Chinese Man: 30 ವರ್ಷಗಳಿಂದ ದೂರವಾಗಿದ್ದ ಮಗ ಮತ್ತೆ ತಾಯಿ ಮಡಿಲು ಸೇರಿದ ಕಥೆ... ಹೇಗೆ ಗೊತ್ತಾ?

ಈ ವಿಡಿಯೋದಲ್ಲಿ ಲೀ ಜಿಂಗ್ವೈ ತನ್ನ ತಾಯಿಯನ್ನು ಅಪ್ಪಿಕೊಂಡು ಆನಂದದಿಂದ ಕಣ್ಣೀರು ಸುರಿಸುವ ಮುನ್ನ ತನ್ನ ತಾಯಿ ಧರಿಸಿದ್ದ ಕೊರೊನಾ ಮಾಸ್ಕ್ ಅನ್ನು ಮೆಲ್ಲಗೆ ಕಳಚಿ ಆಕೆಯ ಮುಖವನ್ನು ಪರೀಕ್ಷಿಸುತ್ತಿರುವ ದೃಶ್ಯ ಸೆರೆಯಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಸಣ್ಣ ವಯಸ್ಸಿನಲ್ಲೇ ಹೆತ್ತವರಿಂದ ದೂರವಾಗಿ ಪ್ರೌಢಾವಸ್ಥೆ (Adulthood) ತಲುಪಿದ ನಂತರ ತನ್ನ ಪೋಷಕರ ಮಡಿಲು ಸೇರುವ ಮಕ್ಕಳ ಕುರಿತು ಜಾಗತಿಕ ಸಿನಿಮಾ ರಂಗದಲ್ಲಿ (Cinematic Incident) ಹಲವಾರು ಮನಮಿಡಿಯುವ ಚಿತ್ರಗಳು ನಿರ್ಮಾಣವಾಗಿವೆ. ಇಂತಹದೇ ಸಿನಿಮೀಯ ಘಟನೆಯೊಂದು ಚೀನಾದಿಂದ (China) ವರದಿಯಾಗಿದೆ‌. ಈ ಘಟನೆಯ ವಿಶೇಷವೇನೆಂದರೆ, ಸಣ್ಣ ವಯಸ್ಸಿನಲ್ಲೇ ತನ್ನ ಪೋಷಕರಿಂದ ದೂರವಾಗಿದ್ದ ವ್ಯಕ್ತಿ, ತನ್ನ ನೆನಪಿನ (Memory) ಆಧಾರದಲ್ಲಿ ರಚಿಸಿದ ನಕ್ಷೆಯೊಂದರ (Map) ನೆರವಿನಿಂದ ಯುವಕ ಮತ್ತೆ ತನ್ನ ಪೋಷಕರ (Parents) ಮಡಿಲು ಸೇರಿದ್ದಾನೆ.

ತಾಯಿ ಮಡಿಲು ಸೇರಿಸುವಲ್ಲಿ ಯಶಸ್ವಿ

ಚೀನಾದ ಲೀ ಜಿಂಗ್ವೈ ಎಂಬ ಮಗು ಕೇವಲ 4 ವರ್ಷ ವಯಸ್ಸಾಗಿದ್ದಾಗ ಆ ಮಗುವಿಗೆ ಆಮಿಷವೊಡ್ಡಿ ಆತನ ಮನೆಯಿಂದ ಅಪಹರಿಸಲಾಗಿತ್ತು. ನಂತರ ಆ ಮಗುವನ್ನು ಕಳ್ಳ ಸಾಗಾಣಿಕೆ ಜಾಲಕ್ಕೆ ಮಾರಲಾಗಿತ್ತು. ಈ ಮಗು ಪ್ರೌಢಾವಸ್ಥೆಗೆ ತಲುಪಿದ ನಂತರ ತನ್ನ ಹುಟ್ಟೂರಿನ ಕಚ್ಚಾ ನಕ್ಷೆಯನ್ನು ಕಳೆದ ಡಿಸೆಂಬರ್ 24ರಂದು ಚೀನಾದ ಸಾಮಾಜಿಕ ಜಾಲತಾಣ ಡೌಯಿನ್‌ನಲ್ಲಿ ಹಂಚಿಕೊಂಡಿದ್ದ. ಈ ನಕ್ಷೆಯನ್ನು ಸಣ್ಣ ಹಳ್ಳಿಯೊಂದರೊಂದಿಗೆ ಹೋಲಿಕೆ ಮಾಡಲು ಯಶಸ್ವಿಯಾಗಿರುವ ಪೊಲೀಸರು ಲೀ ಜಿಂಗ್ವೈ ಅನ್ನು ಆತನ ತಾಯಿ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಎನ್‌ಎ ಪರೀಕ್ಷೆಯ ನಂತರ ಲೀ ಜಿಂಗ್ವೈ ಹಾಗೂ ಆತನ ತಾಯಿ ಮತ್ತೆ ಯುನ್ನನ್ ಪ್ರಾಂತ್ಯದಲ್ಲಿ ಒಂದುಗೂಡಿದ್ದಾರೆ.

ಇದನ್ನೂ ಓದಿ: Viral Story: ಈ ದೇಶದಲ್ಲಿ 40 ನಿಮಿಷಕ್ಕೆ ಒಂದು ಹುಡುಗಿಯ ಅಪಹರಣವಾಗುತ್ತದೆ!

ಆನಂದದ ಕಣ್ಣೀರು

ಲೀ ಜಿಂಗ್ವೈ ಹಾಗೂ ಆತನ ತಾಯಿ 30 ವರ್ಷಗಳ ನಂತರ ಒಂದುಗೂಡುತ್ತಿರುವ ಘಟನೆಯನ್ನು ಚಿತ್ರೀಕರಿಸಲಾಗಿದೆ. ಈ ವಿಡಿಯೋದಲ್ಲಿ ಲೀ ಜಿಂಗ್ವೈ ತನ್ನ ತಾಯಿಯನ್ನು ಅಪ್ಪಿಕೊಂಡು ಆನಂದದಿಂದ ಕಣ್ಣೀರು ಸುರಿಸುವ ಮುನ್ನ ತನ್ನ ತಾಯಿ ಧರಿಸಿದ್ದ ಕೊರೊನಾ ಮಾಸ್ಕ್ ಅನ್ನು ಮೆಲ್ಲಗೆ ಕಳಚಿ ಆಕೆಯ ಮುಖವನ್ನು ಪರೀಕ್ಷಿಸುತ್ತಿರುವ ದೃಶ್ಯ ಸೆರೆಯಾಗಿದೆ. 30 ವರ್ಷಗಳ ಕಾಯುವಿಕೆ, ಲೆಕ್ಕವಿಲ್ಲದ್ದಷ್ಟು ಯತನ ರಾತ್ರಿಗಳು ನಾನು ನನ್ನ ನೆನಪಿನ ಆಧಾರದಲ್ಲಿ ಕೈಯಲ್ಲಿ ರಚಿಸಿದ ನಕ್ಷೆಯ ಮೂಲಕ ಕೊನೆಗೊಳ್ಳತೊಡಗಿದೆ. ಇದು 13 ದಿನಗಳ ನಂತರದ ಕರಾರುವಾಕ್ ಬಿಡುಗಡೆಯಾಗಿದೆ" ಎಂದು ಒಂದುಗೂಡುವ ನಿರೀಕ್ಷೆಯಲ್ಲಿದ್ದ ಲೀ, ಅದಕ್ಕೂ ಮುನ್ನ ಡೌಯಿನ್ ಸಾಮಾಜಿಕ ಜಾಲತಾಣದ ತಮ್ಮ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದರು. "ನಾನು ನನ್ನ ಕುಟುಂಬದೊಂದಿಗೆ ಒಂದುಗೂಡಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು" ಎಂದೂ ಕೃತಜ್ಞತೆ ಅರ್ಪಿಸಿದ್ದಾರೆ.

ವಿಡಿಯೋ ನೋಡಿ:

ಡಿಎನ್‌ಎ ದತ್ತಾಂಶಗಳ ಮೊರೆ

1989ರಲ್ಲಿ ಯುನ್ನನ್ ಪ್ರಾಂತ್ಯದ ಜಿಯೊಂಟಾಂಗ್ ನಗರದ ನೈರುತ್ಯ ಭಾಗದಿಂದ ಅಪಹರಣಕ್ಕೊಳಾಗಿದ್ದ ಲೀಯನ್ನು ಆನಂತರ 1800 ಕಿ.ಮೀ ದೂರ ವಾಸಿಸುತ್ತಿರುವ ಕುಟುಂಬಕ್ಕೆ ಮಾರಾಟ ಮಾಡಲಾಗಿತ್ತು. ಲೀ ಸದ್ಯ ಚೀನಾದ ದಕ್ಷಿಣ ಭಾಗದಲ್ಲಿರುವ ಗ್ವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾನೆ. ಆತ ತನ್ನ ಮೂಲ ಕುರಿತು ತನ್ನನ್ನು ದತ್ತು ತೆಗೆದುಕೊಂಡಿರುವ ಪೋಷಕರು ಹಾಗೂ ಡಿಎನ್‌ಎ ದತ್ತಾಂಶಗಳ ಮೊರೆ ಹೋದರೂ ಸೂಕ್ತ ಉತ್ತರ ಪಡೆಯುವಲ್ಲಿ ವಿಫಲನಾಗಿದ್ದ. ಕೊನೆಗೆ ಆತ ಸಾಮಾಜಿಕ ಜಾಲತಾಣದ ನೆರವು ಪಡೆದುಕೊಂಡಿದ್ದ.

ವಿಡಿಯೋದಲ್ಲಿ ಲೀ ಹೇಳಿದೇನು

ನಾನು ನನ್ನ ಮನೆಯನ್ನು ಹುಡುಕುತ್ತಿರುವ ಮಗು ಆಗಿದ್ದೇನೆ. ನನ್ನನ್ನು 1989ರಲ್ಲಿ ನನ್ನ ನೆರೆಮನೆಯಲ್ಲಿ ವಾಸಿಸುತ್ತಿದ್ದ ಬೋಳು ತಲೆಯ ವ್ಯಕ್ತಿಯೊಬ್ಬ ನಾನು 4 ವರ್ಷ ವಯಸ್ಸಿನವನಾಗಿದ್ದಾಗ ಹೆನಾನ್‌ಗೆ ಕೊಂಡೊಯ್ದಿದ್ದ" ಎಂದು ವಿಡಿಯೋದಲ್ಲಿ ಲೀ ಹೇಳಿಕೊಂಡಿದ್ದ. ಈ ವಿಡಿಯೋವನ್ನು ಸಾವಿರಾರು ಬಾರಿ ಹಂಚಿಕೊಳ್ಳಲಾಗಿತ್ತು.
ಇದು ನನ್ನ ನೆನಪಿನಿಂದ ರಚಿಸಿರುವ ನನ್ನ ಮನೆ ಪ್ರದೇಶದ ನಕ್ಷೆ" ಎಂದು ಆತ ಸಾಮಾಜಿಕ ಜಾಲತಾಣದಲ್ಲಿ ನಕ್ಷೆಯೊಂದನ್ನು ಹಂಚಿಕೊಂಡಿದ್ದ. ಈ ಕಚ್ಚಾ ನಕ್ಷೆಯಲ್ಲಿ ಶಾಲೆಯಂತೆ ಕಂಡು ಬರುವ ಕಟ್ಟಡ, ಬಿದಿರಿನ ಕಾಡು ಹಾಗೂ ಸಣ್ಣ ಕೊಳವೊಂದನ್ನು ಚಿತ್ರಿಸಲಾಗಿತ್ತು.

ಇದನ್ನೂ ಓದಿ: Brave Lady: ಮಹಿಳೆಯ ಅಪಹರಣಕ್ಕೆ ಯತ್ನ; ರಿಕ್ಷಾದಿಂದ ಹಾರಿ ತಪ್ಪಿಸಿಕೊಂಡ ಯುವತಿ

ಚೀನಾದಲ್ಲಿ ಮಕ್ಕಳ ಅಪಹರಣ ಅಸಹಜವೇನೂ ಅಲ್ಲ. ಅದರಲ್ಲೂ ತಮಗೊಬ್ಬ ಮಗನಿರಬೇಕು ಎಂಬ ಮೌಲ್ಯ ಹೊಂದಿರುವ ಚೀನಿ ಸಮಾಜದಲ್ಲಿ. ಹಲವಾರು ಮಕ್ಕಳನ್ನು ಸಣ್ಣ ವಯಸ್ಸಿನಲ್ಲೇ ಅಪಹರಿಸಿ ಬೇರೆ ಕುಟುಂಬಗಳಿಗೆ ಮಾರಾಟ ಮಾಡಲಾಗುತ್ತದೆ. 2015ರಲ್ಲಿ 20,000 ಮಕ್ಕಳು ಅಪಹರಣಕ್ಕೀಡಾಗಿದ್ದರು. ಆದರೆ, 2021ರಲ್ಲಿ ಸಣ್ಣ ವಯಸ್ಸಿನಲ್ಲೇ ಕಾಣೆಯಾಗಿ ವಯಸ್ಕರಾಗಿರುವವರನ್ನು ಮತ್ತೆ ತಮ್ಮ ಜೈವಿಕ ಪೋಷಕರೊಂದಿಗೆ ಒಂದುಗೂಡಿಸಿರುವ ಹೇರಳ ಉದಾಹರಣೆಗಳು ಚೀನಾದಲ್ಲಿ ಕಂಡು ಬಂದಿವೆ.
Published by:vanithasanjevani vanithasanjevani
First published: