Naneghat Reverse Fall: ಭಾರತದಲ್ಲಿದೆ ಹಿಮ್ಮುಖವಾಗಿ ಚಲಿಸುವ ಜಲಪಾತ! ವಿಡಿಯೋ ನೋಡಿ

ಸಾಮಾನ್ಯವಾಗಿ ಜಲಪಾತದಲ್ಲಿ ನೀರು ಮೇಲಿಂದ ಕೆಳಕ್ಕೆ ಹರಿಯುತ್ತದೆ. ಆದರೆ ಮಹಾರಾಷ್ಟ್ರದ ನಾನೇಘಾಟ್ ಜಲಪಾತದಲ್ಲಿ ನೀರು ಹಿಮ್ಮುಖವಾಗಿ ಹರಿಯುವುದು ಅಚ್ಚರಿಯ ವಿಷಯವಾಗಿದೆ. ಇದು ಪ್ರಕೃತಿಯ ವಿಸ್ಮಯಕಾರಿ ವಿಷಯಗಳಿಗೆ ಒಂದು ಉತ್ತಮ ಉದಾಹರಣೆಯಾಗಿದೆ.

ನಾನೇಘಾಟ್ ಹಿಮ್ಮುಖ ಜಲಪಾತ

ನಾನೇಘಾಟ್ ಹಿಮ್ಮುಖ ಜಲಪಾತ

  • Share this:
ಈ ಭೂಮಿಯು ಅತ್ಯಂತ ವಿಸ್ಮಯವಾದುದು. ಅನೇಕ ರೀತಿಯಾದ ಅದ್ಭುತಗಳಿಂದ ಕೂಡಿದೆ. ನೈಸರ್ಗಿಕವಾಗಿ ಇರುವ ಪ್ರಕೃತಿ ಸೌಂದರ್ಯವನ್ನು ಅನುಭವಿಸುವ ಖುಷಿಯೇ ಬೇರೆ. ಭೂಮಿ ಒಂದು ರೀತಿಯಲ್ಲಿ ಸ್ವರ್ಗ (Heaven) ಇದ್ದಂತೆ ಇಲ್ಲಿರುವ ನೆಲ,ಜಲ,ಬೆಟ್ಟ ಗುಡ್ಡ, ಕಾನನಗಳು ಜನರ ಮನಸ್ಸನ್ನು ಮುದಗೊಳಿಸುತ್ತದೆ. ಪಾಕೃತಿಕ ಸೌಂದರ್ಯದ ಮುಂದೆ ಎಲ್ಲವೂ ಶೂನ್ಯ. ಮಾನ್ಸೂನ್ ಸಮಯದಲ್ಲಂತೂ ಹಚ್ಚ ಹಸಿರಾಗಿರುವ ಪ್ರಕೃತಿ ಜನರ ಮನಸೆಳೆಯುತ್ತದೆ. ಇನ್ನೂ ಧುಮ್ಮಿಕ್ಕಿ ಹರಿಯುವ ಜಲಪಾತಗಳನ್ನ (Waterfalls) ನೋಡಲು ಜನ ಬೇರೆ ಬೇರೆ ಕಡೆಗೆ ಧಾವಿಸುತ್ತಾರೆ.  ಇನ್ನೂ ಹೆಚ್ಚು ಜನರಿಗೆ ಪರಿಚಿತವಾಗದ ಪ್ರದೇಶಗಳಲ್ಲಿ ಒಂದು ಮಹಾರಾಷ್ಟ್ರದ (Maharashtra)  ನಾನೇಘಾಟ್  ನಲ್ಲಿರುವ ಜಲಪಾತ. ಇದು ಭಾರತದ ಅತ್ಯಂತ ಪ್ರಸಿದ್ಧ (Naneghat Reverse Fall) ಜಲಪಾತಗಳಲ್ಲಿ ಒಂದಾಗಿದೆ.

ನಾನೇಘಾಟ್ ಜಲಪಾತ
ಭಾರತದಲ್ಲಿ ಚಾರಣಿಗರನ್ನು ಆಕರ್ಷಿಸುವಂತಹ ಅನೇಕ ಅದ್ಭುತವಾದ ಸ್ಥಳಗಳು ಇವೆ. ಅಂತಹವುಗಳಲ್ಲಿ ಒಂದು ನಾನೇಘಾಟ್. ನಾನೇಘಾಟ್ ಜಲಪಾತವು ಮಹಾರಾಷ್ಟ್ರದ ಜುನ್ನಾರ್ ಬಳಿ ಪಶ್ಚಿಮ ಘಟ್ಟಗಳಲ್ಲಿರುವ ಒಂದು ಸ್ಥಳವಾಗಿದೆ. ಇದು ಮುಂಬೈನಿಂದ 120 ಕಿಮೀ ಮತ್ತು ಪುಣೆಯಿಂದ ಸುಮಾರು 150 ಕಿಮೀ ದೂರದಲ್ಲಿದೆ.

ಹಿಮ್ಮುಖವಾಗಿ ಜಲಪಾತದ ಹರಿವು
ನಾನೇಘಾಟ್ ಜಲಪಾತವು ನಿಗೂಢ ಸ್ಥಳವಾಗಿದ್ದು. ಇದನ್ನು ನೋಡಲು ಜನ ದೂರ ದೂರದ ಪ್ರದೇಶದಿಂದ ಇಲ್ಲಿಗೆ ಆಗಮಿಸುತ್ತಾರೆ. ಸಾಮಾನ್ಯವಾಗಿ ಎಲ್ಲಾ ಜಲಪಾತಗಳು ಮೇಲಿಂದ ಕೆಳಕ್ಕೆ ಹರಿದರೆ ಈ ಜಲಪಾತವು ಅದಕ್ಕೆ ವಿರುದ್ಧವಾಗಿದೆ. ಈ ಜಲಪಾತದಲ್ಲಿ ನೀರು ಹಿಮ್ಮುಖವಾಗಿ ಹರಿಯುವುದು ಅಚ್ಚರಿಯ ವಿಷಯವಾಗಿದೆ. ರಭಸವಾದ ಗಾಳಿಯ ಬಲದಿಂದಾಗಿ ಹರಿಯುವ ನೀರು ಮೇಲಕ್ಕೆ ತಲ್ಲುತ್ತದೆ.

ಇದನ್ನೂ ಓದಿ: Ram Setu: ರಾಷ್ಟ್ರೀಯ ಸ್ಮಾರಕವಾಗಲಿದೆಯೇ ರಾಮಸೇತು? ಜುಲೈ 26ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಜಲಪಾತದಲ್ಲಿ ನೀರು ವಿರುದ್ಧವಾಗಿ ಹರಿಯುವ ವಿಶೇಷತೆಯನ್ನು ಹೊಂದಿರುವ ಅಸಾಮಾನ್ಯ ಕಾರಣದಿಂದಾಗಿ ಇದನ್ನು 'ರಿವರ್ಸ್  ಫಾಲ್ಸ್' ಎಂದು ಕರೆಯಲಾಗುತ್ತದೆ. ಇದರ ವಿಶೇಷತೆ ಪ್ರಕೃತಿಯ ಅಚ್ಚರಿಗೆ, ಸೌಂದರ್ಯಕ್ಕೆ ಅದ್ಭುತವಾದ ನಿದರ್ಶನವಾಗಿದೆ.



ಜಲಪಾತದ ದೃಶ್ಯ ವೈರಲ್
ಭಾರತೀಯ ಅರಣ್ಯ ಸೇವಾಧಿಕಾರಿ ಸುಸಂತ ನಂದಾ ಅವರು ಟ್ವಿಟ್ಟರ್ ನಲ್ಲಿ ಜಲಪಾತದ ವೀಡಿಯೋವನ್ನು ಹಂಚಿಕೊಂಡಿದ್ದು, "ಗಾಳಿಯ ಬಲದ ಪ್ರಮಾಣ ಗುರುತ್ವಾಕರ್ಷಣ ಬಲಕ್ಕೆ ಸಮಾನವಾಗಿದ್ದಾಗ ಮತ್ತು ವಿರುದ್ಧವಾಗಿರುವ ಹಂತದಲ್ಲಿ ಜಲಪಾತವನ್ನು ನೋಡಲು ಅದ್ಧುತವಾಗಿರುತ್ತದೆ. ಪರ್ವತ ಶ್ರೇಣಿಗಳಲ್ಲಿ ಮಾನ್ಸೂನ್ ಗಳ ಸೌಂದರ್ಯ" ಎಂದು ಬರೆದುಕೊಂಡಿದ್ದಾರೆ.

ವೈಜ್ಞಾನಿಕ ಕಾರಣವೇನು?
ಈ ಜಲಪಾತದ ಬಗ್ಗೆ ವೈಜ್ಞಾನಿಕವಾದ ಕಾರಣವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಸೈನ್ಸ್ ಗರ್ಲ್​ ನ್ಯೂಟನ್ ನ ಮೊದಲ ಚಲನೆಯ ನಿಯಮವು, ಒಂದು ವಸ್ತುವು ಬಲದಿಂದ ಕಾರ್ಯನಿರ್ವಹಿಸದ ಹೊರತು ಅದೇ ಚಲನೆಯ ಸ್ಥಿಯಲ್ಲಿರುತ್ತದೆ. ಗುರುತ್ವಾಕರ್ಷಣೆಯ ಮೂಲಕ ಈ ನೀರಿನ ಪ್ರವೃತ್ತಿಯ ಮೇಲೆ ಬೃಹತ್ ಮಾರುತಗಳು ಕಾರ್ಯನಿರ್ವಹಿಸುತ್ತವೆ. ಎರಡು ಶಕ್ತಿಗಳ ಪ್ರಮಾಣವು ಸಮಾನವಾಗಿರುತ್ತದೆ. ಅವುಗಳ ದಿಕ್ಕುಗಳು ವಿರುದ್ಧವಾಗಿರುತ್ತವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Photos: ನೈನಿ ಸೇತುವೆ ಈಗ ಹೊಸ ಸೆಲ್ಫೀ ಸ್ಪಾಟ್! ಚಂದದ ಸೇತುವೆ ಮೇಲೆ ಫೋಟೋ ಗಮ್ಮತ್ತು

ಜಲಪಾತ ವೀಕ್ಷಿಸಲು ಉತ್ತಮ ಸಮಯ ಯಾವುದು?
ಮಳೆಗಾಲದ ಕೊನೆಯಲ್ಲಿ ನಾನೇಘಾಟ್ ಗೆ ಭೇಟಿ ನೀಡಲು ಉತ್ತಮವಾದ ಸಮಯ. ಈ ಸಮಯದಲ್ಲಿ ಜಲಪಾತಗಳು ಮಳೆನೀರಿನಿಂದ ತುಂಬಿಕೊಂಡಿರುತ್ತದೆ. ಆಗ ಎತ್ತರದ ಬೆಟ್ಟದಲ್ಲಿ ನೀರು  ಕೆಳಗಿನಿಂದ ಮೇಲಕ್ಕೆ ಹರಿಯುವ ದೃಶ್ಯವು ಅತ್ಯಂತ ಮನಮೋಹಕವಾಗಿರುತ್ತದೆ. ಅಲ್ಲದೆ ಈ ಸಂದರ್ಭದಲ್ಲಿ ಬಿರುಸಾದ ಮಳೆಯ ಪ್ರಮಾಣ ಕಡಿಮೆಯಾಗುವುದರಿಂದ ಹವಮಾನವು ಕೂಡ ಸುಂದರವಾಗಿರುತ್ತದೆ.
Published by:Nalini Nalini
First published: