HOME » NEWS » Trend » MANDYA MAN WON LOTTERY TICKET WORTH ONE CRORE AT KERALA WHILE MEETING FACEBOOK FRIEND STG LG

ಫೇಸ್​ಬುಕ್​​​ ಫ್ರೆಂಡ್​​​ ಭೇಟಿಯಾಗಲು ಹೋಗಿ 1 ಕೋಟಿ ರೂ. ಮೌಲ್ಯದ ಕೇರಳ ಲಾಟರಿ ಗೆದ್ದ ಮಂಡ್ಯದ ಯುವಕ..!

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಮೂಲದ ಸೋಹನ್ ಬಲರಾಮ್ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಲಾಟರಿ ಗೆದ್ದಿದ್ದಾರೆ. ಸೋಹನ್ ಬಲರಾಮ್ ಶನಿವಾರ ಪ್ರಭಾಕರನ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ, ಸೋಹನ್ ಪ್ರಭಾಕರನ್ ಕೆಲಸ ಮಾಡುವ ಪುಥನಾಥಣಿಯ ಅಂಗಡಿಯಲ್ಲಿ 100 ರೂ. ನೀಡಿ ಲಾಟರಿ ಟಿಕೆಟ್ ತೆಗೆದುಕೊಂಡಿದ್ದಾನೆ.

news18-kannada
Updated:February 8, 2021, 2:35 PM IST
ಫೇಸ್​ಬುಕ್​​​ ಫ್ರೆಂಡ್​​​ ಭೇಟಿಯಾಗಲು ಹೋಗಿ 1 ಕೋಟಿ ರೂ. ಮೌಲ್ಯದ ಕೇರಳ ಲಾಟರಿ ಗೆದ್ದ ಮಂಡ್ಯದ ಯುವಕ..!
ಸಾಂದರ್ಭಿಕ ಚಿತ್ರ
  • Share this:
ಸೋಷಿಯಲ್ ಮೀಡಿಯಾದಲ್ಲಿ ದುರಂತಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಮುಖ ಪರಿಚಯವೇ ಇಲ್ಲದ ಆನ್​ಲೈನ್​​ ಫ್ರೆಂಡ್​​​ನ್ನು ಭೇಟಿ ಮಾಡಲು ಹೋಗಿ ತೊಂದರೆಗೆ ಸಿಲುಕಿರುವ ಹಲವರ ಘಟನೆಗಳನ್ನು ನೀವು ಆಗಾಗ ಕೇಳಿರುತ್ತೀರಾ.. ಆದರೆ, ಕೇರಳದ ಮಲಪ್ಪುರಂನಲ್ಲಿ ವಿಭಿನ್ನ ಘಟನೆಯೊಂದು ನಡೆದಿದೆ. ಫೇಸ್​ಬುಕ್​​ ಫ್ರೆಂಡ್ ಅನ್ನು ಭೇಟಿ ಮಾಡಲು ಕರ್ನಾಟಕದಿಂದ ಕೇರಳಕ್ಕೆ ಹೋದ ವ್ಯಕ್ತಿ 1 ಕೋಟಿ ರೂ. ಗೆದ್ದಿದ್ದಾನೆ.

ಹೌದು, ಫೇಸ್ಬುಕ್ ಮೂಲಕ ಭೇಟಿಯಾದ ಸ್ನೇಹಿತನನ್ನು ಭೇಟಿಯಾಗಲು ಕುಟುಂಬದೊಂದಿಗೆ ಪಾರ್ಟಿಗೆ ಹೋದ ಕರ್ನಾಟಕದ ಸ್ಥಳೀಯ ವ್ಯಕ್ತಿ 1 ಕೋಟಿ ರೂ. ಗೆದ್ದಿದ್ದಾನೆ. ಇದು ಹೇಗೆ ಸಾಧ್ಯ ಅಂತೀರಾ..? ಕೇರಳ ಭಾಗ್ಯಮಿತ್ರ ಲಾಟರಿ ಮೂಲಕ ಈ ಬಹುಮಾನ ಗೆದ್ದಿದ್ದಾನೆ. ಪುಥನಾಥಿಯಲ್ಲಿನ ಭಾಗ್ಯಧರ ಲಾಟರಿ ಏಜೆನ್ಸಿಯ ಉದ್ಯೋಗಿ ಪರವಣ್ಣೂರ್ ಕೈಪಾಲಕ್ಕಲ್ ಪ್ರಭಾಕರನ್ ಅವರ ಮನೆಯಲ್ಲಿ ಅದೃಷ್ಟ ದೇವತೆ ಸೋಹನ್ ಬಲರಾಮ್​​ನ ಕೈಹಿಡಿದಿದ್ದಾರೆ.

ವಧುವಿನ ಫೋಟೋ ತೆಗೆಯುತ್ತಿದ್ದ ಫೋಟೋಗ್ರಾಫರ್​​ಗೆ ಬಾರಿಸಿದ ವರ; ಶಾಕ್ ಆದ ಹುಡುಗಿ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಮೂಲದ ಸೋಹನ್ ಬಲರಾಮ್ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಲಾಟರಿ ಗೆದ್ದಿದ್ದಾರೆ. ಸೋಹನ್ ಬಲರಾಮ್ ಶನಿವಾರ ಪ್ರಭಾಕರನ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ, ಸೋಹನ್ ಪ್ರಭಾಕರನ್ ಕೆಲಸ ಮಾಡುವ ಪುಥನಾಥಣಿಯ ಅಂಗಡಿಯಲ್ಲಿ 100 ರೂ. ನೀಡಿ ಲಾಟರಿ ಟಿಕೆಟ್ ತೆಗೆದುಕೊಂಡಿದ್ದಾನೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಿದ್ದು, ಬಹುಮಾನ ಗೆದ್ದಿದ್ದಾರೆ. ಆದರೆ, ಈ ವೇಳೆಗಾಗಲೇ ಕುಟುಂಬವು ವಾಪಸ್ ಕೇರಳದಿಂದ ರಾಜ್ಯದತ್ತ ಹೊರಟಿದ್ದರು.

5 ಕೋಟಿ ರೂ.ಗಳ ಪ್ರಥಮ ಬಹುಮಾನ ಪಡೆದ ಐದು ಜನರಲ್ಲಿ ಸೋಹನ್ ಕೂಡ ಒಬ್ಬರಾಗಿದ್ದರು. ಆನ್​ಲೈನ್​​ನಲ್ಲಿ ಫಲಿತಾಂಶಗಳು ಬಂದ ಕೂಡಲೇ ಫೇಸ್ಬುಕ್ ಗೆಳೆಯ ಪ್ರಭಾಕರನ್ ಸೋಹನ್​ಗೆ ದೂರವಾಣಿಯಲ್ಲಿ ಈ ವಿಚಾರ ತಿಳಿಸಿದ್ದಾನೆ. ಈ ವೇಳೆ ರಾಜ್ಯದತ್ತ ಪ್ರಯಾಣ ಬೆಳೆಸಿದ್ದ ಅವರು ಮತ್ತೆ ಕೇರಳದ ಪುಥನಾಥನಿಗೆ ಮರಳಿದರು. ನಂತರ ಲಾಟರಿ ಏಜೆನ್ಸಿಯ ಮಾಲೀಕರಾದ ಮಣಿಕಂದನ್ ಅವರು ಸೋಹನ್ ಮತ್ತು ಅವರ ಕುಟುಂಬವನ್ನು ಸಿಹಿತಿಂಡಿಗಳೊಂದಿಗೆ ಸ್ವಾಗತಿಸಿದರು. ಲಾಟರಿ ಇಲಾಖೆಯು 48 ಲಕ್ಷ ಲಾಟರಿ ಟಿಕೆಟ್ಗಳನ್ನು ಪ್ರಿಂಟ್ ಮಾಡಿತ್ತು ಎಂದು ತಿಳಿದುಬಂದಿದ್ದು, ಆದರೆ, ಅದೃಷ್ಟ ಸೋಹನ್ ಪಾಲಿಗೆ ಒಲಿದಿದೆ.

ಹಲವು ವಿಜೇತರಿಗೆ ಪ್ರಥಮ ಬಹುಮಾನವನ್ನು ನೀಡುವ ಕೇರಳ ರಾಜ್ಯದ ಏಕೈಕ ಲಾಟರಿ ಭಾಗ್ಯಮಿತ್ರ. ಭಾಗ್ಯಮಿತ್ರ ಲಾಟರಿಯಲ್ಲಿ ಐದು ಜನರಿಗೆ ತಲಾ 1 ಕೋಟಿ ರೂ.ಗಳ ಬಂಪರ್ ಬಹುಮಾನ ನೀಡಲಾಗುತ್ತದೆ. ಪ್ರತಿ ತಿಂಗಳ ಮೊದಲ ಭಾನುವಾರ ಈ ಬಹುಮಾನವನ್ನು ಘೋಷಣೆ ಮಾಡಲಾಗುತ್ತದೆ. ಫಲಿತಾಂಶಗಳು ಲಾಟರಿ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ http://keralalottery.com/ ನಲ್ಲಿ ಲಭ್ಯವಿರುತ್ತವೆ. ಈ ಟಿಕೆಟ್ನ ದರ ಶೇ. 28 ರಷ್ಟು ಜಿಎಸ್ಟಿ ಸೇರಿ 100 ರೂ. ಎಂದು ತಿಳಿದುಬಂದಿದೆ.
ಇನ್ನು, ಎರಡನೇ ಬಹುಮಾನ 10 ಲಕ್ಷ ರೂ. ಆಗಿದ್ದು, ಮೂರನೇ ಬಹುಮಾನ 2 ಲಕ್ಷ ರೂ. ಆಗಿದ್ದು, ಇದನ್ನು 8 ಜನರಿಗೆ ನೀಡಲಾಗುತ್ತದೆ. ಅಲ್ಲದೆ, 5000, 2000, 1000, 500 ಮತ್ತು 300 ರೂ. ನಂತಹ ಅನೇಕ ಬಹುಮಾನಗಳನ್ನೂ ಈ ಲಾಟರಿ ಟಿಕೆಟ್ ಕೊಂಡ ಅದೃಷ್ಟಶಾಲಿಗಳಿಗೆ ನೀಡಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
Published by: Latha CG
First published: February 8, 2021, 2:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories