ಅನೇಕರು ತಮ್ಮ ಸಾಕುಪ್ರಾಣಿಯನ್ನು ತಮ್ಮ ಸ್ವಂತ ಮಕ್ಕಳಿಗಿಂತಲೂ ಸ್ವಲ್ಪ ಹೆಚ್ಚು ಕಾಳಜಿ ವಹಿಸಿ ನೋಡಿಕೊಳ್ಳುತ್ತಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಎಷ್ಟೋ ಜನರು ಸಾಕುಪ್ರಾಣಿಗಳಾದ ಬೆಕ್ಕು(Cat Viral Video) ಮತ್ತು ನಾಯಿಯನ್ನು (Dog Viral Video) ತಮ್ಮ ಮಲಗುವ ಮಂಚದ ಮೇಲೆ ಮಲಗಿಸಿಕೊಳ್ಳುತ್ತಾರೆ ಮತ್ತು ಕೂರುವ ಸೋಫಾ ಮೇಲೆ ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡು ಇರುವುದನ್ನು ನಾವು ಅನೇಕ ಸಂದರ್ಭಗಳಲ್ಲಿ ನೋಡುತ್ತೇವೆ. ಅಷ್ಟೇ ಅಲ್ಲದೆ ಮನೆಯವರು ಏನು ಊಟ ಮಾಡುವವರೋ ಅದನ್ನೇ ಅವರ ಸಾಕು ಪ್ರಾಣಿಗೂ ನೀಡುತ್ತಾರೆ. ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ (Viral Video) ಸಹ ಆಗಿದೆ. ಈ ವಿಡಿಯೋ ನಮಗೆ ಈ ಹಿಂದೆ ಬಿಡುಗಡೆಯಾದ ನಟ ರಕ್ಷಿತ್ ಶೆಟ್ಟಿ ಅಭಿನಯದ ಚಲನಚಿತ್ರ ‘777 ಚಾರ್ಲಿ (777 Charlie) ನೆನಪನ್ನು ಗ್ಯಾರಂಟಿ ತರುತ್ತದೆ.
ಹೀಗೆ ಒಂದೇ ಎರಡೇ! ದೈನಂದಿನ ಬದುಕಿನಲ್ಲಿ ಮನೆಯ ಒಡೆಯ ಏನೇನು ಕೆಲಸಗಳನ್ನು ಮಾಡುತ್ತಾರೋ, ಅಲ್ಲೆಲ್ಲಾ ತಮ್ಮ ಸಾಕುಪ್ರಾಣಿಗಳನ್ನು ಕರೆದುಕೊಂಡು ಹೋಗುತ್ತಾರೆ. ಈಗಂತೂ ಸಾಕುಪ್ರಾಣಿಗಳು ಮತ್ತು ಮನುಷ್ಯನ ಮಧ್ಯೆ ಒಂದು ಭಾವನಾತ್ಮಕ ಸಂಬಂಧವನ್ನು ತೋರಿಸುವ ಅನೇಕ ವೀಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದುದ್ದನ್ನು ನಾವು ದಿನನಿತ್ಯ ನೋಡುತ್ತಲೇ ಇದ್ದೇವೆ.
View this post on Instagram
ನಾಯಿಗೆ ಪ್ರವಾಸದಲ್ಲಿ ದೀರ್ಘಕಾಲದವರೆಗೆ ಕುಳಿತುಕೊಳ್ಳುವ ತರಬೇತಿ
ಅವರ ಈ ಸುದೀರ್ಘವಾದ ಪ್ರಯಾಣವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. ಈ ಪ್ರವಾಸಕ್ಕಾಗಿ, ರಾಜ್ಕೋನ್ವರ್ ಅವರು ತಮ್ಮ ನಾಯಿ ಬೆಲ್ಲಾ ಗೆ ಪ್ರವಾಸದ ಸಮಯದಲ್ಲಿ ಕುಳಿತುಕೊಳ್ಳಲು ಒಂದು ಕ್ಯಾರಿಯರ್ ಅನ್ನು ಸಹ ತಮ್ಮ ಬೈಕಿನಲ್ಲಿ ಸ್ಥಾಪಿಸಿದರು. ಅವರು ತಮ್ಮ ನಾಯಿಗೆ ಪ್ರವಾಸದಲ್ಲಿ ದೀರ್ಘಕಾಲದವರೆಗೆ ಕುಳಿತುಕೊಳ್ಳಲು ತರಬೇತಿ ನೀಡಿದರು ಮತ್ತು ಅವರಿಗೆ ಬೇಕಾದ ಸಾಮಾನುಗಳನ್ನು ಸಹ ಪ್ಯಾಕ್ ಮಾಡಿಕೊಂಡರು. ಅವರ ಪ್ರಯಾಣದ ವೀಡಿಯೋ ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: Lost Oxygen: ಆಮ್ಲಜನಕವಿಲ್ಲದೇ 550 ಮಿಲಿಯನ್ ವರ್ಷಗಳ ಹಿಂದೆ ನಡೆದಿತ್ತು ಘೋರ ದುರಂತ! ಏನದು?
ವಿಡಿಯೋದ ಜೊತೆಗೆ, "45 ಸೆಕೆಂಡುಗಳಲ್ಲಿ ನಮ್ಮ ಝನ್ಸ್ಕರ್ ಮತ್ತು ಲಡಾಖ್ ಕಥೆ" ಎಂದು ರಾಜ್ಕೋನ್ವರ್ ಬರೆದಿದ್ದಾರೆ. ಈ ವಿಡಿಯೋವು ತನ್ನ ಮುದ್ದಿನ ನಾಯಿಯೊಂದಿಗೆ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಯಾದ ಲಡಾಖ್ ಗೆ ಪ್ರಯಾಣಿಸುವ ಮೂಲಕ ಪ್ರಾರಂಭವಾಗುತ್ತದೆ. ದೆಹಲಿಯಿಂದ ಲಡಾಖ್ಗೆ ನಾಯಿಯೊಂದಿಗೆ ಸವಾರಿ ಮಾಡುವುದು ಸುಲಭದ ನಿರ್ಧಾರವಲ್ಲ. ಇದಕ್ಕಾಗಿ ಬೆಲ್ಲಾಗೆ ಚೆನ್ನಾಗಿ ಕುಳಿತುಕೊಳ್ಳಲು ನನ್ನ ಬೈಕನ್ನು ಸಹ ಕಸ್ಟಮೈಸ್ ಮಾಡಿಕೊಂಡಿದೆ ಎಂದು ರಾಜ್ಕೋನ್ವರ್ ವೀಡಿಯೋದಲ್ಲಿ ಹೇಳುತ್ತಾರೆ.
ವೀಡಿಯೋದಲ್ಲಿ ಏನೆಲ್ಲಾ ನೋಡಬಹುದು?
ಈ ಕ್ಲಿಪ್ ನಲ್ಲಿ ಸಾಕು ನಾಯಿ ಮತ್ತು ಬೈಕರ್ ಜೋಡಿಯು ಹಿಮದಿಂದ ಆವೃತವಾದ ಹಿಮಾಲಯ ಶ್ರೇಣಿಗಳಲ್ಲಿ ಸವಾರಿ ಮಾಡುವುದನ್ನು ಮತ್ತು ಝನ್ಸ್ಕರ್ ಮತ್ತು ಲಡಾಖ್ ಸರ್ಕ್ಯೂಟ್ ಅನ್ನು ಪೂರ್ಣಗೊಳಿಸಲು ಸ್ವಚ್ಛವಾದ ನದಿಗಳನ್ನು ದಾಟುವುದನ್ನು ತೋರಿಸುತ್ತದೆ. ವೀಡಿಯೋದ ಕೊನೆಯಲ್ಲಿ, ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಯಾದ ಉಮ್ಲಿಂಗ್ ಲಾದಲ್ಲಿ ಈ ಜೋಡಿಯನ್ನು ಭಾರತದ ಧ್ವಜವನ್ನೂ ಸಹ ನೋಡಬಹುದಾಗಿದೆ.
ಇದನ್ನೂ ಓದಿ: Viral Dance: ಅರೆಬಿಕ್ ಕುತ್ತು ಹಾಡಿಗೆ ಅಜ್ಜನ ಡ್ಯಾನ್ಸ್! ಅಜ್ಜಿಗೆ ನಗುವೋ ನಗು
ವಿಡಿಯೋ ಫುಲ್ ವೈರಲ್!
ಈ ವಿಡಿಯೋವನ್ನು ನವೆಂಬರ್ 16 ರಂದು ಪೋಸ್ಟ್ ಮಾಡಲಾಗಿದೆ. ಇದೀಗ ಅಂತರ್ಜಾಲದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದು ಇನ್ಸ್ಟಾಗ್ರಾಮ್ ನಲ್ಲಿ 1.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ವಾವ್ ಬೆಲ್ಲಾ ತುಂಬಾ ಆನಂದಿಸಿರಬೇಕು. ನಮ್ಮ ಅಸ್ಸಾಮಿ ಗಾಮುಸಾವನ್ನು ನೋಡಲು ಸಂತೋಷವಾಗಿದೆ" ಎಂದು ಹೇಳಿದರು. ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ಇದು ಅದ್ಭುತವಾಗಿದೆ. ಹೆಚ್ಚಿನ ಸಾಹಸಗಳಿಗಾಗಿ ನಿಮಗೆ ಮತ್ತು ಬೆಲ್ಲಾಗೆ ಶುಭವಾಗಲಿ" ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ