Salman Khan; ಮನೀಶ್ ಪೌಲ್ ಪ್ರಶ್ನೆಗೆ ತುಟಿ ಮೇಲೆ ಬೆರಳಿಟ್ಟ ಸಲ್ಮಾನ್ ಖಾನ್: ಆ ಪ್ರಶ್ನೆ ಆದ್ರೂ ಏನು ಗೊತ್ತಾ?

ಬಿಗ್ ಬಾಸ್ ವೇದಿಕೆಯಲ್ಲಿ ಮನೀಶ್ ಪೌಲ್ ಕೆಲ ಪ್ರಶ್ನೆಗಳನ್ನು ಸಲ್ಮಾನ್ ಖಾನ್ ಗೆ ಕೇಳಿದ್ದಾರೆ. ಆದ್ರೆ ಮನೀಶ್ ಕೇಳಿದ ಒಂದು ಪ್ರಶ್ನೆಗೆ ಉತ್ತರಿಸಲು ಹಿಂದೇಟು ಹಾಕಿದ ಸಲ್ಲು ಭಾಯ್, ತುಟಿಯ ಮೇಲೆ ಬೆರಳಿಟ್ಟು ನೋ ನೋ ಅನ್ನುವಂತೆ ತಲೆಯಾಡಿಸಿದ್ದಾರೆ.

ಸಲ್ಮಾನ್​ ಖಾನ್​.

ಸಲ್ಮಾನ್​ ಖಾನ್​.

  • Share this:
ಮುಂಬೈ: ವಯಸ್ಸು 55 ಆದ್ರೂ ಸಲ್ಮಾನ್ ಖಾನ್ (Salman Khan) ಬಾಲಿವುಡ್ ಬಹುಬೇಡಿಕೆಯ ನಟ. ಸಿನಿಮಾಗಳ ಜೊತೆಯಲ್ಲಿ ಕಿರುತೆರೆಯ ರಿಯಾಲಿಟಿ ಶೋ (Reality Show) ನಿರೂಪಣೆಯನ್ನು ಮಾಡುವ ಸಲ್ಮಾನ್ ಖಾನ್ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿರುತ್ತದೆ. ಸದ್ಯ ಬಿಗ್ ಬಾಸ್ ಸೀಸನ್-15ರ (Bigg Boss-15) ನಿರೂಪಣೆಯಲ್ಲಿರುವ ಸಲ್ಮಾನ್ ಖಾನ್ ಕುರಿತ ಹೊಸ ವಿಷಯವೊಂದು ಹೊರ ಬಿದ್ದಿದೆ. ಈ ವಾರದ ಸಂಚಿಕೆಗೆ ನಟ, ನಿರೂಪಕ ಮನೀಶ್ ಪೌಲ್ (Maniesh Paul) ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮನೀಶ್ ಪೌಲ್ ಜೊತೆ ಸಲ್ಮಾನ್ ಖಾನ್ ಕಾಮಿಡಿ ಮಾಡಿರುವ ವಿಡಿಯೋವನ್ನು ವಾಹಿನಿ ಇನ್ ಸ್ಟಗ್ರಾಂನಲ್ಲಿ ಶೇರ್ ಮಾಡಿಕೊಂಡಿದೆ. ಬಿಗ್ ಬಾಸ್ ವೇದಿಕೆಯಲ್ಲಿ ಮನೀಶ್ ಪೌಲ್ ಕೆಲ ಪ್ರಶ್ನೆಗಳನ್ನು ಸಲ್ಮಾನ್ ಖಾನ್ ಗೆ ಕೇಳಿದ್ದಾರೆ. ಆದ್ರೆ ಮನೀಶ್ ಕೇಳಿದ ಒಂದು ಪ್ರಶ್ನೆಗೆ ಉತ್ತರಿಸಲು ಹಿಂದೇಟು ಹಾಕಿದ ಸಲ್ಲು ಭಾಯ್, ತುಟಿಯ ಮೇಲೆ ಬೆರಳಿಟ್ಟು ನೋ ನೋ ಅನ್ನುವಂತೆ ತಲೆಯಾಡಿಸಿದ್ದಾರೆ.

ಮನೀಶ್ ಪೌಲ್ ಜೊತೆ ಸಲ್ಮಾನ್ ಹೆಜ್ಜೆ

ನೀವು ಯಾವ ನಟಿಯನ್ನ ಸುಖಾಸುಮ್ಮನೆ ಹೊಗಳಿದ್ದೀರಾ ಎಂದು ಮನೀಶ್ ಪೌಲ್ ಪ್ರಶ್ನೆ ಕೇಳುತ್ತಿದ್ದಂತೆ ಜೋರಾಗಿ ನಕ್ಕ ಸಲ್ಮಾನ್ ಖಾನ್, ಈ ಕೆಲಸವನ್ನು ಯಾವಾಗಲೂ ಮಾಡುತ್ತೇನೆ ಅಂತ ಹೇಳಿದ್ದಾರೆ. ಪ್ರಶ್ನೆಗಳ ಜೊತೆಯಲ್ಲಿ ಮನೀಶ್ ಪೌಲ್ ಜೊತೆ ಸಲ್ಮಾನ್ ಖಾನ್ ಹೆಜ್ಜೆ ಹಾಕಿದ್ದಾರೆ. ವಾಹಿನಿ ಮನೀಶ್ ಪೌಲ್ ಬಿಗ್ ಮನೆಯನ್ನು ಪ್ರವೇಶಿಸಿರುವ ಪ್ರೋಮೋ ವಿಡಿಯೋವನ್ನು ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:  ಸಲ್ಮಾನ್ ಖಾನ್​ ಸಿನಿ ಜೀವನವನ್ನೇ ಮುಗಿಸುತ್ತಾರಂತೆ ಈ ನಟ; ಮೋಸ್ಟ್ ವಾಂಟೆಡ್ ಭಾಯ್​ಗೆ ಕೆಆರ್​ಕೆ ಸವಾಲ್!

ಮನೀಶ್ ಪೌಲ್ ಕೇಳಿದ್ದು ಆ ಪ್ರಶ್ನೆ?

ಕಳೆದ ಎಲ್ಲ ಬಿಗ್ ಬಾಸ್ ಸೀಸನ್ ಗಳು ಸಲ್ಮಾನ್ ನಿರೂಪಣೆಯಲ್ಲಿ ಮೂಡಿ ಬಂದಿವೆ. ಒಂದು ಸಾರಿ ಫರ್ಹಾ ಖಾನ್ ಸಹ ಈ ಶೋ ನಿರೂಪಣೆ  ಮಾಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮನೀಶ್ ಪೌಲ್ ಪ್ರಶ್ನೆ ಕೇಳಿದ್ದಾರೆ. ಬಿಗ್ ಬಾಸ್ ಸೀಸನ್ 16ರಲ್ಲಿಯೂ ಸಲ್ಮಾನ್ ಖಾನ್ ಇರ್ತಾರಾ ಎಂದು ಪ್ರಶ್ನೆ ಕೇಳಿದರು. ಆದ್ರೆ ಈ ಪ್ರಶ್ನೆಗೆ ಉತ್ತರಿಸದ ಸಲ್ಮಾನ್ ಖಾನ್ ತುಟಿಯ ಮೇಲೆ ಬೆರಳು ಇರಿಸಿದ್ದಾರೆ. ಈ ಪ್ರಶ್ನೆಗೆ ಸಲ್ಮಾನ್ ಏನು ಉತ್ತರ ನೀಡಿದ್ದಾರೆ ಎಂಬುವುದು ಸಂಚಿಕೆ ಪ್ರಸಾರವಾದ ಮೇಲೆಯೇ ತಿಳಿಯಲಿದೆ.

ಮನೆಯ ಸದಸ್ಯರಿಗೆ ಖಾರವಾದ ಟಾಸ್ಕ್ ನೀಡಿದ ಪೌಲ್

ವಿಶೇಷ ಅತಿಥಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿರುವ ಮನೀಶ್ ಪೌಲ್, ಅಲ್ಲಿರುವ ಸ್ಪರ್ಧಿಗಳಿಗೆ ಖಾರವಾದ ಟಾಸ್ಕ್ ನೀಡಿದ್ದಾರೆ. ಮನೆಯಲ್ಲಿ ಒಂದು ಸೆಟಪ್ ಮಾಡಲಾಗಿದ್ದು, ಕೆಲ ವರ್ತನೆ (ಸಿಟ್ಟು, ಕೋಪ, ಹೊಟ್ಟೆಕಿಚ್ಚು ಇತ್ಯಾದಿ) ಬಗ್ಗೆ ಬರೆದು ಲೇಬಲ್ ಗೆ ಮೆಣಸಿನಕಾಯಿ ಜೊತೆ ನೇತು ಹಾಕಲಾಗಿದೆ. ಅಲ್ಲಿ ಬರೆದಿರುವ ವರ್ತನೆ ಯಾರಿಗೆ ಅನ್ವಯ ಆಗುತ್ತೆ ಅಂತ ಸ್ಪರ್ಧಿಗಳು ಹೇಳಿ ಸಹ ಸ್ಪರ್ಧಿಗೆ ನೀಡಬೇಕು. ಈ ಟಾಸ್ಕ್ ವೇಳೆ ಸ್ಪರ್ಧಿಗಳ ನಡುವೆ ಜಗಳ ಉಂಟಾಗಿದೆ.

ಇದನ್ನೂ ಓದಿ:  16ನೇ ವಯಸ್ಸಿನಲ್ಲಿ ಸಲ್ಮಾನ್ ಖಾನ್​​ರನ್ನ ವಿವಾಹವಾಗಲು ಪಾಕಿಸ್ತಾನದಿಂದ ಮುಂಬೈ ಬಂದಿದ್ದರು ಈ ನಟಿ!

ಟೈಗರ್ 3 (Tiger 3) ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಕತ್ರಿನಾ ಕೈಫ್ (Katrina Kaif)  ಜೊತೆಯಾಗಿದ್ದಾರೆ. ಈ ಹಿಂದಿನ ಎರಡು ಏಕ್ ಥಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಚಿತ್ರದಲ್ಲಿಯೂ ಕತ್ರಿನಾ ಕೈಫ್ ನಟಿಸಿದ್ದರು. ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ಒಟಿಟಿ ಹಾಗೂ ವಿದೇಶದಲ್ಲಿ ಚಿತ್ರಮಂದಿರದಲ್ಲಿ ರಿಲೀಸ್​ ಆದ ರಾಧೆ ಸಿನಿಮಾ ನೆಲಕಚ್ಚಿತ್ತು. ಕೇವಲ ಸಲ್ಮಾನ್​ ಖಾನ್​ ಅವರನ್ನು ನೋಡಲು ಬಯಸುವವರಿಗೆ ಮಾತ್ರ ಈ ಸಿನಿಮಾ ಎಂಬಂತೆ ಬಿಂಬಿತವಾಗಿತ್ತು
Published by:Mahmadrafik K
First published: