HOME » NEWS » Trend » MANS INCREDIBLE REFLEXES SAVE OVER SPEEDING AUTO FROM TRIPPING STG KVD

Viral Video: ಇದಪ್ಪಾ ಟೈಮಿಂಗ್​ ಅಂದ್ರೆ.. ಸಮಯಪ್ರಜ್ಞೆಯಿಂದ ತಪ್ಪಿತು ಅನಾಹುತ!

ತಿರುವಿನಲ್ಲಿ ಶರವೇಗದಲ್ಲಿ ಬಂದ ಆಟೋ ನಿಯಂತ್ರಣಕ್ಕೆ ಸಿಗದೆ ಉರುಳುವ ಸ್ಥಿತಿಯಲ್ಲಿ ವ್ಯಕ್ತಿಯ ಹತ್ತಿರಕ್ಕೆ ಬರುತ್ತದೆ. ಅಚಾನಕ್ಕಾಗಿ ಬಂದ ಆಟೋ ಆತನ ಮೇಲೆಯೇ ಬೀಳುವ ಸ್ಥಿತಿಯಲ್ಲಿರುತ್ತದೆ. ಆಗ ತಕ್ಷಣ ಆತ ಆಟೋವನ್ನು ತಳ್ಳುವ ಮೂಲಕ ಉರುಳುವುದನ್ನು ತಪ್ಪಿಸುತ್ತಾನೆ.

Trending Desk
Updated:June 19, 2021, 8:07 PM IST
Viral Video: ಇದಪ್ಪಾ ಟೈಮಿಂಗ್​ ಅಂದ್ರೆ.. ಸಮಯಪ್ರಜ್ಞೆಯಿಂದ ತಪ್ಪಿತು ಅನಾಹುತ!
ಘಟನೆಯ ಚಿತ್ರ
  • Share this:

ಅತಿ ವೇಗವಾಗಿ ಬಂದ ಆಟೋವನ್ನು ಉರುಳದಂತೆ ತಡೆದು ಆಟೋದಲ್ಲಿದ್ದ ವ್ಯಕ್ತಿಗಳನ್ನು ಅಪಾಯದಿಂದ ಕಾಪಾಡಿದ ವ್ಯಕ್ತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಡಾಕ್ಟರ್ ಅಜೈತಾ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯದ ವಿಡಿಯೋ ಕೇವಲ 8 ಸೆಕೆಂಡ್ ಇದ್ದು, ಈ ವ್ಯಕ್ತಿ ಆಟೋದಲ್ಲಿದ್ದವರನ್ನು ಅಪಾಯದಿಂದ ಪಾರು ಮಾಡಿದ್ದಾರೆ.  ಆಟೋ ಉರುಳುವುದನ್ನು ತಡೆದು ದೊಡ್ಡ ಅನಾಹುತ ಸಂಭವಿಸುವುದನ್ನು ತಪ್ಪಿಸಿ ಆಪತ್ಪಾಂಧವ ಆಗಿದ್ದಾರೆ.


ಶರ್ಟ್ ಹಾಗೂ ಲುಂಗಿ ಧರಿಸಿದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಿಂತಿರುತ್ತಾನೆ. ಆಗ ತಿರುವಿನಲ್ಲಿ ಶರವೇಗದಲ್ಲಿ ಬಂದ ಆಟೋ ನಿಯಂತ್ರಣಕ್ಕೆ ಸಿಗದೆ ಉರುಳುವ ಸ್ಥಿತಿಯಲ್ಲಿ ವ್ಯಕ್ತಿಯ ಹತ್ತಿರಕ್ಕೆ ಬರುತ್ತದೆ. ಅಚಾನಕ್ಕಾಗಿ ಬಂದ ಆಟೋ ಆತನ ಮೇಲೆಯೇ ಬೀಳುವ ಸ್ಥಿತಿಯಲ್ಲಿರುತ್ತದೆ. ಆಗ ತಕ್ಷಣ ಆತ ಆಟೋವನ್ನು ತಳ್ಳುವ ಮೂಲಕ ಉರುಳುವುದನ್ನು ತಪ್ಪಿಸುತ್ತಾನೆ. ಆಟೋ ಡ್ರೈವರ್ ಹಾಗೂ ಅದರಲ್ಲಿದ್ದ ವ್ಯಕ್ತಿಗಳ ಜೀವವನ್ನು ಉಳಿಸಿದ್ದಾನೆ. ಈ ವಿಡಿಯೋವನ್ನು ಡಾಕ್ಟರ್ ಅಜೈತಾ ಅವರು, ಭಾರತದಲ್ಲಿ ಯಾರಾದರೂ ಸೂಪರ್ ಹೀರೋ ಆಗಬಹುದು ಎಂಬ ಶೀರ್ಷಿಕೆಯಡಿ ವಿಡಿಯೋ ಶೇರ್ ಮಾಡಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.



ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿರುವ ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ವೀಕ್ಷಿಸಿದ್ದು, 20,500ಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ. ಇವರ ಈ ಸಮಯಪ್ರಜ್ಞೆಯನ್ನು ಸಾಕಷ್ಟು ಮೆಚ್ಚಿದ್ದು, ಕಮೆಂಟ್ ಮಾಡಿದ್ದಾರೆ. ಅದರಲ್ಲೊಬ್ಬರು, ಆ ವ್ಯಕ್ತಿಯ ದೇಹ ಮನಸ್ಸಿನ ನಡುವೆ ಎಂತಹ ಚುರುಕುತನ ಹಾಗೂ ಹೊಂದಾಣಿಕೆ ಇದೆ ಎಂದು ಕೊಂಡಾಡಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ಇದು ಪ್ರತಿಫಲಿತ ಕ್ರಿಯೆ, ಆ ವ್ಯಕ್ತಿಯಲ್ಲಿ ಪಕ್ಕದಲ್ಲಿ ಗೋಡೆ ಇತ್ತು. ಅಕಸ್ಮಾತ್ ಆವ್ಯಕ್ತಿಯು ಆಟೋವನ್ನು ತಳ್ಳದೆ ಇದ್ದಿದ್ದರೆ ಆಟೋ ನುಜ್ಜುಗುಜ್ಜಾಗುತ್ತಿತ್ತು. ಇದು ಸ್ವಯಂ ರಕ್ಷಣಾತ್ಮಕತೆ ಎಂದು ಹೇಳಿದ್ದಾರೆ.





ಆತ ಇಲ್ಲಿ ಸೂಪರ್ ಹೀರೋ ಆಗಿರುವುದಕ್ಕಿಂತ ಹೆಚ್ಚಾಗಿ ಅವನು ಬದುಕುಳಿಯುವುದು ಮುಖ್ಯವಾಗಿತ್ತು. ಹಾಗಾಗಿ ಆತ ಸಹಜವಾಗಿಯೇ ತನ್ನ ಮೇಲೆ ಬೀಳುತ್ತಿದ್ದ ಆಟೋವನ್ನು ತಡೆಯಲು ಬೇರೆ ಏನನ್ನಾದರೂ ಮಾಡಬೇಕಾಗಿತ್ತು ಎಂದಿದ್ದಾರೆ.

ಮತ್ತೊಬ್ಬರು, ಒಂದು ನಿರ್ದಿಷ್ಟ ಸಮಯದಲ್ಲಿ ಮನಸ್ಸಿನ ಉಪಸ್ಥಿತಿಯು ಹೆಚ್ಚು ಮುಖ್ಯವಾಗುತ್ತದೆ. ಆತ ತನಗೆ ಯಾವುದೇ ಹಾನಿಯಾಗದಂತೆ ಪರಿಸ್ಥಿತಿಯನ್ನು ಬಹಳ ಚಾತುರ್ಯದಿಂದ ನಿಭಾಯಿಸಿದ್ದಾನೆ. ಅವನು ಒಬ್ಬ ನಾಯಕ ಎಂಬುದರಲ್ಲಿ ಅನುಮಾನವಿಲ್ಲ ಆದರೆ ಅದಕ್ಕಿಂತ ಹೆಚ್ಚಾಗಿ ಒಬ್ಬ ಮಹಾನ್ ಬುದ್ಧಿವಂತ ವ್ಯಕ್ತಿ ಎಂದು ಹೇಳಿದ್ದಾರೆ.


ಕೆಲವು ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ದಕ್ಷಿಣ ಮುಂಬೈನ ವಾಲ್ಕೇಶ್ವರ್ ಎಂಬ ಸ್ಥಳದಲ್ಲಿ ಕಾರೊಂದು ರಸ್ತೆಯ ಮಧ್ಯೆದಲ್ಲಿ ಉರುಳಿಬಿದ್ದಿತ್ತು. ಈ ಕಾರನ್ನು ಯಥಾಸ್ಥಿತಿಗೆ ತರಲು ಮುಂಬೈನ 10 ರಿಂದ 15 ಜನರು ಹರಸಾಹಸ ಪಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನು ಮಾನವ್ ಮಂಗಲಾನಿ ಎಂಬುವವರು ಪೋಸ್ಟ್ ಮಾಡಿದ್ದರು. ಈ ವಿಡಿಯೋವನ್ನು 18 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಇದು ಮುಂಬೈ ಮಂದಿಯ ಒಗ್ಗಟ್ಟು ಎಂಬ ರೀತಿಯಲ್ಲಿ ಕಮೆಂಟ್ ಮಾಡಿ ಮುಂಬೈ ಜನರನ್ನು ಹೊಗಳಿದ್ದರು.

Published by: Kavya V
First published: June 19, 2021, 8:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories