Viral Story: ಈತ ಪುಣ್ಯಾತ್ಮ ಕಣ್ರಿ! 11 ಸಾವಿರ ವೋಲ್ಟ್​​ ವಿದ್ಯುತ್​ ಹರಿದರೂ ಬದುಕುಳಿದ

ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನ 29 ವರ್ಷದ ಡ್ಯಾರೆನ್ ಹ್ಯಾರಿಸ್ ವಾಲ್ವರ್‌ಹ್ಯಾಂಪ್ಟನ್‌ನಲ್ಲಿರುವ ನಿರ್ಜನವಾದ ಉಕ್ಕಿನ ಸ್ಥಾವರದಲ್ಲಿ ಡ್ಯಾರೆನ್ ನಗರವನ್ನು ಅನ್ವೇಷಿಸಲು ಹೋದರು ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.

ಡ್ಯಾರೆನ್ ಹ್ಯಾರಿಸ್

ಡ್ಯಾರೆನ್ ಹ್ಯಾರಿಸ್

 • Share this:
  ವಿದ್ಯುಚ್ಛಕ್ತಿಯು (Electricity) ಇಲ್ಲದೆ ಏನು ಕೆಲಸ ಮಾಡಲು ಸಾಧ್ಯವಿಲ್ಲ. ವಿದ್ಯುಚ್ಛಕ್ತಿ ನಮ್ಮ ಅಸ್ತಿತ್ವಕ್ಕೆ ಎಷ್ಟು ಅವಶ್ಯಕವಾಗಿದೆ ಎಂದರೆ ಅದು ಇಲ್ಲದೆ ನಮ್ಮ ದೈನಂದಿನ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಆದರೆ ವಿದ್ಯುತ್​ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಅಪಾಯಕಾರಿಯೂ ಹೌದು. ವಿದ್ಯುತ್​ ಹರಿದು ಸಾವನ್ನಿಪ್ಪಿರುವ (Death) ಅನೇಕ ಸಂಗತಿಯನ್ನು ನೀವು ಕೇಳಿರಬಹುದು. ಇನ್ನು ಕೆಲವರು ವಿದ್ಯುತ್​ ಶಾಕ್ (Electric Shock)​ ನಿಂದ ಬಚಾವ್​ ಆಗಿ ಬದುಕುಳಿವರೂ ಇದ್ದಾರೆ. ಆದರೆ ನಾವು ಹೇಳುತ್ತಿರುವ ಸಂಗತಿ ಎಂದರೆ. ಹೈವೊಲ್ಟೇಜ್​​ (high voltage) ವಿದ್ಯುತ್​ ಹರಿದು ಬದುಕುಳಿದಿರುವ ವ್ಯಕ್ತಿ ಬಗ್ಗೆ. ಇಂಗ್ಲೆಂಡ್ (England)​ ಮೂಲದ ವ್ಯಕ್ತಿಯೋರ್ವ 11000 ವೋಲ್ಟ್​ (volt) ವಿದ್ಯುತ್​ ಹರಿದು ಬದುಕುಳಿದಿದ್ದಾನೆ. ಆದರೆ ಆತ ಮೊದಲಿದ್ದ ಚಿತ್ರ ಮತ್ತು ಈಗ ಹೇಗಿದ್ದಾನೆ ಎಂದು ನೋಡಿದರೆ ಶಾಕ್​ ಆಗಬಹುದು.

  ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನ 29 ವರ್ಷದ ಡ್ಯಾರೆನ್ ಹ್ಯಾರಿಸ್ ವಾಲ್ವರ್‌ಹ್ಯಾಂಪ್ಟನ್‌ನಲ್ಲಿರುವ ನಿರ್ಜನವಾದ ಉಕ್ಕಿನ ಸ್ಥಾವರದಲ್ಲಿ ಡ್ಯಾರೆನ್ ನಗರವನ್ನು ಅನ್ವೇಷಿಸಲು ಹೋದರು ಎಂದು ಡೈಲಿ ಸ್ಟಾರ್ ವರದಿ ಮಾಡಿದೆ. ಅರ್ಬನ್ ಎಕ್ಸ್‌ಪ್ಲೋರಿಂಗ್ ಎಂದರೆ ಜನರು ಸಾಹಸದ ಉದ್ದೇಶದಿಂದ ನಗರದ ನಿರ್ಜನ ಸ್ಥಳಗಳಿಗೆ ಹೋಗಿ ಅಲ್ಲಿನ ಅದ್ಭುತ ಸಂಗತಿಗಳನ್ನು ಅನ್ವೇಷಿಸುವುದು.

  ಸಾವಿನ ಬಾಯಿಯಿಂದ ಹೊರಬಂದ ವ್ಯಕ್ತಿ

  ಅಲ್ಲಿನ ಕಟ್ಟಡ ಕುಸಿಯುವ ಹಂತದಲ್ಲಿದ್ದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂದು ಡ್ಯಾರೆನ್ ಭಾವಿಸಿದ್ದರು. ಆದ್ರೆ ಸಂಪರ್ಕ ಕಡಿತಗೊಂಡಿರಲಿಲ್ಲ. ಅಜಾಗರೂಕತೆಯಿಂದ ತಾಮ್ರದ ವಿದ್ಯುತ್ ಬಾರ್ ಅನ್ನು ಮುಟ್ಟಿದರು. ಆದು 11 ಸಾವಿರ ವೋಲ್ಟ್ ಕರೆಂಟ್ ಬರುತ್ತಿತ್ತು.

  ಇದನ್ನೂ ಓದಿ: Murder case: ಸೋಮಾರಿ ಗಂಡನನ್ನು ಚಾಕುವಿನಿಂದ ಚುಚ್ಚಿ ಕೊಂದ ಹೆಂಡತಿ! ಮಗಳು ನೀಡಿದ ಸಾಕ್ಷಿಯಿಂದ ಸಿಕ್ಕಿ ಬಿದ್ದಳು

  ಡ್ಯಾರೆನ್​ಗೆ 11000 ವೋಲ್ಡ್​​ ಬಡಿದದ್ದೇ ಬಡಿದದ್ದು, ಆತ ದೂರಕ್ಕೆ ಎಸೆಯಲ್ಪಟ್ಟಿದ್ದಾನೆ. ಬಹುತೇಕರು ಡ್ಯಾರೆನ್ ಅವರು ಸಾವನ್ನಪ್ಪಿದ್ದಾರೆ ಎಂದು ಅಂದುಕೊಂಡಿದ್ದರು. ಆದರೆ ಆತ ಸಾವನ್ನಪ್ಪಿರಲಿಲ್ಲ. ಇದ್ದಕ್ಕಿದ್ದಂತೆ ಪ್ರಜ್ಞೆ ಬಂದ ಆತನ ತನ್ನ ದೇಹವು ಬೆಂಕಿಯಲ್ಲಿ ಸುಡುತ್ತಿರುವುದನ್ನು ನೋಡಿದನು. ಅವನ ಕೈಯೊಳಗಿನ ಮೂಳೆಗಳು ಉಡಿಯಾಗಿತ್ತು ಮತ್ತು ಸುಟ್ಟಗಾಯಗಳಿಂದ ವಾಸನೆ ಬರುತ್ತಿದ್ದನು. ಮುಖದ ಗುರುತು ಸಿಗದಂತಿತ್ತು, ಕುತ್ತಿಗೆಯ ಮೂಳೆಯೂ ಸಹ ಮುರಿದಿತ್ತು.

  ತಾನು ಜೀವಂತವಾಗಿದ್ದೇನೆ ಎಂದು ಗೊತ್ತಾದಂತೆ ಡ್ಯಾರೆನ್ ನೇರವಾಗಿ ರಸ್ತೆಗೆ ಓಡಿದನು. ಅಲ್ಲಿ ಹಾದುಹೋಗುತ್ತಿದ್ದ ಆಂಬ್ಯುಲೆನ್ಸ್ ಕಂಡನು. ಈತನನ್ನು ಕಂಡು ಆ್ಯಂಬುಲೆನ್ಸ್​ ಡ್ರೈವರ್​ ತಕ್ಷಣವೇ ವಾಹನ ನಿಲ್ಲಿಸಿ ಡ್ಯಾರೆನ್ ಅವರನ್ನು ಆಸ್ಪತ್ರೆಗೆ ಸೇರಿಸಿದನು.

  23 ಶಸ್ತ್ರಚಿಕಿತ್ಸೆಯ ನಂತರ ದೇಹವು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು

  ಆತ ಬರ್ಮಿಂಗ್‌ಹ್ಯಾಮ್‌ನ ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ದಾಖಲಾಗಿದ್ದನು. ಕರೆಂಟ್​ ಶಾಕ್​​ನೊಂದಿಗೆ, ಸುಟ್ಟಗಾಯದಿಂದ ಬದುಕಿಬಂದಿದ್ದ ಡ್ಯಾರೆನ್​ ಆಸ್ಪತ್ರೆಯಲ್ಲಿ ಮತ್ತೆ ಕೋಮಾಗೆ ಜಾರಿದನು. ಆತನ ದೇಹದ ಅನೇಕ ಅಂಗಗಳು ವಿಫಲಗೊಳ್ಳಲು ಪ್ರಾರಂಭಿಸಿದವು.

  ಇದನ್ನೂ ಓದಿ: Facebook ಬಳಕೆದಾರರಿಗೆ ಬ್ಯಾಡ್​ ನ್ಯೂಸ್​​! ಇವೆರಡು ಫೀಚರ್ಸ್​​ ಮೇ 31ರಿಂದ ಸಿಗಲ್ಲ!

  ವೈದ್ಯರು ಆತನಿಗೆ 23 ಶಸ್ತ್ರಚಿಕಿತ್ಸೆಗಳನ್ನು ಮಾಡಿದರು ಮತ್ತು ಕೃತಕ ಚರ್ಮವನ್ನು ಬಳಸಿ ಆತನನ್ನು ಬದುಕುಳಿಸಿದರು. ಆದರೆ ಈ ಪ್ರಕ್ರಿಯೆಯಲ್ಲಿ ಆತನ ಮೂಗು ಮತ್ತು ಕಿವಿಗಳನ್ನು ಕತ್ತರಿಸಿ ತೆಗೆಯಬೇಕಾಯಿತು. ಡ್ಯಾರೆನ್ ಲಕ್ಷಾಂತರ ಅದೃಷ್ಟಶಾಲಿಗಳಲ್ಲಿ ಒಬ್ಬನೆಂದು ವೈದ್ಯರು ಪರಿಗಣಿಸಿದ್ದಾರೆ. ಅವರಲ್ಲಿ ಅನೇಕರು ಅಂತಹ ಪರಿಸ್ಥಿತಿಯಲ್ಲಿ ಬದುಕುಳಿಯುವುದನ್ನು ಅವರು ನೋಡಿರಲಿಲ್ಲ.

  ಡ್ಯಾರೆನ್ ದೀರ್ಘಕಾಲದವರೆಗೆ ಖಿನ್ನತೆಗೆ ಒಳಗಾಗಿದ್ದರು, ಬದುಕುಳಿದ ಬಳಿಕ ತನ್ನ ಸ್ಥಿತಿ ಕಂಡು ಬೇಸರಗೊಂಡು ಆತ್ಮಹತ್ಯೆಗೆ ಸಹ ಪ್ರಯತ್ನಿಸಿದರು. ಆದರೆ ಮನಸ್ಸು ಬದಲಾಯಿಸಿ ಬದುಕಲು ಮುಂದಾದರು. ಆದರೀಗ ಅವರು 3D ಪ್ರಿಂಟಿಂಗ್ ತಂತ್ರಜ್ಞಾನದೊಂದಿಗೆ ಕಿವಿಗಳನ್ನು ಮರಳಿ ಪಡೆಯಲು ಮುಂದಾಗಿದ್ದಾರೆ ಮತ್ತು ಇದಕ್ಕಾಗಿ ಅವರು ಕ್ರೌಡ್ ಫಂಡಿಂಗ್‌ನ ಸಹಾಯವನ್ನು ಪಡೆಯುತ್ತಿದ್ದಾರೆ.
  Published by:Harshith AS
  First published: