Resignation Letter: ಕೆಲಸದಲ್ಲಿ ಮಜಾ ಬರ್ತಿಲ್ಲಾ ಅಂತ ರಿಸೈನ್ ಮಾಡಿದ ವ್ಯಕ್ತಿ! ವೈರಲ್ ಆಯ್ತು ರಾಜೀನಾಮೆ ಪತ್ರ

ಆರ್‌ಪಿಜಿ ಎಂಟರ್ಪ್ರೈಸಸ್ ನ ಅಧ್ಯಕ್ಷರಾದ ಹರ್ಷ್ ಗೋಯೆಂಕಾ ಅವರು ತಮ್ಮ ಲಿಂಕ್ಡ್ಇನ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಇದು ನೆಟ್ಟಿಗರನ್ನು ತುಂಬಾನೇ ಗೊಂದಲಕ್ಕೀಡು ಮಾಡಿದೆ ಎಂದು ಹೇಳಬಹುದು.

ವೈರಲ್ ಆದ ರಾಜೀನಾಮೆ ಪತ್ರ

ವೈರಲ್ ಆದ ರಾಜೀನಾಮೆ ಪತ್ರ

  • Share this:
ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಇತ್ತೀಚೆಗೆ ಈ ರಾಜೀನಾಮೆಗೆ (Resignation) ಮತ್ತು ಕೆಲಸಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ವಿಚಿತ್ರವಾದ ಮತ್ತು ತಮಾಷೆ ಎನಿಸುವ ಪೋಸ್ಟ್ ಗಳು ಹರಿದಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮೊನ್ನೆ ಹೀಗೆ ಉದ್ಯೋಗಿಯೊಬ್ಬ (Employee) ತಾನು ಮತ್ತೊಂದು ಕೆಲಸದ ಸಂದರ್ಶನಕ್ಕೆ ಹೋಗಲು ಮುಕ್ತವಾಗಿ ಯಾವುದೇ ಹುಸಿ ಕಾರಣಗಳನ್ನು ಹೇಳದೇ ನೇರವಾಗಿ ‘ನಾನು ಇನ್ನೊಂದು ಕೆಲಸದ ಸಂದರ್ಶನಕ್ಕೆ ಹೋಗಬೇಕು, ಆದ್ದರಿಂದ ಒಂದು ದಿನದ ರಜೆಯನ್ನು ನನಗೆ ಕೊಡಿ’ ಎಂದು ಕೇಳಿ ಬರೆದಂತಹ ರಜೆಯ ಅರ್ಜಿಯ ಫೋಟೋವನ್ನು (Photo) ಸಾಮಾಜಿಕ ಮಾಧ್ಯಮದಲ್ಲಿ ನಾವು ನೋಡಿದ್ದೆವು. ಇದರೊಟ್ಟಿಗೆ ಇನ್ನೊಬ್ಬರು ಒಂದು ಚಿಕ್ಕದಾದ ರಾಜೀನಾಮೆ ಪತ್ರದಲ್ಲಿ ತುಂಬಾನೇ ಸರಳವಾಗಿ ‘ಬೈ ಬೈ ಸಾರ್’ ಅಂತ ಬರೆದು ಕೊಂಡಿರುವ ಪತ್ರದ ಪೋಸ್ಟ್ ಅನ್ನು ಸಹ ಹಂಚಿಕೊಂಡಿದ್ದರು.

ನೀವು ಏನೇ ಹೇಳಿ ಕಂಪನಿಯಲ್ಲಿರುವ ಈ ಬಾಸ್ ಗಳಿಗೆ ರಾಜೀನಾಮೆ ಪತ್ರವನ್ನು ಬರೆಯುವುದು ಅಷ್ಟೊಂದು ಸುಲಭದ ಕೆಲಸವಲ್ಲ ಬಿಡಿ, ಇದು ಒಂದು ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅನೇಕ ಜನರು ತಮ್ಮ ಕೆಲಸದ ಅವಧಿಯಲ್ಲಿ ಕಂಪನಿಯಲ್ಲಿ ಕಲಿತಂತಹ ಎಷ್ಟೋ ವಿಚಾರಗಳಿಗೆ ಮತ್ತು ನೀಡಿದ ಅವಕಾಶಗಳಿಗೆ ತಮ್ಮ ಬಾಸ್ ಗೆ ಒಂದು ಧನ್ಯವಾದ ಹೇಳಿ ಕಂಪನಿಯಿಂದ ಹೊರಡಬೇಕೆಂದು ಮನಸ್ಸು ಮಾಡಿ ರಾಜೀನಾಮೆ ಪತ್ರವನ್ನು ಸ್ವಲ್ಪ ದೂಡ್ಡದಾಗಿಯೇ ಬರೆಯುತ್ತಾರೆ. ಇತರರು ಅಗಲಿಕೆಯ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮವಾಗಿಸಲು ಮುಂದೆಯೂ ಇದೇ ರೀತಿಯಲ್ಲಿ ಸಂಪರ್ಕದಲ್ಲಿರುವ ಭರವಸೆಯನ್ನು ನೀಡುತ್ತಾರೆ.

ನಗುವಿನ ಜೊತೆಗೆ ಆಶ್ಚರ್ಯ ಉಂಟುಮಾಡುವ ರಾಜೀನಾಮೆ ಪತ್ರ
ಅದೇನೇ ಇದ್ದರೂ, ಸ್ವಲ್ಪ ಜನರಿಗೆ ಇದ್ಯಾವುದು ಇಷ್ಟವಾಗುವುದಿಲ್ಲ, ಅವರು ನೇರವಾಗಿ ವಿಷಯಕ್ಕೆ ಬರಲು ಮತ್ತು ಅದನ್ನು ಸ್ಪಷ್ಟವಾಗಿ ಇನ್ನೊಬ್ಬರಿಗೆ ಅರ್ಥವಾಗುವಂತೆ ಹೇಳುವುದನ್ನು ರೂಢಿಸಿಕೊಂಡಿರುತ್ತಾರೆ ಮತ್ತು ಅದು ಅವರಿಗೆ ಇಷ್ಟವಾಗುತ್ತದೆ ಎಂದು ಹೇಳಬಹುದು. ಇಲ್ಲೊಂದು ರಾಜೀನಾಮೆ ಪತ್ರವಿದೆ ನೋಡಿ, ಇದನ್ನು ನೋಡಿದರೆ ನಿಮಗೆ ತುಂಬಾನೇ ನಗು ಬರುತ್ತದೆ ಮತ್ತು ಅದರ ಜೊತೆಗೆ ಆಶ್ಚರ್ಯ ಸಹ ಆಗುತ್ತದೆ. ಇದು ತುಂಬಾನೇ ಅಪರೂಪದ ಘಟನೆಯಾಗಿದ್ದರೂ, ಇದು ಖಂಡಿತವಾಗಿಯೂ ಹೊಸ ಪ್ರವೃತ್ತಿಯಾಗುತ್ತಿದೆ ಎಂದು ಹೇಳಬಹುದು.

ಈ ರಾಜೀನಾಮೆ ಪಾತ್ರದಲ್ಲಿ ಅಂತದ್ದೇನಿದೆ?
ಇತ್ತೀಚೆಗೆ, ಆರ್‌ಪಿಜಿ ಎಂಟರ್ಪ್ರೈಸಸ್ ನ ಅಧ್ಯಕ್ಷರಾದ ಹರ್ಷ್ ಗೋಯೆಂಕಾ ಅವರು ತಮ್ಮ ಲಿಂಕ್ಡ್ಇನ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಇದು ನೆಟ್ಟಿಗರನ್ನು ತುಂಬಾನೇ ಗೊಂದಲಕ್ಕೀಡು ಮಾಡಿದೆ ಎಂದು ಹೇಳಬಹುದು. ಈ ಪೋಸ್ಟ್ ನಲ್ಲಿ ರಾಜೇಶ್ ಎಂಬ ಉದ್ಯೋಗಿ ಬರೆದ ರಾಜೀನಾಮೆ ಪತ್ರವಿತ್ತು. "ಈ ಪತ್ರವು ಚಿಕ್ಕದಾಗಿದೆ ಆದರೆ ಇದರಲ್ಲಿರುವ ವಿಷಯವು ತುಂಬಾನೇ ಗಂಭೀರವಾಗಿದ್ದು, ಈ ಗಂಭೀರ ಸಮಸ್ಯೆಯನ್ನು ನಾವು ಪರಿಹರಿಸಬೇಕಾಗಿದೆ" ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ.

ಇದನ್ನೂ ಓದಿ: New Car: ಬರೀ 10 ರೂಪಾಯಿ ನಾಣ್ಯಗಳಿಂದ ಲಕ್ಷ ರೂಪಾಯಿ ಸೇರಿಸಿ ಕಾರು ಖರೀದಿ ಮಾಡಿದ ವ್ಯಕ್ತಿ!ಈ ಪತ್ರದ ವಿಶೇಷತೆ ಏನು ಎಂದು ಆಶ್ಚರ್ಯ ಪಡುತ್ತಿದ್ದೀರಾ? ಸರಿ, ತನ್ನ ಬಾಸ್ ಅನ್ನು ಹೊಗಳಲು ದೀರ್ಘ ವಾಕ್ಯಗಳನ್ನು ಸೇರಿಸುವ ಬದಲು, ರಾಜೇಶ್ ತನ್ನ ಬಾಸ್ ಗೆ "ಅತ್ಯಂತ ಚಿಕ್ಕ ವಿದಾಯ" ಎಂದು ಕರೆಯಬಹುದಾದ ಒಂದು ವಿಷಯವನ್ನು ಬರೆದಿದ್ದಾರೆ ನೋಡಿ. ಲಿಂಕ್ಡ್ಇನ್ ನಲ್ಲಿ ಪೋಸ್ಟ್ ಮಾಡಲಾದ ಫೋಟೋವು ಜೂನ್, 2022 ರ ರಾಜೀನಾಮೆ ಪತ್ರವನ್ನು ತೋರಿಸುತ್ತದೆ. ಪತ್ರದಲ್ಲಿ "ಪ್ರೀತಿಯ ಹರ್ಷ್, ನಾನು ರಾಜೀನಾಮೆ ನೀಡುತ್ತಿದ್ದೇನೆ, ಏಕೋ ಗೊತ್ತಿಲ್ಲ ಈ ಕೆಲಸದಲ್ಲಿ ಮಜಾ ಬರುತ್ತಿಲ್ಲ" ಅಂತ ಬರೆದಿತ್ತು.

ವೈರಲ್ ಫೋಟೋಗೆ ನೆಟ್ಟಿಗರ ಕಾಮೆಂಟ್
ಈ ಚಿಕ್ಕ ರಾಜೀನಾಮೆ ಪತ್ರವು ಲಿಂಕ್ಡ್ಇನ್ ಪೋಸ್ಟ್ ನ ಕಾಮೆಂಟ್ಸ್ ವಿಭಾಗದಲ್ಲಿ ಅವ್ಯವಸ್ಥೆಗೆ ಕಾರಣವಾಗಿದೆ. ಕೆಲವು ವಿಮರ್ಶಕರು ಪತ್ರದ ಅನೌಪಚಾರಿಕತೆಯನ್ನು ಪ್ರಶ್ನಿಸುತ್ತಿದ್ದರೆ, ಇತರರು ಅದನ್ನು ಸಕಾರಾತ್ಮಕ ರೀತಿಯಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಲಿಂಕ್ಡ್ಇನ್ ಬಳಕೆದಾರರೊಬ್ಬರು ಇದನ್ನು ನೋಡಿ "ಇದು ಬಹುತೇಕ ಪ್ರತಿಯೊಬ್ಬ ಉದ್ಯೋಗಿಯ ಭಾವನೆಯಾಗಿದೆ, ಆದರೆ ಎಲ್ಲರೂ ಇದನ್ನು ಹೀಗೆ ನೇರವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅತ್ಯಂತ ಪ್ರಾಮಾಣಿಕ ರಾಜೀನಾಮೆ ಪತ್ರ ಇದು" ಅಂತ ಬರೆದಿದ್ದಾರೆ.

ಇದನ್ನೂ ಓದಿ: Beard Boys: ಗಡ್ಡ ಬಿಟ್ಟ ಗಂಡಸಿಗೆ ಡಿಮ್ಯಾಂಡಿಲ್ಲ ಡಿಮ್ಯಾಂಡು! ಇಲ್ಲಿ ಗಡ್ಡಪ್ಪಂದಿರ ಮದ್ವೆಗೆ ಹೆಣ್ಣೇ ಕೊಡೋದಿಲ್ಲ!

"ಕೆಲಸದಲ್ಲಿ ಮಜಾ ಬರುತ್ತಿಲ್ಲ- ಇದು ಫಲಿತಾಂಶವಾಗಿದೆ. ಇದಕ್ಕೇನು ಮೂಲ ಕಾರಣ ಎನ್ನುವುದನ್ನು ಗುರುತಿಸಬೇಕಾಗಿದೆ" ಎಂದು ಇನ್ನೊಬ್ಬರು ಬರೆದಿದ್ದಾರೆ.
Published by:Ashwini Prabhu
First published: