Alcohol: ಅಪಾಯದಲ್ಲಿದ್ದೇವೇ ಬೇಗ ಬನ್ನಿ! 100ಗೆ ಡಯಲ್ ಮಾಡಿ ಎರಡು ಬಾಟಲ್ ಬಿಯರ್ ತರಲು ಹೇಳಿದ ಯುವಕ

ಪೊಲೀಸ್ ತುರ್ತು ಪರಿಸ್ಥಿತಿಯ ಸಹಾಯವಾಣಿ ಸಂಖ್ಯೆಗೆ ಸಹಾಯವನ್ನು ಕೋರಿ ಬರುವಂತಹ ಕರೆಗಳಿಗಿಂತಲೂ ಹೆಚ್ಚಾಗಿ ಜನರು ವಿಚಿತ್ರವಾದ ಬೇಡಿಕೆಗಳನ್ನು ಪೊಲೀಸರ ಮುಂದೆ ಇಡುತ್ತಾರೆ ಎಂದು ಹೇಳಬಹುದು. ಇಂತಹದ್ದೇ ಒಂದು ಘಟನೆ ನಡೆದಿದ್ದು ಯುವಕನೊಬ್ಬ ಪೊಲೀಸರಿಗೆ ಕರೆ ಮಾಡಿ ವಿಚಿತ್ರವಾದ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾರ್ವಜನಿಕರ (Public) ದೂರು ದುಮ್ಮಾನಗಳನ್ನು ಕೇಳಿಸಿಕೊಳ್ಳಲು ಮತ್ತು ಅವರು ಅಪಾಯದ (danger) ಸ್ಥಿತಿಯಲ್ಲಿದ್ದರೆ (Status) ಅವರಿಗೆ ಸಹಾಯ (Help) ಮಾಡುವುದಕ್ಕಾಗಿಯೇ ಪೊಲೀಸ್ ಇಲಾಖೆ ಒಂದು ತುರ್ತು ಸಂಖ್ಯೆಯನ್ನು (Emergency number) ನೀಡಿದ್ದಾರೆ. ಅದು ನಮಗೆ ನಿಮಗೆ ಗೊತ್ತಿರುವಂತೆ 100, ಎಂದರೆ ಪೊಲೀಸ್ ತುರ್ತು ಪರಿಸ್ಥಿತಿಯ ಸಹಾಯವಾಣಿ (Helpline for a police emergency) . ಆದರೆ ಈ ಸಂಖ್ಯೆಗೆ ಸಹಾಯವನ್ನು ಕೋರಿ ಬರುವಂತಹ ಕರೆಗಳಿಗಿಂತಲೂ (Calls) ಹೆಚ್ಚಾಗಿ ಜನರು ವಿಚಿತ್ರವಾದ ಬೇಡಿಕೆಗಳನ್ನು ಪೊಲೀಸರ ಮುಂದೆ ಇಡುತ್ತಾರೆ ಎಂದು ಹೇಳಬಹುದು. ಇಂತಹದ್ದೇ ಒಂದು ಘಟನೆ ನಡೆದಿದ್ದು ಯುವಕನೊಬ್ಬ ಪೊಲೀಸರಿಗೆ ಕರೆ ವಿಚಿತ್ರವಾದ ಬೇಡಿಕೆಯೊಂದನ್ನು (Demand) ಮುಂದಿಟ್ಟಿದ್ದಾನೆ.

ನಾವು ಕಷ್ಟದಲ್ಲಿ ಸಿಲುಕಿದ್ದೇವೆ, ಬಂದು ದಯವಿಟ್ಟು ಸಹಾಯ ಮಾಡಿ
ಕೆಲವೊಂದು ಸಮಯದಲ್ಲಿ ಜನರು ಈ ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ‘ನಾವು ಕಷ್ಟದಲ್ಲಿ ಸಿಲುಕಿದ್ದೇವೆ, ಬಂದು ದಯವಿಟ್ಟು ಸಹಾಯ ಮಾಡಿ’ ಎಂದು ಕೇಳಿ ಕೊಳ್ಳುತ್ತಾರೆ. ಆಗ ಪೊಲೀಸರು ಆ ಕರೆ ಎಲ್ಲಿಂದ ಬಂದಿದೆ ಎಂದು ತಿಳಿದುಕೊಂಡು ಅಲ್ಲಿಗೆ ಹೋಗಿ ಅವರ ಒಂದು ಸಮಸ್ಯೆಯನ್ನು ಪರಿಹರಿಸುತ್ತಾರೆ.

ಈಗ ಇಲ್ಲಿಯೂ ಸಹ ಒಂದು ವಿಚಿತ್ರವಾದ ಘಟನೆ ನಡೆದಿದೆ ನೋಡಿ. ಹೈದರಾಬಾದ್ ನಲ್ಲಿರುವ ದೌಲತಾಬಾದ್ ಪೊಲೀಸ್ ಠಾಣೆಯ ಸಿಬ್ಬಂದಿಯವರಿಗೆ ಒಂದು ದಿನ ಒಂದು ಕರೆ ಬರುತ್ತದೆ. ಆ ಕರೆಯಲ್ಲಿ ಒಬ್ಬ ಯುವಕ ತಾನು ತುಂಬಾನೇ ಅಪಾಯದಲ್ಲಿ ಇದ್ದೇನೆ ಎಂದು ಹೇಳುತ್ತಾನೆ.

ಪೊಲೀಸರು 100 ನಂಬರಿಗೆ ಆ ಕರೆಯನ್ನು ಸ್ವೀಕರಿಸಿದ ನಂತರ 7 ಕಿಲೋ ಮೀಟರ್ ದೂರದಲ್ಲಿರುವ ಹಳ್ಳಿಗೆ ಕೂಡಲೇ ಹೋಗುತ್ತಾರೆ. ಆಗ ಆ ಯುವಕ ಈ ಪೊಲೀಸರಿಗೆ ಎಂತಹ ಬೇಡಿಕೆಯನ್ನು ಇಟ್ಟಿದ್ದಾನೆ ಅಂತ ನೀವು ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೀರಾ.

ಪೊಲೀಸರಿಗೆ ಇತ್ತ ಬೇಡಿಕೆ ಏನು ?
ಆ ಯುವಕ ತನ್ನನ್ನು ಕಾಪಾಡಲು ಬಂದಂತಹ ಪೊಲೀಸರಿಗೆ ಎರಡು ಬಿಯರ್ ತುಂಬಿರುವ ಬಾಟಲಿಗಳನ್ನು ತರಲು ಹೇಳಿದಾಗ ಆ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಮದುವೆಯ ಪಾರ್ಟಿಯಲ್ಲಿದ್ದ ಆ ಯುವಕ, ಅಲ್ಲಿಯವರೆಗೆ ತಾನು ಸೇವಿಸಿದ್ದ ಮದ್ಯವು ಸಾಕಾಗಿಲ್ಲ, ಹೆಚ್ಚಿನ ಸಮಯದವರೆಗೆ ಹಾಗೆಯೇ ಅದೇ ನಶೆಯಲ್ಲಿ ಉಳಿಯಲು ತನಗೆ ಇನ್ನೂ ಸ್ವಲ್ಪ ಬಿಯರ್ ಅಗತ್ಯವಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಇದಲ್ಲದೆ, ಎಲ್ಲಾ ವೈನ್ ಶಾಪ್ ಗಳನ್ನು ಈ ಸಮಯದಲ್ಲಿ ಮುಚ್ಚಲಾಗಿದೆ, ಇದು ತುಂಬಾನೇ 'ತುರ್ತು ಪರಿಸ್ಥಿತಿ'ಯಾಗಿದೆ ಎಂದು ಆ ಯುವಕ ಪೊಲೀಸರಿಗೆ ಹೇಳಿದ್ದಾನೆ.

ಇದನ್ನೂ ಓದಿ: Bride Gang Raped: ಮದುವೆ ಕಾಗದ ಹಂಚುತ್ತಿದ್ದ ವಧುವಿನ ಮೇಲೆ ಗ್ಯಾಂಗ್ ರೇಪ್

ಅರ್ಧಕ್ಕೆ ಶಾಲೆ ಬಿಟ್ಟಂತಹ 22 ವರ್ಷದ ಜಾನಿಗಾಲ ಮಧು ಎಂದು ಗುರುತಿಸಲಾದ ಯುವಕನನ್ನು ಪೊಲೀಸರು ಜನರ ಅಗತ್ಯಗಳನ್ನು ಪೂರೈಸುತ್ತಿದ್ದಾರೆ ಮತ್ತು ಅವನಿಗೆ ಸ್ವಲ್ಪ ಬಿಯರ್ ವ್ಯವಸ್ಥೆ ಮಾಡುವುದು ಸಹ ಒಂದು ಅಗತ್ಯ ಎಂದು ವಾದಿಸಿದನು. ಮಧು ವಿರುದ್ಧ ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿದ್ದು, ಆತನಿಗೆ ಕೌನ್ಸೆಲಿಂಗ್ ಮಾಡಲಾಗಿದೆ ಎಂದು ದೌಲತಾಬಾದ್ ಇನ್ಸ್‌ಪೆಕ್ಟರ್ ವಿ ರಮೇಶ್ ಕುಮಾರ್ ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಡಯಲ್ 100 ಎಂಬುದು ಒಂದು ತುರ್ತು ಸೇವೆ
"ಡಯಲ್ 100 ಎಂಬುದು ಒಂದು ತುರ್ತು ಸೇವೆಯಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ ಮತ್ತು ನಿಜವಾದ ಅಗತ್ಯವಿದ್ದಾಗ ಮಾತ್ರ ಅದಕ್ಕೆ ಕರೆ ಮಾಡಿರಿ ಎಂದು ನಾವು ಜನರನ್ನು ವಿನಂತಿಸುತ್ತೇವೆ" ಎಂದು ಅವರು ಹೇಳಿದರು.

ದೌಲತಾಬಾದ್ ಮಂಡಲದ ನರಸಾಪುರ ಗ್ರಾಮದವರಾದ ಮಧು, ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಹೈದರಾಬಾದ್ ನಲ್ಲಿ ವಾಸಿಸುತ್ತಿದ್ದಾರೆ. ಗುರುವಾರ, ಅವರು ಮದುವೆಗಾಗಿ ಪಕ್ಕದ ಗ್ರಾಮವಾದ ಗೋಕಾ ಫಸ್ಲಾಬಾದ್ ಗೆ ಬಂದಿದ್ದರು. ಶುಕ್ರವಾರ ನಸುಕಿನ ಜಾವ 2.30ರ ಸುಮಾರಿಗೆ ಅವರು ಪೊಲೀಸ್ ತುರ್ತು ಸಹಾಯವಾಣಿ 100ಗೆ ಕರೆ ಮಾಡಿ, ಜನರ ಗುಂಪೊಂದು ತಮ್ಮ ಮೇಲೆ ದಾಳಿ ನಡೆಸಲಿದೆ, ಅಪಾಯದಲ್ಲಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದನು.

ಇದನ್ನೂ ಓದಿ:  Bride Exchange: ಕರೆಂಟು ಹೋದ ಟೈಮಲಿ ವಧು-ವರರೇ ಅದಲು ಬದಲು; ಅವನ ಹುಡುಗಿಗೆ ಇವನು, ಇವನ ಹುಡುಗಿಗೆ ಅವನು ತಾಳಿ ಕಟ್ಟಿದ!

ರಾತ್ರಿ ಗಸ್ತು ತಿರುಗುತ್ತಿರುವ ಪೊಲೀಸ್ ತಂಡವೊಂದು ಕೂಡಲೇ ಆ ಯುವಕನಿದ್ದ ಗ್ರಾಮಕ್ಕೆ ಧಾವಿಸಿತು. ಮಧು ಸುರಕ್ಷಿತ ಮತ್ತು ಸದೃಢವಾಗಿರುವುದನ್ನು ಅವರು ಕಂಡು ಕೊಂಡರು ಮತ್ತು ಅಲ್ಲಿ ಅವನಿಗೆ ಯಾವುದೇ ರೀತಿಯ ತೊಂದರೆ ಆಗಿರಲಿಲ್ಲ. ಪೊಲೀಸರು ಮಧುವಿನ ವಿವರಗಳನ್ನು ಸಂಗ್ರಹಿಸಿ ಠಾಣೆಗೆ ಹಿಂದಿರುಗಿದರು. ಎಲ್ಲಾ ಪ್ರಕರಣಗಳ ಬಳಿಕ 22 ವರ್ಷದ ಯುವಕ ಮಧುನನ್ನು ಠಾಣೆಗೆ ಬರುವಂತೆ ಇಲಾಖೆ ಆದೇಶಿಸಿತು. ತನ್ನ ತಂದೆಯೊಂದಿಗೆ ಬಂದ ಮಧುಗೆ ನಂತರ ಕೌನ್ಸೆಲಿಂಗ್ ನಡೆಸಲಾಯಿತು.
Published by:Ashwini Prabhu
First published: