ವಯಸ್ಸಾದ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಊಟದಲ್ಲಿ ಹೆಚ್ಚು ಬದಲಾವಣೆಗಳನ್ನು ಮಾಡೋದಿಲ್ಲ. ದಿನನಿತ್ಯ ಹೆಚ್ಚೂ ಕಡಿಮೆ ಕೆಲವು ರೀತಿಯ ಆಹಾರಗಳನ್ನು ಮಾತ್ರ ತಿನ್ನುತ್ತಿರುತ್ತಾರೆ. ಇದನ್ನು ಆರೋಗ್ಯದ ಕಾಳಜಿ ಎನ್ನಬಹುದು. ಇದೇ ರೀತಿ ಯುಕೆ ಮೂಲದ 90 ವರ್ಷದ ವ್ಯಕ್ತಿಯೊಬ್ಬರು ಪ್ರತಿದಿನವೂ ಒಂದೇ ಪಬ್ನಲ್ಲಿ ಒಂದೇ ರೀತಿಯ ಊಟ ಮಾಡುತ್ತಿದ್ದರು. ಆದರೆ ಜೀವನದಲ್ಲಿ ಕೆಲವೊಮ್ಮೆ ಅಪರಿಚಿತರು ಸಹ ನಮ್ಮನ್ನು
ಆಶ್ಚರ್ಯಗೊಳಿಸಬಹುದು.ಈ ವಯಸ್ಸಾದ ವ್ಯಕ್ತಿಗೂ ಆದೆ ಆಗಿದೆ. ಅದೇನಪ್ಪಾ ಅಂತಹ ಆಶ್ಚರ್ಯ ಅಂತೀರಾ..
90 ವರ್ಷದ ವೃದ್ಧನಿಗೆ ಪಬ್ನಲ್ಲಿ ಯಾರೋ ಅಪರಿಚಿತರು ವಸ್ತುಗಳನ್ನು ಖರೀದಿಸಲು 700 ಪೌಂಡ್ ಅಂದರೆ ಬರೋಬ್ಬರಿ 72,000 ರೂ. ಮೌಲ್ಯದ ಬಾರ್ ಟ್ಯಾಬ್ ಅನ್ನು ಸರ್ಪ್ರೈಸ್ ಉಡುಗೊರೆಯಾಗಿ ನೀಡಿ ಹೋಗಿದ್ದಾರೆ. ಇಂಗ್ಲೆಂಡ್ನ ಚೆಮ್ಸ್ಫೋರ್ಡ್ನ ಪಬ್ಗೆ ಪ್ರತಿದಿನ ಪೀಟ್ ಎಂಬ 90 ವರ್ಷದ ವ್ಯಕ್ತಿ ಹೋಗುತ್ತಾರೆ. ಅವರು ಒಬ್ಬರೇ ವಾಸ ಮಾಡುತ್ತಿದ್ದು, ಪ್ರತಿ ದಿನ ಆ ಪಬ್ನಲ್ಲಿ ಹಂಟರ್ ಚಿಕನ್ ಜತೆಗೆ ಒಂದು ಗ್ಲಾಸ್ ವೈನ್ ಸೇವಿಸುತ್ತಾರೆ ಎಂದು SWNS ವರದಿ ಮಾಡಿದೆ.
ಈ ಹಿನ್ನೆಲೆ ಆ ಪಬ್ಗೆ ರೆಗ್ಯುಲರ್ ಆಗಿ ಹೋಗುವ ಪ್ರತಿಯೊಬ್ಬ ಗ್ರಾಹಕನಿಗೂ ಪೀಟ್ ಬಗ್ಗೆ ಸ್ವಲ್ಪವಾದ್ರೂ ಗೊತ್ತಿರುತ್ತೆ. ಜತೆಗೆ, ಪೀಟ್ ಆ ಪಬ್ ಮಾಲೀಕ ಟಿಮ್ ಮೆಫಮ್ನ ಉತ್ತಮ ಸ್ನೇಹಿತ ಎಂದೂ ತಿಳಿದುಬಂದಿದೆ. ಪಬ್ ಮಾಲೀಕ ಟಿಮ್, ತನ್ನ ಗೆಳೆಯ ಪೀಟ್ ಅವರ ಕಿರು ವಿಡಿಯೋ ಕ್ಲಿಪ್ ಅನ್ನು ಮೈಕ್ರೋ ಬ್ಲಾಗಿಂಗ್ ಜಾಲತಾಣ ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡಿದ್ದರು. ಆ ವಿಡಿಯೋ ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೋದಲ್ಲಿ ಪೀಟ್ ಪಬ್ನಲ್ಲಿ ಮಾಡುವ ದೈನಂದಿನ ಊಟಕ್ಕೆ ಹೇಗೆ ಹಣ ಸಹಾಯ ಮಾಡುವುದು ಎಂದು ಪಬ್ ಮಾಲೀಕ ಟಿಮ್ ಬಳಕೆದಾರರನ್ನು ಕೇಳಿದ್ದಾರೆ.
ಇದನ್ನೂ ಓದಿ: Vaccine Power: ವ್ಯಾಕ್ಸಿನ್ ಹಾಕಿಸಿಕೊಂಡವರ ಮೈಯಲ್ಲಿ ವಿದ್ಯುತ್: ಲಸಿಕೆ ಚುಚ್ಚಿದ ಸ್ಥಳದಲ್ಲಿ ಬೆಳಗಿತು ಬಲ್ಬ್!
ನಂತರ ಪಬ್ ಮಾಲೀಕರು ಪೀಟ್ನ ಟೇಬಲ್ನ ಸಂಖ್ಯೆಯನ್ನು ಪೋಸ್ಟ್ ಮಾಡಿದರು. ಆ್ಯಪ್ ಮೂಲಕ ನೂರಾರು ಜನರು ವೃದ್ಧರಿಗೆ ಆಹಾರವನ್ನು ಆರ್ಡರ್ ಮಾಡಲು ಸಹಾಯ ಮಾಡಿದ್ದಾರೆ. ಅಂತಿಮವಾಗಿ ಪೀಟ್ಗೆ 700 ಪೌಂಡ್ ಅಂದರೆ ಸುಮಾರು 72,000 ರೂ. ಮೊತ್ತದ ಬಾರ್ ಟ್ಯಾಬ್ ಲಭ್ಯವಾಯಿತು. ಟಿಮ್ ಪೀಟ್ಗೆ ಅಂತರ್ಜಾಲದಿಂದ ಅಪರಿಚಿತರು 90 ಗ್ಲಾಸ್ ವೈನ್ ಖರೀದಿಸಿದ್ದಾರೆಂದು ಹೇಳುವ ವಿಡಿಯೋವನ್ನು SWNSನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಇದಕ್ಕೆ 90 ವರ್ಷ ವಯಸ್ಸಿನ ಪೀಟ್ ನೀವು ಹಣವನ್ನು ಕಳೆದುಕೊಳ್ಳುತ್ತೀರಿ" ಎಂದು ಹೇಳುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಪೀಟ್ ನಾನು ಭೇಟಿಯಾದ ಅತ್ಯಂತ ಸಭ್ಯ ಮಹನೀಯರಲ್ಲಿ ಒಬ್ಬರು ಹಾಸ್ಯ ಪ್ರಜ್ಞೆಯು ಸಹ ರೇಜರ್ನಷ್ಟೇ ತೀಕ್ಷ್ಣವಾಗಿದೆ ಎಂದು ಟಿಮ್ ಹೇಳಿಕೆ ನೀಡಿರುವ ಹೇಳಿಕೆ ಬಗ್ಗೆ ದಿ ಸನ್ ಉಲ್ಲೇಖಿಸಿದೆ. ಜನರು ಪೀಟ್ಗೆ ಪಾನೀಯಗಳನ್ನು ಖರೀದಿಸಿದರು. ಏಕೆಂದರೆ ಅವರು ಒಳ್ಳೆಯ ವ್ಯಕ್ತಿ ಎಂದು ಜನರು ಭಾವಿಸಿದ್ದರು. ಆದರೂ, ಅವರಿಗೆ ಹಣದ ಅಗತ್ಯವಿಲ್ಲ, ಅಥವಾ ಬಡವರಲ್ಲ ಮತ್ತು ಜನರು ಅವರಿಗೆ ಕರುಣೆ ತೋರಿಸಿ ಈ ಹಣ ನೀಡಲಿಲ್ಲ. ಅವರು ಕೇವಲ ಪೀಟ್ನನ್ನು ಪ್ರೀತಿ ಮಾಡುತ್ತಾರೆ ಎಂದು ಟಿಮ್ ಹೇಳಿದ್ದಾರೆ.
ಪೀಟ್ ತನಗೆ ಮೂರು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಪರಿಚಯ ಎಂದು ಟಿಮ್ ಹೇಳಿದ್ದು, ಅವರು ತನಗೆ 'ಪರ್ಫೆಕ್ಟ್ ತಾತ' ಎಂದೂ ಟಿಮ್ ವರ್ಣಿಸುತ್ತಾರೆ. ಹಾಗೆ, ಪೀಟ್ 11 ವರ್ಷಗಳ ಹಿಂದೆ ನಿಧನರಾದ ತನ್ನ ಹೆಂಡತಿಯ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಜತೆಗೆ, ಯುದ್ಧ ನಡೆದ ಸಮಯದಲ್ಲಿ ಭಾಗಿಯಾದ ಬಗ್ಗೆಯೂ ಹೇಳಿಕೊಂಡಿದ್ದಾರೆ ಎಂದೂ ಚೆಮ್ಸ್ಫೋರ್ಡ್ನ ಆ ಬಾರ್ ಮಾಲೀಕ ತಿಳಿಸಿದ್ದಾರೆ. ಏನೇ ಆಗ್ಲಿ ಇದು ಹೃದಯಸ್ಪರ್ಶಿ ಕೆಲಸ ಎಂಬುದನ್ನು ನೀವು ಸಹ ಒಪ್ಪಿಕೊಳ್ಳುತ್ತೀರಲ್ಲವೇ..?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ