Manike Mage Hithe: ಮನಿಕೆ ಮಗೆ ಹಿತೆ ಎಂದು ಎಲ್ಲರ ಮನಸು ಕದ್ದ ಗಾಯಕಿ ಯೋಹಾನಿ ಡಿಸಿಲ್ವಾ ಸಂದರ್ಶನ

Manike Mage Hithe Viral Song Singer Yohani De Silva Exclusive Interview: ನ್ಯೂಸ್ 18 ಸ್ವತಃ ಯೊಹಾನಿ ಡಿಸಿಲ್ವಾ ಅವರನ್ನು ಸಂದರ್ಶಿಸಿದ್ದು ಅವರ ಮಾತುಗಳಲ್ಲಿಯೇ ಹಾಡಿನ ಜನಪ್ರಿಯತೆ ಹಾಗೂ ರಾತ್ರಿ ಬೆಳಗಾಗುವುದರೊಳಗೆ ಯೊಹಾನಿ ಸುದ್ದಿಯಾದ ವಿಷಯವನ್ನು ತಿಳಿದುಕೊಳ್ಳೋಣ

ಯೋಹಾನಿ ಡಿ ಸಿಲ್ವಾ

ಯೋಹಾನಿ ಡಿ ಸಿಲ್ವಾ

  • Share this:
    ಮನಿಕೆ ಮಗೆ ಹಿತೆ (Manike Mage Hithe Viral Song) ಹಾಡು ತನ್ನ ವಿಭಿನ್ನ ಭಾಷೆ, ಸಂಗೀತಗಳಿಂದ ಎಲ್ಲರ ಮನಸ್ಸನ್ನು ಕದ್ದಿದೆ. ಸೆಲೆಬ್ರಿಟಿಗಳೂ ಕೂಡ ಈ ಹಾಡನ್ನು ತುಂಬಾನೇ ಮೆಚ್ಚಿಕೊಂಡಿದ್ದು ಇದು ಯಾವ ಭಾಷೆಯ ಹಾಡು ಎಂಬುದನ್ನು ಕೂಡ ಗಮನಿಸದೇ ಗಾಯಕಿಯ ಸ್ವರಕ್ಕೆ ಹಾಗೂ ಹಿನ್ನಲೆ ಸಂಗೀತಕ್ಕೆ ಮಾರುಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಹುಚ್ಚು ಹಿಡಿಸಿರುವ ಹಾಡು ಈಗ ಎಲ್ಲಾ ವೇದಿಕೆಗಳಲ್ಲೂ ಸುಳಿಯುತ್ತಲೇ ಇದೆ. ಶ್ರೀಲಂಕಾ ಮೂಲದ ಗಾಯಕಿ ಯೊಹಾನಿ ಡಿಸಿಲ್ವಾ (Srilankan Singer Yohani De Silva) ಈ ಹಾಡನ್ನು ಹಾಡಿದ್ದು ಹಾಡಿನ ಇಂಗ್ಲಿಷ್, ಹಿಂದಿ, ತಮಿಳು ವರ್ಷನ್‌ಗಳು ಬಿಡುಗಡೆಯಾದವು. ಅದರಲ್ಲೂ ತಮಿಳು ಹಾಡನ್ನು ಯೊಹಾನಿಯವರೇ ಹಾಡಿದ್ದಾರೆ ಎಂಬುದು ಹಾಡಿಗಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ.

    28ರ ಹರೆಯದ ಯೊಹಾನಿ ಅತಿ ಕಡಿಮೆ ಸಮಯದಲ್ಲಿ ಜನಪ್ರಿಯತೆಯ ತುತ್ತ ತುದಿಗೇರಿದ್ದಾರೆ. ಈ ಹಾಡು ಒಂದು ರೀತಿಯ ಹುಚ್ಚನ್ನೇ ಹುಟ್ಟುಹಾಕಿದ್ದು ಶ್ರೀಲಂಕಾ ಹಾಗೂ ಭಾರತದಲ್ಲಿ ಬರೇ 3 ತಿಂಗಳಿನಲ್ಲಿ ಹಾಡು 8.7 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ ಎಂದರೆ ಹಾಡಿಗಿರುವ ಜನಪ್ರಿಯತೆಯನ್ನು ನೀವು ಲೆಕ್ಕಹಾಕಲೇಬೇಕು. ಈ ಸಮಯದಲ್ಲಿ ನ್ಯೂಸ್ 18 ಸ್ವತಃ ಯೊಹಾನಿ ಡಿಸಿಲ್ವಾ ಅವರನ್ನು ಸಂದರ್ಶಿಸಿದ್ದು ಅವರ ಮಾತುಗಳಲ್ಲಿಯೇ ಹಾಡಿನ ಜನಪ್ರಿಯತೆ ಹಾಗೂ ರಾತ್ರಿ ಬೆಳಗಾಗುವುದರೊಳಗೆ ಯೊಹಾನಿ ಸುದ್ದಿಯಾದ ವಿಷಯವನ್ನು ತಿಳಿದುಕೊಳ್ಳೋಣ.

    ‘ಮನಿಕೆ ಮಗೆ ಹಿತೆ’ ಹಾಡು ಹೇಗೆ ಹುಟ್ಟಿಕೊಂಡಿತು (Origin of Manike Mige Hithe)?

    ಟಿಕ್‌ಟಾಕ್ ವಿಡಿಯೋದಿಂದ ಇದು ಆರಂಭವಾಯಿತು. ಪಿಯಾನೊ ಬಳಸಿಕೊಂಡು ನನ್ನ ಫೋನ್‌ನಲ್ಲಿ ಈ ಹಾಡನ್ನು ನಾನು ರೆಕಾರ್ಡ್ ಮಾಡಿದೆ. ಇದು ಚೆನ್ನಾಗಿಯೇ ಮೂಡಿ ಬಂದಿತು ಹಾಗೂ ಹಾಡಿನ ನಿರ್ಮಾಪಕರಾದ ಚಮತ್ ಸಂಗೀತ್ ಈ ಹಾಡನ್ನ ಪೂರ್ಣವಾಗಿ ಹಾಡಲು ಬಯಸುತ್ತೀರಾ? ಎಂದು ನನ್ನನ್ನು ಕೇಳಿದರು. ಶ್ರೀಲಂಕಾದಲ್ಲಿ ಲಾಕ್‌ಡೌನ್ ನಿರ್ಬಂಧದ ಸಮಯದಲ್ಲಿಯೇ ಈ ಹಾಡನ್ನು ನಾನು ಪೂರ್ಣವಾಗಿ ಹಾಡಿದೆ. ಈ ಹಾಡನ್ನು ಮೂಲತಃ ಹಾಡಿದವರು ಸತೀಶನ್ ರತ್ನಾಯಕ ಹಾಗೂ ಲಿರಿಕ್ಸ್ ಬರೆದವರು ದುಕಾನ್ ಎಆರ್‌ಎಕ್ಸ್.

    ಈ ಹಾಡು ಇಷ್ಟು ವೈರಲ್ ಆಗುತ್ತದೆ ಎಂದು ನೀವು ಊಹಿಸಿದ್ದೀರಾ?

    ಖಂಡಿತ ಇಲ್ಲ. ಅದೂ ಬರೇ 2 ತಿಂಗಳಲ್ಲಿ 90.20 ಮಿಲಿಯನ್ ದಾಖಲೆಯನ್ನು ಸೃಷ್ಟಿಸಿದ್ದೂ ನಿಜಕ್ಕೂ ಅದ್ಭುತ. ಹಾಡು ಇಷ್ಟವಾಗಿದ್ದರಿಂದ ಹಾಗೂ ಹಾಡು ಹಾಡುವುದು ನನಗೆ ಇಷ್ಟವಾಗಿರುವುದರಿಂದ ಹೀಗೆಯೇ ಹಾಡಿದೆ. ಈ ಹಾಡಿನ ಪ್ರತಿಯೊಂದು ಸ್ವರ ಲಯಗಳನ್ನು ನಾನು ಆಸ್ವಾದಿಸಿದ್ದೇನೆ ಆದರೆ ಹಾಡು ಇಷ್ಟೊಂದು ಜನಪ್ರಿಯತೆಯನ್ನು ಗಳಿಸುತ್ತದೆ ಎಂಬುದು ಊಹಿಸಿಯೇ ಇರಲಿಲ್ಲ.

    ಯೂಟ್ಯೂಬ್‌ನಲ್ಲಿ ಇದು ಸೃಷ್ಟಿಸಿದ ದಾಖಲೆಗಳನ್ನು ನೋಡಿದಾಗ ಹಾಗೂ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಹಿನ್ನಲೆಯಲ್ಲಿ ಹಾಡು ಪ್ಲೇಯಾದಾಗ ನಿಮಗೆ ಹೇಗೆ ಅನ್ನಿಸುತ್ತದೆ?

    ಇತರರ ಈ ಹಾಡನ್ನು ಬಳಸುವಾಗ ನನಗೆ ತುಂಬಾ ಖುಷಿಯಾಗುತ್ತದೆ. ಬೇರೆ ಬೇರೆ ಭಾಷೆಗಳಲ್ಲಿ ನನ್ನ ಹಾಡು ಬಂದಿರುವುದನ್ನು ನನ್ನ ತಂಡದವರು ನನಗೆ ತೋರಿಸಿದ್ದಾರೆ. ನನಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನಾನು ಚಿರಋಣಿಯಾಗಿರುವೆ.

    ಈ ಹಾಡು ಶೂಟಿಂಗ್ ಮಾಡುವಾಗ ನೀವು ರಿಹರ್ಸಲ್ ನಡೆಸಿದ್ದೀರಾ?

    ಖಂಡಿತ ಇಲ್ಲ. ಇದು ಸಂಪೂರ್ಣವಾಗಿ ಯೋಜನಾಬದ್ಧವಾಗಿರಲಿಲ್ಲ. ಹಾಡಿನ ಲಯ ಹಾಗೂ ತಾಳಕ್ಕೆ ತಕ್ಕಂತೆ ಹಾಡನ್ನು ಹಾಡಿದೆ. ನಿರೀಕ್ಷೆ ಇಲ್ಲದೆ ಹಾಡು ತುಂಬಾ ಸೊಗಸಾಗಿ ಮೂಡಿಬಂದಿತು. ಯಾವುದೇ ಪೂರ್ಣಸಿದ್ಧತೆಗಳನ್ನು ನಾವು ಮಾಡಿರಲಿಲ್ಲ.

    ಹಾಡಿನ ಸಾಹಿತ್ಯ ಯಾರಿಗೂ ಅರ್ಥವಾಗದಿದ್ದರೂ ಪ್ರತಿಯೊಬ್ಬರಿಗೂ ಹಾಡು ಮೆಚ್ಚುಗೆಯಾಗಿದೆ. ಇದು ಏನನ್ನು ಸಾಬೀತುಪಡಿಸುತ್ತದೆ?

    ಸಂಗೀತಕ್ಕೆ ಸಂಸ್ಕೃತ ಹಾಗೂ ಯಾವುದೇ ಗಡಿಗಳ ಕಟ್ಟುಪಾಡುಗಳಿಲ್ಲ. ಭಾಷೆಗಳನ್ನು ಚೌಕಟ್ಟುಗಳನ್ನು ಮೀರಿ ಬೆಳೆಯುವ ಸ್ವತಂತ್ರ ಕಲೆಯಾಗಿದೆ. ಸಾಹಿತ್ಯ ಅರ್ಥವಾಗದೇ ಇದ್ದರೂ ಜನ ನಾನು ಹಾಡಿದ ಹಾಡನ್ನು ಪ್ರೀತಿಸುತ್ತಿದ್ದಾರೆ ಇದು ನನಗೆ ತುಂಬಾ ಸಂತೋಷವುಂಟುಮಾಡಿದೆ. ಜನರೊಂದಿಗಿನ ಸಂಪರ್ಕವನ್ನು ನನ್ನ ಹಾಡು ಪ್ರೋತ್ಸಾಹಿಸುತ್ತದೆ ಎಂಬುದು ನನಗಿರುವ ಆನಂದವಾಗಿದೆ.

    ಮುಂದಿನ ವರ್ಷಗಳಲ್ಲಿ ನೀವು ಸಾಧಿಸಬೇಕಾಗಿರುವ ಗುರಿಗಳೇನು?

    ಸಂಗೀತ ಎಂಬುದು ನನ್ನ ಜೀವನವಾಗಿದೆ. ನನ್ನ ಮುಂದಿನ ಆಲ್ಬಮ್‌ನೊಂದಿಗೆ ಬರುವುದು ನನ್ನ ಆಶಯವಾಗಿದೆ. ಮೊದಲ 12 ಹಾಡುಗಳು ಈಗಾಗಲೇ ಸಿದ್ಧಗೊಂಡಿವೆ. ಕೋವಿಡ್ ನಿರ್ಬಂಧಗಳು ಇಲ್ಲದೇ ಇದ್ದರೆ ನಾನು ಲೈವ್ ಪರ್ಫಾಮೆನ್ಸ್ ಹಾಗೂ ಮ್ಯೂಸಿಕ್ ಟೂರ್‌ಗಳನ್ನು ಮಾಡಲು ಬಯಸಿರುವೆ. ಮುಂದಿನ ವರ್ಷಗಳ ನನ್ನ ಗುರಿ ಸಂಗೀತದಲ್ಲಿ ಅತ್ಯುನ್ನತವಾದುದನ್ನು ಸಾಧಿಸುವುದಾಗಿದೆ.

    ಸಂಗೀತದ ಮೇಲೆ ಒಲವು ಹೇಗೆ ಹುಟ್ಟಿಕೊಂಡಿತು?

    ನನ್ನ ಯವ್ವೌನದಲ್ಲಿಯೇ ಸಂಗೀತವೆಂದರೆ ನನಗೆ ಪಂಚಪ್ರಾಣವಾಗಿತ್ತು. ಪಿಯಾನೊ ನುಡಿಸಲು ನನ್ನ ತಾಯಿ ನನಗೆ ಸಹಾಯ ಮಾಡಿದರು ಹಾಗೂ ಕೆಲವೊಂದು ಗುರುಗಳ ಸಹಾಯದಿಂದ ವೃತ್ತಿಪರ ತರಬೇತಿಯನ್ನು ನಾನು ಪಡೆದುಕೊಂಡೆ. ನನಗೆ ಗಿಟಾರ್ ನುಡಿಸುವುದು ಕೂಡ ತುಂಬಾ ಇಷ್ಟ. ಆದರೆ ನಾನು ಗಿಟಾರ್ ನುಡಿಸುವುದನ್ನು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಕಲಿತಿರುವೆ. ಸಂಗೀತ ಎಂದರೆ ನನಗೆ ಸರ್ವಸ್ವ. ಹಾಗಾಗಿ ಎಲ್ಲವೂ ನನಗೆ ಕೂಡಿಬಂದಿತು. ಸಂಗೀತದೊಂದಿಗೆಯೇ ನನ್ನ ಜೀವನ ನಡೆಸಲು ನಾನು ಬಯಸಿರುವೆ. ಸಂಗೀತ ನನ್ನ ಪರಮಾಪ್ತ ಸ್ನೇಹಿತನಿದ್ದಂತೆ.

    ನಿಮ್ಮ ಸಂಗೀತದ ಅಭಿವೃದ್ಧಿಗೆ ಕುಟುಂಬ ಹೇಗೆ ಪ್ರೋತ್ಸಾಹ ನೀಡುತ್ತಿದೆ?

    ನನ್ನ ತಂದೆ ಸೇನೆಯಲ್ಲಿದ್ದವರು ಹಾಗೂ ತಾಯಿ ಗಗನ ಸಖಿಯಾಗಿದ್ದವರು. ನನ್ನ ತಂದೆ ಹೆಚ್ಚುಕಾಲ ಹೊರಗೇ ಇರಬೇಕಾಗಿತ್ತು ಹಾಗಾಗಿ ನನ್ನ ತಾಯಿ ಸಂಗೀತವನ್ನು ಮೆಚ್ಚಿಕೊಂಡರು. ಇದರಿಂದಾಗಿ ಬೆಳೆಯುತ್ತಲೇ ಸಂಗೀತವನ್ನು ಕೂಡಿಯೇ ಅಭ್ಯಸಿಸಿದೆವು. ನನ್ನ ಬಾಲ್ಯದಲ್ಲಿಯೇ ಈಥನ್ ಜಾನ್ ಹಾಗೂ ಸ್ಪೈಸ್ ಗರ್ಲ್ಸ್ ಆರಾಧಕಳಾಗಿದ್ದೆ. ಸಂಗೀತ ಕ್ಷೇತ್ರದಲ್ಲಿ ನನ್ನ ಅಭಿವೃದ್ಧಿಗೆ ನನ್ನ ಪೋಷಕರ ಪ್ರೋತ್ಸಾಹ ಯಾವಾಗಲೂ ಇದೆ.

    ಅಮಿತಾಭ್ ಬಚ್ಚನ್ ಟ್ವಿಟ್ಟರ್‌ನಲ್ಲಿ ನಿಮ್ಮನ್ನು ಹೊಗಳಿದಾಗ ನಿಮಗೆ ಹೇಗೆ ಅನ್ನಿಸಿತು?

    ನಿಜವಾಗಿಯೂ ಇದೊಂದು ಮೋಜಿನ ಕಥೆಯಾಗಿದೆ. ನಾನು ನಿದ್ದೆಯಲ್ಲಿದ್ದೆ ಈ ಸಮಯದಲ್ಲಿಯೇ ನನ್ನ ಮ್ಯಾನೇಜರ್ ನನಗೆ ಕರೆ ಮಾಡಿ, ಅಮಿತಾಭ್ ಬಚ್ಚನ್ ನಿಮ್ಮ ಹಾಡನ್ನು ಟ್ವೀಟ್ ಮಾಡಿದ್ದಾರೆ ಎಂದು ತಿಳಿಸಿದರು. ಮೊದಲೇ ನಿದ್ದೆಯಲ್ಲಿದ್ದ ನನಗೆ ಪಕ್ಕನೆ ಇದು ಹೊಳೆಯಲಿಲ್ಲ. ನಾನು ಪುನಃ ನಿದ್ರೆಗೆ ಜಾರಿದೆ. ಆದರೆ ಫಕ್ಕನೆ ನನ್ನ ಒಳಮನಸ್ಸು ಜಾಗೃತಗೊಂಡಿತು ಹಾಗೂ ಮ್ಯಾನೇಜರ್ ಹೇಳಿದ ಸುದ್ದಿಯನ್ನು ನೆನಪಿಸಿತು! ನನ್ನ ಕನಸು ನಿಜವಾದ ಕ್ಷಣ ಅದಾಗಿತ್ತು. ನಾನು ಇನ್ನೂ ಕನಸು ಕಾಣುತ್ತಿದ್ದೇನೆ ಎಂದು ನನಗೆ ಭಾಸವಾಯಿತು. ಆದರೆ ಇದು ನಿಜವಾಗಿತ್ತು. ಅಮಿತಾಭ್ ಸರ್ ತುಂಬಾ ಕರುಣಾಮಯಿ ಹಾಗೂ ಹೃದಯವಂತರು. ನಾನು ಅವರೊಂದಿಗೆ ಲೈವ್ ಪರ್ಫಾಮೆನ್ಸ್ ನೀಡಬಯಸುವೆ ಆ ಕ್ಷಣಕ್ಕಾಗಿ ಕಾಯುತ್ತಿರುವೆ.



    ಬಾಲಿವುಡ್ ತಾರೆ ಪರಿಣಿತಿ ಚೋಪ್ರಾ ಕೂಡ ನಿಮ್ಮ ಹಾಡಿಗೆ ನೃತ್ಯಮಾಡಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

    ಇದು ಅದ್ಭುತವಾಗಿತ್ತು. ಹೆಚ್ಚಿನ ಸೆಲೆಬ್ರಿಟಿಗಳು ಸ್ಟಾರ್‌ಗಳು ನನ್ನ ಹಾಡನ್ನು ಮೆಚ್ಚಿಕೊಂಡಿದ್ದಾರೆ ಇದು ನಿಜಕ್ಕೂ ಅತ್ಯದ್ಭುತ ಕ್ಷಣವಾಗಿದೆ.

    ಭಾರತಕ್ಕೆ ಭೇಟಿ ನೀಡಲು ನೀವು ಬಯಸುತ್ತೀರಾ?

    ಭಾರತದಲ್ಲಿಯೂ ಸಣ್ಣ ಪ್ರದರ್ಶನಗಳನ್ನು ನೀಡಲು ನಾವು ಬಯಸಿದ್ದೇವೆ. ದೊಡ್ಡ ಪ್ರಯಾಸವನ್ನು ನಾನು ಕೈಗೊಳ್ಳಬೇಕೆಂದಿರುವೆ. ಮನಿಕೆ ಮಗೆ ಹಿತೆ ಹಾಡನ್ನು ಇಷ್ಟಪಟ್ಟವರೆಲ್ಲರನ್ನೂ ನಾನು ಭೇಟಿಯಾಗಬೇಕೆಂದಿರುವೆ.

    ಜನಪ್ರಿಯತೆ ಒತ್ತಡವನ್ನು ತಂದೊಡ್ಡಿದೆಯೇ?

    ಹೌದು ಜನಪ್ರಿಯತೆಯಿಂದ ನಾನು ಒತ್ತಡಕ್ಕೆ ಒಳಗಾಗಿರುವುದು ನಿಜ. ನಿಜವಾಗಿ ಹೇಳಬೇಕು ಎಂದಾದಲ್ಲಿ ನನ್ನ ಮುಂದಿನ ಹಾಡು 1 ವೀಕ್ಷಣೆಯನ್ನು ಪಡೆದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಹಾಡು ನನಗೆ ಖುಷಿ ಕೊಟ್ಟಿದೆಯೇ ಇಲ್ಲವೇ ಎಂಬುದು ನನಗೆ ಮುಖ್ಯವಾಗಿದೆ. ನಾನು ಹೇಗೆ ಪ್ರದರ್ಶನ ನೀಡಿದ್ದೇನೆ ಹಾಗೂ ಇದರಿಂದ ನನಗೆ ಖುಷಿಯಾಗಿದೆಯೇ ಎಂಬುದು ನನಗೆ ಮುಖ್ಯವಾಗಿದೆ. ನಾನು ಆನಂದಿಸಿದರೆ ನನಗೆ ಅಷ್ಟು ಸಾಕು.

    ಇದನ್ನೂ ಓದಿ: Viral Song Manike Mage Hithe.. ಒರಿಜಿನಲ್ ಹಾಡು ನೋಡಿದ್ದೀರಾ: ಹಾಡಿದವರು ಯಾರು ಗೊತ್ತಾ..?

    ಶ್ರೀಲಂಕಾ ಭಾಷೆಯಲ್ಲಿರುವ ಮನಿಕೆ ಮಗೆ ಹಿತೆ ಹಾಡಿನ ಅರ್ಥವೇನೆಂದು ಹೆಚ್ಚಿನ ಜನರು ಹುಡುಕಾಟ ನಡೆಸಿದ್ದು ಪ್ರೇಮಿಯೊಬ್ಬ ತನ್ನ ಪ್ರೇಯಸಿಗೆ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿರುವುದಾಗಿದೆ. ಹುಡುಗನು ಹುಡುಗಿಗಾಗಿ ಹಾಡುವ ಈ ಹಾಡು ತನ್ನ ಸೊಗಾಸಾದ ಶೈಲಿ ಹಾಗೂ ಸಂಗೀತದಿಂದ ಎಲ್ಲಾ ಸಂಗೀತ ಪ್ರಿಯರ ಮನಸ್ಸನ್ನು ಸೂರೆಗೊಂಡಿದೆ. ವಿಭಿನ್ನವಾಗಿರುವ ಹಾಡು ಅರ್ಥವಾಗದೇ ಇದ್ದರೂ ಇದು ವಿಶ್ವದಾದ್ಯಂತ ಅಭಿಮಾನಿಗಳನ್ನು ಪಡೆದುಕೊಂಡಿರುವುದಂತೂ ನಿಜವಾಗಿದೆ. ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಕೂಡ ಹಾಡನ್ನು ಬಳಕೆದಾರರು ಬಳಸಿಕೊಂಡಿದ್ದು ಹಾಡಿಗಿರುವ ಜನಪ್ರಿಯತೆ ದಿನದಿಂದ ದಿನಕ್ಕೆ ಉಚ್ಛ್ರಾಯ ಸ್ಥಿತಿಯನ್ನು ತಲುಪುತ್ತಿದೆ. ಯೊಹಾನಿ ಸರಳವಾಗಿ ಹಾಡಿದ ಹಾಡು ಇಷ್ಟೊಂದು ವೈರಲ್ ಆಗುತ್ತಿದ್ದು ಅವರ ಕಂಠಕ್ಕೆ ಪ್ರತಿಯೊಬ್ಬರೂ ಫಿದಾ ಆಗಿರುವುದಂತೂ ನಿಜವಾಗಿದೆ.
    Published by:Sharath Sharma Kalagaru
    First published: