• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Shocking News: ಈ ವ್ಯಕ್ತಿಗೆ ಓದೋದಕ್ಕೆ ಬರೋದಿಲ್ವಂತೆ, ಅಂದ್ರು ವರ್ಷಕ್ಕೆ ಕೋಟಿ ಸಂಪಾದನೆ ಮಾಡ್ತಾರಂತೆ!

Shocking News: ಈ ವ್ಯಕ್ತಿಗೆ ಓದೋದಕ್ಕೆ ಬರೋದಿಲ್ವಂತೆ, ಅಂದ್ರು ವರ್ಷಕ್ಕೆ ಕೋಟಿ ಸಂಪಾದನೆ ಮಾಡ್ತಾರಂತೆ!

ಸಕ್ಸಸ್​ ಆದ ವ್ಯಕ್ತಿ!

ಸಕ್ಸಸ್​ ಆದ ವ್ಯಕ್ತಿ!

ಎಷ್ಟು ಓದಿದ್ರು ಕೆಲವರಿಗೆ ಕೆಲಸ ಸಿಗೋದಿಲ್ಲ. ಆದರೆ, ಈ ವ್ಯಕ್ತಿ ಏನು ಓದಿಲ್ಲ ಅಂದ್ರೂ ಕೂಡ ಸಖತ್​​ ಆಗಿಯೇ ದುಡಿತಾ ಇದ್ದಾರಂತೆ.

  • Share this:
  • published by :

ಈಗೆಲ್ಲಾ ಚೆನ್ನಾಗಿ ಓದಿ, ಒಳ್ಳೆಯ ತಂತ್ರಜ್ಞಾನ ಕೌಶಲ್ಯಗಳನ್ನು ಕರಗತ ಮಾಡಿಕೊಂಡಿದ್ದರೆ ಮಾತ್ರ ಕೈ ತುಂಬಾ ಸಂಬಳ ಸಿಗುವಂತಹ ಉದ್ಯೋಗಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ ಅಂತ ಹೇಳಬಹುದು. ಯಾವುದೇ ಶಿಕ್ಷಣ (Education) ಇಲ್ಲದೆ ಹೋದರೂ ಸಹ ಕೆಲವು ಕೆಲಸಗಳು ಸಿಗುತ್ತವೆ, ಆದರೆ ಒಳ್ಳೆಯ ಸಂಬಳ ಸಿಗುವ ಕೆಲಸಗಳು ಅವು ಆಗಿರುವುದಿಲ್ಲ ಅಷ್ಟೇ. ಶಿಕ್ಷಣ ಮತ್ತು ಕೌಶಲ್ಯಗಳು ಈಗಿನ ದಿನಗಳಲ್ಲಿ ಒಂದು ಒಳ್ಳೆಯ ಸಂಬಳದ (Salary) ಉದ್ಯೋಗವನ್ನು ಗಿಟ್ಟಿಸಲು ತುಂಬಾನೇ ಮುಖ್ಯವಾಗಿದೆ ಅಂತ ಹೇಳಬಹುದು. ಇಲ್ಲೊಬ್ಬ ವ್ಯಕ್ತಿ ಬಗ್ಗೆ ನಿಮಗೆ ಹೇಳಲೇಬೇಕು ನೋಡಿ. ಈ ವ್ಯಕ್ತಿ ಯಾವುದೇ ಶಾಲೆಯ ಮೆಟ್ಟಿಲು ಹತ್ತಿಲ್ವಂತೆ ಮತ್ತು ಯಾವುದೇ ಕೆಲಸಕ್ಕೆ ಬೇಕಾದ ಕೌಶಲ್ಯಗಳು ಇವರ ಬಳಿ ಇಲ್ವಂತೆ. ಆದರೂ ಸಹ ಈ ವ್ಯಕ್ತಿ ವರ್ಷಕ್ಕೆ 160 ಸಾವಿರ ಡಾಲರ್ (Dollar) ಎಂದರೆ ಭಾರತೀಯ ಮೌಲ್ಯದಲ್ಲಿ 1.3 ಕೋಟಿ ರೂಪಾಯಿ ಗಳಿಸುತ್ತಾರಂತೆ.


ನಾವೀಗ ಹೇಳ ಹೊರಟಿರುವುದು 38 ವರ್ಷ ವಯಸ್ಸಿನ ಕೋರಿ ರಾಕ್ವೆಲ್ ಎಂಬ ವ್ಯಕ್ತಿಯ ಕಥೆ. ಜೀವನದಲ್ಲಿ ಮುಂದೆ ಏನು ಮಾಡಬೇಕು ಅಂತ ದಿಕ್ಕು ತೋಚದ ದಿನಗಳನ್ನು ಕಳೆದ ವ್ಯಕ್ತಿ ಈಗ ಕೋಟಿ ಕೋಟಿ ಮೌಲ್ಯದ ಒಡೆಯ. ವಿದ್ಯಾಭ್ಯಾಸ ಇಲ್ಲದ ಕಾರಣ ಕಚೇರಿಯಲ್ಲಿ ಈತನಿಗೆ ಯಾವುದೇ ಕೆಲಸ ಸಿಕ್ಕಿರಲಿಲ್ಲವಂತೆ. ಹೀಗಾಗಿ ಅಲ್ಲಿ-ಇಲ್ಲಿ ಈತ ಕೆಲಸ ಹುಡುಕುತ್ತಲೇ ಇದ್ದುದ್ದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾನೆ.


ಕೋರಿ ರಾಕ್ವೆಲ್ ಇನ್ಸೈಡರ್ ಗೆ ಈ ಹಿಂದೆ "ನಾನು ಶಾಲೆಯ ಮೆಟ್ಟಿಲು ಸಹ ಏರಿದವನಲ್ಲ ಮತ್ತು ನನಗೆ ಯಾವುದೇ ಕೌಶಲ್ಯ ಸಹ ಇರಲಿಲ್ಲ. ಏನು ಮಾಡಬೇಕು ಅಂತ ತುಂಬಾನೇ ಚಿಂತೆಯಾಗಿತ್ತು" ಎಂದು ಹೇಳಿದ್ದರಂತೆ.


ಗಣಿಗಾರಿಕೆಯಲ್ಲಿ ಕೆಲಸ ಸಿಕ್ತು, ಕೋರಿ ಜೀವನ ಬದಲಾಯ್ತು


ಮೊದಲಿಗೆ ಸ್ಥಳೀಯ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಪಡೆಯಲು ವಿಫಲವಾದ ನಂತರ, ಗಣಿಗಾರನಾಗಿ ಕೆಲಸ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡರಂತೆ ರಾಕ್ವೆಲ್.‌ ಈ ವ್ಯಕ್ತಿಗೆ ಇದೇ ಟರ್ನಿಂಗ್‌ ಪಾಯಿಂಟ್‌ ಆಯಿತು ನೋಡಿ.ಮೈನಿಂಗ್ ಟೆಂಪ್ ಏಜೆನ್ಸಿ ಜಿಯೋಟೆಂಪ್ಸ್ ಕೋರಿ ಅವರಿಗೆ ನೆವಾಡಾದ ಒರೊವಾಡಾದಲ್ಲಿ ಆರು ತಿಂಗಳ ಕೆಲಸವನ್ನು ನೀಡಿತು. ಆದರೆ ಆ ಕೆಲಸ ಹಾಗೆಯೇ ಮುಂದುವರೆದು ಅವರು ಅದನ್ನು ಒಂದು ವರ್ಷದವರೆಗೆ ಮಾಡಿದರು.


ಇದನ್ನೂ ಓದಿ: ನಂಬಿದ್ರೆ ನಂಬಿ ಬಿಟ್ಟರೆ ಬಿಡಿ, ಇದು ಭೂತಗಳ ದೇವಸ್ಥಾನ!


ನಾಲ್ಕು ವರ್ಷಗಳ ಕಾಲ ಮೇಲ್ಮೈ ಗಣಿಗಳಲ್ಲಿ ಕೆಲಸ ಮಾಡಿದ ನಂತರ, ಅವರು ತಮ್ಮ ಕೆಲಸವನ್ನು ಬದಲಾಯಿಸಲು ಬಯಸಿದ್ದರು. ಕೋರಿ ಈಗ ಯೆರಿಂಗ್ಟನ್ ಪಟ್ಟಣದ ತಾಮ್ರದ ಗಣಿ ನೆವಾಡಾ ಕಾಪರ್ ನಲ್ಲಿ ಭೂಗತ ಗಣಿಗಾರನಾಗಿ ಕೆಲಸ ಮಾಡುತ್ತಾರೆ.


"ಇಲ್ಲಿ ಸಂಬಳ ತುಂಬಾನೇ ಚೆನ್ನಾಗಿದೆ. ವಾರ್ಷಿಕ ಸಂಬಳವು ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿದ್ದರೂ, ಒಂದು ವರ್ಷದಲ್ಲಿ ನಾನು ಗಳಿಸಿದ ಗರಿಷ್ಠ ಮೊತ್ತ 1,60,000 ಡಾಲರ್" ಎಂದು ಅವರು ತಮ್ಮ ಸಂಪಾದನೆ ಬಗ್ಗೆ ಹೇಳಿದರು.


"ನೆವಾಡಾ ಕಾಪರ್ ನಲ್ಲಿ, ನೆಲದಲ್ಲಿ ಕೊರೆಯಲಾದ ರಂಧ್ರಗಳಿಗೆ ಸ್ಫೋಟಕಗಳನ್ನು ಬೀಳಿಸುವ ಕೆಲಸ ಇಲ್ಲಿ ನನ್ನದು. ಭೂಗತ ಗಣಿಗಾರಿಕೆಯು ಕಚೇರಿ ಕೆಲಸದಂತೆ ಏನೂ ಅಲ್ಲ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆಲಸ ಇರುತ್ತದೆ. ಸಂಬಳ ಉತ್ಕೆತಮವಾಗಿದೆ ಆದರೆ ಕೆಲಸ ತುಂಬಾ ಕಠಿಣ" ಎನ್ನುತ್ತಾರೆ ಕೋರಿ.




ಕೆಲಸ ಮುಗಿಯುವಷ್ಟರಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಸುಸ್ತಾಗಿರುತ್ತೇನೆ. ಕೆಲಸ ಚೆನ್ನಾಗಿ ಮಾಡುವುದರಿಂದ ರಾತ್ರಿ ನಿದ್ರೆಯೂ ಚೆನ್ನಾಗಿ ಬರುತ್ತದೆ ಎಂದು ಹಾಸ್ಯಮಯವಾಗಿ ಹೇಳುತ್ತಾರೆ ಕೋರಿ ರಾಕ್ವೆಲ್.

top videos
    First published: