Maravanthe Beach: ಇದು ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗವಂತೆ, ಹೀಗೆ ಹೇಳಿದ್ದು ಯಾರು ಗೊತ್ತಾ?

ಭಾರತದಲ್ಲಿ ಅಂತಹ ಸೈಕ್ಲಿಂಗ್ ಟ್ರ್ಯಾಕ್ ಇಲ್ಲದೆ ಇದ್ದರೂ ಸಹ ಪ್ರಕೃತಿದತ್ತವಾಗಿ ಬಂದ ಒಂದು ಉದ್ದನೆಯ ರಸ್ತೆಯನ್ನು ಒಬ್ಬ ನಾರ್ವೆಯ ಮಾಜಿ ಡಿಪ್ಲೋಮ್ಯಾಟ್ ಒಬ್ಬರು ಭಾರತದಲ್ಲಿನ ಒಂದು ರಸ್ತೆಯನ್ನು ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ ಎಂದು ಹೇಳಿದ್ದಾರೆ.

ಮರವಂತೆ ಬೀಚ್

ಮರವಂತೆ ಬೀಚ್

  • Share this:
ಸಾಮಾನ್ಯವಾಗಿ ಬೆಳಿಗ್ಗೆ ಕೆಲವರು ವಾಕಿಂಗ್ (Walking) ಅಂತ ಹೋದರೆ, ಇನ್ನೂ ಕೆಲವರು ತಮ್ಮ ಸೈಕಲ್ (Cycle) ತೆಗೆದುಕೊಂಡು ಅದನ್ನು ತುಳಿದುಕೊಂಡು ಹೋಗುವುದನ್ನು ನಾವು ಬಹುತೇಕವಾಗಿ ಎಲ್ಲಾ ಕಡೆಗಳಲ್ಲಿಯೂ ನೋಡುತ್ತೇವೆ. ಫಿಟ್ (Fit) ಆಗಿರಲು ಮತ್ತು ಬೆಳಿಗ್ಗೆ ಬೆಳಿಗ್ಗೆ ಸೈಕ್ಲಿಂಗ್ (Cycling) ಮಾಡುವುದು ಉತ್ತಮವಾದ ವ್ಯಾಯಾಮ (Exercise) ಎಂದು ಹೇಳಬಹುದು. ಆದರೆ ಈ ದೊಡ್ಡ ದೊಡ್ಡ ನಗರಗಳಲ್ಲಿ ಸೈಕ್ಲಿಂಗ್ ಹೋಗಲು ರಸ್ತೆಗಳೇನೋ (Road) ಚೆನ್ನಾಗಿಯೇ ಇರುತ್ತವೆ, ಆದರೆ ಟ್ರಾಫಿಕ್ (Traffic) ಸಮಸ್ಯೆ ಸೈಕಲ್ ಓಡಿಸಲು ಕಿರಿಕಿರಿ ಎನಿಸುತ್ತದೆ. ಇನ್ನೂ ಚಿಕ್ಕ ಪುಟ್ಟ ನಗರಗಳಲ್ಲಿ ರಸ್ತೆಗಳಲ್ಲಿ ಜಾಸ್ತಿ ಗುಂಡಿಗಳಿರುವುದನ್ನು ನಾವು ನೋಡುತ್ತೇವೆ. ಅದಕ್ಕೆ ಸೈಕ್ಲಿಂಗ್ ಮಾಡುವ ಜನರು ನಗರದ ಆಚೆ ಇರುವ ರಸ್ತೆಗೆ ಹೋಗಿ ಸೈಕ್ಲಿಂಗ್ ಮಾಡಿ ಬರುವುದಕ್ಕೆ ಇಷ್ಟ ಪಡುತ್ತಾರೆ.

ಮಾಜಿ ಡಿಪ್ಲೋಮ್ಯಾಟ್ ಎರಿಕ್ ಸೋಲ್ಹೈಮ್ ಟ್ವೀಟ್
ಬೇರೆ ಬೇರೆ ದೇಶಗಳಲ್ಲಿ ಸೈಕ್ಲಿಂಗ್ ಮಾಡುವುದಕ್ಕೆ ಅದರದೇ ಆದ ಪ್ರತ್ಯೇಕವಾದ ಟ್ಯ್ರಾಕ್ ಗಳಿರುತ್ತವೆ ಮತ್ತು ಜನರು ಪ್ರತಿದಿನ ಆ ಟ್ರ್ಯಾಕ್ ನ ಮೇಲೆ ಸೈಕ್ಲಿಂಗ್ ಹೋಗುತ್ತಾರೆ. ಆದರೆ ಭಾರತದಲ್ಲಿ ಅಂತಹ ಸೈಕ್ಲಿಂಗ್ ಟ್ರ್ಯಾಕ್ ಇಲ್ಲದೆ ಇದ್ದರೂ ಸಹ ಪ್ರಕೃತಿದತ್ತವಾಗಿ ಬಂದ ಒಂದು ಉದ್ದನೆಯ ರಸ್ತೆಯನ್ನು ಒಬ್ಬ ನಾರ್ವೆಯ ಮಾಜಿ ಡಿಪ್ಲೋಮ್ಯಾಟ್ ಒಬ್ಬರು ಭಾರತದಲ್ಲಿನ ಒಂದು ರಸ್ತೆಯನ್ನು ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ ಎಂದು ಹೇಳಿದ್ದಾರೆ.ನಾರ್ವೆಯ ಮಾಜಿ ಡಿಪ್ಲೋಮ್ಯಾಟ್ ಎರಿಕ್ ಸೋಲ್ಹೈಮ್ ಅವರು ಮಂಗಳವಾರ ಸಮುದ್ರ ತೀರದಲ್ಲಿರುವ ಉದ್ದನೆಯ ರಸ್ತೆಯ ವೈಮಾನಿಕ ಶಾಟ್ ಅನ್ನು ಟ್ವೀಟ್ ಮಾಡಿ, "ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ? ಇದು ಕರ್ನಾಟಕದ ಉಡುಪಿಯ ಹತ್ತಿರ ಎಂದು ಶೀರ್ಷಿಕೆಯನ್ನು ಸಹ ನೀಡಿದ್ದಾರೆ.

ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ
ಈ ಫೋಟೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಈ ಫೋಟೋಗೆ 47,000ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಫೋಟೋದಲ್ಲಿ ಸೋಲ್ಹೈಮ್ಅವರುನಿರ್ದಿಷ್ಟ ರಸ್ತೆ ಅಥವಾ ಮಾರ್ಗವನ್ನು ಹೆಸರಿಸಲಿಲ್ಲ ಮತ್ತು ಇದು ಅನೇಕ ಭಾರತೀಯರನ್ನು ನಿಖರವಾದ ಸ್ಥಳವನ್ನು ಊಹಿಸಲು ಪ್ರೇರೇಪಿಸಿತು. ಕರ್ನಾಟಕದ ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣದ ಬಳಿ ಇರುವ ‘ಮರವಂತೆ ಬೀಚ್’ ಎಂದು ಅನೇಕ ಜನರು ಸರಿಯಾಗಿ ಊಹಿಸಿದ್ದರು, ಇದು ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹತ್ತಿರದಲ್ಲಿದೆ.

ಸೋಲ್ಹೈಮ್ ಅವರ ಟ್ವೀಟ್ ಅನ್ನು ವಿರೋಧಿಸಿದ  ಟ್ವಿಟರ್ ಬಳಕೆದಾರರು
ಆದಾಗ್ಯೂ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮಾಜಿ ಡಿಪ್ಲೋಮ್ಯಾಟ್ ಅವರ ಟ್ವೀಟ್ ಅನ್ನು ವಿರೋಧಿಸಿದರು. ಟ್ವಿಟರ್ ಬಳಕೆದಾರರೊಬ್ಬರು, "ಖಂಡಿತವಾಗಿಯೂ ಸೈಕ್ಲಿಂಗ್ ಸ್ನೇಹಿ ರಸ್ತೆ ಅಲ್ಲ ಬಿಡಿ. ನಾನು ಅನೇಕ ಬಾರಿ ಅಲ್ಲಿಗೆ ಹೋಗಿದ್ದೆ. ಕಾರುಗಳು ಮತ್ತು ಟ್ರಕ್ ಗಳು ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಹೋಗುತ್ತವೆ. ಅಲ್ಲದೆ, ಸೈಕ್ಲಿಂಗ್ ಗೆ ಯಾವುದೇ ಮೀಸಲಾದ ಟ್ರ್ಯಾಕ್ ಅಲ್ಲಿ ಇಲ್ಲ " ಎಂದು ಹೇಳಿದರು.

ಇದನ್ನೂ ಓದಿ:  France Burkini: ಇದು ಬಿಕಿನಿಯಲ್ಲ, ಬುರ್ಕಿನಿ! ಹೊಸ ಮುಸ್ಲಿಂ ಸ್ವಿಮ್ ಸೂಟ್, ಏನಿದು?

ಅವರಲ್ಲಿ ಕೆಲವರು ಸ್ಥಳವನ್ನು ತಪ್ಪಾಗಿ ಊಹಿಸಿದರು ಮತ್ತು ಮತ್ತೊಂದು ಮಾರ್ಗದ ಬಗ್ಗೆಯೂ ಮಾತನಾಡಿದರು. ಇನ್ನೊಬ್ಬರು "ಇದನ್ನು ರಾಷ್ಟ್ರೀಯ ಹೆದ್ದಾರಿ ಎಂದು ಹೇಳುವವರಿಗೆ ಮತ್ತು ಸೈಕ್ಲಿಂಗ್ ಮಾಡಲು ಸಾಧ್ಯವಿಲ್ಲದವರಿಗೆ, ನಾನು ಸರಿಪಡಿಸಲು ಇಷ್ಟ ಪಡುತ್ತೇನೆ. ಬೈಂದೂರಿನ ಮತ್ತೊಂದು ಸ್ವರ್ಗ ಮರವಂತೆ ಕಡಲ ತೀರವನ್ನು ಉಲ್ಲೇಖಿಸುವುದು ರಾಷ್ಟ್ರೀಯ ಹೆದ್ದಾರಿಯಲ್ಲ, ಇದು ಮಲ್ಪೆ-ಮಟ್ಟು-ಕಾಪ್ ರಸ್ತೆ ವಿಸ್ತರಣೆಯಾಗಿದ್ದು, ಇದು ಸಂಪೂರ್ಣವಾಗಿ ಸೈಕ್ಲಿಂಗ್ ಮಾರ್ಗವಾಗಿದೆ" ಎಂದು ಹೇಳಿದ್ದಾರೆ.

ಛಾಯಾಗ್ರಾಹಕ ಧನೇಶ್ ಅಣ್ಣಾಮಲೈ ಕ್ಲಿಕ್ಕಿಸಿದ ಫೋಟೋ ವೈರಲ್
ಸೋಲ್ಹೈಮ್ ಹಂಚಿ ಕೊಂಡಿರುವ ಈ ಫೋಟೋವನ್ನು ಮೂಲತಃ ಛಾಯಾಗ್ರಾಹಕ ಧನೇಶ್ ಅಣ್ಣಾಮಲೈ ಅವರು ಕ್ಲಿಕ್ಕಿಸಿದ್ದಾರೆ, ಅವರು ಅದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಂಡಿದ್ದರು.
ಇದನ್ನೂ ಓದಿ:  Viral Video: ಏಕಾಂಗಿಯಾಗಿ ಸರ್ಫಿಂಗ್ ಮಾಡುತ್ತಿದೆ ಈ ನಾಯಿ! ಮುದ್ದು ಶ್ವಾನದ ಕ್ಯೂಟ್ ವಿಡಿಯೋ ನೀವೂ ನೋಡಿ

ಈ ಫೋಟೋವನ್ನು ಹಂಚಿ ಕೊಂಡ ಅಣ್ಣಾಮಲೈ, "ಮರವಂತೆ ಬೀಚ್ ಎಷ್ಟು ವಿಶಿಷ್ಟವಾಗಿದೆಯೆಂದರೆ, ಇದು ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ, ಪೂರ್ವ ಭಾಗದಲ್ಲಿ ಪ್ರಶಾಂತ ಮತ್ತು ಅದ್ಭುತವಾದ ಸೌಪರ್ಣಿಕಾ ನದಿ ಎಂಬ ಎರಡು ಸುಂದರವಾದ ಜಲಮೂಲಗಳಿಂದ ಸುತ್ತುವರೆದಿದೆ" ಎಂದು ಬರೆದಿದ್ದಾರೆ.
Published by:Ashwini Prabhu
First published: