• Home
  • »
  • News
  • »
  • trend
  • »
  • Viral Story: ಅಪರಿಚಿತನ ತಾಯಿ ಚಿಕಿತ್ಸೆಗೆ ನೀಡಿದ್ದ ಹಣ ವಾಪಸ್! ಈತನ ಪ್ರಾಮಾಣಿಕತೆ ಮೆಚ್ಚಿದ ನೆಟ್ಟಿಗರು 

Viral Story: ಅಪರಿಚಿತನ ತಾಯಿ ಚಿಕಿತ್ಸೆಗೆ ನೀಡಿದ್ದ ಹಣ ವಾಪಸ್! ಈತನ ಪ್ರಾಮಾಣಿಕತೆ ಮೆಚ್ಚಿದ ನೆಟ್ಟಿಗರು 

ಚಿಕಿತ್ಸೆಗಾಗಿ ನೀಡಿದ್ದ ದೇಣಿಗೆಯನ್ನ ಮರಳಿಸಿದ ವ್ಯಕ್ತಿ

ಚಿಕಿತ್ಸೆಗಾಗಿ ನೀಡಿದ್ದ ದೇಣಿಗೆಯನ್ನ ಮರಳಿಸಿದ ವ್ಯಕ್ತಿ

ಈಗಂತೂ ಸೋಷಿಯಲ್‌ ಮೀಡಿಯಾ ಜಮಾನ. ಒಳ್ಳೆಯದು ಕೆಟ್ಟದ್ದು ಎಲ್ಲವನ್ನೂ ಈ ವೇದಿಕೆಯಲ್ಲಿ ಜನರು ಹಂಚಿಕೊಳ್ತಾ ಇರ್ತಾರೆ. ಹೀಗೆಯೇ ಲಿಂಕ್ಡ್‌ ಇನ್‌ ನಲ್ಲಿ ವ್ಯಕ್ತಿಯೊಬ್ಬರು ಇಂತಹದ್ದೇ ಘಟನೆಯನ್ನು ಹಂಚಿಕೊಂಡಿದ್ದಾರೆ. ಕಮಲ್‌ ಸಿಂಗ್‌ ಎಂಬುವವರು ಈ ಪೋಸ್ಟ್‌ ಮಾಡಿದ್ದು, ತಾವು ನೀಡಿದ್ದ 201 ರೂ ಹೇಗೆ ವಾಪಸ್‌ ಪಡೆದೆ ಅನ್ನೋದನ್ನು ವಿವರಿಸಿದ್ದಾರೆ.

ಮುಂದೆ ಓದಿ ...
  • Share this:

ನಮ್ಮ ಸುತ್ತಮುತ್ತ ಅದೆಷ್ಟೋ ಘಟನೆಗಳು ನಡೆಯುತ್ತಿರುತ್ತವೆ. ಕೆಟ್ಟವರೇ ಹೆಚ್ಚಾಗಿ ಕಾಣಸಿಗುವ ಇಂದಿನ ಪ್ರಪಂಚದಲ್ಲಿ ಅಲ್ಲಲ್ಲಿ, ಆಗಾಗ ಒಳ್ಳೆಯವರೂ ಸಿಗ್ತಾರೆ. ಅದರಲ್ಲೂ ದುಡ್ಡಿಗಾಗಿ ಏನೇನೋ ಕೆಟ್ಟ ಕೆಲಸಗಳು (Bad works) ನಡೆಯುತ್ತಿರುತ್ತವೆ. ಕಳ್ಳತನ, ಕೊಲೆ, ಮೋಸಗಳಂಥ ಕೇಸ್‌ ಗಳು ಸಾಕಷ್ಟು ಸಿಗುತ್ತವೆ. ಆದ್ರೆ ಈ ಪಾಪಿಗಳ ಲೋಕದಲ್ಲಿ ಪಾಪದವರೂ ಇರ್ತಾರೆ. ಒಳ್ಳೆಯತನ, ಮಾನವೀಯತೆ (Humanity) ಅನ್ನೋದು ಪೂರ್ತಿಯಾಗಿ ನಾಶವಾಗಿಲ್ಲ ಎನ್ನೋದಕ್ಕೆ ಅಲ್ಲಲ್ಲಿ ಕೆಲವೊಂದು ಘಟನೆಗಳು ಕಾಣಸಿಗುತ್ತವೆ. ಕೆಲವರಿಗೆ ದೇವರು ತಮಗೆ ನೀಡಿದ್ದರಲ್ಲಿ ಕೆಲವಷ್ಟನ್ನು ಬೇರೆಯವರಿಗೂ ನೀಡೋದ್ರಲ್ಲಿ ಏನೋ ಸಮಾಧಾನ. ಚಿಕ್ಕ ಪುಟ್ಟ ಸಹಾಯ (Help) ಮಾಡುತ್ತಲೇ ಖುಷಿ ಪಡ್ತಾರೆ. ಅದರಲ್ಲಿ ಕೆಲವರು ಬೇರೆಯವರು ಮಾಡಿದ್ದ ಚಿಕ್ಕ ಧನಸಹಾಯವನ್ನೂ ಮರೆಯದೇ ಹಿಂದಿರುಗಿಸುತ್ತಾರೆ. ಅವರಿಗೆ ಅದೇ ಸಮಾಧಾನ.


ಇಂಥದ್ದೇ ಘಟನೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಈಗಂತೂ ಸೋಷಿಯಲ್‌ ಮೀಡಿಯಾ ಜಮಾನ. ಒಳ್ಳೆಯದು ಕೆಟ್ಟದ್ದು ಎಲ್ಲವನ್ನೂ ಈ ವೇದಿಕೆಯಲ್ಲಿ ಜನರು ಹಂಚಿಕೊಳ್ತಾ ಇರ್ತಾರೆ. ಹೀಗೆಯೇ ಲಿಂಕ್ಡ್‌ ಇನ್‌ ನಲ್ಲಿ ವ್ಯಕ್ತಿಯೊಬ್ಬರು ಇಂತಹದ್ದೇ ಘಟನೆಯನ್ನು ಹಂಚಿಕೊಂಡಿದ್ದಾರೆ. ಕಮಲ್‌ ಸಿಂಗ್‌ ಎಂಬುವವರು ಈ ಪೋಸ್ಟ್‌ ಮಾಡಿದ್ದು, ತಾವು ನೀಡಿದ್ದ 201 ರೂ ಹೇಗೆ ವಾಪಸ್‌ ಪಡೆದೆ ಅನ್ನೋದನ್ನು ವಿವರಿಸಿದ್ದಾರೆ.


ಚಿಕಿತ್ಸೆಗಾಗಿ ನೀಡಿದ್ದ ದೇಣಿಗೆಯನ್ನ ಮರಳಿಸಿದ ವ್ಯಕ್ತಿ!
ಕಮಲ್‌ ಸಿಂಗ್‌, ಅಪರಿಚಿತರೊಬ್ಬರ ತಾಯಿಯ ವೈದ್ಯಕೀಯ ನೆರವಿಗಾಗಿ 201 ರೂಪಾಯಿಗಳನ್ನು 2021 ರಲ್ಲಿ ಕ್ರೌಡ್‌ ಫಂಡಿಂಗ್ ಅನ್ನೋ ವೇದಿಕೆಯಲ್ಲಿ ದೇಣಿಗೆ ನೀಡಿದ್ದರು. ಆನಂತರ ಅದನ್ನು ಅವರು ಮರೆತೂ ಬಿಟ್ಟಿದ್ದರು. ಆದರೆ ಇದೀಗ ಅದೇ ಅಕೌಂಟ್‌ ನಿಂದ ಪೋನ್‌ ಪೇಯಲ್ಲಿ ತಮಗೆ 201 ರೂ ವಾಪಸ್‌ ಬಂದಿದೆ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.


ಇದನ್ನೂ ಓದಿ:  Kamal Kishor Mandal: ಅಂದು ಜವಾನ, ಇಂದು ಕಾಲೇಜ್ ಸಹಾಯಕ ಪ್ರಾಧ್ಯಾಪಕ! ಇವರ ಕಥೆ ಎಲ್ಲರಿಗೂ ಸ್ಫೂರ್ತಿ


ಕಮಲ್‌ ಸಿಂಗ್ ಅವರು, ಫೋನ್‌ ಪೇ ನಲ್ಲಿ ₹201 ಸ್ವೀಕರಿಸಿದಾಗ ಆಶ್ಚರ್ಯವಾಯಿತು. ಇದೇನಿದು.. ಅಪರಿಚಿತ ವ್ಯಕ್ತಿಯಿಂದ ಬಂದಿದೆಯಲ್ಲ ಎಂದು ಅಲ್ಲಿದ್ದ ಸಂಭಾಷಣೆಯನ್ನು ತೆರೆದಾಗ, ಕ್ರೌಡ್-ಸೋರ್ಸಿಂಗ್ ಫಂಡ್ ಮೂಲಕ 1.5 ವರ್ಷಗಳ ಹಿಂದೆ ಆ ವ್ಯಕ್ತಿಗೆ ಸಹಾಯ ಮಾಡಿದ್ದಾಗಿ ನೆನಪಾಯಿತು ಎಂದು ಅವರು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಬರೆದುಕೊಂಡಿದ್ದಾರೆ.


ಪಾಸಿಟಿವಿಟಿಯನ್ನು ಹರಡುವಂತಹ ಈ ಪೋಸ್ಟ್‌ ಅನ್ನು ನೆಟ್ಟಿಗಳು ಇಷ್ಟಪಟ್ಟಿದ್ದಾರೆ. ಈ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ, ಇದನ್ನು ಒಂದು ಲಕ್ಷಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ. ಸಾವಿರಾರು ಕಾಮೆಂಟ್‌ಗಳನ್ನು ನೀಡಿದ್ದಾರೆ.


ಈ ಪೋಸ್ಟ್ ನೋಡಿ ನೆಟ್ಟಿಗರು ಏನ್ ಹೇಳಿದ್ರು 
ಲಿಂಕ್ಡ್‌ಇನ್ ಕಾಮೆಂಟ್‌ಗಳಲ್ಲಿ ಒಬ್ಬರು ಬರೆದಿದ್ದಾರೆ, "ಇಂದಿನ ಪ್ರಪಂಚವು ವಿಭಿನ್ನವಾಗಿದೆ, ಅಲ್ಲಿ ಯಾರಾದರೂ ನಿಮ್ಮ ಹಣವನ್ನು ತೆಗೆದುಕೊಂಡು ಮರೆತುಬಿಡುತ್ತಾರೆ. ಬಹುಶಃ ಕಚೇರಿ ಅಥವಾ ಸಮಾಜದಲ್ಲಿ ಇರಬಹುದು. ಇದಕ್ಕಾಗಿ ಪ್ರಾಮಾಣಿಕತೆ ಇನ್ನೂ ಕೆಲವರಲ್ಲಿ ಇದೆ ಎಂದು ಸಂತೋಷವಾಗುತ್ತದೆ" ಎಂದು. ಮತ್ತೊಬ್ಬ ವ್ಯಕ್ತಿ "ಕೊಡುವುದರಿಂದ ಯಾರೂ ಬಡವರಾಗಿಲ್ಲ, ನಾವು ಸಂತೋಷದಿಂದ ನೀಡಿ ಕೃತಜ್ಞತೆ ಸ್ವೀಕರಿಸಿದಾಗ, ಎಲ್ಲರೂ ಆಶೀರ್ವದಿಸುತ್ತಾರೆ. ಮಾನವೀಯತೆಯನ್ನು ಜೀವಂತವಾಗಿರಿಸಿದ ನಿಮ್ಮಿಬ್ಬರಿಗೂ ಅಭಿನಂದನೆಗಳು." ಎಂದಿದ್ದಾರೆ.


ಇನ್ನೊಬ್ಬರು, "ನಿಜಕ್ಕೂ ಹೃದಯ ಸ್ಪರ್ಶಿ, ನಾವು ಪರಸ್ಪರ ಕೃತಜ್ಞತೆ ಮತ್ತು ನಿಷ್ಠೆ ಹೊಂದಿರೋಣ" ಎಂದಿದ್ದಾರೆ. "ಜನರು ಅಥವಾ ಪ್ರಾಮಾಣಿಕರು ಮತ್ತು ಸತ್ಯವಂತರು ಎಂದು ಕೇಳಲು ಸಂತೋಷವಾಗುತ್ತದೆ. ಈ ರೀತಿಯಾಗಿ ಮಾನವೀಯತೆಯು ಬೆಳೆಯುತ್ತದೆ" ಎಂದು ಮತ್ತೊಬ್ಬರು ಹೇಳಿದ್ದಾರೆ.


ಇದನ್ನೂ ಓದಿ:  Viral Video: ಊಟಕ್ಕೆ ಬಂದಿದ್ದ ಗ್ರಾಹಕನ ಜೀವ ಉಳಿಸಿದ ಮಹಿಳಾ ಸಿಬ್ಬಂದಿ; ವಿಡಿಯೋ ನೋಡಿ


ಒಟ್ಟಾರೆ, ಹಣದ ಮೊತ್ತ ಎಷ್ಟೇ ಇರಲಿ, ಅದನ್ನು ಹಿಂದಿರುಗಿಸಿರುವುದು ದೊಡ್ಡ ಗುಣ. ಈಗಂತೂ ನೂರು, ಇನ್ನೂರಕ್ಕೆಲ್ಲ ಬೆಲೆಯೇ ಇಲ್ಲವೆನ್ನುವಂತಾಗಿದೆ. ಆದರೆ ಚಿಕ್ಕ ಮೊತ್ತವಾದರೂ ಅದನ್ನು ನೆನಪಿಟ್ಟುಕೊಂಡು ವಾಪಸ್ಸು ನೀಡಿರುವುದು ಅವರ ಪ್ರಾಮಾಣಿಕತೆಯನ್ನು ತೋರಿಸುತ್ತೆ. ಹಾಗೆಯೇ ಪ್ರಾಮಾಣಿಕತೆ ಹಾಗೂ ಸ್ವಾಭಿಮಾನ ಇವೆರಡೂ ಜೀವನದಲ್ಲಿ ಇರಲೇಬೇಕಾದಂತಹ ಗುಣಗಳು. ಅದರಿಂದಲೇ ಜೀವನಕ್ಕೊಂದು ಅರ್ಥ ಅನ್ನೋದು ಸುಳ್ಳಲ್ಲ.

Published by:Ashwini Prabhu
First published: