Resign Letter: ಟಾಯ್ಲೆಟ್​ ಪೇಪರ್​ನಲ್ಲಿ ರಾಜೀನಾಮೆ ಬರೆದುಕೊಟ್ಟ ಭೂಪ: ಫೋಟೋ ನೋಡಿ ಬಿದ್ದು ಬಿದ್ದು ನಗ್ತೀರಾ....

Viral Photo: ಲೇವಿಸ್ ಅವರ ವಿಶಿಷ್ಟ ರಾಜೀನಾಮೆ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ರಾಜೀನಾಮೆ ಬರೆದದ್ದು ಬಿಳಿಯ ಹಾಳೆಯ ಮೇಲೆ ಅಲ್ಲ, ಬದಲಾಗಿ ರಾಜೀನಾಮೆ ಪತ್ರವನ್ನು ಟಾಯ್ಲೆಟ್ ಪೇಪರ್ ನಲ್ಲಿ ಬರೆದಿದ್ದಾನೆ.

ವೈರಲ್​ ಆದ ರಾಜೀನಾಮೆ ಪತ್ರ

ವೈರಲ್​ ಆದ ರಾಜೀನಾಮೆ ಪತ್ರ

  • Share this:

ಸಾಮಾನ್ಯವಾಗಿ ನಾವೆಲ್ಲಾ ಒಂದು ಉದ್ಯೋಗ(Job)ವನ್ನು ಬದಲಾಯಿಸುವಾಗ ನಮ್ಮ ಮೇಲಾಧಿಕಾರಿಗಳಿಗೆ ನಮ್ಮ ರಾಜೀನಾಮೆ ಪತ್ರ(Resignation Letter)ವನ್ನು ಕೈಯಿಂದ ಒಂದು ಬಿಳಿ ಹಾಳೆ(White Paper)ಯ ಮೇಲೆ ಬರೆದು ಕೊಡುತ್ತೇವೆ ಅಥವಾ ಅದನ್ನು ಬರೆದು ನಮ್ಮ ಮೇಲ್(Mail) ಮೂಲಕ ಅವರಿಗೆ ಕಳುಹಿಸುತ್ತೇವೆ. ನಂತರ ಎಲ್ಲಾ ಔಪಚಾರಿಕ ಕೆಲಸಗಳು ಮುಗಿದ ಮೇಲೆಯೇ ಬೇರೆ ಕಂಪೆನಿ(Company)ಗೆ ನಾವು ಹೋಗಿ ಸೇರಿಕೊಳ್ಳುತ್ತೇವೆ. ಇದೆಲ್ಲಾ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ, ಇದರಲ್ಲೇನಿದೆ ಹೊಸ ವಿಚಾರ ಅಂತೀರಾ? ಇತ್ತೀಚಿನ ದಿನಗಳಲ್ಲಿ ಕೆಲವರು ಈ ಉದ್ಯೋಗಗಳಿಂದ ಬೇಸತ್ತು ತಮ್ಮ ಮೇಲಾಧಿಕಾರಿಗಳ ಮೇಲೆ ಇರುವಂತಹ ಸಿಟ್ಟನ್ನು ಹೂರ ಹಾಕಲು ತಮ್ಮ ರಾಜೀನಾಮೆ ಪತ್ರಗಳನ್ನು ತುಂಬಾನೇ ವಿಚಿತ್ರವಾಗಿ ಬರೆದು ಕೊಡುತ್ತಿದ್ದಾರೆ ಎಂದು ಹೇಳಬಹುದು.ಇಲ್ಲೊಬ್ಬ ಉದ್ಯೋಗಿ ಲೇವಿಸ್(Levis) ಎಂಬ ವ್ಯಕ್ತಿಯು ಇತ್ತೀಚೆಗೆ ತನ್ನ ಕೆಲಸಕ್ಕೆ ಬಹುಶಃ ಅತ್ಯಂತ ವಿಶಿಷ್ಟ ರೀತಿಯಲ್ಲಿ ರಾಜೀನಾಮೆ ನೀಡಿದ್ದಾನೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರು ತಮ್ಮ ರಾಜೀನಾಮೆ ಪತ್ರವನ್ನು ಹೆಡ್​ಲೈನ್​ ರೂಪದಲ್ಲಿ ಬರೆದಿದ್ದಾರೆ ಮತ್ತು ಯಾವುದರ ಮೇಲೆ ಬರೆದು ಕೊಟ್ಟಿದ್ದಾರೆ ನೀವೇ ನೋಡಿ.


ಟಾಯ್ಲೆಟ್​ ಪೇಪರ್​ನಲ್ಲಿ ರಿಸೈನ್​ ಲೆಟರ್​!

ಲೇವಿಸ್ ಅವರ ವಿಶಿಷ್ಟ ರಾಜೀನಾಮೆ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಹೇಗೆ ಅಂತೀರಾ? ಬನ್ನಿ ಹಾಗಾದರೆ ನೋಡೋಣ ಲೇವಿಸ್ ಏನು ಮಾಡಿದ್ದಾರೆ ಅಂತ. ಇದು ಕೇವಲ ವಿಷಯವಲ್ಲ ಆದರೆ ರಾಜೀನಾಮೆ ಬರೆದದ್ದು ಬಿಳಿಯ ಹಾಳೆಯ ಮೇಲೆ ಅಲ್ಲ, ಬದಲಾಗಿ ರಾಜೀನಾಮೆ ಪತ್ರವನ್ನು ಟಾಯ್ಲೆಟ್ ಪೇಪರ್ ನಲ್ಲಿ ಬರೆದಿದ್ದಾನೆ.



ರಿಸೈನ್​ ಲೆಟರ್​​ನಲ್ಲಿ ಕಾರ್ಟೂನ್​  ಬಿಡಿಸಿದ ವ್ಯಕ್ತಿ!

ಲೇವಿಸ್ ಈ ಪತ್ರವನ್ನು ಆನ್‌ಲೈನ್ ಸೈಟ್ ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ ತಕ್ಷಣ, ಜನರು ಅದಕ್ಕೆ ಪ್ರತಿಕ್ರಿಯಿಸಲು ಪ್ರಾರಂಭಿಸಿದರು. ಬೇಗನೆ ವೈರಲ್ ಆದ ಆ ಪೋಸ್ಟ್ ನಲ್ಲಿ, ಲೇವಿಸ್ ಹಂಚಿಕೊಂಡಿರುವ ರಾಜೀನಾಮೆ ಟಿಪ್ಪಣಿ ಎಲ್ಲರನ್ನೂ ನಗಿಸುತ್ತಿದೆ. ಒಂದು ಮಾಧ್ಯಮದ ವರದಿಯ ಪ್ರಕಾರ, ಲೇವಿಸ್ ರಾಜೀನಾಮೆಯನ್ನು ಟಾಯ್ಲೆಟ್ ಪೇಪರ್ ನಲ್ಲಿ ಬರೆದ ಟಿಪ್ಪಣಿಯಾಗಿದೆ. "ಯೋ, ನಾನು 25 ರಂದು ಹೋಗುತ್ತೇನೆ" ಎಂದು ಬರೆದಿದ್ದಾರೆ. ಅಷ್ಟೇ ಅಲ್ಲ, ಲೇವಿಸ್ ತಮ್ಮ ರಾಜೀನಾಮೆ ಪತ್ರದ ಬಗ್ಗೆ ಕಾರ್ಟೂನ್ ಸಹ ಮಾಡಿದ್ದಾರೆ. ಅವರು ಕಾರ್ಟೂನ್ ಅನ್ನು ತಮ್ಮ ರೂಪದಲ್ಲಿ ಪ್ರಸ್ತುತ ಪಡಿಸಿದ್ದಾರೆ.

ಇದನ್ನು ಓದಿ : ‘ಇದು ನಿಮ್ಮ ನಷ್ಟ‘ ಎಂದು‌ ಮಹಿಳೆ ಬರೆದ ರಾಜೀನಾಮೆ ಪತ್ರ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಲೆಟರ್​!

“ಲೇವಿಸ್ ಅವರು ತಮ್ಮ ರಾಜೀನಾಮೆಯನ್ನು ಹಸ್ತಾಂತರಿಸುತ್ತಿದ್ದಾರೆ” ಎಂದು ಪೋಸ್ಟ್ ಗೆ ಶೀರ್ಷಿಕೆ ಬರೆದಿದ್ದಾರೆ. ಈ ವಿಭಿನ್ನವಾಗಿರುವ ಪೋಸ್ಟ್ ನೋಡಿ ನೆಟ್ಟಿಗರು ತುಂಬಾನೇ ಪ್ರತಿಕ್ರಿಯಿಸಿದ್ದಾರೆ ಮತ್ತು ಆಘಾತಕ್ಕೊಳಗಾಗಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಆದಾಗ್ಯೂ, ಈಗಾಗಲೇ ಸುಮಾರು 70,000 ಜನರು ಈ ಪೋಸ್ಟ್ ಅನ್ನು ಇಷ್ಟ ಪಟ್ಟಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಅದರ ಬಗ್ಗೆ ಪ್ರತಿಕ್ರಿಯಿಸುತ್ತಿದ್ದರೆ, ಒಬ್ಬ ವ್ಯಕ್ತಿಯು ಲೇವಿಸ್ ಗೆ ತನ್ನ ಸಹಿಯ ಅಗತ್ಯವಿದೆ ಎಂದು ನೆನಪಿಸಿದನು.

ಇದನ್ನು ಓದಿ : ಇಲ್ಲಿ ಕಳ್ಳರು ಸಿಕ್ಕಿಬಿದ್ದರೆ ಅವರ ಕಥೆ ಮುಗೀತು..,ಕಂಬಕ್ಕೆ ಕಟ್ಟಿ, ಜೋಕರ್​ ವೇಷ ಹಾಕಿ ಎಸ್ಕೇಪ್​!

ಇನ್ನೊಬ್ಬ ಬಳಕೆದಾರರು ರಾಜೀನಾಮೆ ನೀಡುವ ವ್ಯಕ್ತಿಯ ಗುರುತನ್ನು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಲೇವಿಸ್ ಅವರು ಆರಾಮದಾಯಕ ಕೆಲಸ ಮಾಡುತ್ತಿರುವುದರಿಂದ ತಮ್ಮ ಬಾಸ್ ತಮ್ಮ ರಾಜೀನಾಮೆಯನ್ನು ಇಷ್ಟ ಪಟ್ಟಿದ್ದಾರೆ ಎಂದು ಜನರಿಗೆ ಹೇಳಿದರು. ಇತ್ತೀಚೆಗೆ ರಿಸೈನ್​ ಕೊಡುವ ಶೈಲಿಯೇ ಬದಲಾಗಿ ಹೋಗುತ್ತಿದೆ. ಚಿತ್ರ-ವಿಚಿತ್ರವಾಗಿ ರಿಸೈನ್​ ಕೊಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿವೆ.

Published by:Vasudeva M
First published: