• Home
  • »
  • News
  • »
  • trend
  • »
  • Viral Video: ಅನುಭವಿ ಕ್ರಿಕೆಟರ್ ಹಾಗೆ ಬ್ಯಾಟ್‌ ಬೀಸ್ತಾಳೆ ಈ ಬಾಲಕಿ, ವಿರಾಟ್ ಕೊಹ್ಲಿ ಅಂತೆ ಆಡೋ ಕನಸಂತೆ ಈಕೆಯದ್ದು

Viral Video: ಅನುಭವಿ ಕ್ರಿಕೆಟರ್ ಹಾಗೆ ಬ್ಯಾಟ್‌ ಬೀಸ್ತಾಳೆ ಈ ಬಾಲಕಿ, ವಿರಾಟ್ ಕೊಹ್ಲಿ ಅಂತೆ ಆಡೋ ಕನಸಂತೆ ಈಕೆಯದ್ದು

ಮಕ್ಸೂಮಾ

ಮಕ್ಸೂಮಾ

ಇಲ್ಲೊಬ್ಬ ಯುವತಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಸಹ ಆಗುತ್ತಿದೆ ನೋಡಿ. ಲಡಾಖ್ ನ ಈ ಹುಡುಗಿಯ ಹೆಸರು ಮಕ್ಸೂಮಾ ಅಂತ ಹೇಳಲಾಗುತ್ತಿದ್ದು, ಈ ಹುಡುಗಿ ಆರನೇ ತರಗತಿಯಲ್ಲಿ ಓದುತ್ತಿದ್ದಾಳೆ ಮತ್ತು ವೈರಲ್ ಆದ ಕ್ಲಿಪ್ ನಲ್ಲಿ ಅವಳು ಒಳ್ಳೆ ಕ್ರಿಕೆಟ್ ಆಟಗಾರರ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು, ಆಕೆಯೂ ಹೊಡೆಯುತ್ತಿರುವ ಪ್ರತಿಯೊಂದು ಹೊಡೆತಗಳನ್ನು ಈ ವಿಡಿಯೋದಲ್ಲಿ ನೀವು ನೋಡಿ ಆನಂದಿಸಬಹುದು.

ಮುಂದೆ ಓದಿ ...
  • Share this:

ಈ ಪ್ರತಿಭೆ (Talent) ಅನ್ನೋದೆ ಹೀಗೆ.. ಇದು ಯಾರ ಬಳಿ ಇರುತ್ತದೆ? ಯಾವಾಗ ಈ ಪ್ರತಿಭೆ ಹೊರ ಜಗತ್ತಿಗೆ ಗೊತ್ತಾಗುತ್ತದೆ? ಈ ಪ್ರತಿಭೆ ಅವರನ್ನು ಯಾವ ಎತ್ತರಕ್ಕೆ ಕರೆದೊಯ್ಯುತ್ತದೆ? ಅಂತೆಲ್ಲಾ ಪ್ರಶ್ನೆಗಳಿಗೆ ಯಾರೂ ಸಹ ಉತ್ತರಿಸಲು ಸಾಧ್ಯವಿಲ್ಲ. ಈಗಂತೂ ನಾವು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅನೇಕ ವಿಡಿಯೋಗಳನ್ನು ನೋಡುತ್ತೇವೆ, ಇದರಲ್ಲಿ ಅನೇಕ ಜನರಿಗೆ ಅನೇಕ ರೀತಿಯ ಪ್ರತಿಭೆಗಳಿರುತ್ತವೆ. ಉದಾಹರಣೆಗೆ ಕೆಲವೊಬ್ಬರು ಒಳ್ಳೆಯ ಕಂಠವನ್ನು ಹೊಂದಿದ್ದರೆ, ಇನ್ನೂ ಕೆಲವರು ಈ ಕ್ರೀಡೆಗಳಲ್ಲಿ (Sports), ನಟನೆಯಲ್ಲಿ, ಡ್ಯಾನ್ಸ್ ಮಾಡುವುದರಲ್ಲಿ ಮುಂದಿರುತ್ತಾರೆ. ಹೀಗೆ ಅನೇಕ ಪ್ರತಿಭೆಗಳಿರುವ ಜನರು ನಮ್ಮ ಮಧ್ಯೆಯೇ ನಮಗೆ ನೋಡಲು ಸಿಗುತ್ತಾರೆ.


ಆದರೆ ಎಷ್ಟೋ ಜನರಿಗೆ ಕೊನೆಯವರೆಗೂ ಅವರಲ್ಲಿ ಎಂತಹ ಪ್ರತಿಭೆ ಅಡಗಿತ್ತು ಅಂತಾನೆ ಅರ್ಥವಾಗುವುದಿಲ್ಲ, ಒಂದು ವೇಳೆ ಕೆಲವರಿಗೆ ಅದರ ಬಗ್ಗೆ ಅರ್ಥವಾದರೂ ಅದನ್ನು ಹೊರ ಜಗತ್ತಿನ ಎದುರು ತೋರಿಸಲು ಸರಿಯಾದ ವೇದಿಕೆ ಮತ್ತು ಅವಕಾಶಗಳು ಸಿಗುವುದಿಲ್ಲ. ಆದರೆ ಈಗ ಸ್ವಲ್ಪ ಸಮಯ ಬದಲಾಗಿದೆ, ಏಕೆಂದರೆ ಈ ಸಾಮಾಜಿಕ ಮಾಧ್ಯಮಗಳು ಬಂದಾಗಿನಿಂದಲೂ ಅನೇಕ ಜನರ ಪ್ರತಿಭೆಗಳ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವುದು, ಹೆಚ್ಚು ಹೆಚ್ಚು ಜನರಿಗೆ ತಲುಪುವುದನ್ನು ಮತ್ತು ಅವರಿಗೆ ಒಳ್ಳೆಯ ಅವಕಾಶಗಳು ಸಹ ಸಿಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.


ವೈರಲ್ ಆಯ್ತು ಮಕ್ಸೂಮಾ ಬ್ಯಾಟಿಂಗ್ ವೀಡಿಯೋ
ಇಲ್ಲೊಬ್ಬ ಯುವತಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಸಹ ಆಗುತ್ತಿದೆ ನೋಡಿ. ಲಡಾಖ್ ನ ಈ ಹುಡುಗಿಯ ಹೆಸರು ಮಕ್ಸೂಮಾ ಅಂತ ಹೇಳಲಾಗುತ್ತಿದ್ದು, ಈ ಹುಡುಗಿ ಆರನೇ ತರಗತಿಯಲ್ಲಿ ಓದುತ್ತಿದ್ದಾಳೆ ಮತ್ತು ವೈರಲ್ ಆದ ಕ್ಲಿಪ್ ನಲ್ಲಿ ಅವಳು ಒಳ್ಳೆ ಕ್ರಿಕೆಟ್ ಆಟಗಾರರ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು, ಆಕೆಯೂ ಹೊಡೆಯುತ್ತಿರುವ ಪ್ರತಿಯೊಂದು ಹೊಡೆತಗಳನ್ನು ಈ ವಿಡಿಯೋದಲ್ಲಿ ನೀವು ನೋಡಿ ಆನಂದಿಸಬಹುದು.


ಇದನ್ನೂ ಓದಿ: Nigeria: ಅವಳಿ ಮಕ್ಕಳ ಜನನಕ್ಕೆ ಪ್ರಸಿದ್ಧಿ ಪಡೆದ ನೈಜೀರಿಯಾ, ಇಲ್ಲಿ ನಡೆಯುತ್ತೆ ವಾರ್ಷಿಕ ಹಬ್ಬ


ಲಡಾಖ್ ನ ಶಾಲಾ ಶಿಕ್ಷಣ ನಿರ್ದೇಶನಾಲಯವು ಇದನ್ನು ತನ್ನ ಟ್ವಿಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದೆ ಮತ್ತು ಈ ವಿಡಿಯೋ ಈಗಾಗಲೇ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಹ ಪಡೆದಿದೆ.


ವಿರಾಟ್ ಎಂದರೆ ತುಂಬಾನೇ ಇಷ್ಟವಂತೆ!
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಮಕ್ಸೂಮಾ ತನ್ನ ಸಹಪಾಠಿಗಳೊಂದಿಗೆ ಕ್ರಿಕೆಟ್ ಆಡುತ್ತಿರುವುದನ್ನು ನೋಡಬಹುದು. ಅವಳು ಬ್ಯಾಟಿಂಗ್ ಮಾಡುತ್ತಾ ತನ್ನೆಡೆಗೆ ಬಂದ ವೇಗದ ಚೆಂಡನ್ನು ಆಕರ್ಷಕವಾದ ರೀತಿಯಲ್ಲಿ ಶಾಲೆಯ ಮೈದಾನದ ಹೊರಗೆ ಹೊಡೆದಳು. ಅವರನ್ನು ಇದರ ಬಗ್ಗೆ ಕೇಳಿದಾಗ, ಅವರು ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಎಂದು ಹೇಳಿದರು. ಎಂ ಎಸ್ ಧೋನಿ ಅವರ ಪ್ರಸಿದ್ಧ "ಹೆಲಿಕಾಪ್ಟರ್ ಶಾಟ್" ಅನ್ನು ಕಲಿಯಲು ಬಯಸುತ್ತೇನೆ ಎಂದು ಮಕ್ಸೂಮಾ ಅವರು ಸುದ್ದಿ ಮಾಧ್ಯಮಕ್ಕೆ ಹೇಳಿದರು. "ನನ್ನ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಾನು ಅವರಂತೆ ಇರಲು ಬಯಸುತ್ತೇನೆ" ಎಂದು ಆ ಹುಡುಗಿ ಹೇಳಿದಳು.


ಕ್ರಿಕೆಟ್ ಆಟದ ಬಗ್ಗೆ ಮಕ್ಸೂಮಾ ಹೇಳುವುದೇನು?
ಮನೆಯಲ್ಲಿ ತಂದೆ ಮತ್ತು ಶಾಲೆಯಲ್ಲಿ ಶಿಕ್ಷಕರು ಈಕೆಗೆ ಕ್ರಿಕೆಟ್ ಆಡಲು ಪ್ರೋತ್ಸಾಹಿಸುತ್ತಾರಂತೆ. “ನಾನು ವಿರಾಟ್ ಕೊಹ್ಲಿ ಅವರ ರೀತಿ ಆಟ ಆಡಲು ನನ್ನ ಎಲ್ಲಾ ಪ್ರಯತ್ನಗಳನ್ನು ಹಾಕುತ್ತಿದ್ದೇನೆ" ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.


ಇದನ್ನೂ ಓದಿ: Swiggy: ತಂದೆಗೆ ಸ್ವಿಗ್ಗಿಯಲ್ಲಿ ಕೆಲಸ ಸಿಕ್ಕಿದ್ದಕ್ಕೆ ಖುಷಿಯಿಂದ ಕುಣಿದಾಡಿದ ಮಗಳು: ವೀಡಿಯೋ ನೋಡಿ


ನೆಟ್ಟಿಗರು ಮಕ್ಸೂಮಾ ಅವರ ಪ್ರತಿಭೆಯಿಂದ ನಂಬಲಾಗದಷ್ಟು ಪ್ರಭಾವಿತರಾಗಿದ್ದಾರೆ ಮತ್ತು ಕಾಮೆಂಟ್ ವಿಭಾಗದಲ್ಲಿ ಅವರಿಗಿರುವ ಆ ಬ್ಯಾಟಿಂಗ್ ಕೌಶಲ್ಯವನ್ನು ತುಂಬಾನೇ ಶ್ಲಾಘಿಸಿದ್ದಾರೆ. "ವಾವ್, ಎಂತಹ ಶಾಟ್. ಸುಂದರವಾಗಿ ಆಟ ಆಡುತ್ತಿದ್ದೀಯಾ.. ಹೀಗೆಯೇ ಉತ್ತಮವಾಗಿ ಮುಂದುವರಿಯಿರಿ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ಸೂಪರ್! ಮಕ್ಸೂಮಾ ಕೆಲವೇ ವರ್ಷಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವುದನ್ನು ನಾವು ಎದುರು ನೋಡುತ್ತಿರುತ್ತೇವೆ” ಎಂದು ಹೇಳಿದರು. ಮೂರನೆಯ ಬಳಕೆದಾರರು “ಮಕ್ಸೂಮಾ.. ಆಲ್ ದಿ ಬೆಸ್ಟ್. ಭವಿಷ್ಯದಲ್ಲಿ ಭಾರತಕ್ಕಾಗಿ ಆಡುತ್ತೀರಿ ಅಂತ ನಾನು ಆಶಿಸುತ್ತೇನೆ” ಎಂದು ಹೇಳಿದ್ದಾರೆ.

Published by:Ashwini Prabhu
First published: