• Home
  • »
  • News
  • »
  • trend
  • »
  • Viral Video: ಸಕ್ಕರೆ ಪ್ಯಾಕೆಟ್ ಹಿಡಿದು ಮ್ಯಾಜಿಕ್ ಮಾಡಿದ..! ನೆಟ್ಟಿಗರು ಕನ್ಫ್ಯೂಸ್

Viral Video: ಸಕ್ಕರೆ ಪ್ಯಾಕೆಟ್ ಹಿಡಿದು ಮ್ಯಾಜಿಕ್ ಮಾಡಿದ..! ನೆಟ್ಟಿಗರು ಕನ್ಫ್ಯೂಸ್

ವೈರಲ್ ವಿಡಿಯೋ

ವೈರಲ್ ವಿಡಿಯೋ

ಇತ್ತೀಚಿನ ಬೆಳವಣಿಗೆಯಲ್ಲಿ ಇಲ್ಲೊಬ್ಬನ ಸಕ್ಕರೆ ಪ್ಯಾಕೆಟ್ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅದೇನು ಮಾಯೆ ಮಾಡುತ್ತಾನೋ ದೇವರಿಗೇ ಗೊತ್ತು. ನೋಡಿದವರು ಮಾತ್ರ ನಿಜಕ್ಕೂ ಅಚ್ಚರಿಯಲ್ಲಿ ಕಣ್ಣು ಬಾಯಿ ಬಿಡುತ್ತಿದ್ದಾರೆ.

  • Share this:

ಸೋಷಿಯಲ್ ಮೀಡಿಯಾ (Social Media) ಅಂದ ಮೇಲೆ ತುಂಬಾ ಕನ್ಫ್ಯೂಷನ್. ಪ್ರತಿ ದಿನ ಪ್ರತಿಯೊಂದಲ್ಲೂ ಹೊಸತನವಿರುತ್ತದೆ. ಪ್ರಪಂಚದಾದ್ಯಂತ ಜನರು ಏನೇನೋ ವಿಡಿಯೋ (Video), ಮೆಮ್ಸ್, ಜಿಫ್​ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇವೆಲ್ಲವೂ ನೆಟ್ಟಿಗರನ್ನು ಬಿಟ್ಟಿಯಾಗಿ ರಂಜಿಸುವುದರ ಜೊತೆಗೆ ಬಹಳಷ್ಟು ಜನರು ತಮ್ಮ ಬಿಡುವಿನ ವೇಳೆಯಲ್ಲಿ ಇಂತಹ ವಿಡಿಯೋಗಳನ್ನು ನೋಡಿ ಎಂಜಾಯ್ ಮಾಡುತ್ತಾರೆ. ರಿಲ್ಯಾಕ್ಸಿಂಗ್ ಎನಿಸೋ ಈ ವಿಡಿಯೋಗಳು ನಮ್ಮನ್ನು ಬಹುತೇಕ ಎಲ್ಲರಿಗೂ ಇಷ್ಟ. ಪುಟ್ಟ ಮಕ್ಕಳಿಂದ ತೊಡಗಿ ದೊಡ್ಡವರ ತನಕ ಎಲ್ಲರೂ ಇದನ್ನು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಇವರ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತವೆ. ಇತ್ತೀಚಿನ ಬೆಳವಣಿಗೆಯಲ್ಲಿ ಇಲ್ಲೊಬ್ಬನ ಸಕ್ಕರೆ ಪ್ಯಾಕೆಟ್ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅದೇನು ಮಾಯೆ ಮಾಡುತ್ತಾನೋ ದೇವರಿಗೇ ಗೊತ್ತು. ನೋಡಿದವರು ಮಾತ್ರ ನಿಜಕ್ಕೂ ಅಚ್ಚರಿಯಲ್ಲಿ ಕಣ್ಣು ಬಾಯಿ ಬಿಡುತ್ತಿದ್ದಾರೆ. ಆದರೆ ಯಾರಿಗೂ ಈತ ಮಾಡ್ತಿರೋದು ಏನು ಎಂಬುದರ ಬಗ್ಗೆ ನೋ ಐಡಿಯಾ. ಏನಪ್ಪಾ ಟ್ರಿಕ್ ಇದು ಎಂದು ತಲೆಕೆಡಿಸಿಕೊಂಡುಬಿಟ್ಟಿದ್ದಾರೆ.


ಸಕ್ಕರೆ ಪೊಟ್ಟಣದೊಂದಿಗೆ ವ್ಯಕ್ತಿಯೊಬ್ಬರ 'ಮ್ಯಾಜಿಕ್ ಟ್ರಿಕ್' ನೋಡುಗರನ್ನು ಸಂಪೂರ್ಣವಾಗಿ ಬೆಚ್ಚಿ ಬೀಳಿಸಿದೆ. ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿರುವ ದೃಶ್ಯಾವಳಿಗಳು ಪೆಟ್ರೋಲ್ ಪಂಪ್‌ನಲ್ಲಿ ನಿಂತಿರುವ ವ್ಯಕ್ತಿಯನ್ನು ತೋರಿಸುತ್ತದೆ. ಅವನು ಸಕ್ಕರೆ ಪ್ಯಾಕೆಟ್ ಹರಿದು ತನ್ನ ಎಡಗೈಗೆ ಸಕ್ಕರೆಯನ್ನು ಸುರಿಯುತ್ತಾನೆ. ಅದನ್ನು ಮುಷ್ಟಿಯಲ್ಲಿ ಬಿಗಿಗೊಳಿಸುತ್ತಾನೆ.


ಸಕ್ಕರೆ ಮಾಯ, ಎಲ್ಲಿ ಹೋಯಿತು?


ಖಾಲಿ ಚೀಲವನ್ನು ಬಾಯಿಯಲ್ಲಿ ಹಿಡಿದುಕೊಂಡು ಸಕ್ಕರೆಯನ್ನು (Sugar) ಗಾಳಿಗೆ ಎಸೆಯುತ್ತಾನೆ. ನಂತರ, ಲಕ್ಷಾಂತರ ಜನರನ್ನು ಗೊಂದಲಕ್ಕೀಡುಮಾಡುವ ಒಂದು ಮೂವ್​ನಲ್ಲಿ, ಆತ ತನ್ನ ಬಲಗೈಯಲ್ಲಿ ಸಕ್ಕರೆಯನ್ನು 'ಹಿಡಿಯುವಂತೆ' ಆಕ್ಷನ್ ಮಾಡುತ್ತಾನೆ.ಗಾಳಿಗೆ ಎಸೆದ ಸಕ್ಕರೆ ಮತ್ತೆ ಪ್ಯಾಕ್ ತುಂಬುದು ಹೇಗೆ?


ತನ್ನ ಟ್ರಿಕ್ ಅನ್ನು ಪೂರ್ಣಗೊಳಿಸಲು ಸಕ್ಕರೆಯನ್ನು ಸ್ಯಾಚೆಟ್‌ಗೆ ಮತ್ತೆ ಸುರಿಯುವುದನ್ನು ವೀಡಿಯೊ ತೋರಿಸುತ್ತದೆ. Ladbible ಪ್ರಕಾರ, ವೀಡಿಯೊವನ್ನು ಮೊದಲು TikTok ನಲ್ಲಿ @jadon.ray ಬಳಕೆದಾರರು ಹಂಚಿಕೊಂಡಿದ್ದಾರೆ, ಅಲ್ಲಿ ಅದು 6.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಟ್ವಿಟರ್‌ನಲ್ಲಿ, ವೀಡಿಯೊವನ್ನು 5.4 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.ಇದನ್ನೂ ಓದಿ: Iphone: 10 ವರ್ಷದ ಹಿಂದೆ ಕಳೆದುಕೊಂಡಿದ್ದ ಐಫೋನ್​ ಮತ್ತೆ ಸಿಕ್ತು! ಆದ್ರೆ ಎಲ್ಲಿತ್ತು ಅಂತ ಮಾತ್ರ ಕೇಳ್ಬೇಡಿ...


ಟ್ರಿಕ್ ಕ್ರಾಕ್ ಮಾಡಿದ ನೆಟ್ಟಿಗರು


ಅನೇಕ ವೀಕ್ಷಕರು ಮ್ಯಾಜಿಕ್ ಟ್ರಿಕ್ನಲ್ಲಿ ಈ ಗೊಂದಲವನ್ನು (Confusion) ವ್ಯಕ್ತಪಡಿಸಿದ್ದಾರೆ. ಆದರೆ ಇತರರು ರಹಸ್ಯವನ್ನು ಭೇದಿಸಿದ್ದಾರೆ ಎಂದು ಹೇಳಿದ್ದಾರೆ. ನಾನು ಯೋಚಿಸುತ್ತಿರುವುದು ಏನೆಂದರೆ ಅಲ್ಲಿರುವ ಏಕೈಕ ಟ್ರಿಕ್ ಕ್ಯಾಮರಾದಿಂದ (Camera) ಯಾರೋ ಅವನಿಗೆ ಏನನ್ನಾದರೂ ಹಸ್ತಾಂತರಿಸುತ್ತಿದ್ದಾರೆ ಎಂದು ಕಮೆಂಟ್ ಸೆಕ್ಷನ್​ನಲ್ಲಿ ಬರೆಯಲಾಗಿದೆ.


Shocking News: ಸಸ್ಯಹಾರಿಗಳೇ ಗಾಬರಿಯಾಗ್ಬೇಡಿ ಇಲ್ಲಿದೆ ಶಾಕಿಂಗ್ ಸುದ್ದಿ, ಗಾಳಿಯಲ್ಲಿ ತಯಾರಾಗುತ್ತಂತೆ ಮಾಂಸ!


ನಿಜಕ್ಕೂ ಅದ್ಭುತ ಎಂದ ನೆಟ್ಟಿಗರು


ಇನ್ನೊಬ್ಬರು ಕಮೆಂಟ್ ಮಾಡಿ ನಾನು ಮೆಜಿಷಿಯನ್​ನನ್ನು ಮದುವೆಯಾಗಿದ್ದಾನೆ. ಆದರೆ ಇದು ನಿಜಕ್ಕೂ ಅದ್ಭುತ (Wonder) ಎಂದು ಹೊಗಳಿದ್ದಾರೆ. ಇನ್ನೂ ಕೆಲವರು ಆತ ಒಂದು ಫೇಕ್ ಬೆರಳು (Fake Finger) ಇಟ್ಟುಕೊಂಡು ಅದರ ಸಹಾಯದಿಂದ ಸಕ್ಕರೆ ಸುರಿದಿದ್ದಾನೆ ಎಂದಿದ್ದಾರೆ.


ಈತ ಅದೇನು ಮಾಯೆ ಮಾಡುತ್ತಾನೋ, ಮಂತ್ರ ಮಾಡುತ್ತಾನೋ, ಮ್ಯಾಜಿಕ್ (Magic) ಮಾಡುತ್ತಾನೋ ಅಥವಾ ಬೇರೇನೋ ಟ್ರಿಕ್ (Trick) ಮಾಡುತ್ತಾನೋ ಯಾರಿಗೂ ಸ್ಪಷ್ಟವಿಲ್ಲ. ಆದರೆ ವಿಡಿಯೋ (Video) ಮಾತ್ರ ನೋಡುವವರನ್ನು ಬೆಕ್ಕಸ ಬೆರಗಾಗಿಸುವುದು ಸುಳ್ಳಲ್ಲ

Published by:Divya D
First published: