Manike Mage Hithe Singer: ಬಾಲಿವುಡ್‌ಗೆ ಕಾಲಿಟ್ಟ ಶ್ರೀಲಂಕಾದ ಗಾಯಕಿ Yohani

ಗಾಯಕಿ ಯೊಹಾನಿ ಈಗ ಬಾಲಿವುಡ್​ ಎಂಟ್ರಿ ಕೊಟ್ಟಿದ್ದಾರೆ. ಹೌದು, ಇವರು 'ಥ್ಯಾಂಕ್‌ ಗಾಡ್' ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವ್‌ಗನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ ನಟಿಸಲಿದ್ದಾರೆಂದು ಹೇಳಲಾಗುತ್ತಿದೆ.

ಬಾಲಿವುಡ್​ ಸಿನಿಮಾದಲ್ಲಿ ಹಾಡಲಿರುವ ಯೊಹಾನಿ

ಬಾಲಿವುಡ್​ ಸಿನಿಮಾದಲ್ಲಿ ಹಾಡಲಿರುವ ಯೊಹಾನಿ

  • Share this:
ಕೆಲವು ತಿಂಗಳುಗಳ ಹಿಂದಷ್ಟೇ ಒಂದು ಹಾಡು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿತ್ತು ಮತ್ತು ಸಿಕ್ಕಾಪಟ್ಟೆ ಜನಪ್ರಿಯ ತಾರೆಗಳಿಂದ ಮೆಚ್ಚುಗೆ ಪಡೆದಿತ್ತು. ಹೀಗೆ ಎಂದ ತಕ್ಷಣವೇ ನಿಮ್ಮ ಯೋಚನೆಗೆ ಬರುವುದು ಶ್ರೀಲಂಕಾದ ಗಾಯಕಿ ಯೊಹಾನಿ (Yohani) ತಮ್ಮ ಧ್ವನಿಯಲ್ಲಿ ಹಾಡಿರುವ ‘ಮನಿಕೆ ಮಗೆ ಹಿತೆ' (Manike Mage Hithe) ಹಾಡು ಎಂದರೆ ತಪ್ಪಾಗುವುದಿಲ್ಲ. ಈ ಹಾಡು ಎಷ್ಟರ ಮಟ್ಟಿಗೆ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿತ್ತು ಎಂದರೆ, ಎಲ್ಲ ಚಿತ್ರೋದ್ಯಮದ ತಾರೆಯರು ಬಹುತೇಕರು ಇದನ್ನು ಮೆಚ್ಚಿಕೊಂಡಿದ್ದರು ಮತ್ತು ಸಂಗೀತ ಪ್ರೇಮಿಗಳಂತೂ ತುಂಬಾನೇ ಇಷ್ಟಪಟ್ಟಿದ್ದರು. ಈ ಹಾಡಿನಿಂದ ಯೊಹಾನಿಗೆ ದೊಡ್ಡ ಅಭಿಮಾನಿಗಳ ಬಳಗವೇ ಹುಟ್ಟಿಕೊಂಡಿತು. ಈಗ ಈ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಆದೇನಪ್ಪಾ ಅಂತೀರಾ? ಮುಂದೆ ಓದಿ ನಿಮಗೆ ಗೊತ್ತಾಗುತ್ತೆ.

ಗಾಯಕಿ ಯೊಹಾನಿ ಈಗ ಬಾಲಿವುಡ್​ ಎಂಟ್ರಿ ಕೊಟ್ಟಿದ್ದಾರೆ. ಹೌದು, ಇವರು 'ಥ್ಯಾಂಕ್‌ ಗಾಡ್' ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವ್‌ಗನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ ನಟಿಸಲಿದ್ದಾರೆಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಈ ಮುಂಬರುವ ಹಿಂದಿ ಚಿತ್ರದಲ್ಲಿ ಯೊಹಾನಿ ತನ್ನ ಹಿಟ್ ಹಾಡನ್ನು ಹಿಂದಿ ಆವೃತ್ತಿಯಲ್ಲಿ ಹಾಡಲಿದ್ದಾರೆ.
View this post on Instagram


A post shared by Yohani (@yohanimusic)


ಈ ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕರಾದ ಇಂದ್ರ ಕುಮಾರ್, "ಯೊಹಾನಿ ಹಾಡು ತುಂಬಾನೇ ಜನಪ್ರಿಯವಾಗಿದ್ದು ಮತ್ತು ‘ಥ್ಯಾಂಕ್ ಗಾಡ್’ ಚಿತ್ರದ ಭಾಗವಾಗಲು ಈ ಜನಪ್ರಿಯ ಹಾಡನ್ನು ನನಗೆ ನೀಡಿದ್ದಕ್ಕಾಗಿ ಭೂಷಣ್ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಆವೃತ್ತಿಗಾಗಿ ನಾವೆಲ್ಲರೂ ತುಂಬಾ ಉತ್ಸುಕರಾಗಿದ್ದೇವೆ ಮತ್ತು ಈ ಹಾಡಿಗೆ ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭಿಸುತ್ತೇವೆ. 'ಥ್ಯಾಂಕ್ ಗಾಡ್' ಚಿತ್ರವು ಹಾಸ್ಯಭರಿತ ಕಥೆ ಹೊಂದಿದ್ದು, ನಾನು ಮತ್ತು ನನ್ನ ಇಡೀ ತಂಡವು ಮುಂದಿನ ವರ್ಷ ಅದನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಲು ಎದುರು ನೋಡುತ್ತಿದ್ದೇವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Sri Lankan Beauties: ಕ್ಯಾಮೆರಾಗೆ ಪೋಸ್ ಕೊಟ್ಟ ಮನಿಕೆ ಮಗೆ ಹಿತೆ ಖ್ಯಾತಿಯ Yohani-Jacqueline Fernandez

ಇತ್ತೀಚೆಗೆ 'ಬಿಗ್‌ಬಾಸ್ 15' ಮತ್ತು 'ದಿ ಬಿಗ್ ಪಿಕ್ಚರ್'ನಲ್ಲಿ ಕಾಣಿಸಿಕೊಂಡಿದ್ದ ಯೊಹಾನಿ, ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿರುವುದರ ಬಗ್ಗೆ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ವಿಷಯವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

"ನನಗೆ ಭಾರತದಿಂದ ಅಪಾರ ಪ್ರೀತಿ ಮತ್ತು ಬೆಂಬಲ ದೊರೆತಿದೆ ಮತ್ತು ಚಿತ್ರದಲ್ಲಿ ನನ್ನ ಹಾಡನ್ನು ಹಿಂದಿ ಆವೃತ್ತಿಯಲ್ಲಿ ಪ್ರಸ್ತುತ ಪಡಿಸಿದ್ದಕ್ಕಾಗಿ ಭೂಷಣ್ ಕುಮಾರ್, ಇಂದ್ರ ಕುಮಾರ್ ಮತ್ತು ಇಡೀ ಚಿತ್ರ ತಂಡಕ್ಕೆ ನಾನು ತುಂಬಾ ಆಭಾರಿಯಾಗಿದ್ದೇನೆ. ನಾನು ಶೀಘ್ರದಲ್ಲಿಯೇ ಭಾರತಕ್ಕೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ" ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Song Manike Mage Hithe.. ಒರಿಜಿನಲ್ ಹಾಡು ನೋಡಿದ್ದೀರಾ: ಹಾಡಿದವರು ಯಾರು ಗೊತ್ತಾ..?

'ಥ್ಯಾಂಕ್‌ ಗಾಡ್' ಚಿತ್ರವನ್ನು ಭೂಷಣ್ ಕುಮಾರ್, ಕ್ರಿಷನ್ ಕುಮಾರ್, ಅಶೋಕ್ ಥಾಕೆರಿಯಾ, ಸುನೀರ್ ಖೇತರ್‌ಪಾಲ್, ದೀಪಕ್ ಮುಕುಟ್, ಆನಂದ್ ಪಂಡಿತ್ ಮತ್ತು ಮಾರ್ಕಂಡ್ ಅಧಿಕಾರಿ ನಿರ್ಮಿಸಿದ್ದಾರೆ ಮತ್ತು ಯಶ್ ಶಾ ಸಹ-ನಿರ್ಮಾಣ ಮಾಡಿದ್ದಾರೆ. ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್ ಅವರು ಈಗಾಗಲೇ ತಮ್ಮ ಸಿನಿಮಾದ ವಿಡಿಯೋ ತುಣುಕಿಗೆ ಈ ಹಾಡನ್ನು ಸೇರಿಸಿ ಪೋಸ್ಟ್​ ಮಾಡಿದ್ದು ಸುದ್ದಿಯಾಗಿತ್ತು. ಇಷ್ಟರ ಮಟ್ಟಿಗೆ ಈ ಹಾಡು ವೈರಲ್ ಆಗಿತ್ತು.
Published by:Anitha E
First published: