Viral News: ಹೆಂಡತಿ ಗರ್ಭಿಣಿ ಅನ್ನೋದು ತಿಳಿದು ಗಂಡ ಶಾಕ್..! ಏನು ಮಾಡ್ಬೇಕು ಅಂತ ಎಲ್ರನ್ನೂ ಕೇಳ್ತಿದ್ದಾನೆ

ನನ್ನ ಹೆಂಡತಿ ನನ್ನ ಜೊತೆ ತುಂಬಾ ವರ್ಷಗಳಿಂದ ಇದ್ದಾಳೆ. ಅವಳ ಬಗ್ಗೆ ಸಂಶಯ ಪಡುವುದು ಒಳ್ಳೆಯದಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆ ವ್ಯಕ್ತಿ ಬರೆದುಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಯಾವುದೇ ದಂಪತಿಗೆ(Couple) ತಾವು ಒಂದು ಮಗುವಿಗೆ ಜನ್ಮ ನೀಡುತ್ತಿದ್ದೇವೆ ಮತ್ತು ತಮ್ಮ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗುತ್ತಿರುವ ಸುದ್ದಿ ಕೇಳಿದ ತಕ್ಷಣ ಎಲ್ಲಿಲ್ಲದ ಆನಂದವಾಗುವುದು ಸಹಜವಾದ ವಿಷಯವಾಗಿದೆ. ಹಾಗೂ,ತಾವು ತಂದೆ ತಾಯಿ ಆಗುತ್ತಿದ್ದೇವೆ ಎಂಬ ವಿಷಯವು ತುಂಬಾ ವಿಶೇಷವಾಗಿರುತ್ತದೆ. ಒಬ್ಬ ಮಹಿಳೆಯ ಜೀವನ ಪರಿಪೂರ್ಣ ಎನ್ನಿಸುವುದೇ ಒಂದು ಮಗುವಿಗೆ ಜನ್ಮ(Pregnancy) ನೀಡಿದಾಗ ಅಂತ ಹೇಳುವುದನ್ನು ನಾವು ಕೇಳಿಯೇ ಇರುತ್ತೇವೆ. ಮೊದಲ ಬಾರಿ ತಮ್ಮ ಮಗುವನ್ನು ನೋಡಿದಾಗ ತಂದೆ ತಾಯಿಗೆ ಆಗುವ ಸಂತೋಷದ ಅನುಭವವನ್ನು ಮಾತಲ್ಲಿ ಹೇಳುವುದು ತುಂಬಾ ಕಷ್ಟ.ಆದರೆ ಈ ವಿಷಯ ಇಲ್ಲೊಬ್ಬ ಗಂಡನಿಗೆ ಗೊಂದಲ ಉಂಟುಮಾಡಿದೆ. ತನ್ನ ಹೆಂಡತಿಯ ಗರ್ಭಧಾರಣೆಯ ಬಗ್ಗೆ ವಿಷಯ ತಿಳಿದು ಸಂತೋಷಪಡುವ ಬದಲಿಗೆ ಆಘಾತಕ್ಕೊಳಗಾಗಿದ್ದಾನೆ. ಏನಪ್ಪಾ ಈ ವ್ಯಕ್ತಿ ಸಂತೋಷಪಡುವಂತಹ ವಿಚಾರಕ್ಕೆ ಹೀಗೆ ಆಘಾತಗೊಂಡಿದ್ದಾನೆ ಅಂತೀರಾ. ಇದರ ಹಿಂದಿನ ಕಾರಣ ನಿಮಗೆ ಗೊತ್ತಾದರೆ ನೀವು ಕೆಲವು ನಿಮಿಷಗಳ ಕಾಲ ಯೋಚನೆಯಲ್ಲಿ ಮುಳುಗುವುದು ಖಂಡಿತ.


ಈ ವ್ಯಕ್ತಿ ತಾನು ಎರಡು ವರ್ಷಗಳ ಹಿಂದೆಯೇ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ತನ್ನ ಹೆಂಡತಿಯು ಹೇಗೆ ಗರ್ಭಧರಿಸಿದ್ದಾರೆ ಎಂದು ಗೊಂದಲಕ್ಕೀಡಾಗಿ ತನ್ನ ಗೊಂದಲಕ್ಕೆ ಪರಿಹಾರ ತಿಳಿಸುವಂತೆ ಕೋರಿ ಸಾಮಾಜಿಕ ಮಾಧ್ಯಮವಾಗಿರುವ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ:Shikshak Parv 2021: ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಪ್ರಧಾನಿ ಮೋದಿ ಯತ್ನ

ಅವರಿಗೆ ಈಗಾಗಲೇ ಎರಡು ಮಕ್ಕಳಿದ್ದು, ಸ್ವಲ್ಪ ಸಮಯದ ಹಿಂದೆ ತನ್ನ ಹೆಂಡತಿ ಬಂದು ತಾನು ಮತ್ತೆ ತಾಯಿಯಾಗುತ್ತಿರುವ ವಿಷಯ ತಿಳಿಸಿ ಮತ್ತೊಮ್ಮೆ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿ ಹೋಗಿರುವ ವಿಚಾರವನ್ನು ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.


“ನನಗೆ ಎರಡು ವರ್ಷಗಳ ಹಿಂದೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಆಗಿತ್ತು, ಈ ಚಿಕಿತ್ಸೆ ಮಾಡಿಸಿಕೊಂಡ ನಂತರವೂ ಮಗು ಜನಿಸಲು ಎಷ್ಟು ಅವಕಾಶವಿರುತ್ತದೆ ಅಥವಾ ನನ್ನ ಹೆಂಡತಿ ಬೇರೊಂದು ಸಂಬಂಧವನ್ನು ಹೊಂದಿದ್ದಾಳೆಯೇ ಎನ್ನುವ ಗೊಂದಲ ನನಗೀಗ ಶುರುವಾಗಿದೆ. ನನ್ನ ಹೆಂಡತಿ ನನ್ನ ಜೊತೆ ತುಂಬಾ ವರ್ಷಗಳಿಂದ ಇದ್ದಾಳೆ. ಅವಳ ಬಗ್ಗೆ ಸಂಶಯ ಪಡುವುದು ಒಳ್ಳೆಯದಲ್ಲ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಆ ವ್ಯಕ್ತಿ ಬರೆದುಕೊಂಡಿದ್ದಾರೆ.


ಈ ವ್ಯಕ್ತಿಯು ಹಂಚಿಕೊಂಡ ಪೋಸ್ಟ್‌ಗೆ ಅನೇಕರು ಮಿಶ್ರ ಪ್ರತಿಕ್ರಿಯೆಗಳು ನೀಡಿದ್ದು, ಸಲಹೆಯನ್ನೂ ನೀಡಿದ್ದಾರೆ. ಕೆಲವರು ನಿಮ್ಮ ಹೆಂಡತಿಯನ್ನು ಸಂಶಯದಿಂದ ನೋಡಬೇಡಿ ಎಂದು ಹೇಳಿದ್ದಾರೆ. ಮೊದಲನೆಯದಾಗಿ ತನ್ನ ವೀರ್ಯಾಣುಗಳ ಸಂಖ್ಯೆಯನ್ನು ತಿಳಿದುಕೊಳ್ಳಿ, ಏಕೆಂದರೆ ಈ ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ನಂತರವೂ ಹೀಗೆ ನನಗೆ ಗೊತ್ತಿರುವಂತಹ ವ್ಯಕ್ತಿಯ ಹೆಂಡತಿಗೆ ಮಗುವಾಗಿತ್ತು ಎಂದು ವೈದ್ಯರೊಬ್ಬರು ಹೇಳಿದ್ದಾರೆ.


ಇದನ್ನೂ ಓದಿ:BBMP Workers Strike: ಬಿಬಿಎಂಪಿ ನೌಕರರ ಮುಷ್ಕರ, ಬೆಂಗಳೂರಿನ ಜನರಿಗೆ ನಾಳೆಯಿಂದ ಈ ಸೌಲಭ್ಯ ಸಿಗಲ್ಲ

ಕೆಲವರು ತುಂಬಾ ನಕರಾತ್ಮಕವಾದ ಸಲಹೆ ನೀಡಿದ್ದು, ತಮ್ಮ ಎರಡು ಮಕ್ಕಳ ಡಿಎನ್ಎ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದ್ದಾರೆ.

Published by:Latha CG
First published: