Viral Story: ಶಾರ್ಟ್ಸ್ ಹಾಕಿಕೊಂಡು ಹೋದ ವ್ಯಕ್ತಿಗೆ ಪ್ರವೇಶ ನಿರ್ಬಂಧಿಸಿದ ಬ್ಯಾಂಕ್ ಸಿಬ್ಬಂದಿ! ಮುಂದೇನಾಯ್ತು ಗೊತ್ತಾ?

Viral Story: ಸ್ಟೇಟ್​ ಬ್ಯಾಂಕ್​ ಇಂಡಿಯಾ​ಗೆ ಪ್ರವೇಶಿಸುವ ವ್ಯಕ್ತಿಯನ್ನು ಬ್ಯಾಂಕ್​ ಸಿಬ್ಬಂದಿ ತಡೆದು ನಿಲ್ಲಿಸಿ ಸರಿಯಾದ ಬಟ್ಟೆ ಧರಿಸಿಲ್ಲ ಎಂದು ಪ್ರವೇಶ ನಿಷೇಧಿಸಿದ್ದಾರೆ. ಪ್ರವೇಶ ನಿರಾಕರಿಸಿದ ವ್ಯಕ್ತಿ ಆಶಿಶ್ ರೆಡ್ಡಿಟ್‌ನಲ್ಲಿ ಇಡೀ ಘಟನೆಯನ್ನು ವಿವರಿಸಿದ್ದಾನೆ.

ಸ್ಟೇಟ್​ ಬ್ಯಾಂಕ್​ ಇಂಡಿಯಾ

ಸ್ಟೇಟ್​ ಬ್ಯಾಂಕ್​ ಇಂಡಿಯಾ

 • Share this:
  ದೇವಸ್ಥಾನ (Temple), ಹೋಟೆಲ್‌ಗಳು (Hotels), ರೆಸ್ಟೋರೆಂಟ್‌ಗಳಿಗೆ (Restaurant) ಪ್ರವೇಶಿಸುವ ಮೊದಲು ಅಲ್ಲಿನ ಡ್ರೆಸ್​ಕೋಡ್​ನ (Dress Code) ಅನ್ವಯ ನಾವು ಸರಿಯಾದ ಬಟ್ಟೆ ಧರಿಸಿಕೊಂಡು ಪ್ರವೇಶಿಸುತ್ತೇವೆ. ಕೆಲವೊಮ್ಮ ಡ್ರೆಸ್​​ಕೋಡ್​ ಸರಿಯಾಗಿಲ್ಲ ಅಥವಾ ನಿಯಮದ ಪ್ರಕಾರವಿಲ್ಲ ಎಂಬ ಕಾರಣಕ್ಕೆ ಪ್ರವೇಶವನ್ನೇ ನಿಷೇಧಿಸುವ ಸುದ್ದಿಯನ್ನು ನೀವು ಕೇಳಿರಬಹುದು. ಆದರೆ ಎಟಿಎಂ ಪ್ರವೇಶಿಸಲು ಸರಿಯಾದ ಡ್ರೆಸ್​ಕೋಡ್​ ಧರಿಸಿರಬೇಕು ಎಂಬ ನಿಯಮದ ಬಗ್ಗೆ ಕೇಳಿದ್ದೀರಾ? ಬ್ಯಾಂಕ್ ಅಥವಾ ಎಟಿಎಂಗೆ ಪ್ರವೇಶಿಸಲು ಬ್ಯಾಂಕ್ ಅಧಿಕಾರಿಗಳು ಅಥವಾ ಸಮಾಜವು ಎಂದಿಗೂ ಡ್ರೆಸ್ ಕೋಡ್ ಅನ್ನು ಸೂಚಿಸಿಲ್ಲ. ಆದರೆ ವ್ಯಕ್ತಿಯೋರ್ವ ಸರಿಯಾದ ಬಟ್ಟೆ ಧರಿಸಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್​ ಪ್ರವೇಶವನ್ನೇ ನಿರಾಕರಿಸಿರುವ ಘಟನೆ ನಡೆದಿದೆ.

  ಸ್ಟೇಟ್​ ಬ್ಯಾಂಕ್​ ಇಂಡಿಯಾ​ಗೆ (SBI) ಪ್ರವೇಶಿಸುವ ವ್ಯಕ್ತಿಯನ್ನು ಬ್ಯಾಂಕ್​ ಸಿಬ್ಬಂದಿ ತಡೆದು ನಿಲ್ಲಿಸಿ ಸರಿಯಾದ ಬಟ್ಟೆ ಧರಿಸಿಲ್ಲ ಎಂದು ಪ್ರವೇಶ ನಿಷೇಧಿಸಿದ್ದಾರೆ. ಪ್ರವೇಶ ನಿರಾಕರಿಸಿದ ವ್ಯಕ್ತಿ ಆಶಿಶ್ ರೆಡ್ಡಿಟ್‌ನಲ್ಲಿ ಇಡೀ ಘಟನೆಯನ್ನು ವಿವರಿಸಿದ್ದಾನೆ. ತಾನು ಕಾಲೇಜಿನಲ್ಲಿದ್ದಾಗ ಎಸ್‌ಬಿಐ ಖಾತೆಯನ್ನು ಹೊಂದಿದ್ದ ಮತ್ತು ಅದನ್ನು ಎರಡು ವರ್ಷಗಳ ಕಾಲ ಬಳಸಿದ್ದು, ನಂತರ ಏಳು ವರ್ಷಗಳಿಂದ ಖಾತೆ ನಿಷ್ಕ್ರಿಯವಾಗಿದೆ ಎಂದು ವಿವರಿಸಿದರು.

  ಆಶಿಶ್ ITR ಗಾಗಿ ಮರುಪಾವತಿಯನ್ನು ಹೇಗಾದರೂ SBI ಖಾತೆಗೆ ಜಮಾ ಮಾಡಲಾಗಿತು, ಕೊನೆಗೆ ಗೊಂದಲವನ್ನು ತಪ್ಪಿಸಲು ಆಶಿತ್​ ಖಾತೆಯನ್ನು ಮುಚ್ಚಲು ನಿರ್ಧರಿಸಿದೆ ಎಂದು ರೆಡ್ಡಿಟ್​ನಲ್ಲಿ ಬರೆದಿದ್ದಾರೆ. "ಇದನ್ನು ಮಾಡಲು ನಾನು ಇಂದು ಶಾಖೆಗೆ ಹೋಗಿದ್ದೆ, ನಾನು ಶಾಖೆಯಲ್ಲಿನ ಗುಮಾಸ್ತರಲ್ಲಿ ಒಬ್ಬರು ಪ್ರವೇಶಿಸಿದ ತಕ್ಷಣ ಶಾರ್ಟ್ಸ್ ಧರಿಸುವುದು ಗ್ರಾಹಕರ ಅಲಂಕಾರಕ್ಕೆ ವಿರುದ್ಧವಾದ ಕಾರಣ "ಫುಲ್ ಪ್ಯಾಂಟ್" ಧರಿಸಿ ಹಿಂತಿರುಗಲು ನನ್ನನ್ನು ಕೇಳಿದರು. ನಾನು ಅವರನ್ನು ಕೇಳಿದೆ, ಗ್ರಾಹಕರು ಇಂತದ್ದೇ ಬಟ್ಟೆ ಧರಿಸಬೇಕು ಎಂಬ ನಿಯಮವಿದೆಯಾ? ಎಂದು ಕೇಳಿದರೆ. ಆತ ನಾವು ಗ್ರಾಹಕರಿಂದ ಮೂಲಭೂತ ಸಭ್ಯತೆಯನ್ನು ಅನುಸರಿಸುತ್ತಾ ಬಂದಿದ್ದೇವೆ ಎಂದು ಹೇಳಿದರು.

  ಇದನ್ನು ಓದಿ: Debit Card ಇಲ್ಲದೆಯೇ ATMನಿಂದ ಹಣವನ್ನು ಸುಲಭವಾಗಿ ಪಡೆಯಬಹುದು; ಇಲ್ಲಿದೆ ನೋಡಿ Smart ವಿಧಾನ

  ಬಳಿಕ ನಾನು ಅವರೊಂದಿದೆ ಚರ್ಚಿಸಿದೆ, "ಇಂತಹದೇ ಅಧಿಕೃತ ನಿಯಮ ಅಥವಾ ಸುತ್ತೋಲೆಯನ್ನು ನನ್ನೊಂದಿಗೆ ಹಂಚಿಕೊಂಡರೆ ನಾನು ಫ್ಯಾಂಟ್​ ಧರಿಸಿ ಹಿಂತಿರುಗುತ್ತೇನೆ ಎಂದೆ. ಆ ಸಮಯದಲ್ಲಿ ಸ್ವಲ್ಪ ಗಟ್ಟಿಯಾದ ಧ್ವನಿ ಹೊಂದಿದ ಇನ್ನೊಬ್ಬ ಗುಮಾಸ್ತನು ಮಧ್ಯಪ್ರವೇಶಿಸಿ, "ನೀವು ಶಾರ್ಟ್ಸ್ ಧರಿಸಿ ಕಚೇರಿಗೆ ಹೋಗುತ್ತೀರಾ? ಎಂದು ಪ್ರಶ್ನಿಸಿದ. ಅದಕ್ಕೆ ನಾನು ಹೇಳಿದೆ, "ಇದು ನಿಮ್ಮ ಕಚೇರಿ, ನನ್ನದಲ್ಲ, ಗ್ರಾಹಕರು ಅನುಸರಿಸಬೇಕಾದ ಡ್ರೆಸ್ ಕೋಡ್ ತೋರಿಸಿ. ಆ ಬಳಿಕ ನಾನು ಹೋಗಿ ಬದಲಾಯಿಸುತ್ತೇನೆ ಎಂದೆ.

  ಆಶಿಶ್ ಕಥೆಯನ್ನು ಮತ್ತಷ್ಟು ವಿವರಿಸುತ್ತಿದ್ದಂತೆ, "ಕೆಲವು ಕ್ಷಣಗಳ ಮೌನದ ನಂತರ, ಒಬ್ಬ ಮಹಿಳಾ ಗುಮಾಸ್ತರು ‘ನಾವೆಲ್ಲಾ ಮಹಿಳಾ ಸಿಬ್ಬಂಧಿಗಳಿದ್ದೇವೆ. ನಾವು ಈ ಥರ ಬಟ್ಟೆ ಹಾಕಿಕೊಂಡು ಇಲ್ಲಿಗೆ ಬರುವುದಿಲ್ಲ' ಎಂದು ಕೂಗಿದರು. ನಾನು ಉತ್ತರಿಸಿದೆ, 'ನಿಮಗೆ ನಾಚಿಕೆ ಆಗೋದಿಲ್ವಾ?. ಬ್ಯಾಂಕ್ ಗೆ ಬರುವ ಗ್ರಾಹಕರ ಬಟ್ಟೆ ಮೇಲೆ ಕಣ್ಣಿಟ್ಟಿದ್ದೀರಾ? ಎಂದು ಜೋರು ಮಾಡಿದೆ.

  ಇದಾದ ನಂತರವೂ ಆಶಿತ್​ ಕೋಪಗೊಂಡು ಬ್ಯಾಕ್​ನಿಂದ ಹೊರನಡೆದರು. ನಂತರ ಟ್ವಿಟರ್‌ನಲ್ಲಿ ಘಟನೆಯ ಬಗ್ಗೆ ಪೋಸ್ಟ್ ಮಾಡಿದ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ.

  ಇದನ್ನು ಓದಿ: Google Maps ಮೂಲಕ ಹತ್ತಿರದ ಮಾರುಕಟ್ಟೆಯಲ್ಲಿ ಜನಸಂದಣಿ ಇದ್ಯಾ ಅಂತನೂ ಇನ್ಮುಂದೆ ಪತ್ತೆ ಹಚ್ಚಬಹುದು

  ಆಶಿತ್ ಮಾಡಿರುವ ಟ್ವೀಟ್:

  ಹೇ @TheOfficialSBI ಇಂದು ಶಾರ್ಟ್ಸ್ ಧರಿಸಿ ನಿಮ್ಮ ಶಾಖೆಗೆ ಹೋಗಿದ್ದೆ, ಆದರೆ ಅಲ್ಲಿನ ಸಿಬ್ಬಂಧಿ ನಾವಿಲ್ಲಿ ಗ್ರಾಹಕರ ಮರ್ಯಾದಿಯನ್ನು ಕಾಫಾಡುತ್ತೇವೆ. ಹಾಗಾಗಿ ನೀನು ಪೂತ್ರಿಯಾಗಿ ಫ್ಯಾಂಟ್​​ ಧರಿಸಿಕೊಂಡು ಹಿಂತಿರುಗು ಎಂದು ಹೇಳಿದರು.

  ಗ್ರಾಹಕರು ಏನು ಧರಿಸಬೇಕು? ಮತ್ತು ಧರಿಸಬಾರದು? ಎಂಬುದರ ಕುರಿತು ಕೆಲವು ರೀತಿಯ ಅಧಿಕೃತ ನೀತಿ ನಿಮ್ಲಿದೆಯೇ? ಎಂದು ಪ್ರಶ್ನಿಸಿದ್ದಾರೆ  ಘಟನೆಗೆ ಸಂಬಂಧಿಸಿದಂತೆ ಅವರ ಟ್ವೀಟ್​ಗೆ ಹಲವಾರು ಪ್ರತಿಕ್ರಿಯೆಗಳು ಬಂದಿದೆ, ಅನೇಕರು ಬ್ಯಾಂಕ್ ವಿರುದ್ಧ ಮೊಕದ್ದಮೆ ಹೂಡುವಂತೆ ಕೇಳಿಕೊಂಡರು. 21 ನೇ ಶತಮಾನದಲ್ಲಿಯೂ ಸಹ ಬ್ಯಾಂಕ್ ಸಿಬ್ಬಂದಿಯ ದೃಷ್ಟಿಕೋನವನ್ನು ಅನೇಕರು ಟೀಕಿಸಿದರು.
  Published by:Harshith AS
  First published: