Viral Video: ಪ್ಯಾರೀಸ್‌ನ ಬೀದಿಗಳಲ್ಲಿ ಪೇಟಿಂಗ್ ಮಾರಾಟ ಮಾಡುತ್ತಿದ್ದ ಆ ವ್ಯಕ್ತಿಗೆ ಈ ಮಹಿಳೆ ಮಾಡಿದ್ದೇನು ಗೊತ್ತಾ?

ಪ್ಯಾರಿಸ್ ನ ಬೀದಿಗಳಲ್ಲಿ ಒಬ್ಬ ವಯಸ್ಸಾದ ವ್ಯಕ್ತಿಯು ತನ್ನ ವರ್ಣಚಿತ್ರವನ್ನು ಮಾರಾಟ ಮಾಡಲು ತುಂಬಾ ಪ್ರಯತ್ನಿಸುತ್ತಿದ್ದ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ

ವೈರಲ್ ವಿಡಿಯೋದ ದೃಶ್ಯ

ವೈರಲ್ ವಿಡಿಯೋದ ದೃಶ್ಯ

  • Share this:

Paris: ಅನೇಕ ಮಹಿಳೆಯರು ರಸ್ತೆ ಬೀದಿಗಳಲ್ಲಿ ಅನೇಕ ತರಹದ ವಸ್ತುಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ತಮ್ಮ ಹಸುಗೂಸನ್ನು ಕಂಕುಳಲ್ಲಿ ಎತ್ತಿಕೊಂಡು ಕಾರಿನ ಮುಂದೆ ಬಂದು ಕಿಟಕಿಯನ್ನು ಬಡಿದು “ಇದು ಬೇಕೆ ನಿಮಗೆ, ಕೇವಲ 50 ರೂಪಾಯಿ, ದಯವಿಟ್ಟು ತೆಗೆದುಕೊಳ್ಳಿ” ಅಂತ ಹೇಳುವುದನ್ನು ನಾವು ನೋಡಿರುತ್ತೇವೆ.


ಆದರೆ, ಎಷ್ಟು ಜನಕ್ಕೆ ಅವರ ಪರಿಸ್ಥಿತಿಯನ್ನು ನೋಡಿ ಅಯ್ಯೋ ಪಾಪ ಎಂದು ಅವರ ಹತ್ತಿರ ಏನನ್ನಾದರೂ ಖರೀದಿಸಿ ಅವರಿಗೆ ಸಹಾಯ ಮಾಡಿರುತ್ತೇವೆ ಹೇಳಿ. ಒಬ್ಬರ ಸ್ಥಿತಿಯನ್ನು ನೋಡಿ ಅಯ್ಯೋ ಪಾಪ ಎಂದು ಮರುಗುವುದಕ್ಕಿಂತ ಅವರಿಗೆ ತಮ್ಮಿಂದಾಗುವ ಸಹಾಯ ಮಾಡುವುದು ಒಳ್ಳೆಯದು. ಇಂತಹದೇ ಒಂದು ಘಟನೆಯ ಬಗ್ಗೆ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ಪ್ಯಾರಿಸ್ ನ ಬೀದಿಗಳಲ್ಲಿ ಒಬ್ಬ ವಯಸ್ಸಾದ ವ್ಯಕ್ತಿಯು ತನ್ನ ವರ್ಣಚಿತ್ರವನ್ನು ಮಾರಾಟ ಮಾಡಲು ತುಂಬಾ ಪ್ರಯತ್ನಿಸುತ್ತಿದ್ದ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮುಂದೆ ಏನಾಗುತ್ತದೆ ಎಂಬುದನ್ನು ನೀವು ನೋಡಿದರೆ, ಖಂಡಿತವಾಗಿಯೂ ನಿಮ್ಮ ಮನಸ್ಸು ಕರಗುತ್ತದೆ.


ಒಬ್ಬರ ಮೇಲೆ ಪ್ರೀತಿ, ದಯೆ ತೋರಿಸಿದರೆ ನಮಗೆ ತುಂಬಾ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷ ಸಿಗುವುದರಲ್ಲಿ ಸಂಶಯವೇ ಇಲ್ಲ. ಪ್ಯಾರಿಸ್ ನ ಬೀದಿಗಳಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯಿಂದ ವರ್ಣಚಿತ್ರವನ್ನು ಖರೀದಿಸಿದ ಮಹಿಳೆಗೆ ಈ ಮೇಲಿನ ಸಾಲುಗಳು ಒಪ್ಪುತ್ತವೆ. ವೈರಲ್ ವೀಡಿಯೊದಲ್ಲಿ ತನ್ನ ವರ್ಣಚಿತ್ರವನ್ನು ಮಾರಾಟ ಮಾಡಿದ ನಂತರ ವ್ಯಕ್ತಿಯ ಮುಖದಲ್ಲಿ ಮೂಡಿದಂತಹ ನಗು ನೋಡಲು ಎರಡು ಕಣ್ಣುಗಳು ಸಾಲದು.


ಇದನ್ನೂ ಓದಿ: ಅಮೇರಿಕಾದಲ್ಲಿ ಹಲ್ಲುಜ್ಜುವ ಬೇವಿನ ಕಡ್ಡಿಗಳ ಬೆಲೆ ಬರೋಬ್ಬರಿ 1,800 ರೂ. ಅಂತೆ !

ಆ ವ್ಯಕ್ತಿಯು ರಸ್ತೆಯಲ್ಲಿ ಹಾದುಹೋಗುವ ಎಲ್ಲಾ ಜನರಿಗೆ ತನ್ನ ಕೈಯಲ್ಲಿ ಚಿತ್ರಕಲೆಯನ್ನು ತೋರಿಸುತ್ತಿದ್ದನು. ತನ್ನ ಮನೆಯ ಕಿಟಕಿಯಿಂದ ಈ ವ್ಯಕ್ತಿಯ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದ ಮಹಿಳೆ ಆ ವ್ಯಕ್ತಿಯ ವರ್ಣಚಿತ್ರವನ್ನು ಯಾರಾದರೂ ಖರೀದಿಸುತ್ತಾರೆಯೇ? ಎಂದು ತುಂಬಾ ಕಾತುರತೆಯಿಂದ ಕಾಯುತ್ತಿದ್ದಳು.


ತುಂಬಾ ಹೊತ್ತಿನ ನಂತರ ಯಾರೂ ಅದನ್ನು ಖರೀದಿಸಲು ಸಿದ್ಧರಿಲ್ಲ ಎಂಬುದನ್ನು ಗಮನಿಸಿದ ಅವಳು ಆ ಚಿತ್ರಕಲೆಯನ್ನು ತಾನೇ ಖರೀದಿಸಲು ಸ್ವತಃ ಮನೆಯಿಂದ ಹೊರ ಬಂದರು. ಇದೆಲ್ಲವನ್ನು ರೆಕಾರ್ಡ್ ಮಾಡುತ್ತಾ ಬಂದು ಆ ವ್ಯಕ್ತಿಯ ಮುಂದೆ ನಿಂತಾಗ ಅಚ್ಚರಿಯೊಂದು ಕಾದಿತ್ತು.


ಆ ಅಚ್ಚರಿ ಏನಂದರೆ ಆ ವ್ಯಕ್ತಿಯ ಬಳಿ ಇದ್ದಂತಹ ವರ್ಣಚಿತ್ರವು ತುಂಬಾ ಸುಂದರವಾಗಿತ್ತು. ವಿಡಿಯೋದಲ್ಲಿ ತುಂಬಾ ಇಷ್ಟವಾಗುವಂತಹ ಅಂಶವೆಂದರೆ ಆ ವ್ಯಕ್ತಿಯ ಮುಖದ ಮೇಲಿನ ಸಂತೋಷ.





ಆ ವ್ಯಕ್ತಿ ಅವರ ವರ್ಣಚಿತ್ರಕ್ಕೆ ಕೇವಲ 30 ಯುರೋಗಳನ್ನು ಕೇಳಿದರು. ಆದರೆ, ಅದು ಸಾಕಷ್ಟು ಚೆನ್ನಾಗಿದೆ ಎಂದು ನಾನು ಭಾವಿಸಿ ಅದಕ್ಕೆ 40 ಯುರೋಗಳನ್ನು ಅವರಿಗೆ ನೀಡಿದ್ದೇನೆ" ಎಂದು ಮಹಿಳೆಯು ವಿಡಿಯೋದ ಶೀರ್ಷಿಕೆಯಲ್ಲಿ ಬರೆದು ಕೊಂಡಿದ್ದಾರೆ.


ಈ ವಿಡಿಯೋವನ್ನು ಇದುವರೆಗೂ ಸುಮಾರು 12,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 450ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಈ ಪೇಂಟಿಂಗ್ ನೋಡಿದ ನೆಟ್ಟಿಗರು “ಎಂಥಾ ಅದ್ಬುತವಾದ ಪೇಂಟಿಂಗ್” ಎಂದು ಪ್ರತಿಕ್ರಿಯೆ ನೀಡಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
First published: