Gold Coin: ಅಪರೂಪದ ನಾಣ್ಯವನ್ನು ಪತ್ತೆ ಹಚ್ಚಿ ಕುಬೇರನಾದ Gold Hunter! ಹೇಗೆ ಗೊತ್ತೇ?

Gold Coin: ನಾಣ್ಯದ ಹರಾಜಿನಿಂದ ಬಂದ ಹಣವನ್ನು ತನ್ನ 13 ವರ್ಷದ ಮಗಳು ಎಮಿಲಿ ಮತ್ತು 10 ವರ್ಷದ ಮಗ ಹ್ಯಾರಿಯ ಶಿಕ್ಷಣಕ್ಕಾಗಿ ವಿನಿಯೋಗಿಸಲು ಮೈಕೆಲ್ ತೀರ್ಮಾನಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇವಲ ಒಂದೇ ರಾತ್ರಿಯಲ್ಲಿ 6.5 ಕೋಟಿ ರೂ. ಮೌಲ್ಯದ ಅಪರೂಪದ ಚಿನ್ನದ ನಾಣ್ಯಕ್ಕೆ ಅಧಿಪತಿಯಾದ ನಿವೃತ್ತ ಲೋಹ (Retired Metal Detector) ಶೋಧಕ. ಮಾಜಿ ಚಿನ್ನದ (Gold Hunter) ಬೇಟೆಗಾರ, ಮೈಕೆಲ್ ಲೀ-ಮಲ್ಲೊರಿ, ಯುಕೆ, ಡೆವೊನ್‌ನಲ್ಲಿನ ಕೃಷಿಭೂಮಿಯೊಂದರಲ್ಲಿ ಬರೋಬ್ಬರಿ ಒಂದು ದಶಕದ ನಂತರದ ತಮ್ಮ ಲೋಹ ಶೋಧ ಪ್ರವಾಸದಲ್ಲಿ ಈ ಅಪರೂಪದ ಚಿನ್ನದ ನಾಣ್ಯವನ್ನು ಪತ್ತೆ (Discovered) ಹಚ್ಚಿದರು.ಇತ್ತೀಚಿನವರೆಗೂ, ತಮ್ಮ ಕೆಲಸದಿಂದ ಸಂಪೂರ್ಣವಾಗಿ ನಿವೃತ್ತರಾಗಿದ್ದ ಈ ಲೋಹ ಶೋಧಕನ ಮನವೊಲಿಸಿದ ಅವರ ಪುಟ್ಟ ಮಕ್ಕಳು ಮತ್ತೆ ಈತ ತನ್ನ ಹವ್ಯಾಸವನ್ನು ಮುಂದುವರಿಸುವುದಕ್ಕೆ ಕಾರಣರಾದರು. ಪರಿಣಾಮವಾಗಿ, 52 ವರ್ಷ ವಯಸ್ಸಿನ ನಿವೃತ್ತ ಲೋಹ ಶೋಧಕ ದಶಕದ ನಂತರ ಸೆಪ್ಟೆಂಬರ್ 2021ರಲ್ಲಿ ತಮ್ಮ ಹಳೆಯ ಕೆಲಸಕ್ಕೆ ಮರಳಿ, ಚಿನ್ನದ ನಾಣ್ಯವನ್ನು ಪತ್ತೆ ಹಚ್ಚಿದಾಗ , ಅದರ ಮೌಲ್ಯವನ್ನು ಲೆಕ್ಕ (Calculate) ಹಾಕುವುದು ಅವರಿಗೆ ಕಷ್ಟಕರವಾಗಿತ್ತು.

ಅಪರೂಪದ ನಾಣ್ಯ
ಫೇಸ್‌ಬುಕ್‌ನಲ್ಲಿ, ಸ್ಪಿಂಕ್ ಹರಾಜುದಾರರ ತಜ್ಞರು ನಾಣ್ಯದ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. ಅವರು ನಾಣ್ಯವನ್ನು ಇಂಗ್ಲಿಷ್ ರಾಜನ ಮೊದಲ 'ನಿಜವಾದ' ಭಾವಚಿತ್ರ ಎಂದು ನಂಬಲಾದ ಹೆನ್ರಿ III ಪೆನ್ನಿ ಎಂದು ಬಹಿರಂಗಪಡಿಸಿದರು.

1257 ರ ಸುಮಾರಿಗೆ ಗ್ಲೌಸೆಸ್ಟರ್‌ನ ವಿಲಿಯಂ ಉತ್ತರ ಆಫ್ರಿಕಾದಿಂದ ಆಮದು ಮಾಡಿಕೊಂಡ ಚಿನ್ನದಿಂದ ಈ ನಾಣ್ಯವನ್ನು ಮುದ್ರಿಸಲಾಗಿದೆ ಎಂದು ಮಿರರ್ ವರದಿ ಮಾಡಿದೆ. ಇದು ತುಂಬಾ ಅಪರೂಪದ ನಾಣ್ಯವಾಗಿದ್ದು ಇವುಗಳಲ್ಲಿ ಎಂಟು ನಾಣ್ಯಗಳು ಮಾತ್ರ ಅಸ್ತಿತ್ವದಲ್ಲಿವೆ ಎಂದು ನಂಬಲಾಗಿದೆ. ಈ ಹಿಂದೆ ಸಿಕ್ಕಿದಂತಹ ಎಲ್ಲಾ ನಾಣ್ಯಗಳು ವಸ್ತು ಸಂಗ್ರಹಾಲಯಗಳಲ್ಲಿ ಸುರಕ್ಷಿತವಾಗಿವೆ .

ಮಧ್ಯಕಾಲೀನ ಇಂಗ್ಲಿಷ್ ನಾಣ್ಯ
ಮೈಕೆಲ್ ಅವರ ನಾಣ್ಯವು ಭಾರಿ ಮೊತ್ತಕ್ಕೆ ಹರಾಜುಗೊಂಡು ಅವರ ಜೀವನವನ್ನು ಬದಲಾಯಿಸುವ £ 6,48,000 (ರೂ. 6.5 ಕೋಟಿ) ಸಂಪತ್ತನ್ನು ಅವರಿಗೆ ತಂದು ಕೊಟ್ಟಿತು. ಈ ನಾಣ್ಯವು ಹರಾಜಿನಲ್ಲಿ ಮಾರಾಟವಾದ ಅತ್ಯಂತ ಬೆಲೆಬಾಳುವ ಮಧ್ಯಕಾಲೀನ ಇಂಗ್ಲಿಷ್ ನಾಣ್ಯವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ನಿಮ್ಮ ಬಳಿ 10 ಪೈಸೆಯ ನಾಣ್ಯಗಳಿವೆಯೇ? ಹಾಗಾದ್ರೆ ನಿಮಗೆ ಸಿಗಲಿದೆ ಒಳ್ಳೆಯ ಮೊತ್ತ

ಅನಾಮಧೇಯರಾಗಿ ಉಳಿಯಲು ಬಯಸುವ ಖರೀದಿದಾರರು ಸಂಸ್ಥೆಯ ವಸ್ತು ಸಂಗ್ರಹಾಲಯಕ್ಕೆ ನಾಣ್ಯವನ್ನು ಸಾಲ ನೀಡುವುದಾಗಿ ಹೇಳಿದ್ದಾರೆ. ಹಾಗೆಯೇ ಮೈಕೆಲ್ ಅವರು ನಾಣ್ಯದ ಅರ್ಧದಷ್ಟು ಮೌಲ್ಯವನ್ನು ಫಾರ್ಮ್ ಮಾಲೀಕರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ .

ನಾಣ್ಯದ ಹರಾಜಿನಿಂದ ಬಂದ ಹಣವನ್ನು ತನ್ನ 13 ವರ್ಷದ ಮಗಳು ಎಮಿಲಿ ಮತ್ತು 10 ವರ್ಷದ ಮಗ ಹ್ಯಾರಿಯ ಶಿಕ್ಷಣಕ್ಕಾಗಿ ವಿನಿಯೋಗಿಸಲು ಮೈಕೆಲ್ ತೀರ್ಮಾನಿಸಿದ್ದಾರೆ. ಎಮಿಲಿ ಮತ್ತು ಹ್ಯಾರಿ ಇಲ್ಲದೆ ಈ ಕಥೆ ಪೂರ್ಣಗೊಳ್ಳುವುದಿಲ್ಲ. ನಾನು ತಂದೆಯಾಗುವವರೆಗೂ ಮೆಟಲ್ ಡಿಟೆಕ್ಟರ್‌ಗಳು ನನ್ನ ಜೀವನದ ಅತ್ಯಮೂಲ್ಯ ಭಾಗವಾಗಿದ್ದವು, ಅದರ ನಂತರ ಅವು ಕಪಾಟುಗಳಲ್ಲಿ ಮೂಲೆಗುಂಪಾಗಿವೆ" ಎಂದು ಮೈಕೆಲ್ ನೆನಪಿಸಿಕೊಂಡರು.

ನಾಣ್ಯದ ಆವಿಷ್ಕಾರ
ಈ ನಾಣ್ಯದ ಆವಿಷ್ಕಾರ ಮತ್ತು ನಂತರದ ಇತಿಹಾಸವು ಸ್ಪಿಂಕ್ ಅವರ ವ್ಯಾಪಕವಾದ ಸಂಶೋಧನೆ ಮತ್ತು ಇತರ ಶೈಕ್ಷಣಿಕ ಸಮುದಾಯದ ಪ್ರಯತ್ನಗಳಿಂದ ಸಾಧ್ಯವಾಗಿದೆ. ನಾನು ಕೂಡ ಈ ಸಂಶೋಧನೆಯ ಮುಖ್ಯ ಭಾಗವಾಗಿರುವುದು ನನಗೆ ತುಂಬಾ ಖುಷಿ ನೀಡಿದೆ. ನನ್ನಂತೆಯೇ ನನ್ನ ಮಕ್ಕಳು ಕೂಡ ಇತಿಹಾಸದ ಬಗ್ಗೆ ಅತೀವ ಒಲವು ಹೊಂದಿದ್ದಾರೆ, ಆದ್ದರಿಂದ ನಾನು ಅವರ ಭವಿಷ್ಯಕ್ಕಾಗಿ ಈ ಹಣವನ್ನು ವಿನಿಯೋಗಿಸುತ್ತೇನೆ” ಎಂದು ಅವರು ಹೇಳಿದರು.

ಇದನ್ನೂ ಓದಿ: 1 Rupee Coin- ಈ ಹಳೆಯ ಒಂದು ರೂ ನಾಣ್ಯಕ್ಕೆ 1.5 ಲಕ್ಷ ರೂ ಬೆಲೆ; ಹೆಚ್ಚಿನ ಮಾಹಿತಿ ಇಲ್ಲಿದೆ

ಈ ಹಿಂದೆ, ನಾನು ಬೆಳ್ಳಿಯ ನಾಣ್ಯಗಳನ್ನು ಪತ್ತೆ ಮಾಡಿದ್ದೇನೆ. ಆದರೆ "ರಿಂಗ್ ಪುಲ್‌ಗಳಿಂದ ಹಿಡಿದು, ವಿವಿಧ ಕಬ್ಬಿಣದ ತುಂಡುಗಳು ಮತ್ತು ತ್ಯಾಜ್ಯಗಳು ಹೀಗೆ ನನ್ನ ಸಂಶೋಧನೆಗಳಲ್ಲಿ 90 ಪ್ರತಿಶತ ಅನುಪಯುಕ್ತ ವಸ್ತುಗಳೇ ತುಂಬಿದ್ದವು " ಎಂದೂ ಹೇಳಿದ್ದಾರೆ. ಅಲ್ಲದೆ, ತನಗೆ ಚಿನ್ನದ ನಾಣ್ಯ ದೊರಕಿದ ದಿನದ ನೆನಪುಗಳನ್ನು ಮೆಲುಕುಹಾಕುತ್ತಾ , "ಇದು ನನ್ನ ಜೀವನದಲ್ಲೇ ನಾನು ಪತ್ತೆ ಹಚ್ಚಿದ ಮೊದಲ ಚಿನ್ನದ ತುಂಡು, ಮತ್ತು ಅದನ್ನ ನೋಡಿ ನಾನು ಆಘಾತದ ಸ್ಥಿತಿಯಲ್ಲಿದ್ದೆ" ಎಂದು ಅವರು ಹೇಳಿದರು .
Published by:vanithasanjevani vanithasanjevani
First published: