Viral News: ಮದ್ವೆ ಆದ್ಮೇಲೆ ಗೊತ್ತಾಯ್ತು, ಅವಳು ಸಲಿಂಗಿ, ಅವನು ದ್ವಿಲಿಂಗಿ: ಈಗ ಮತ್ತೊಬ್ಬಾಕೆಯನ್ನು ಬರಮಾಡಿಕೊಂಡ ಜೋಡಿ

ಲೆಸ್ಲಿ ಹುಡುಗಿಯರನ್ನು ಇಷ್ಟಪಡುತ್ತಿದ್ದ ಕಾರಣ ಇಬ್ಬರ ಜೀವನದಲ್ಲಿ ಮಹಿಳೆ ಎಂಟ್ರಿ ಕೊಟ್ರೆ ಚೆನ್ನಾಗಿರುತ್ತದೆ. ಇಬ್ಬರೂ ಬಹುಪತ್ನಿತ್ವದಿಂದ ಸಂತೋಷವಾಗಿ ಜೀವನ ನಡೆಸಬಹುದು ಟಾಮ್ ಮತ್ತು ಲೆಸ್ಲಿ ನಿರ್ಧರಿಸಿದ್ದರು.

ಲೆಸ್ಲಿ, ಟಾಮ್ ಮತ್ತು ಎಮ್ಮಾ

ಲೆಸ್ಲಿ, ಟಾಮ್ ಮತ್ತು ಎಮ್ಮಾ

  • Share this:
ಪತಿ ಮತ್ತು ಪತ್ನಿ (Husband And Wife) ನಡುವೆ ಮೂರನೇ ವ್ಯಕ್ತಿ (Third Person) ಪ್ರವೇಶಿಸಿದ್ರೆ ಆ ಸಂಸಾರ ಕೊನೆಗೊಳ್ಳುತ್ತದೆ ಅನ್ನೋದು ತಿಳಿದಿರುವ ವಿಚಾರ. ಅದು ಅವನು ಅಥವಾ ಅವಳಾಗಲಿ, ಇಬ್ಬರ ನಡುವಿನ ಸಂಬಂಧ ಮಾತ್ರ ಹಳಸಿ ಹೋಗುತ್ತದೆ. ಆದ್ರೆ ಇಂದು ಕಾಲ ಬದಲಾಗಿದೆ. ಪತಿ-ಪತ್ನಿ ತಾವು ಒಳ್ಳೆಯ ಜೋಡಿ (Couple) ಅಲ್ಲ ಅಂತ ಮನವರಿಕೆ ಆಗುತ್ತಲೇ ಒಮ್ಮತದಿಂದ ವಿಚ್ಛೇದನ (Divorce) ಪಡೆದು ಪ್ರತ್ಯೇಕವಾಗುತ್ತಾರೆ. ಕೆಲವರು ಹೊಸ ಸಂಗಾತಿ (New Partner) ಆಯ್ಕೆ ಮಾಡಿಕೊಂಡು ಜೀವನ ನಡೆಸಲು ಶುರು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಲಿಂಗಿಗಳು ಬಹಿರಂಗವಾಗಿ ತಮ್ಮ ಜೀವನವನ್ನು ಸಮಾಜದ ಮುಂದೆ ತೆರೆದಿಡುತ್ತಿದ್ದಾರೆ. ಆದರೆ ಇಂದು ನಾವು ನಿಮಗೆ ಹೇಳುತ್ತಿರೋದು ತುಂಬಾನೇ ಭಿನ್ನವಾದ ಸುದ್ದಿ. ಇಲ್ಲಿಯೇ ದಂಪತಿಯೇ ತಮ್ಮ ಜೀವನದಲ್ಲಿ ಮೂರನೇ ವ್ಯಕ್ತಿಯನ್ನು ಬರಮಾಡಿಕೊಂಡಿದ್ದಾರೆ.

ಇಂದು ಸಂಬಂಧಗಳು ಬದಲಾಗುತ್ತಿದ್ದು, ಅವುಗಳಿಗೆ ಹೊಸ ಹೊಸ ವ್ಯಾಖ್ಯಾನಗಳನ್ನು ನೀಡಲಾಗುತ್ತಿದೆ. ಇಂದು ನಾವು ಹೇಳುತ್ತಿರುವ ಈ ದಂಪತಿ ಥ್ರೋಪಲ್ ಎಂಬ ಹೊಸ ಸಂಬಂಧಕ್ಕೆ ಜನ್ಮ ನೀಡಿದ್ದಾರೆ. ಇರ್ವರು ಪರಸ್ಪರ ಒಪ್ಪಿಗೆ ಮೇರೆಗೆ ತಮ್ಮ ಸಂಸಾರದಲ್ಲಿ ಮಹಿಳೆ ಸ್ವಾಗತಿಸಿಕೊಂಡಿದ್ದಾರೆ.

ಮದುವೆ ಆದ್ಮೇಲೆ ಗೊತ್ತಾಯ್ತು ಇಬ್ಬರ ರಹಸ್ಯ

ಇಂಗ್ಲೆಂಡ್ ಮೂಲದ ಈ ದಂಪತಿ ಫೂರ್ವ ಸೆಸಕ್ಸ್ ನಲ್ಲಿ ವಾಸವಾಗಿದ್ದಾರೆ. 25 ವರ್ಷದ ಟಾಮ್ ಮತ್ತು 24 ವರ್ಷದ ಲೆಸ್ಲಿ ಹಿಲ್ಯಾರ್ಡ್ 2017 ರಲ್ಲಿ ವಿವಾಹವಾಗಿದ್ದರು. ಮದುವೆ ಬಳಿಕೆ ಲೆಸ್ಲಿ ಸಲಿಂಗಕಾಮಿ ಮತ್ತು ಟಾಪ್ ದ್ವಿಲಿಂಗಿ ಎಂದು ಇಬ್ಬರಿಗೂ ಗೊತ್ತಾಗಿದೆ. ಟಾಮ್ ಮಹಿಳೆ ಮತ್ತು ಪುರುಷರನ್ನ ಇಷ್ಟಪಡುತ್ತಾನೆ ಅಂತ ತಿಳಿದಿದೆ.

ಇದನ್ನೂ ಓದಿ:  Viral News: ರಹಸ್ಯವಾಗಿ ವೀರ್ಯ ಮಾರಾಟ ಮಾಡ್ತಿದ್ದ ಪತಿ; ವಿಷಯ ತಿಳಿದಾಗ ಪತ್ನಿಯ ವರ್ತನೆ ಹೇಗಿತ್ತು ಅಂತ ವಿವರಿಸಿದ ಪತಿ

ಈ ವಿಷಯ ತಿಳಿದ ನಂತರವೂ ಟಾಮ್ ಮತ್ತು ಲೆಸ್ಲಿ ಪರಸ್ಪರಸ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಒಂದು ದಿನ ಟಾಮ್ ಮತ್ತು ಲೆಸ್ಲಿ ಜೊತೆಯಾಗಿ ಮಾತನಾಡುತ್ತಾ ಕುಳಿತಿದ್ದರು. ಈ ವೇಳೆ ತಮಾಷೆಯಾಗಿ ತಮ್ಮಿಬ್ಬರ ಮಧ್ಯೆ ಮೂರನೇ ವ್ಯಕ್ತಿ ಬಂದ್ರೆ ಹೇಗೆ ಎಂಬುದರ ಕುರಿತು ಮಾತನಾಡಿದ್ದರು. ತಮಾಷೆ ಮಾತು ಗಂಭೀರ ವಿಷಯವಾಗಿ ಬದಲಾಗಿದೆ.

ಇಬ್ಬರಿಗೂ ಬಹುಪತ್ನಿತ್ವದ ಜೀವನ

ಲೆಸ್ಲಿ ಹುಡುಗಿಯರನ್ನು ಇಷ್ಟಪಡುತ್ತಿದ್ದ ಕಾರಣ ಇಬ್ಬರ ಜೀವನದಲ್ಲಿ ಮಹಿಳೆ ಎಂಟ್ರಿ ಕೊಟ್ರೆ ಚೆನ್ನಾಗಿರುತ್ತದೆ. ಇಬ್ಬರೂ ಬಹುಪತ್ನಿತ್ವದಿಂದ ಸಂತೋಷವಾಗಿ ಜೀವನ ನಡೆಸಬಹುದು ಟಾಮ್ ಮತ್ತು ಲೆಸ್ಲಿ ನಿರ್ಧರಿಸಿದ್ದರು.

married couple invite woman to be their girlfriend
ಎಮ್ಮಾ ಮತ್ತು ಲೆಸ್ಲಿ


ಮದುವೆಯಾಗಲು ಮುಂದಾಗಿರುವ ಮೂವರು

ಡೈಲಿ ಸ್ಟಾರ್ ವರದಿಯ ಪ್ರಕಾರ, ಲೆಸ್ಲಿ LGBT ಡೇಟಿಂಗ್ ಅಪ್ಲಿಕೇಶನ್ ತೈಮಿಯಲ್ಲಿ ಎಮ್ಮಾ ಕೂಂಬರ್ ಎಂಬ ಮಹಿಳೆಯನ್ನು ಭೇಟಿಯಾಗಿದ್ದರು. 31 ವರ್ಷ ವಯಸ್ಸಿನ ಎಮ್ಮಾ ಮತ್ತು ಲೆಸ್ಲಿ ನಡುವೆ ಸ್ನೇಹ ಬೆಳೆದಿತ್ತು. ಕೆಲ ದಿನಗಳ ನಂತರ ಲೆಸ್ಲಿ ಪತಿ ಟಾಮ್ ನನ್ನು ಎಮ್ಮಾಗೆ ಭೇಟಿ ಮಾಡಿಸಿದ್ದಾಳೆ. ಟಾಮ್ ಗೂ ಎಮ್ಮಾ ಇಷ್ಟವಾಗಿದ್ದು, ಸದ್ಯ ಮೂವರು ಮದುವೆಯಾಗಲು ಮುಂದಾಗಿದ್ದಾರೆ.

ತಮ್ಮ ಸಂಬಂಧದ ಬಗ್ಗೆ ಲೆಸ್ಲಿ ಡೈಲಿ ಸ್ಟಾರ್ ಜೊತೆ ಮಾತನಾಡಿದ್ದಾಳೆ. ನಮ್ಮಿಬ್ಬರ ಮಧ್ಯೆ ಮೂರನೇ ವ್ಯಕ್ತಿಯನ್ನು ಬರಮಾಡಿಕೊಳ್ಳೋದನ್ನು ಕೆಲವರು ಅಪರಾಧ ಎಂಬಂತೆ ಮಾತನಾಡುತ್ತಿದ್ದಾರೆ. ವಯಸ್ಕರ ಉದ್ಯಮಕ್ಕಾಗಿ ನಾವು ಮದುವೆ ಆಗುತ್ತಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಜನರು ಅಂದುಕೊಂಡಂತೆ ನಮ್ಮ ಸಂಬಂಧವಿಲ್ಲ ಎಂದು ಲೆಸ್ಲಿ ಹೇಳುತ್ತಾರೆ.

ಇದನ್ನೂ ಓದಿ:  Viral News: ಈ ನಾಯಿ 'ಸಲಿಂಗಕಾಮಿ'ಯಂತೆ! ಯಾರಿಗೂ ಬೇಡದ ಶ್ವಾನವನ್ನು ಸಾಕುತ್ತಿದ್ದಾರೆ 'ಗೇ' ದಂಪತಿ!

ಮೂವರ ನಿರ್ಧಾರ ಒಪ್ಪಿದ ಕುಟುಂಬಸ್ಥರು

ನಾವು ಮೂವರು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಒಂದೇ ಮನೆಯಲ್ಲಿದ್ದು, ಎಲ್ಲ ಕೆಲಸ ಮತ್ತು ಖರ್ಚು ವೆಚ್ಚಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆ. ಮೂವರು ಜೊತೆಯಾಗಿಯೇ ಮಲಗುತ್ತೇವೆ. ಮೊದಮೊದಲು ನಮ್ಮ ಸಂಬಂಧದ ಬಗ್ಗೆ ಪೋಷಕರಿಗೆ ಹೇಳಲು ಮುಜುಗರ ಉಂಟಾಯ್ತು. ಆದ್ರೆ ನಮ್ಮ ಕುಟುಂಬಸ್ಥರು ಮೂವರ ನಿರ್ಧಾರವನ್ನ ಗೌರವಿಸಿದ್ದಾರೆ ಎಂದು ಹೇಳ್ತಾರೆ ಲೆಸ್ಲಿ.
Published by:Mahmadrafik K
First published: