ಉದ್ಯೋಗವಿಲ್ಲದ ಬಡಗಿ ಮಗನ ಹಿಂಭಾಗ ಕೆತ್ತಿದನಂತೆ ಎನ್ನುವ ಗಾದೆ ಚಾಲ್ತಿಯಲ್ಲಿದೆ. ಅದೇ ರೀತಿ ಇಲ್ಲೋರ್ವ ಬಡಗಿ ಕೆಲಸವಿಲ್ಲದಿದ್ದಾಗ ಮರದಿಂದ ಏಳು ಅಡಿ ಉದ್ದದ ಪುರುಷನ ಗುಪ್ತಾಂಗ ಕೆತ್ತನೆ ಮಾಡಿದ್ದಾನೆ! ಈ ತಪ್ಪಿಗೆ ಈತ ಈಗ ಜೈಲು ಸೇರಿದ್ದಾನೆ. ಜೇಮಿ ಗಾಗ್ನೆ ಜೈಲು ಸೇರಿದ ವ್ಯಕ್ತಿ. ಈತ ನ್ಯೂಯಾರ್ಕ್ನವನು. ಈತ ವರ್ಕ್ ಶಾಪ್ ಒಂದನ್ನು ಮಾಡಲು ಮನೆಯ ಮುಂಭಾಗದಲ್ಲಿರುವ ಜಾಗವನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದ. ಆದರೆ, ಅಧಿಕಾರಿಗಳಿಂದ ಇದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಅವರ ಗಮನ ಸೆಳೆಯಲು ಈತ ಉದ್ದನೆಯ ಫೈನ್ ಟ್ರೀ ತಂದು ಅದರಿಂದ ಪುರುಷನ ಗುಪ್ತಾಂಗ ಕೆತ್ತಿದ್ದಾನೆ.
ಆರಂಭದಲ್ಲಿ ಈ ಕೆತ್ತನೆಯನ್ನು ಮನೆಯ ಮುಂಭಾಗದಲ್ಲೇ ಇಡಲಾಗಿತ್ತು. ಇದನ್ನು ನೋಡಿದ ಜನರು ನಕ್ಕು ಮುಂದೆ ಸಾಗುತ್ತಿದ್ದರು. ಆದರೆ, ಈತನ ಬಗ್ಗೆ ಯಾರೊಬ್ಬರೂ ಲಕ್ಷ್ಯ ತೋರಿರಲಿಲ್ಲ. ಇದರಿಂದ ಸಿಟ್ಟಾದ ಆತ ಈ ಕೆತ್ತನೆಯನ್ನು ತೆಗೆದುಕೊಂಡು ಹೋಗಿ ಪಾರ್ಕ್ನಲ್ಲಿ ಇಟ್ಟಿದ್ದ.
ಇದನ್ನು ನೋಡಿದ ಕೆಲ ಸಭ್ಯಸ್ಥರು ಇದಕ್ಕೆ ಆಕ್ಷೇಪ ಹೊರ ಹಾಕಿದ್ದರು. ಜೇಮಿ ಈ ರೀತಿಯ ಅಶ್ಲೀಲ ಶಿಲ್ಪವನ್ನು ಸಾರ್ವಜನಿಕವಾಗಿ ಇಡುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದಿದ್ದರು. ಆದರೆ, ಇದೊಂದು ಮರದ ತುಂಡಷ್ಟೇ. ಇದರಲ್ಲಿ ಯಾವುದೇ ಅಸಭ್ಯತೆ ಇಲ್ಲ ಎಂದು ಜೇಮಿ ವಾದಿಸಿದ್ದ.
ನಂತರ ಪೊಲೀಸರು ಈತನ ಮನೆಗೆ ಬಂದು ಅದನ್ನು ತೆಗೆಯುವಂತೆ ಸೂಚಿಸಿದ್ದರು. ಆದರೆ, ಇದನ್ನು ಆತ ಲಕ್ಷ್ಯಕ್ಕೆ ತೆಗೆದುಕೊಂಡಿರಲಿಲ್ಲ. ನಂತರ ಒತ್ತಡ ಹೆಚ್ಚಿದ್ದರಿಂದ ಅದನ್ನು ಸ್ಥಳಾಂತರಿಸಿ, ಇದು ವಯಸ್ಕರಿಗೆ ಮಾತ್ರ ಎನ್ನುವ ಬೋರ್ಡ್ ಹಾಕಿದ್ದ. ನಂತರ ಈತನನ್ನು ಅರೆಸ್ಟ್ ಮಾಡಲಾಗಿದೆ. ಸದ್ಯ, ಈತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ