ಕಾಡು ಪ್ರಾಣಿಗಳ(Wild Animals) ಜೊತೆ ತಮಾಷೆ ಮಾಡಬಾರದು. ಅವುಗಳ ಕೈಗೆ ಮನುಷ್ಯ(Humans) ಸಿಕ್ಕರೆ ಬದುಕಿ ಬರಲು ಸಾಧ್ಯವಿಲ್ಲ. ಆದರೂ ನಮ್ಮ ಜನ ದುಸ್ಸಾಹಸ ಮಾಡುತ್ತಲೇ ಇರುತ್ತಾರೆ. ಹೈದ್ರಾಬಾದ್(Hyderabad)ನಲ್ಲಿ ವ್ಯಕ್ತಿಯೊಬ್ಬ ಸಿಂಹ(Lion)ವಿರುವ ಆವರಣಕ್ಕೆ ನುಗ್ಗಿದ್ದಾನೆ. ಸಿಂಹದ ಬಳಿ ನಡೆದುಕೊಂಡು ಹೋಗಲು ಪ್ರಯತ್ನಿಸುರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 31 ವರ್ಷದ ಯುವಕನೊಬ್ಬ ಹೈದ್ರಾಬಾದ್ನ ನೆಹರು ಝೂಲಾಜಿಕಲ್ ಪಾರ್ಕ್(Nehru Zoological Park)ಗೆ ಬಂದಿದ್ದ. ಇದ್ದಕಿದ್ದ ಹಾಗೇ ಸಿಂಹವಿರುವ ಆವರಣದೊಳಗೆ ಹೋಗಿದ್ದಾನೆ. ಸಿಂಹ ಕೆಳಗೆ ಇದ್ದ ಕಾರಣ ಇತ ಜೀವಂತವಾಗಿದ್ದಾನೆ. ಸಿಂಹದ ಆವರಣದಲ್ಲಿದ್ದ ಬೆಟ್ಟದ ಮೇಲೆ ವ್ಯಕ್ತಿ ಹುಚ್ಚಾಟ ಪ್ರದರ್ಶಿಸಿದ್ದಾನೆ. ಕೆಳಗೆ ಇಳಿದು ಸಿಂಹದ ಬಳಿ ಹೋಗುವ ಪ್ರಯತ್ನ ಮಾಡಿದ್ದಾನೆ. ಒಂದು ವೇಳೆ ಆತ ಕೆಳಗೆ ಚೂರು ಕಾಲಿಟ್ಟಿದ್ದರೇ, ಸಿಂಹ ಆತನ ಮೇಲೆ ಏರಗಿ ಬೇಟೆಯಾಡುತ್ತಿತ್ತು. ಕೆಳಗಿನಿಂದ ಘರ್ಜಿಸುತ್ತಾ ಆತನನ್ನು ಎಳೆದುಕೊಳ್ಳಲು ಪ್ರಯತ್ನ ನಡೆಸಿದೆ. ಆತನ ನಸೀಬು ಚೆನ್ನಾಗಿದ್ದರಿಂದ ಬದುಕುಳಿದಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ನೋಡ ನೋಡುತ್ತಿದ್ದಂತೆ ಸಿಂಹದ ಬಳಿ ತೆರಳಿದ ವ್ಯಕ್ತಿ
ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಸದಾ ಜನರು ಇರುತ್ತಾರೆ. ಆದರೆ, ಈ ವ್ಯಕ್ತಿ ಜನಸಾಮನ್ಯರಂತೆ ಒಳಗೆ ಬಂದಿದ್ದಾನೆ. ನೋಡ ನೋಡುತ್ತಲೇ ಸಿಂಹದ ಗುಹೆ ಬಳಿ ತೆರಳಿದ್ದಾನೆ. ಇದನ್ನು ಗಮನಿಸಿದ ಜನ ಕೂಡಲೇ ಜೋರಾಗಿ ಕಿರುಚಿದ್ದಾರೆ. ಸಿಂಹದ ಹತ್ತಿರ ಹೋಗದಂತೆ ಕೂಗಿದ್ದಾರೆ. ಆದರೆ ವ್ಯಕ್ತಿ ಇದ್ಯಾವುದನ್ನು ಕೇಳಿಸಿಕೊಳ್ಳದೇ ತನ್ನ ಪಾಡಿಗೆ ಸಿಂಹದ ಬಳಿ ಹೋಗಲು ಪ್ರಯತ್ನಿಸಿದ್ದಾನೆ. ಅಲ್ಲಿ ನೆರೆದಿದ್ದವರೆಲ್ಲ ಆತನನ್ನು ಕಾಪಾಡುವಂತೆ ಜೋರಾಗಿ ಹೇಳಿದ್ದಾರೆ. ಈ ಭಯಾನಕ ಘಟನೆಯ ಸಂಪೂರ್ಣ ದೃಶ್ಯ ಪ್ರವಾಸಿಗರೊಬ್ಬರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
#Hyderabad: Today, a person who was walking vulnerably on the boulders of the African Lion moat area-where the lions are released in the exhibited enclosure at Zoo, was rescued & handed over to Bahadurpura Police station. Complaint filed. pic.twitter.com/V451dQYIQC
— @CoreenaSuares (@CoreenaSuares2) November 23, 2021
ಇದನ್ನು ಓದಿ: 3 ಹುಲಿಗಳಿಗೆ ಸೆಡ್ಡು ಹೊಡೆದ ಬೆಕ್ಕು.. ಬದುಕಿ ಬಂದಿದ್ದೇ ರಣ ರೋಚಕ!
ಕೆಳಗಿನಿಂದಲೇ ಘರ್ಜಿಸಿದ ಸಿಂಹ !
ವಿಡಿಯೋದಲ್ಲಿ ನೀವು ಗಮನಿಸಬಹುದು ವ್ಯಕ್ತಿ ಸಿಂಹದ ಆವರಣದ ಮೇಲಿರುವ ಬಂಡೆ ಮೇಲೆ ಕೂತು ಹುಚ್ಚಾಟ ಪ್ರದರ್ಶಿಸಿದ್ದಾನೆ. ಇತ್ತ ಕೆಳಗಿನಿಂದ ಸಿಂಹ ಆತನನ್ನು ಎಳೆದುಕೊಳ್ಳಲು ಹಲವು ಬಾರಿ ಯತ್ನಿಸಿದೆ. ಜನರ ಕಿರುಚಾಟ ಒಂದೆಡೆ, ಇತ್ತ ವ್ಯಕ್ತಿಯೊಬ್ಬ ಒಳಗೆ ನುಗ್ಗಿದ್ದಾನೆ. ಇದೆಲ್ಲರ ನಡುವೆ ಸಿಂಹಕ್ಕೆ ಕೋಪ ಬಂದು ಜೋರಾಗಿ ಘರ್ಜಿಸಿದೆ. ಆತ ಕೆಳಗೆ ಇಳಿಯಲು ಪ್ರಯತ್ನಿಸುತ್ತಿದ್ದಂತೆ, ಸಿಂಹ ಎರಡು ಕಾಲುಗಳನ್ನು ಮೇಲೆತ್ತಿ ಆತನನ್ನು ಎಳೆದುಕೊಳ್ಳಲು ಯತ್ನಿಸಿದೆ. ಮೊದಲೇ ಇದು ಆಫ್ರಿಕನ್ ತಳಿಯ ಸಿಂಹ, ಅವಕ್ಕೆ ಮೊದಲೇ ರೋಷ ಹೆಚ್ಚು. ಈ ರೀತಿಯ ದುಸ್ಸಾಹಸ ಮಾಡಿರುವುದು ನಿಜಕ್ಕೂ ಅಲ್ಲಿ ನೆರೆದಿದ್ದವರಿಗೆಲ್ಲ ಆಘಾತ ಉಂಟು ಮಾಡಿದೆ.
ಇದನ್ನು ಓದಿ : ಸರಸರನೇ ಬಂದು ಗಟಗಟನೇ ನೀರು ಕುಡಿದ ಹಾವು: ಮೈ ಜುಮ್ಮೆನ್ನುವ ವಿಡಿಯೋ ನೋಡಿ
2 ನಿಮಿಷ ತಡವಾಗಿದ್ದರೆ ಸಿಂಹದ ಪಾಲಾಗುತ್ತಿದ್ದ ವ್ಯಕ್ತಿ!
ಹೌದು, ಝೂ ಸಿಬ್ಬಂದಿಗಳು ಬರುವುದು ಎರಡು ನಿಮಿಷ ತಡವಾಗಿದ್ದರೆ ಆತ ಸಿಂಹಕ್ಕೆ ಆಹಾರವಾಗುತ್ತಿದ್ದ. ಜನರ ಕೂಗಾಟ ಕೇಳಿಸಿಕೊಂಡ ಸಿಬ್ಬಂದಿ, ಕೂಡಲೇ ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಆತ ಬಂಡೆಯ ತುದಿ ಕೂತಿದ್ದರಿಂದ ಸಿಬ್ಬಂದಿಗೆ ತಲೆನೋವಾಗಿತ್ತು. ಒಂದು ವೇಳೆ ಇವರು ಅಲ್ಲಿ ತೆರಳಿದಾಗ, ಆತ ಚೂರು ಮುಂದೆ ಹೋದರು ಸಿಂಹಕ್ಕೆ ಆಹಾರವಾಗುವ ಸಾಧ್ಯತೆ ಹೆಚ್ಚಿತ್ತು. ಆದರೂ ಸಿಬ್ಬಂದಿ ಕೂಡಲೇ ಅಲ್ಲಿಗೆ ಬಂದು ಆ ವ್ಯಕ್ತಿಯ ತಲೆಗೆ ಎರಡು ಬಿಟ್ಟಿದ್ದಾರೆ. ಬಳಿಕ ಅಲ್ಲಿಂದ ಅವನನ್ನು ಹೊರಗೆ ಕರೆತಂದು ಪೊಲೀಸರ ಕೈಗೆ ಒಪ್ಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ