Viral Video: ಹಳೆಯದಾದ್ರೂ ಮತ್ತೆ ವೈರಲ್ ಆಗಿದ್ದೇಕೆ ಮಣಿಪಾಲ್ ಸೂಟ್ ಕೇಸ್ ಹುಡುಗಿ ವಿಡಿಯೋ?

Viral News: 2019ರಲ್ಲಿ ‘ಇಂಟ್ರಿಜಿನ್ ಮ್ಯಾಗ್’ ಎನ್ನುವ ಫೇಸ್‌ಬುಕ್ ಖಾತೆಯ ಪುಟದಲ್ಲಿ ಈ ವೀಡಿಯೋ ಹಂಚಿಕೊಂಡು ಇದಕ್ಕೆ “ಕಾಲೇಜು ಗೇಟ್‌ನಿಂದ ಹೋಗಲು ಪ್ರಯತ್ನಿಸಿದ ಆ ಹುಡುಗಿ ಮತ್ತು ಆ ಹುಡುಗ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿರುವವರು ಎಂದು ಹೇಳಲಾಗುತ್ತಿದೆ.

ವೈರಲ್ ವಿಡಿಯೋ ದೃಶ್ಯ

ವೈರಲ್ ವಿಡಿಯೋ ದೃಶ್ಯ

  • Share this:
ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವೈರಲ್ (Viral) ಆಗಿದ್ದ 'ಮಣಿಪಾಲ್ ಸೂಟ್‌ಕೇಸ್ ಗರ್ಲ್' ಎಂಬ ವಿಡಿಯೋ (Video)  ಎಲ್ಲರಿಗೂ ಗೊತ್ತಿರಲು ಸಾಧ್ಯವಿಲ್ಲ, ಏಕೆಂದರೆ ಇದು ನಿನ್ನೆಯ ಮತ್ತು ಇವತ್ತಿನ ವಿಡಿಯೋ ಅಲ್ಲವೇ ಅಲ್ಲ. ಈ ವಿಡಿಯೋ 2019ರಲ್ಲಿ ವೈರಲ್ ಆಗಿದ್ದು ಎಂದು ಹೇಳಲಾಗುತ್ತಿದೆ.ಇದರಲ್ಲಿ ಪ್ರಿಯಕರನೊಬ್ಬ ತನ್ನ ಹಾಸ್ಟೆಲ್‌ನಿಂದ ತನ್ನ ಪ್ರಿಯತಮೆಯನ್ನು ಹೊರಗೆ ಯಾರಿಗೂ ಕಾಣಿಸದಂತೆ ಒಂದು ಸೂಟ್‌ಕೇಸ್‌ನಲ್ಲಿ ಹಾಕಿಕೊಂಡು ಹೊರ ಬರುತ್ತಿರುವ ಘಟನೆಯ ವಿಡಿಯೋ ಎಂದು ಹೇಳಲಾಗುತ್ತಿದೆ. ಈ ಪ್ರೀತಿ ಮಾಡಿದ ಯುವಕ ಮತ್ತು ಯುವತಿಯರು ಪರಸ್ಪರ ಭೇಟಿ ಆಗುವುದನ್ನು ಯಾರು ತಪ್ಪಿಸಲು ಸಾಧ್ಯವೇ ಇಲ್ಲ. ಅವರು ಪರಸ್ಪರ ಭೇಟಿಯಾಗಲು ಯಾವುದಾದರೂ ವಿನೂತನವಾದ ಯೋಜನೆಯನ್ನು ಮಾಡೇ ಮಾಡುತ್ತಾರೆ ಎನ್ನುವುದು ಈ ವಿಡಿಯೋದಿಂದ ನಮಗೆ ಚೆನ್ನಾಗಿಯೇ ಅರ್ಥವಾಗುತ್ತದೆ.

ಆದರೆ ಈ ವಿಡಿಯೋ ತುಂಬಾ ಹಳೆಯದು ಮತ್ತು ಮಣಿಪಾಲ್‌ನಲ್ಲಿ ನಡೆದಿರುವ ಘಟನೆಯ ವಿಡಿಯೋ ಇರಲಿಕ್ಕಿಲ್ಲ, 2019ರಲ್ಲಿ ‘ಇಂಟ್ರಿಜಿನ್ ಮ್ಯಾಗ್’ ಎನ್ನುವ ಫೇಸ್‌ಬುಕ್ ಖಾತೆಯ ಪುಟದಲ್ಲಿ ಈ ಘಟನೆಯು ಡೆಹರಾಡೂನ್‌ನಲ್ಲಿರುವ ಯುಪಿಈಎಸ್‌ನಲ್ಲಿ ನಡೆದದ್ದು ಎಂದು ಹೇಳಿತ್ತು. ಈ ವಿಡಿಯೋ ಎಲ್ಲಿಂದ ಬಂದಿದ್ದು ಮತ್ತು ವಿಡಿಯೋದಲ್ಲಿ ನಡೆದ ಘಟನೆಯ ಸ್ಥಳವನ್ನು, ಸಮಯವನ್ನು ನ್ಯೂಸ್ 18 ಪರಿಶೀಲಿಸಲು ಆಗಲಿಲ್ಲ ಮತ್ತು ಈಗ ಈ ವಿಡಿಯೋ ಮತ್ತೊಮ್ಮೆ ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಇದನ್ನು ನೋಡಿ ಇದಕ್ಕೆ ತಮಾಷೆಯಾಗಿ ಅನೇಕ ರೀತಿಯ ಮೀಮ್ಸ್‌ಗಳನ್ನು ತಯಾರಿಸಿ ಟ್ವಿಟ್ಟರ್ ಖಾತೆಯ ಪುಟಗಳಲ್ಲಿ ಹಂಚಿಕೊಂಡಿದ್ದಾರೆ.“ಈ ವಿಡಿಯೋದಲ್ಲಿ ಒಬ್ಬ ಹುಡುಗನು ತನ್ನ ಹಾಸ್ಟೆಲ್‌ಗೆ ಬಂದ ಹುಡುಗಿಯನ್ನು ಯಾರು ನೋಡದಂತೆ ಒಂದು ಸೂಟ್‌ಕೇಸ್‌ನಲ್ಲಿ ಕೂರಿಸಿಕೊಂಡು ಆಕೆಯನ್ನು ತನ್ನ ಹಾಸ್ಟೆಲ್‌ನಿಂದ ಹೊರಗೆ ಒಯ್ಯುತ್ತಿರುವಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿ ಸಿಕ್ಕಿಬಿದ್ದಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ” ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಡಾಟಾ ರೀಚಾರ್ಜ್‌ ಬೆಲೆ ಹೆಚ್ಚಳ, ಭಾರತದಲ್ಲಿ ಕಮ್ಮಿಯಾಗ್ತಿದೆ Facebook ಬಳಕೆ

ಈ ವಿಡಿಯೋ ನೋಡಿ ಅನೇಕರು ಅನೇಕ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬರು “ನಿಮ್ಮನ್ನು ಈ ರೀತಿಯಾಗಿ ಸೂಟ್‌ಕೇಸ್‌ನಲ್ಲಿ ಹಾಕಿಕೊಂಡು ಹೋಗಲು ಆಗದ ಹುಡುಗನನ್ನು ನೀವು ಪ್ರೀತಿಸಲೇಬೇಡಿ” ಎಂದು ಬರೆದಿದ್ದಾರೆ. ಇನ್ನೊಬ್ಬರು “ಬಾಲಿವುಡ್ ನಟ ನವಾಜುದ್ದೀನ್ ಸಿದ್ದೀಕಿ ಅವರು ಒಂದು ಗೋಣಿ ಚೀಲದಲ್ಲಿ ಅವರನ್ನು ಹಾಕಿಕೊಳ್ಳುವ ಮೀಮ್ಸ್ ಅನ್ನು ಟ್ವಿಟ್ಟರ್‌ನಲ್ಲಿ ಹಾಕಿ, ಅದಕ್ಕೆ ನವಾಜುದ್ದೀನ್ ಒಂದು ಚೀಲದಲ್ಲಿ ಅವಿತು ಕುಳಿತುಕೊಂಡಿದ್ದಾರೆ, ಮಣಿಪಾಲ್ ಸೂಟ್‌ಕೇಸ್ ಜೋಡಿ ಓಡಿ ಹೋಗಬಹುದು” ಎಂದು ಶೀರ್ಷಿಕೆಯನ್ನು ಸಹ ಅದಕ್ಕೆ ಬರೆದಿದ್ದಾರೆ.

“ಮಣಿಪಾಲ್ ಸೂಟ್‌ಕೇಸ್ ಘಟನೆ ನಾವು ಮಾಡಿರುವುದರ ಮುಂದೆ ಏನೇನೂ ಅಲ್ಲ” ಎಂದು ಇನ್ನೊಬ್ಬ ನೆಟ್ಟಿಗರು ಬರೆದಿದ್ದಾರೆ. ಇನ್ನೊಬ್ಬರು ನಟ ಫರ್ಹಾನ್ ಅಖ್ತರ್ ‘ಜಿಂದಗಿ ನಾ ಮಿಲೇಗಿ ದೊಬಾರ’ ಚಿತ್ರದಲ್ಲಿ ಒಂದು ಲೇಡೀಸ್ ಬ್ಯಾಗ್‌ಗೆ ಕನ್ನಡಕ ಹಾಕಿ ಭಗವತಿ ಎಂದು ಹೇಳಿದ ಪಾತ್ರಕ್ಕೆ ಇಲ್ಲಿ ಇನ್ನೂ ಹೆಚ್ಚಿನ ಕೆಲಸವನ್ನು ನೀಡಲಾಗಿದೆ” ಎಂದು ಫೋಟೋ ಹಾಕಿದ್ದಾರೆ.

2019ರಲ್ಲಿ ‘ಇಂಟ್ರಿಜಿನ್ ಮ್ಯಾಗ್’ ಎನ್ನುವ ಫೇಸ್‌ಬುಕ್ ಖಾತೆಯ ಪುಟದಲ್ಲಿ ಈ ವೀಡಿಯೋ ಹಂಚಿಕೊಂಡು ಇದಕ್ಕೆ “ಕಾಲೇಜು ಗೇಟ್‌ನಿಂದ ಹೋಗಲು ಪ್ರಯತ್ನಿಸಿದ ಆ ಹುಡುಗಿ ಮತ್ತು ಆ ಹುಡುಗ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿರುವವರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸಾಕು ಪ್ರಾಣಿಗಳನ್ನು ಕರೆದೊಯ್ಯಲು ಖಾಸಗಿ ಜೆಟ್ ಬಾಡಿಗೆಗೆ ಪಡೆದ Hong Kongನ ವ್ಯಕ್ತಿ

ಇವರು ಅನುಮಾನಾಸ್ಪದವಾಗಿ ಹಿಡಿದುಕೊಂಡು ಹೋಗುತ್ತಿರುವ ಈ ಸೂಟ್‌ಕೇಸ್ ಅನ್ನು ನೋಡಿದ ಸೆಕ್ಯೂರಿಟಿ ಗಾರ್ಡ್ ಅವರನ್ನು ತಡೆದು ನಿಲ್ಲಿಸಿ ಅದನ್ನು ತೆಗೆದು ನೋಡಿದಾಗ ಈ ಪ್ರಯತ್ನವು ವಿಫಲವಾಗಿದೆ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದರು.
Published by:Sandhya M
First published: