Lottery: ಶುಭಾಶಯ ಕೋರಿ ಒಂದು ಲಾಟರಿ ಟಿಕೆಟ್ ಕಳ್ಸಿದ್ರು, 7 ಕೋಟಿ ರೂ ಗೆದ್ದೇಬಿಟ್ಟ Lucky Fellow!

ಅಂತಿಮವಾಗಿ ಅವರು ತೆರಿಗೆ ಕಡಿತವಾಗುವ ಮುನ್ನ ಬಹುಮಾನವಾಗಿ 6,50,000 ಡಾಲರ್‌ (ಸುಮಾರು ₹4.8 ಕೋಟಿಗಳು) ಮೊತ್ತವನ್ನು ಮನೆಗೆ ತೆಗೆದುಕೊಂಡು ಹೋದರು. ಮ್ಯಾಕ್‌ಲೀಶ್ ಗೆದ್ದ ಆಟ ಕೇವಲ 10 ಒಟ್ಟು ಬಹುಮಾನ ವಿಜೇತರನ್ನು ಹೊಂದಿತ್ತು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಇತ್ತೀಚೆಗಷ್ಟೇ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ (Open Heart Surgery) ಒಳಗಾದ ಯುನೈಟೆಡ್ ಸ್ಟೇಟ್ಸ್‌ನ (US Man) ಮಸಾಚುಸೆಟ್ಸ್‌ನಲ್ಲಿ ವಾಸಿಸುತ್ತಿರುವ ಅಮನ್, ಅವರ ಸ್ನೇಹಿತರೊಬ್ಬರು ನೀಡಿದ ಗೆಟ್-ವೆಲ್ ಸೂನ್ (Get Well Soon) ಕಾರ್ಡ್‌ನೊಂದಿಗೆ ಬಂದ ಟಿಕೆಟ್‌ನಿಂದ 1 ಮಿಲಿಯನ್ ಡಾಲರ್ (ಸುಮಾರು ₹7.5 ಕೋಟಿ) (1 million dollar) ಲಾಟರಿ ಗೆದ್ದಿದ್ದಾರೆ. ಹಾಗಾಗಿ ಈಗ ಅಮನ್‌ಗೆ ಗೆಳೆಯರ ಗೆಟ್ ವೆಲ್ ಸೂನ್ ವಿಷ್ ಗೆಟ್ ವೆಲ್ತ್ ಸೂನ್ ಆಗಿ ಬದಲಾಗಿದೆ. ಈ ಸುದ್ದಿ ಕೇಳಿದ ಅವರ ಸ್ನೇಹಿತರೆಲ್ಲಾ ಈಗ, ನಮ್ಮ ಶಾಸಕ ಜಮೀರ್ ಅಹ್ಮದ್ ಶೈಲಿಯಲ್ಲಿ ಕಂಜಾಜುಲೇಶನ್ ಬ್ರದರ್, ಲಾಟ್ರಿ ಲಾಟ್ರಿ (Lottery) ಎನ್ನುತ್ತಿದ್ದಾರೆ. ಮೆಸಾಚೂಸೆಟ್ಸ್ ಸ್ಟೇಟ್ ಲಾಟರಿ ಆಯೋಗದ ಹೇಳಿಕೆಯ ಪ್ರಕಾರ, ಅಲೆಕ್ಸಾಂಡರ್ ಮೆಕ್‌ಲೀಶ್ ಅವರ ಸ್ನೇಹಿತ ಈ ತಿಂಗಳ ಆರಂಭದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದಾಗ 3 ಲಾಟರಿ ಸ್ಕ್ರ್ಯಾಚ್-ಆಫ್ ಟಿಕೆಟ್‌ಗಳನ್ನು ನೀಡಿದರು.

ಮೆಕ್‌ಲೀಶ್ ಕಾರ್ಡ್ ಸ್ಕ್ರ್ಯಾಶ್‌ ಮಾಡಲು ಪ್ರಾರಂಭಿಸಿದಾಗ, ಟಿಕೆಟ್‌ನ "ಯುವರ್ ಲೆಟರ್ಸ್" ಸೆಕ್ಷನ್‌ನಲ್ಲಿ "A W M" ಇದೆ ಎಂಬುದನ್ನು ಗಮನಿಸಿದರು. ಅದು ಅವರ ಇನಿಶಿಯಲ್ಸ್ ಕೂಡಾ ಆಗಿತ್ತು. ಆತ ಕಾರ್ಡ್‌ಗಳನ್ನು ಮತ್ತಷ್ಟು ಸ್ಕ್ರಾಚ್ ಮಾಡಿದಾಗ, ಕೆಳಗಿನ ಸಾಲಿನಲ್ಲಿ "HEART" ಎಂಬ ಪದವಿತ್ತು. ಅಂತಿಮವಾಗಿ, ಈ ಪಝಲ್, ಮೆಕ್ಲೀಶ್ ಅವರನ್ನು ಮ್ಯಾಸಚೂಸೆಟ್ಸ್ ಸ್ಟೇಟ್ ಲಾಟರಿಯ "$ 5,000,000 100X ಕ್ಯಾಶ್‌ವರ್ಡ್" ನ ಎರಡನೇ ವಿಜೇತರನ್ನಾಗಿ ಮಾಡಿತು. ಇದರ ಪರಿಣಾಮವಾಗಿ ಅವರು 1 ಮಿಲಿಯನ್ ಡಾಲರ್‌ ಬಹುಮಾನ ಗೆದ್ದಿದ್ದಾರೆ.

ಕೋಟಿಗಳನ್ನು ಮನೆಗೆ ಒಯ್ದ ವ್ಯಕ್ತಿ

ನವೆಂಬರ್ 26, ಶುಕ್ರವಾರದಂದು ಮೆಕ್ಲೀಶ್ ತನ್ನ ಬಹುಮಾನದ ಹಣ ತೆಗೆದುಕೊಳ್ಳಲು ನಗದು ರೂಪವನ್ನು ಆಯ್ಕೆ ಮಾಡಿಕೊಂಡರು ಮತ್ತು ಅಂತಿಮವಾಗಿ, ಅವರು ತೆರಿಗೆ ಕಡಿತವಾಗುವ ಮುನ್ನ ಬಹುಮಾನವಾಗಿ 6,50,000 ಡಾಲರ್‌ (ಸುಮಾರು ₹4.8 ಕೋಟಿಗಳು) ಮೊತ್ತವನ್ನು ಮನೆಗೆ ತೆಗೆದುಕೊಂಡು ಹೋದರು. ಮ್ಯಾಕ್‌ಲೀಶ್ ಗೆದ್ದ ಆಟ ಕೇವಲ 10 ಒಟ್ಟು ಬಹುಮಾನ ವಿಜೇತರನ್ನು ಹೊಂದಿತ್ತು. ಅಗ್ರ ಬಹುಮಾನವು 5 ಮಿಲಿಯನ್ ಡಾಲರ್‌ (ಸುಮಾರು ₹37.4 ಕೋಟಿಗಳು). ಲಾಟರಿಯ ಒಂದು ಟಿಕೆಟ್ ಬೆಲೆ ಕೇವಲ $20 (₹1,500).

ಇದನ್ನೂ ಓದಿ: Lucky and Rich: ಗಂಡನನ್ನು ಬಿಟ್ಟಿದ್ದೇ ಅದೃಷ್ಟ ಖುಲಾಯಿಸಿತು, ಈಕೆ ಈಗ ಬ್ರಿಟನ್ ರಾಣಿಗಿಂತ ಶ್ರೀಮಂತೆ!

ಅಂದಹಾಗೆ, ಈ ದೊಡ್ಡ ಮೊತ್ತದ ಪ್ರೈಸ್ ಮೆಕ್‌ಲೀಶ್ ಗೆ ಸರ್ ಪ್ರೈಸ್ ತಂದಿದ್ದರೂ, ಇದು ಅವರಿಗೆ ಮೊದಲ ಅನುಭವ ಅಲ್ಲವಂತೆ. ತನ್ನ ಸ್ನೇಹಿತರು ನೀಡಿದ ಟಿಕೆಟ್‌ನಲ್ಲಿ ಲಾಟರಿ ಗೆದ್ದಿರುವುದು ಇದೇ ಮೊದಲಲ್ಲಾ ಎಂದು ಮೆಕ್‌ಲೀಶ್ ಲಾಟರಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಹಲವು ವರ್ಷಗಳ ಹಿಂದೆ, ತನ್ನ ಹುಟ್ಟುಹಬ್ಬದಂದು ಸ್ನೇಹಿತ ನೀಡಿದ ಟಿಕೆಟ್‌ನಲ್ಲಿ ಅವರು 1,000 ಡಾಲರ್‌ ಲಾಟರಿ ಗೆದ್ದಿದ್ದರು. ಈಗ ಆ ಮೊತ್ತ 1 ಮಿಲಿಯನ್ ಡಾಲರ್ ಆಗಿದೆ.

ದುಬೈನ ಚಾಲಕನಿಗೂ ಒಲಿದಿದ್ದು ಕೋಟಿಯ ಲಾಟರಿ

ದುಬೈನಲ್ಲಿ ವಾಸಿಸುವ ಮತ್ತು ಚಾಲಕನಾಗಿ ಕೆಲಸ ಮಾಡುವ ಭಾರತೀಯ ವ್ಯಕ್ತಿಯೊಬ್ಬರು ಈ ವರ್ಷದ ಜುಲೈನಲ್ಲಿ 40 ಕೋಟಿ ರೂ. ಲಾಟರಿ ಗೆದ್ದಿದ್ದರು. ದುಬೈ ಮೂಲದ ಮತ್ತೊಬ್ಬ ಭಾರತೀಯ ವಲಸಿಗ ಕಳೆದ ವರ್ಷ ಡಿಸೆಂಬರ್‌ನಲ್ಲಿ 24 ಕೋಟಿ ರೂ. ಲಾಟರಿ ಗೆದ್ದಿದ್ದರು. ಭಾರತದಲ್ಲಿ ಕೇರಳ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 13 ರಾಜ್ಯಗಳಲ್ಲಿ ಲಾಟರಿ ಕಾನೂನು ಬದ್ಧವಾಗಿದೆ. ರಾಜ್ಯ ಸರ್ಕಾರಗಳಿಂದ ನಿರ್ವಹಿಸಲ್ಪಡುವ ಈ ಲಾಟರಿ ಆಯೋಗಗಳು ಕೆಲವು ನೂರರಿಂದ ಕೋಟಿಗಳವರೆಗಿನ ಬಹುಮಾನ ಮೊತ್ತ ಇರುವ ಬಹು ಲಾಟರಿಗಳನ್ನು ನಡೆಸುತ್ತವೆ.
Published by:Soumya KN
First published: