಅರೇಂಜ್ ಮ್ಯಾರೇಜ್. ಇತ್ತೀಚಿಗಿನ ಕಾಲದಲ್ಲಿ ಲವ್ ಮ್ಯಾರೇಜ್ಗಳೇ ಜಾಸ್ತಿಯಾಗಿದೆ. ಮ್ಯಾಟ್ರಿಮೊನಿಯಂತಹ ಆ್ಯಪ್ಗಳ (Matrimony App) ಮೂಲಕ ತಮ್ಮ ಜೊತೆಗಾರರನ್ನು ಹುಡುಕಿಕೊಳ್ಳುತ್ತಾರೆ. ಹೀಗೆ ಕಾಲ ಬದಲಾದಂತೆ ಟೆಕ್ನಾಲಜಿ (Technology) ಕೂಡ ಬದಲಾಗುತ್ತಿದೆ. ಜನರು ಕೂಡ ಇದಕ್ಕೆ ಒಡ್ಡುಕೊಳ್ಳುತ್ತಿದ್ದಾರೆ.
ಈಗ ಕೆಲಸದಲ್ಲಿ ಇರುವವರಿಗೆ ಮದುವೆಗೆ ಹೋಗಬೇಕು ಅಂದ್ರೆ ಕಂಪೆನಿ ಕಡೆಯಿಂದ ರಜೆ ಕೊಡ್ತಾರೆ. ಅಬ್ಬಬ್ಬಾ ಅಂದ್ರೆ 15 ರಿಂದ 25 ದಿನಗಳ ತನಕ ಮದುವೆಗೆ ಅಂತ ರಜೆ ಕೊಡ್ತಾರೆ. ಆದ್ರೆ ಹನಿಮೂನ್ ಹೋಗಬೇಕು ಅಂತ ಎಲ್ಲಾ ಯಾವ ಕಂಪನೆಗಳಲ್ಲಿ ಆದ್ರೂ ರಜೆ ಕೊಡ್ತಾರಾ? ಆದ್ರೆ ಇಲ್ಲೊಂದು ದೇಶದಲ್ಲಿ ಹನಿಮೂನ್ ಹೋಗಲು, ರೊಮ್ಯಾನ್ಸ್ ಮಾಡಲು ಅಂತಲೇ ರಜೆ ಕೊಡ್ತಾರಂತೆ.
ಅಚ್ಚರಿ ಎನಿಸಿದರೂ ಕೂಡ ನಿಜ. ಈ ದೇಶದಲ್ಲಿ ವಧು ವರರಿಗೆ ಭರ್ಜರಿ ಆಫರ್. ಮದುವೆ ಹನಿಮೂನ್ ಲೆಕ್ಕದಲ್ಲಿ ಜಾಲಿ ಮಾಡೋದಕ್ಕೆ ಒಂದು ತಿಂಗಳು ರಜೆ ( Married Couple Romance Leave )ಸಿಗುತ್ತೆ. ಯಾರಿಗುಂಟು ಯಾರಿಗಿಲ್ಲ ಅನ್ನೋ ಹಾಗೆ ಈ ಆಫರ್ ನೀಡಿರುವ ದೇಶ ಯಾವುದು ಗೊತ್ತಾ? ಅಷ್ಟಕ್ಕೂ ಈ ರೀತಿ ಆಫರ್ ಕೊಡೋದಕ್ಕೆ ಕಾರಣ ಕೂಡ ಇದೆ.
ಚೀನಾದ ಹೊಸ ನಿಯಮವನ್ನು ಪರಿಚಯಿಸಿದ್ದು, ಇದು ಜಸ್ಟ್ ಮ್ಯಾರೀಡ್ ಕಪಲ್ ಹಾಗೂ ಭಾವೀ ವಧು-ವರರಿಗೆ ನೆಮ್ಮದಿ ನೀಡುವಲ್ಲಿ ಯಶಸ್ವಿಯಾಗಿದೆ. ಎಷ್ಟೋ ಸಲ ರಜೆ ಸಿಗದೇ ನೂತನ ವಧು ವರರು ಪರಸ್ಪರ ಜೊತೆಯಾಗಿ ಕಾಲ ಕಳೆಯಲು ಕೂಡ ಆಗದ ಸ್ಥಿತಿ ನಿರ್ಮಾಣವಾಗುತ್ತದೆ. ಆದರೆ, ಚೀನಾ ದೇಶದಲ್ಲಿ ಇಳಿಮುಖವಾಗುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಚೀನಾ ಹೊಸ ಪ್ರಯತ್ನಕ್ಕೆ ಹೆಚ್ಚೆ ಹಾಕಿದೆ. ಮದುವೆಯಾದ ದಂಪತಿಗೆ ರೋಮ್ಯಾನ್ಸ್ ಮಾಡುವ ಸಲುವಾಗಿ 30 ದಿನಗಳ ವೇತನ ಸಹಿತ ರಜೆ ನೀಡುವುದಾಗಿ ಚೀನಾ ಸರ್ಕಾರ ಘೋಷಿಸಿದೆ.
ಇದನ್ನೂ ಓದಿ: ಶಿರಸಿಗೆ ಬಂದ್ರೆ ಇಷ್ಟೆಲ್ಲಾ ಪ್ಲೇಸ್ಗಳನ್ನು ನೋಡ್ಬೋದಾ? ವಾಹ್, ಒಮ್ಮೆ ಆದ್ರೂ ಹೋಗ್ಲೇ ಬೇಕು!
ಯುವಜನತೆಯನ್ನು ಮದುವೆಯಾಗಲೂ ಪ್ರೇರೇಪಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಚೀನಾ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಚೀನಾದಲ್ಲಿ ಈ ಮೊದಲು ಮದುವೆಯಾದವರಿಗೆ ಮೂರು ದಿನಗಳ ರಜೆ ನೀಡಲಾಗುತ್ತಿತ್ತಂತೆ.
ಸದ್ಯ ಸಿಚುವಾನ್‌ನಲ್ಲಿ, ನವವಿವಾಹಿತ ದಂಪತಿಗಳು ಇನ್ನೂ ಮೂರು ದಿನಗಳ ರಜೆಯನ್ನು ನೀಡಲಾಗುತ್ತಿದೆ. ಮತ್ತೊಂದು ಮುಖ್ಯ ವಿಚಾರವೇನೆಂದರೆ ಈ ಹೊಸ ತೀರ್ಮಾನ ಎಲ್ಲ ಪ್ರಾಂತ್ಯದಲ್ಲಿ ಜಾರಿಯಾಗಿಲ್ಲ ಎನ್ನಲಾಗಿದೆ.
ಚೀನಾದ ಕೆಲವು ಭಾಗಗಳಲ್ಲಿ ಈ ವಿಶೇಷ 30 ದಿನಗಳ ರಜೆ ನೀಡಲಾಗುತ್ತಿದ್ದು, ಇದು ಗನ್ಸು ಮತ್ತು ಶಾಂಕ್ಸಿ ಪ್ರಾಂತ್ಯಗಳನ್ನು ಒಳಗೊಂಡಿದೆ ಇದರ ಜೊತೆಗೆ, ಶಾಂಘೈ 10 ದಿನಗಳ ರಜೆಯನ್ನು ನೀಡಲಾಗುತ್ತಿದೆ.
ಈಗ ಸಹಜವಾಗಿ ನಿಮಗೆಲ್ಲ ಚೀನಾ ಸರ್ಕಾರ ಈ ರೀತಿ ನಿರ್ಣಯ ಕೈಗೊಳ್ಳಲು ಕಾರಣವೇನು ಎಂಬ ಕುತೂಹಲ ಸೃಷ್ಟಿಸಿರಬಹುದು. ಚೀನಾದಲ್ಲಿ ಜನಸಂಖ್ಯೆಯು ವೇಗವಾಗಿ ಕಡಿಮೆಯಾಗುತ್ತಿದ್ದು ಇದನ್ನು ಕಂಡು ಗಾಬರಿಗೊಂಡ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸರ್ಕಾರ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ಚೀನಾದಲ್ಲಿ ವಯಸ್ಸಾದವರ ಜನಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು ಇದರಿಂದಾಗಿ ಜನಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲು ಚೀನಾ ಸರ್ಕಾರ ಮುಂದಾಗಿದೆ.
ಜನ ಸಂಖ್ಯೆ ಹೆಚ್ಚಿಸುವ ಸಲುವಾಗಿ ಮದುವೆಯಾದವರಿಗೆ ರೋಮ್ಯಾನ್ಸ್ ಮಾಡಲು 30 ದಿನಗಳ ವೇತನ ಸಹಿತ ರಜೆ ನೀಡಲು ಚೀನಾ ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ರೀತಿಯಾದಂತಹ ತೀರ್ಮಾನ ನಮ್ಮ ಭಾರತ ದೇಶದಲ್ಲಿಯೂ ಬರಲಿ ಅಂತ ಇಲ್ಲಿನ ಅದೆಷ್ಟೋ ಉದ್ಯೋಗಿಗಳು ಬೇಡಿಕೊಳ್ಳುತ್ತಾ ಇರಬಹುದು. ಇದೊಂದು ರೀತಿಯ ನಿಯಮ ನಮ್ಮ ಕಂಪನೆಗಳಲ್ಲಿಯೂ ಬರಲಿ ಅಂತ ಅಲ್ವಾ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ