ಗೃಹಪ್ರವೇಶಗಳಿಗೆ ಹೋಗೋದು ಅಂದ್ರೆ ಅದೇನೋ ಒಂದು ರೀತಿಯ ಸಂತೋಷ ಅಂತ ಹೇಳಬಹುದು. ಯಾಕಂದ್ರೆ ಹೊಸ ಮನೆಯನ್ನು ವಿನೂತನವಾಗಿ ಕಟ್ಟಿರುತ್ತಾರೆ. ಅದ್ರಲ್ಲೂ ಇಂದಿನ ಕಾಲದಲ್ಲಿ ಇಂಟೀರಿಯರ್ ಡಿಸೈನ್ಗಳೆಲ್ಲ (Interior Design) ವಿಭಿನ್ನವಾಗಿ ಮಾಡಿಸಿರುತ್ತಾರೆ. ಅದಕ್ಕಾಗಿ ಬಾಡಿಗೆ ಮನೆಗಳಿಂದ ಹೊಸ ಮನೆಗೆ ಹೋಗಬೇಕಾದ್ರೆ ನೂರಾರು ರೀತಿಯ ಮನೆಯ ವಿನ್ಯಾಸವನ್ನು ತಲೆಯಲ್ಲಿ ಇಟ್ಟುಕೊಂಡೇ ಹೋಗಿರುತ್ತಾರೆ. ಇನ್ನು ಪ್ರೀತಿಸಿ ಮದುವೆ ಆಗುವವರು ಸಾಮಾನ್ಯವಾಗಿ ಇನ್ನೊಬ್ಬರ ಸಲಹೆಯ ಮೇರೆಗೆ, ವಾಸ್ತು ಪ್ರಕಾರ (Vastu Tips) ಮನೆಗಳನ್ನು ಕಟ್ಟಿಸುತ್ತಾರೆ. ಹೀಗಿರುವಾಗ ನಮ್ಮ ಆಪ್ತ ಸ್ನೇಹಿತರು (Close Friends) ಯಾವುದಾರೂ ಹೊಸ ಮನೆಗೆ ಹೋಗ್ತಾರೆ ಅಂದ್ರೆ ಯಾವ ರೀತಿಯಾಗಿ ಇದೆ ಮನೆ, 2BHK, 1BHK, 1RK ಮತ್ತು ಅದರ ರೇಟ್ಗಳನ್ನು ಕೇಳುತ್ತಾರೆ. ಹೀಗಿರುವಾಗ ಇಲ್ಲಿ ಜೀವನ ನಡೆಸುತ್ತಿರುವ ದಂಪತಿಗಳು ವಿಶೇಷವಾದ ಮನೆಯಲ್ಲಿ ವಾಸ ಮಾಡ್ತಾ ಇದ್ದಾರೆ. ಕೇಳಿದ್ರೆ ಪಕ್ಕಾ ಶಾಕ್ ಆಗ್ತೀರ!
ಹೌದು. ಈಗಿನ ಕಾಲದಲ್ಲಿ ಹೊಸ ಮನೆಗಳಿಗೆ ಹೋಗುವುದು ಅಂದ್ರೆ ನೂರಾರು ಬಾರಿ ಯೋಚನೆ ಮಾಡಿ, ಬಜೆಟ್ ಫ್ರೆಂಡ್ಲಿ ಹಾಗೆಯೇ ಅನುಕೂಲಕ್ಕೆ ತಕ್ಕಂತೆ ಮನೆಗಳನ್ನು ಮಾಡಿಕೊಳ್ಳುತ್ತಾರೆ.
ಏನಿದು ವೈರಲ್ ಸುದ್ದಿ!
ಕೋಲಂಬಿಯಾ ದೇಶದ ಇಬ್ಬರು ದಂಪತಿಗಳ ನಿಜ ಜೀವನದ ಕಥೆ ಕೇಳಿದರೆ ನಿಜಕ್ಕೂ ಶಾಕ್ ಜೊತೆಗೆ ಬೇಸರವಾಗುತ್ತದೆ. ಕೊಲಂಬಿಯಾ ದೇಶದ ಮರಿಯಾ ಮತ್ತು ಅವರ ಪತಿ ಮಿಗಿಲ್ ಕಳೆದ 22 ವರ್ಷಗಳಿಂದ ಚರಂಡಿಯಲ್ಲಿ ವಾಸಿಸುತ್ತಿದ್ದಾರೆ. ಅರೇ! ಇದೇನಿದು ಚರಂಡಿಯಲ್ಲಾ ಸುಮ್ಮನೆ ತಮಾಷೆ ಮಾಡಬೇಡಿ ಅಂತ ಅನ್ಕೋಬೇಡಿ.
ಸುಮಾರು 50 ಲಕ್ಷ ಜನಸಂಖ್ಯೆ ಇರುವ ಕೊಲಂಬಿಯಾ ದೇಶ ಒಂದಲ್ಲಾ ಒಂದು ರೀತಿಯಲ್ಲಿ ಸದ್ದನ್ನು ಮಾಡುತ್ತಲೇ ಇರುತ್ತದೆ. ಅದ್ರಲ್ಲೂ ಡ್ರಗ್ ಅಪರಾಧ ಕೇಸ್ಗಳಲ್ಲಿ ಎತ್ತಿದ ಕೈ ಅಂತನೇ ಹೇಳಬಹದು. ಮರಿಯಾ ಮತ್ತು ಮಿಗಿಲ್ ಕೂಡ ಈ ಚಟಕ್ಕೆ ದಾಸರಾಗಿದ್ದರು. ಇವರಿಬ್ಬರಿಗೂ ಮೊದಲು ಪ್ರೀತಿಯಾದಾಗ ಇವರ ಜೊತೆಯಲ್ಲಿ ಬಿಡಿಗಾಸೂ ಇರಲ್ಲಿಲ್ಲ.
ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಲಿಂಗಿ ದಂಪತಿಗಳು, ಕ್ಯೂಟ್ ಫೋಟೋ ಶೇರ್ ಮಾಡಿಕೊಂಡ ಜೋಡಿ!
ಹಾಗಂತ ಅವರೇನೂ ದೂರ ಆಗಿಲ್ಲ. ಇದಕ್ಕೆ ಅಲ್ವಾ ಹೇಳೋದು ಲವ್ ಈಸ್ ಬ್ಲೈಂಡ್ ಅಂತ. ಇವರಿಬ್ಬರೂ ತುಂಬಾ ಪ್ರೀತಿಸಿ ಮದುವೆಯಾದ ನಂತರ ಇನ್ನು ಮುಂದೆ ಕೆಟ್ಟ ಚಟದಿಂದ ದೂರವಾಗಬೇಕು ಅಂತ ನಿರ್ಧಾರ ಮಾಡಿದ್ರು. ಇನ್ನೂ ಇವರಿಗೆ ಯಾವುದೇ ರೀತಿ ಬಂದು ಬಳಗ, ವಾಸಿಸಲು ಮನೆ ಇರಲಿಲ್ಲ.
ಹೀಗಾಗಿ ಮರಿಯಾ ಮತ್ತು ಮಿಗಿಲ್ ಕೆಲವು ದಿನಗಳ ಕಾಲ ರಸ್ತೆಯಲ್ಲೇ ಸಂಸಾರ ಮಾಡುತ್ತಿರುತ್ತಾರೆ. ಆದರೆ ಎಷ್ಟು ದಿನ ರಸ್ತೆಯ ಬದಿಯಲ್ಲಿ ವಾಸಿಸಲು ಸಾಧ್ಯ ಹೇಳಿ. ಚಳಿ, ಮಳೆ ಅಂತ ಬಂದಾಗ ಇರಲು ಮನೆ ಬೇಕು ಅಂತ ಇವರಿಗೆ ಅನಿಸುತ್ತದೆ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣದಿಂದಾಗಿ ಹೊರಗೆ ಇದ್ದರು. ಇಂತಹ ಸಮಯದಲ್ಲಿ ಕೊಲಂಬಿಯಾ ನಗರದಿಂದ ಸ್ವಲ್ಪ ದೂರವಿದ್ದ ಚರಂಡಿಯೊಂದು ಮಿಗಿಲ್ ಗೆ ಕಾಣಿಸುತ್ತದೆ.
ಈ ಚರಂಡಿ ಏನು ಹಾಳಾಗಿ ಇರಲಿಲ್ಲ ಮತ್ತು ಇದು ಚಾಲ್ತಿಯಲ್ಲಿ ಇರಲಿಲ್ಲ. ಹೀಗಾಗಿ ಮಿಗಿಲ್ ನಾನು ನನ್ಮ ಪತ್ನಿ ಇದರಲ್ಲಿ ವಾಸಮಾಡಬಹುದು ಎಂದುಕೊಂಡು ತನ್ನ ಪತ್ನಿಯನ್ನು ಕರೆದು ಆ ದಿನದಿಂದ ಚರಂಡಿಯಲ್ಲೇ ಜೀವನ ನಡೆಸಲುಆರಂಭ ಮಾಡಿದ್ದಾರೆ.
ಇವರು ದುಡಿಯಲು ಆರಂಬಿಸಿದರು. ಮನೆಯನ್ನು ವಿನ್ಯಾಸಗೊಳಿಸಲು ಬೆಳಕು, ವಿದ್ಯುತ್, ನೀರಿನ ವ್ಯವಸ್ಥೆ ಎಲ್ಲವೂ ಅಳವಡಿಸಿಕೊಳ್ಳಲು ಆರಂಭ ಮಾಡಿದರು. ಅದಲ್ಲದೇ ಬರೋಬ್ಬರಿ 22ವರ್ಷಗಳಿಂದ ದಂಪತಿಗಳು ಈ ಚರಂಡಿಯಲ್ಲೇ ವಾಸವಾಗಿದ್ದಾರೆ.
ಇದೇ ಮನೆಯನ್ನು ಚೆನ್ನಾಗಿ ಅಲಂಕಾರ ಮಾಡಿ ಕ್ರಿಸ್ಮಸ್ ಹಬ್ಬವನ್ನು ಕೂಡ ಸೆಲಬ್ರೇಷನ್ ಮಾಡಿದ್ದಾರೆ. ಇದನ್ನು ತಿಳಿದು ಸ್ಥಳೀಯರು ಸಹಾಯ ಮಾಡಲು ಬಂದಾಗ ಈ ದಂಪತಿಗಳು ಬೇಡ, ನಾವು ಈ ಮನೆಯಲ್ಲಿಯೇ ಇರುತ್ತೇವೆ ಮತ್ತು ನಮಗೆ ಯಾರಿಂದಲೂ ಸಹಾಯ ಬೇಡ, ಇಲ್ಲೇ ಸಂತಸ, ನೆಮ್ಮದಿಯಿಂದ ಇದ್ದೀವಿ ಎಂದು ಹೇಳಿದ್ದಾರೆ. ಇದು ಕಾಲ್ಪನಿಕ ಜಗತ್ತಿನ ಕಥೆಯಲ್ಲ. ನಿಜಕ್ಕೂ ಇವರು ಗ್ರೇಟ್ ಅಂತಾನೇ ಹೇಳಬೇಕು ಅಲ್ವಾ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ