Bottle Cap Challenge: ಬಾಟಲಿ ಮುಚ್ಚಳ ಹಾರಿಸಲು ಅಮೆರಿಕದ ಈ ಗಾಯಕಿ ಹೀಗಾ ಮಾಡೋದು?

ಕೆಲವರು ಬಾಟಲ್​ ಕ್ಯಾಪ್​ ಚಾಲೆಂಜ್ಅನ್ನು ಟ್ರೋಲ್ ಮಾಡಿದ್ದಾರೆ. ಆದರೆ, ಮರಿಯಾ ಕ್ಯಾರಿ ಈ ಚಾಲೆಂಜ್ ತೆಗೆದುಕೊಂಡ ವಿಧಾನಮಾತ್ರ ನಿಜಕ್ಕೂ ವಿಶೇಷವಾದುದ್ದು.

Rajesh Duggumane | news18
Updated:July 8, 2019, 3:26 PM IST
Bottle Cap Challenge: ಬಾಟಲಿ ಮುಚ್ಚಳ ಹಾರಿಸಲು ಅಮೆರಿಕದ ಈ ಗಾಯಕಿ ಹೀಗಾ ಮಾಡೋದು?
ಮರಿಯಾ
  • News18
  • Last Updated: July 8, 2019, 3:26 PM IST
  • Share this:
ಬಾಟಲ್ ಕ್ಯಾಪ್ ಚಾಲೆಂಜ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದೆ. ಸಾಕಷ್ಟು ಸೆಲಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಈಗ ಅಮೆರಿಕದ ಗಾಯಕಿ ಮರಿಯಾ ಕ್ಯಾರಿ ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ.

ಬಾಟಲ್ ಕ್ಯಾಪ್ ಚಾಲೆಂಜ್​ನಲ್ಲಿ ಬಾಟಲಿಯ ಮುಚ್ಚಳವನ್ನು ಕಾಲಿನಲ್ಲಿ ಒದ್ದು ಹಾರಿಸಬೇಕು. ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲದೆ ಸಾಮಾನ್ಯರೂ ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಇನ್ನೂ ಕೆಲವರು ಈ ಚಾಲೆಂಜ್ಅನ್ನು ಟ್ರೋಲ್ ಮಾಡಿದ್ದಾರೆ. ಆದರೆ, ಮರಿಯಾ ಕ್ಯಾರಿ ಈ ಚಾಲೆಂಜ್ ಸ್ವೀಕರಿಸಿದ ವಿಧಾನಮಾತ್ರ ನಿಜಕ್ಕೂ ವಿಶೇಷವಾದುದ್ದು.

ಅಷ್ಟಕ್ಕೂ ಮರಿಯಾ ಮಾಡಿದ್ದಾದರೂ ಏನು? ಮರಿಯಾ ಗಾಯಕಿ. ತಮ್ಮ ಧ್ವನಿ ಮೂಲಕವೇ ಎಲ್ಲರ ಮನಗೆದ್ದವರು. ಈ ಚಾಲೆಂಜ್​ನಲ್ಲೂ ಬಾಟಲಿಯ ಮುಚ್ಚಳ ತೆಗೆಯಲು ಅವರು ಬಳಸಿದ್ದು ಧ್ವನಿಯನ್ನೇ! ದೊಡ್ದದಾಗಿ ಕಿರುಚುವ ಮೂಲಕ ಅವರು ಬಾಟಲಿಯ ಮುಚ್ಚಳವನ್ನು ಹಾರಿಸಿದ್ದಾರೆ. ಈ ವಿಡಿಯೋ ಟ್ವಿಟ್ಟರ್ನಲ್ಲಿ 1.7 ಕೋಟಿ ವೀಕ್ಷಣೆ ಕಂಡಿದೆ.


ಇದನ್ನೂ ಓದಿ: ಬಾಟಲ್​ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿದ ಕಿಲಾಡಿ ಅಕ್ಷಯ್​ ಕುಮಾರ್​- ಗೋಲ್ಡನ್​ ಸ್ಟಾರ್​ ಗಣೇಶ್​

ಈ ವಿಡಿಯೋವನ್ನು ಅನೇಕರು ಟ್ರೋಲ್ ಕೂಡ ಮಾಡಿದ್ದಾರೆ. ಇದು ಎಡಿಟ್ ಮಾಡಿದ ವಿಡಿಯೋ. ಮರಿಯಾ ಕೂಗಿದ ನಂತರ ಬಾಟಲಿಯ ಮುಚ್ಚಳ ಕೆಳಗೆ ಬೀಳಬೇಕಿತ್ತು. ಆದರೆ, ಅದು ಹಾರಿ ಹೋಗಿದೆ. ಹಾಗಾಗಿ ಇದೊಂದು ಎಡಿಟ್ ಮಾಡಲಾದ ವಿಡಿಯೋ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.
First published:July 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ