Lucky Fellow: ಯಾರಿಗೂ ಬೇಡದ ಚಿತ್ರಕ್ಕೆ ಎರಡೂವರೆ ಸಾವಿರ ಕೊಟ್ಟು ಕೊಂಡ ವ್ಯಕ್ತಿ, ಈಗ ಅದರ ಬೆಲೆ 375 ಕೋಟಿ! ಅದೃಷ್ಟ ಅಂದ್ರೆ ಇದು!

30 ಡಾಲರ್ (2,245 ರೂಪಾಯಿ) ನೀಡಿ ಒಂದು ಸುಂದರವಾದ ಚಿತ್ರಕಲೆ (Artwork) ಖರೀದಿಸಿದ್ದಾನೆ. ಅನಂತರವೇ ಆ ವ್ಯಕ್ತಿಗೆ ಆ ಚಿತ್ರಕಲೆಯ ನೈಜ ಬೆಲೆ ಗೊತ್ತಾಗಿದ್ದು ಎಂದು ಹೇಳಬಹುದು. ಅದು ವಾಸ್ತವವಾಗಿ ಸುಮಾರು 50 ಮಿಲಿಯನ್ ಡಾಲರ್ ಮೌಲ್ಯದ ಮೂಲ ಕಲಾಕೃತಿ ಎಂದು ಕಂಡುಕೊಂಡ ನಂತರ ಆ ವ್ಯಕ್ತಿಯು ತನ್ನನ್ನು ಅತ್ಯಂತ ಅದೃಷ್ಟಶಾಲಿ ಎಂದು ಭಾವಿಸಿದ್ದಾನೆ.

ಕಲಾಕೃತಿ

ಕಲಾಕೃತಿ

  • Share this:

ಕೆಲವೊಮ್ಮೆ ಅದೃಷ್ಟ (Luck) ಎನ್ನುವುದು ನಮಗೆ ಹೇಗೆ ಒಲಿದು ಬರುತ್ತದೆ ಎಂದು ಯಾರಿಗೂ ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ನಾವು ಒಮ್ಮೊಮ್ಮೆ ಖರೀದಿಸಿದ ವಸ್ತುವಿನ ನೈಜ ಬೆಲೆ (Real Price) ಕೊಂಡುಕೊಂಡ ಬೆಲೆಗಿಂತಲೂ ತುಂಬಾನೇ ಹೆಚ್ಚಿರುವುದನ್ನು ನಮಗೆ ಅನಂತರ ಗೊತ್ತಾಗುತ್ತದೆ. ಇಲ್ಲಿಯೂ ಇದೇ ರೀತಿಯ ಒಂದು ಘಟನೆ ನಡೆದಿದೆ.ಒಬ್ಬ ವ್ಯಕ್ತಿಯು ಎಸ್ಟೇಟ್ ಮಾರಾಟದಲ್ಲಿ 30 ಡಾಲರ್ (2,245 ರೂಪಾಯಿ) ನೀಡಿ ಒಂದು ಸುಂದರವಾದ ಚಿತ್ರಕಲೆ (Artwork) ಖರೀದಿಸಿದ್ದಾನೆ. ಅನಂತರವೇ ಆ ವ್ಯಕ್ತಿಗೆ ಆ ಚಿತ್ರಕಲೆಯ ನೈಜ ಬೆಲೆ ಗೊತ್ತಾಗಿದ್ದು ಎಂದು ಹೇಳಬಹುದು. ಅದು ವಾಸ್ತವವಾಗಿ ಸುಮಾರು 50 ಮಿಲಿಯನ್ ಡಾಲರ್ ಮೌಲ್ಯದ ಮೂಲ ಕಲಾಕೃತಿ ಎಂದು ಕಂಡುಕೊಂಡ ನಂತರ ಆ ವ್ಯಕ್ತಿಯು ತನ್ನನ್ನು ಅತ್ಯಂತ ಅದೃಷ್ಟಶಾಲಿ ಎಂದು ಭಾವಿಸಿದ್ದಾನೆ.


ಈ ಅನಾಮಧೇಯ ವ್ಯಕ್ತಿಗೆ ಹಳದಿ ಲಿನಿನ್ ಮೇಲೆ ಚಿತ್ರಿಸಲಾದ ತಾಯಿ ಮತ್ತು ಮಗನ ಚಿತ್ರಕಲೆ ತುಂಬಾನೇ ಇಷ್ಟವಾಯಿತು. ಈ ಚಿತ್ರಕಲೆ ಸಾಮಾನ್ಯ ಚಿತ್ರಕಲೆ ಅಲ್ಲದೆ, ಇದು ಕಲಾ ಪ್ರಪಂಚದ ಅತ್ಯಂತ ಪ್ರಸಿದ್ಧ ಕಿಸ್ತ ಶಕೆಯ ಆಲ್ಬ್ರೆಕ್ಟ್ ಡ್ಯೂರರ್ ಮೋನೋಗ್ರಾಮ್ ( monograms) ಅನ್ನು ಹೊಂದಿದ್ದರಲ್ಲಿ ಇದು ಒಂದು ಎಂದು ಇದರ ಪ್ರಾಮುಖ್ಯತೆಯ ಬಗ್ಗೆ ಅವನಿಗೆ ಸ್ವಲ್ಪವು ಅರ್ಥವಾಗಲಿಲ್ಲ.


374 ಕೋಟಿ ರೂ. ಬೆಲೆ ಬಾಳುವ ಕಾಲಕೃತಿ

ಸ್ಮಿತ್ಸೋನಿಯನ್ ಮ್ಯಾಗಜಿನ್ ಪ್ರಕಾರ, ಈ ಕಲಾಕೃತಿಯನ್ನು ನಂತರ ತಜ್ಞರು ಮತ್ತು ವಿದ್ವಾಂಸರು ಪರಿಶೀಲಿಸಿದರು, ಅವರು ಈ ಮೂಲ ರೇಖಾಚಿತ್ರವು ಸುಲಭವಾಗಿ 50 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ ಎಂದು ಒಪ್ಪಿಕೊಂಡರು. 50 ಮಿಲಿಯನ್ ಡಾಲರ್ ಎಂದರೆ ಇದರ ಮೌಲ್ಯವು ಭಾರತದಲ್ಲಿ ಬರೋಬ್ಬರಿ 374 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ:  Pataal Lok: ಇದುವೇ ನೋಡಿ ಭಾರತದ ಪಾತಳಲೋಕ: 3 ಸಾವಿರ ಅಡಿಯಲ್ಲಿರುವ 12 ಗ್ರಾಮಗಳನ್ನು ತಲುಪಿಲ್ಲ ಮಹಾಮಾರಿ ಕೋವಿಡ್

ಸ್ಪಷ್ಟವಾಗಿ, ಸೊಗಸಾದ ರೇಖಾಚಿತ್ರವನ್ನು ದಿವಂಗತ ವಾಸ್ತುಶಿಲ್ಪಿ ಜೀನ್ ಪಾಲ್ ಕಾರ್ಲಿಯನ್ ಕುಟುಂಬವು 2016ರಲ್ಲಿ ಮ್ಯಾಸಚೂಸೆಟ್ಸ್‌ನಲ್ಲಿ ಮಾರಾಟ ಮಾಡಿತು. ಕಾರ್ಲಿಯನ್ನರು ಸಹ ಈ ರೇಖಾಚಿತ್ರವು ಆಧುನಿಕ ಕಾಲದಲ್ಲಿ ಚಿತ್ರಿಸಿದ್ದು ಎಂದು ಊಹಿಸಿದ್ದರು. ಆದರೆ ಇದರ ನೈಜ ಬೆಲೆ ಗೊತ್ತಿದ್ದದ್ದು ಮಾತ್ರ ತಜ್ಞರಿಗೆ ಎಂದು ಹೇಳಬಹುದು.


ಕಲಾ ಸಂಗ್ರಾಹಕ ಕ್ಲಿಫರ್ಡ್ ಶೋರರ್ (Clifford Schorer) "ನಾನು ಡ್ಯೂರರ್ ನೋಡಿದಾಗ ಅದು ನಂಬಲಾಗದ ಕ್ಷಣವಾಗಿತ್ತು. ಇದು ನಾನು ನೋಡಿದ ಅತ್ಯಂತ ಸುಂದರವಾದ ಮಾಸ್ಟರ್ ಪೀಸ್ ಚಿತ್ರಕಲೆ" ಎಂದು ಹೇಳುತ್ತೇನೆ.
 Man Who Bought artwork For 30 dollor Later Learns It's An Original Art Piece Worth 50 million
Artwork.


ಕಲಾಕೃತಿಯಲ್ಲಿ ಎರಡು ವೈಶಿಷ್ಠ್ಯತೆ

ಈ ಸ್ಕೆಚ್‌ನ ಸತ್ಯಾಸತ್ಯತೆ ಪರಿಶೀಲಿಸಲು ಎರಡು ವೈಶಿಷ್ಟ್ಯತೆಗಳನ್ನು ಇಲ್ಲಿ ಕಾಣಬಹುದಾಗಿತ್ತು. ಈ ಕಲಾವಿದನ ಮೋನೋಗ್ರಾಮ್ ಅನ್ನು ರೇಖಾಚಿತ್ರದಲ್ಲಿ ಕಾಣಿಸಿಕೊಂಡ ಅದೇ ಶಾಯಿಯಿಂದ ಚಿತ್ರಿಸಲಾಗಿತ್ತು ಮತ್ತು ಅದನ್ನು ಕಲಾವಿದ ಬಳಸಿದ 200ಕ್ಕೂ ಹೆಚ್ಚು ಹಾಳೆಗಳಲ್ಲಿ ಕಂಡುಬರುವ ವಾಟರ್ ಮಾರ್ಕ್ ಹೊಂದಿರುವ ಕಾಗದದ ಮೇಲೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ:  Viral Video: ಹೆದ್ದಾರಿಯಲ್ಲಿ ಹಣದ ಮಳೆ: ಸಿಕ್ಕಷ್ಟು ಬಾಚಿಕೊಂಡ ಜನರು

ಪ್ರಮುಖ ವಿದ್ವಾಂಸರ ತಂಡದಿಂದ ಪರಿಶೀಲನೆ

ವಿಯೆನ್ನಾದ ಆಲ್ಬರ್ಟಿನಾ ಮ್ಯೂಸಿಯಂನ ಮುಖ್ಯ ಕ್ಯೂರೇಟರ್ ಆಗಿರುವ ಕ್ರಿಸ್ಟೋಫ್ ಮೆಟ್ಜರ್ ಮತ್ತು ಬ್ರಿಟಿಷ್ ಮ್ಯೂಸಿಯಂನ ಮಾಜಿ ಕ್ಯೂರೇಟರ್ ಗಿಯುಲಿಯಾ ಬಾರ್ಟ್ರಮ್ ಡ್ಯೂರರ್ ಪ್ರಮುಖ ವಿದ್ವಾಂಸರು ಈ ಚಿತ್ರಕಲೆಯನ್ನು ಪರಿಶೀಲಿಸಿದ್ದಾರೆ ಮತ್ತು ಅದನ್ನು ಅಧಿಕೃತವೆಂದು ಪರಿಗಣಿಸಿದ್ದಾರೆ ಎಂದು ಸ್ಥಳೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.


ಈ ಕಲಾಕೃತಿ ರಚನೆ ಆಗಿದ್ದು ಯಾವಾಗ?

ಹೇಳಿಕೆಯ ಪ್ರಕಾರ, 1503ರ ಈ ರೇಖಾಚಿತ್ರವು ಮೇರಿ ಮತ್ತು ಅವರ ಮಗ ಯೇಸು ಕ್ರಿಸ್ತನು ಮಗುವಾಗಿದ್ದಾಗ ಚಿತ್ರಿಸಿದ ಚಿತ್ರವಾಗಿದೆ ಎಂದು ಹೇಳುತ್ತದೆ. ತಾಯಿ ಮಗ ಇಬ್ಬರೂ ಹುಲ್ಲಿನ ದಿಬ್ಬದ ಮೇಲೆ ಕುಳಿತಿರುವುದನ್ನು ಕಾಣಬಹುದಾಗಿದೆ.

Published by:Mahmadrafik K
First published: