ಕೊನೆಗೊಂಡ 66 ವರ್ಷಗಳ ಹಠ: ಗಿನ್ನೆಸ್ ದಾಖಲೆ ಬರೆದ ಉಗುರಿಗೆ ಕತ್ತರಿ

news18
Updated:July 31, 2018, 5:39 PM IST
ಕೊನೆಗೊಂಡ 66 ವರ್ಷಗಳ ಹಠ: ಗಿನ್ನೆಸ್ ದಾಖಲೆ ಬರೆದ ಉಗುರಿಗೆ ಕತ್ತರಿ
news18
Updated: July 31, 2018, 5:39 PM IST
-ನ್ಯೂಸ್ 18 ಕನ್ನಡ

ನೀನು ನನ್ನ ಉಗುರು ತುದಿಗೆ ಸಮ ಎಂಬ ಡೈಲಾಗ್​​ ಹೊಡೆಯುವುದನ್ನು ಕೇಳಿರುತ್ತೀರಿ. ಸಾಮಾನ್ಯವಾಗಿ ಉಗುರನ್ನು ನಿಷ್ಪ್ರಯೋಜಕ  ಎನ್ನಲಾಗುತ್ತದೆ. ಆದರೆ ಅದೇ ಉಗುರನ್ನು ಬೆಳೆಸಿ ಗಿನ್ನೆಸ್ ವರ್ಲ್ಡ್​ ರೆಕಾರ್ಡ್​ ಮಾಡಿರುವ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ?

ವಿಶ್ವದ ಅತಿ ಉದ್ದನೆಯ ಉಗುರು ಹೊಂದಿರುವ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದು ಭಾರತೀಯ ಮೂಲದ ಶ್ರೀಧರ್ ಚಿಲ್ಲಾಲ್. ಬರೋಬ್ಬರಿ 66 ವರ್ಷಗಳ ಕಾಲ ಬೆಳೆಸಿದ್ದ ಉಗುರಿಗೆ ಕೊನೆಗೂ ಶ್ರೀಧರ್ ಅವರು ಕತ್ತರಿ ಹಾಕಿದ್ದಾರೆ. ಆದರೂ ಅವರ ಉಗುರು ನಿಷ್ಪ್ರಯೋಜಕವಾಗಿಲ್ಲ. ಬದಲಾಗಿ ಈ ಉಗುರುಗಳು ನ್ಯೂಯಾರ್ಕ್​ ಮ್ಯೂಸಿಯಂನಲ್ಲಿ ಇಡಲಾಗಿದೆ.

82 ವರ್ಷದ ಶ್ರೀಧರ್ ಅವರು ಕಳೆದ ಆರವತ್ತಾರು ವರ್ಷಗಳಿಂದ ಎಡಗೈ ಉಗುರುಗಳನ್ನು ಕತ್ತರಿಸಿರಲಿಲ್ಲ. ಹೀಗೆ ಬಿಟ್ಟಿದ್ದ ಉಗುರುಗಳು ಬೆಳೆಯುತ್ತಾ ಹೋಗಿದೆ. ಇತ್ತೀಚೆಗೆ ಇವುಗಳ ಅಳತೆ ತೆಗೆದಾಗ ಉಗುರುಗಳ ಒಟ್ಟು ಉದ್ದ 909.6cm (358.1 ಇಂಚುಗಳು) ಹೊಂದಿತ್ತು. ಅದರಲ್ಲಿ ಹೆಬ್ಬೆರಳ ಉಗುರಿನ ಉದ್ದ ಬರೋಬ್ಬರಿ 197.8cm (77.8 ಇಂಚುಗಳು) ಎಂದರೆ ಊಹಿಸಿ ನೋಡಿ.

ಹಠವೇ ದಾಖಲೆಯಾಯ್ತು

ಬಾಲ್ಯದಲ್ಲಿ ಚಿಲ್ಲಾಲ್ ಸ್ನೇಹಿತನೊಡನೆ ಜಗಳವಾಡುತ್ತಿದ್ದಾಗ ಟೀಚರ್ ಆಗಮಿಸಿ ಜಗಳ ಬಿಡಿಸಿದ್ದರು. ಈ ವೇಳೆ ಟೀಚರ್​ ಬೆಳೆಸಿದ್ದ ಉಗುರು ಮುರಿತಕ್ಕೊಳಗಾಗಿತ್ತು. ಈ ವೇಳೆ ಟೀಚರ್ ಉದ್ದನೆಯ ಉಗುರಿನ ಆರೈಕೆ ಬಗ್ಗೆ ನಿನಗೇನು ಗೊತ್ತು ಎಂದು ಆಕ್ರೋಶದಿಂದ ಶ್ರೀಧರ್​ರನ್ನು ಕೇಳಿದ್ದಾರೆ. ಇದನ್ನೆ ಸವಾಲಾಗಿ ಸ್ವೀಕರಿಸಿದ ಶ್ರೀಧರ್ ಉಗುರಿನ ಕತ್ತರಿಗೆ ಹಾಕುವುದನ್ನು ನಿಲ್ಲಿಸಿದ್ದಾರೆ. ನಿಧಾನಕ್ಕೆ ಹಠವೇ ಹವ್ಯಾಸವಾಯಿತು. ಹವ್ಯಾಸ ಹೆಸರು ತಂದು ಕೊಟ್ಟಿತು. ಮುಂದೆ ಅದುವೇ ಒಂದು ದಾಖಲೆಯಾಗಿ ಉಳಿಯಿತು.

ಅಂದು ನನಗೆ ಬೈದಿದ್ದ ಟೀಚರ್ ಬದುಕಿದ್ದಾರಾ ಅಥವಾ ಇಲ್ಲವೇ ಎಂಬುದು ಗೊತ್ತಿಲ್ಲ. ಆದರೆ ಇಂದು ನಾನು ಉಗುರನ್ನು ಬೆಳೆಸಿ ಆರೈಕೆ ಮಾಡಿ ದಾಖಲೆ ನಿರ್ಮಿಸಿ ಸವಾಲನ್ನು ಪೂರೈಸಿದ್ದೇನೆ ಎಂದು ಶ್ರೀಧರ್ ಚಿಲ್ಲಾಲ್ ಹೇಳುತ್ತಾರೆ.
Loading...

ಮೊದಲು ಉಗುರಿನ ವಿಷಯವನ್ನು ನಾನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಉಗುರುಗಳನ್ನು ಕತ್ತರಿಸುವ ನಿರ್ಧಾರ ತುಂಬಾ ದುಖಃವನ್ನುಂಟು ಮಾಡಿತ್ತು. ಆದರೆ ಇದುವೇ ಸರಿಯಾದ ಸಮಯವೆಂದು ಗಟ್ಟಿ ನಿರ್ಧಾರ ತೆಗೆದುಕೊಂಡೆ ಎಂದು 82 ವರ್ಷದ ಶ್ರೀಧರ್ ಚಿಲ್ಲಾಲ್ ತಿಳಿಸಿದ್ದಾರೆ. ಸಾಧನೆಗೆ ಹಲವು ದಾರಿ ಎಂಬಂತೆ  ಉಗುರು ಬೆಳೆಸಿದ್ದ ಶ್ರೀಧರ್ ಹೆಸರು ಗಿನ್ನೆಸ್ ಬುಕ್ ಆಫ್ ರೆಕಾರ್ಡ್​ನಲ್ಲಿ ಮತ್ತು ಅಮೆರಿಕದ ಮ್ಯೂಸಿಯಂನಲ್ಲಿ ಹಚ್ಚಾಗಿದೆ ಎಂದರೆ ಅವರ ಹಠವನ್ನು ಮೆಚ್ಚಲೇಬೇಕು.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...