Tattoo: ಅಬ್ಬಾ, ಈತನ ಮೈಮೇಲಿದೆ 864 ಕೀಟಗಳ ಟ್ಯಾಟೂ! ವಿಶ್ವ ದಾಖಲೆ ಬರೆದರೂ ಈತನಿಗೆ ತೃಪ್ತಿ ಇಲ್ವಂತೆ!

ಈತ ಟ್ಯಾಟೂ ಹಾಕಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಹೊಂದಿದ್ದಾನೆ. ತನ್ನ ಇಡೀ ದೇಹವನ್ನು ಹಚ್ಚೆಗಳಿಂದ ಮುಚ್ಚಿದ್ದಾನೆ. ಆದರೆ ಆತನ ಮೈ ಮೇಲಿರುವ ಟ್ಯಾಟೂದಲ್ಲಿ ವಿಶೇಷತೆಯಿದೆ, ದೇಹದ ಮೇಲೆ ಕೀಟಾ ಮತ್ತು ಹುಳುಗಳನ್ನು ಟ್ಯಾಟೂವನ್ನಾಗಿ ಹಚ್ಚೆ ಬಿಡಿಸಿಕೊಂಡಿದ್ದಾನೆ

ಮೈಕೆಲ್ ಅಮೋವಾ

ಮೈಕೆಲ್ ಅಮೋವಾ

  • Share this:
    ಜಗತ್ತಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ (hobby) ಇರುತ್ತದೆ. ಇದನ್ನೇ ಕೆಲವರು ಹುಚ್ಚು ಎಂದು ಕರೆಯುವುದುಂಟು. ಅಂದರೆ ಬಣ್ಣ ಬಣ್ಣದ ಬಟ್ಟೆ (Dress) ಧರಿಸುವ ಹವ್ಯಾಸ ಒಬ್ಬನಿಗಿದ್ದರೆ, ದುಬಾರಿ ಆಹಾರ ಸೇವಿಸುವ ಅಭ್ಯಾಸ ಮತ್ತೊಬ್ಬನಿಗೆ. ಇನ್ನು ಕೆಲವರಿಗೆ ಮೈ ಪೂರ್ತಿ ಟ್ಯಾಟೂ (Tattoo) ಹಾಕಿಸುವ ಅಭ್ಯಾಸ ಇರುತ್ತದೆ. ಅದರಂತೆಯೇ ಇಲ್ಲೊಂದು ವ್ಯಕ್ತಿಯ ಮೈ ಮೇಲಿನ ಟ್ಯಾಟೂ ಗಮನಿಸಿದರೆ ಇದು ಅಥವಾ ಹವ್ಯಾಸವೋ ಅಥವಾ ಹುಚ್ಚೋ ಎಂಬುದನ್ನು ನೀವೇ ಡಿಸೈಡ್​ (Decide) ಮಾಡಿ. ಅಂದಹಾಗೆಯೇ ಈತ ಮೈ ಮೇಲಿರುವ ಜಾಗದಲ್ಲೆಲ್ಲಾ ಟ್ಯಾಟೂ ಹಾಕಿಸಿರುವುದೇನೋ ನಿಜ. ಆದರೆ ಈ ಟ್ಯಾಟೂದಲ್ಲೂ ಒಂದು ವಿಶೇಷತೆ ಇದೆ. ಅದೇನು ಗೊತ್ತಾ? ಈ ಸ್ಟೋರಿ ಓದಿ

    ಜೀವನದುದ್ದಕ್ಕೂ ಕೆಲವು ಸ್ಮರಣೀಯ ಕ್ಷಣಗಳನ್ನು ನೆನಪಿಸಿಕೊಳ್ಳಲು ಅಥವಾ ತಾವೂ ಎಂದಿಗೂ ಗುರುತಿಸಿಕೊಳ್ಳಲು ಹಚ್ಚೆಗಳನ್ನು ಹಾಕಿಸಿಕೊಳ್ಳುವವರಿದ್ದಾರೆ. ಆದರೆ ಕೆಲವರಂತೂ ದೇಹದಲ್ಲಿ ಯಾವ ಜಾಗವನ್ನೂ ಬಿಡದೆ ಟ್ಯಾಟೂ ಹಾಕಿಸಿಕೊಂಡವರೂ ಇದ್ದಾರೆ. ಅಂತವರ ಸಾಲಿನಲ್ಲಿ ಕಾಣಿಸುವ ವಿಲಕ್ಷಣ ಟ್ಯಾಟೂ ಪ್ರೇಮಿ ಎಂದರೆ ಮೈಕೆಲ್ ಅಮೋವಾ.

    ಹೌದು. ಈತ ಟ್ಯಾಟೂ ಹಾಕಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಹೊಂದಿದ್ದಾನೆ. ತನ್ನ ಇಡೀ ದೇಹವನ್ನು ಹಚ್ಚೆಗಳಿಂದ ಮುಚ್ಚಿದ್ದಾನೆ. ಆದರೆ ಆತನ ಮೈ ಮೇಲಿರುವ ಟ್ಯಾಟೂದಲ್ಲಿ ವಿಶೇಷತೆಯಿದೆ, ದೇಹದ ಮೇಲೆ ಕೀಟಾ ಮತ್ತು ಹುಳುಗಳನ್ನು ಟ್ಯಾಟೂವನ್ನಾಗಿ ಹಚ್ಚೆ ಬಿಡಿಸಿಕೊಂಡಿದ್ದಾನೆ

    ಟ್ಯಾಟೂ ಪ್ರೇಮಿ ಮೈಕೆಲ್ ಅಮೋವಾ ತನ್ನ ದೇಹದ ಮೇಲೆ ಮಾಡಿಕೊಂಡಿರುವ ಎಲ್ಲಾ ಟ್ಯಾಟೂಗಳು ಬರೀ ಕೀಟಗಳದ್ದೇ ಟ್ಯಾಟೂಗಳು. ಇದುವರೆಗೆ ಆತ ತನ್ನ ದೇಹದ ಮೇಲೆ 864 ಕೀಟಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾನೆ. ಇದರಿಂದಾಗಿ ಆತ ವಿಶ್ವ ದಾಖಲೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾನೆ. ಆದರೆ ಈ ದಾಖಲೆಯ ನಂತರವೂ ಆತ ತೃಪ್ತರಾಗಿಲ್ಲ. ಇದೀಗ ಮತ್ತಷ್ಟು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ತನ್ನದೇ ದಾಖಲೆ ಮುರಿಯಲು ಯತ್ನಿಸುತ್ತಿದ್ದಾನೆ.

    ಇದನ್ನೂ ಓದಿ: Tattoo ಪ್ರಿಯರಿಗೊಂದು ಗುಡ್‌ನ್ಯೂಸ್‌: ಇನ್ಮುಂದೆ ನಿಮ್ಮ ಹಚ್ಚೆ ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿ ತಿಳಿಸುತ್ತದಂತೆ



    ಮೈಕೆಲ್‌ಗೆ ಚಿಕ್ಕ ವಯಸ್ಸಿನಲ್ಲಿಯೇ ಲ್ಯುಕೇಮಿಯಾ ಇರುವುದು ಪತ್ತೆಯಾಯಿತು. ಇದರ ನಂತರ, ಸ್ವಲ್ಪ ಸಮಯದವರೆಗೆ ಆತ ಕೀಟಗಳನ್ನು ತಿನ್ನುತ್ತಿರುವ ಕನಸು ಕಾಣಲಾರಂಭಿಸಿದರು. ಎಲ್ಲಾ ಸಮಯದಲ್ಲೂ ಅವನು ಕೀಟಗಳನ್ನು ತಿನ್ನುವ ಕನಸು ಕಾಣುತ್ತಿದ್ದನು. ಆದರೆ ಮೈಕೆಲ್ ಈ ಭಯವನ್ನು ಜಯಿಸಲು ತಯಾರಿ ಆರಂಭಿಸಿದರು. ಇದಕ್ಕಾಗಿ ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳಲು ನಿರ್ಧರಿಸಿದ್ದಾರೆ. ಒಬ್ಬೊಬ್ಬರಾಗಿ ಕೀಟಗಳನ್ನೇ ಹಚ್ಚೆ ಹಾಕತೊಡಗಿದರು. ಈ ನಿಟ್ಟಿನಲ್ಲಿ ಮೈಕೆಲ್ ತನ್ನ ದೇಹದ ಮೇಲೆ ಒಟ್ಟು 864 ಕೀಟಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾನೆ.

    ಇದನ್ನೂ ಓದಿ: Trends ಆಯೋಜಿಸುತ್ತಿದೆ ವರಮಹಾಲಕ್ಷ್ಮಿ ಹಬ್ಬದಂದು ಗ್ರಾಹಕರಿಗೆ ವಿಶಿಷ್ಟ ಸೆಲ್ಫಿ ಸ್ಪರ್ಧೆ! ಗೆದ್ದವರಿಗೆ ಸೀರೆ ಗಿಫ್ಟ್​



    ಇನ್ನೂ ಮನಸ್ಸು ತುಂಬಿಲ್ಲ

    ಮೈಕೆಲ್ ಹಲವು ಟ್ಯಾಟೂಗಳಿಗಾಗಿ ಹಿಂದಿನ ವಿಶ್ವ ದಾಖಲೆಯನ್ನು ಮುರಿದರು. ಈ ಮೊದಲು ದಾಖಲೆ ಅವರ ಹೆಸರಿನಲ್ಲಿತ್ತು, ಆತ ತನ್ನ ದೇಹದ ಮೇಲೆ 462 ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದನು. ಆದರೆ ಈಗ ಈ ದಾಖಲೆ ಮೈಕೆಲ್ ಹೆಸರಿನಲ್ಲಿದೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಟ್ಯಾಟೂ ಹಾಕುವುದನ್ನು ನಿಲ್ಲಿಸಲು ಹೋಗುವುದಿಲ್ಲ ಎಂದು ಸುಳಿವು ನೀಡಿದ್ದಾನೆ. ಈಗ ಆತ ಹೆಚ್ಚು ಹಚ್ಚೆ ಹಾಕಿಸಿಕೊಳ್ಳುತ್ತಾನೆ ಮತ್ತು ಮುಂಬರುವ ಹಲವು ದಶಕಗಳವರೆಗೆ ಈ ದಾಖಲೆಯನ್ನು ಮುರಿಯದಂತೆ ನೋಡಿಕೊಳ್ಳುತ್ತಾನೆ. ಇದೀಗ ಹೆಚ್ಚಿನ ಟ್ಯಾಟೂಗಳ ಅಗತ್ಯವಿದೆ ಎಂದು ಮೈಕೆಲ್ ಹೇಳಿದ್ದಾನೆ. ನನ್ನ ದೇಹವು ಕ್ಯಾನ್ವಾಸ್ ಆಗಿದೆ. ನಾನು ಅದರ ಮೇಲೆ ಕಲೆ ಮಾಡುತ್ತಿದ್ದೇನೆ ಮತ್ತು ಈಗ ಈ ಕಲೆ ಮುಂದುವರಿಯುತ್ತದೆ ಎಂದು ಹೇಳಿದ್ದಾನೆ.
    Published by:Harshith AS
    First published: