Viral Video: ಆತ ನಿಜಕ್ಕೂ ಮಹಿಳೆಯ ಸಹಾಯಕ್ಕೆ ಮುಂದಾಗಿದ್ದ, ಆದ್ರೆ ಆತನಿಗೆ ಹೀಗೆ ಆಗುತ್ತೆ ಅಂತ ಗೊತ್ತಿರಲಿಲ್ಲ!

ವ್ಯಕ್ತಿ ಕೆಳಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದ್ದು, ಕೆಲವರು ನಕ್ಕಿದ್ರೆ, ಒಂದಿಷ್ಟು ನೆಟ್ಟಿಗರು ಆತನ ಸ್ಥಿತಿಗೆ ಬೇಸರ ಮಾಡಿಕೊಂಡಿದ್ದಾರೆ.

ವೈರಲ್ ವಿಡಿಯೋ ದೃಶ್ಯ

ವೈರಲ್ ವಿಡಿಯೋ ದೃಶ್ಯ

  • Share this:
ಸೋಶಿಯಲ್ ಮೀಡಿಯಾ(Social Media)ದಲ್ಲಿ ಹಾಸ್ಯಮಯವಾದ ವಿಡಿಯೋ (Funny Video) ಹರಿದಾಡುತ್ತಿದೆ. ಇಲ್ಲಿ ವ್ಯಕ್ತಿಯೋರ್ವ ಮಹಿಳೆ(Woman)ಗೆ ಸಹಾಯ ಮಾಡಲು ಹೋಗಿ ತಾನೇ ಪಜೀತಿಯಲ್ಲಿ ಸಿಲುಕಿಕೊಂಡಿದ್ದಾನೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ನಗುವಿನ ಎಮೋಜಿ (Smile Emoji) ಹಾಕಿ ಶೇರ್ (Share) ಮಾಡಿಕೊಳ್ಳುತ್ತಿದ್ದಾರೆ. ವ್ಯಕ್ತಿ ಕುಳಿತುಕೊಳ್ಳುವಾಗ ಆತನ ಕುರ್ಚಿ (Chair) ಎಳೆದ್ರೆ ಆತ ಕೆಳಗೆ ಬೀಳುತ್ತಾನೆ. ಇದರಿಂದ ಆತ ನೋವು ಅನುಭವಿಸುತ್ತಾನೆ. ಈ ರೀತಿ ಕುರ್ಚಿಗಳನ್ನು ಮಕ್ಕಳು ಎಳೆಯುತ್ತಿರುತ್ತಾರೆ. ಇನ್ನೂ ಕೆಲವರು ತಮಾಷೆಗಾಗಿ ಮದುವೆ ಅಂತಹ ಸಮಾರಂಭಗಳಲ್ಲಿ ಆಪ್ತರ ಕುರ್ಚಿ ಎಳೆದು ಕೆಳಗೆ ಬೀಳಿಸುತ್ತಾರೆ. ಕೆಳಗೆ ಬಿದ್ದ ವ್ಯಕ್ತಿ ಇದನ್ನು ತಮಾಷೆಯಾಗಿ ಸ್ವೀಕರಿಸಿದ್ರೆ ಚೆನ್ನಾಗಿರುತ್ತೆ. ಆದ್ರೆ ಆತ ಕೋಪಗೊಂಡರೆ ತಮಾಷೆ ಜಗಳವಾಗಿ ಬದಲಾಗುವ ಸಾಧ್ಯತೆಗಳಿರುತ್ತವೆ. ಆದ್ರೆ ಈ ವಿಡಿಯೋದಲ್ಲಿ ಕುರ್ಚಿಯೇ ಹಿಂದಕ್ಕೆ ಹೋಗಿದೆ. ಆದ್ರೆ ಇದನ್ನರಿಯದ ವ್ಯಕ್ತಿ ಕುಳಿತುಕೊಳ್ಳಲು ಹೋಗಿ ಕೆಳಗೆ ಬಿದ್ದಿದ್ದಾನೆ.

ವ್ಯಕ್ತಿ ಕೆಳಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದ್ದು, ಕೆಲವರು ನಕ್ಕಿದ್ರೆ, ಒಂದಿಷ್ಟು ನೆಟ್ಟಿಗರು ಆತನ ಸ್ಥಿತಿಗೆ ಬೇಸರ ಮಾಡಿಕೊಂಡಿದ್ದಾರೆ. ಈ ದೃಶ್ಯದ ತುಣಕನ್ನು ಪಂಜಾಬಿ ಇಂಡಸ್ಟ್ರಿ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಇದುವರೆಗೂ ಈ ವಿಡಿಯೋ ಎಂಟು ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆ ಆಗಿದೆ. ಈ ವಿಡಿಯೋವನ್ನು ನೋಡುತ್ತಿರುವ ಯುವತಿ ಸಹ ನಗು ತಡೆಯಲಾರದೇ ಜೋರಾಗಿ ನಗುತ್ತಿರುವನ್ನು ಗಮನಿಸಬಹುದು.

ವೈರಲ್ ವಿಡಿಯೋದಲ್ಲಿ ಏನಿದೆ?

ವಿಡಿಯೋ ಪ್ರಾರಂಭವಾಗುತ್ತಿದ್ದಂತೆ ವ್ಯಕ್ತಿಯೋರ್ವ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿರುತ್ತಾನೆ. ಆತನ ಹಿಂದಿನಿಂದ ಮಹಿಳೆ ಬರುತ್ತಾರೆ. ಮಹಿಳೆ ಕೈಯಲ್ಲಿ ಹೆಚ್ಚು ವಸ್ತುಗಳನ್ನು ಹಿಡಿದಿರುವ ಕಾರಣ, ವ್ಯಕ್ತಿ ಬಾಗಿಲು ತೆಗೆಯಲು ತಾನು ಕುಳಿತ ಸ್ಥಳದಿಂದ ಎದ್ದು ಬಂದು ಡೋರ್ ಓಪನ್ ಮಾಡುತ್ತಾನೆ.

ಇದನ್ನೂ ಓದಿ:  Photo Viral: ವೋಗೋ ಸ್ಕೂಟರ್‌ನಲ್ಲಿ ಬೌನ್ಸ್‌ ಹೆಲ್ಮೆಟ್‌ ಧರಿಸಿ ಸ್ವಿಗ್ಗಿ ಮತ್ತು ಜೊಮ್ಯಾಟೋ ಡೆಲಿವರಿ ಬಾಯ್ಸ್ ಸವಾರಿ ನೋಡಿ..

ಆದರೆ ಆ ವ್ಯಕ್ತಿ ಏಳುತ್ತಿದ್ದಂತೆ ಗಾಲಿಗಳಿರುವ ಕುರ್ಚಿ ಹಿಂದಕ್ಕೆ ಸರಿದುಕೊಳ್ಳುತ್ತದೆ. ಇದನ್ನು ಗಮನಿಸದ ವ್ಯಕ್ತಿ, ಬಾಗಿಲು ಮುಚ್ಚು ಕುಳಿತುಕೊಳ್ಳಲು ಮುಂದಾಗುತ್ತಾನೆ. ಕುರ್ಚಿ ಇರದ ಕಾರಣ ಆ ವ್ಯಕ್ತಿ ಕೆಳಗೆ ಬೀಳುತ್ತಾನೆ. ಈ ಎಲ್ಲ ದೃಶ್ಯಗಳು ಕೊಠಡಿಯಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

ಇನ್ನೂ ವಿಡಿಯೋ ನೋಡಿದ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಕೆಲವರು ವ್ಯಕ್ತಿಯನ್ನು ನೋಡಿ ಬೇಸರ ಹೊರ ಹಾಕಿದ್ದಾರೆ. ನಮ್ಮ ಹಿಂದೆ ಏನು ನಡೆಯುತ್ತಿರುತ್ತೆ ಎಂಬುದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಓರ್ವ ನೆಟ್ಟಿಗ ಸಲಹೆ ನೀಡಿದ್ದಾನೆ.

Viral News: ಮದುಮಗನ ಪಕ್ಕ ಕೂತು ಹೀಗಾ ಮಾಡೋದು? ಪಾಪ ವರನಿಗೆ ಹೇಗಾಗಿರಬೇಡ..!

ಕೆಲವರಂತೂ ವಧು ವರರಿಗೆ ನೀಡಿದ ಉಡುಗೊರೆ ಮತ್ತು ದುಡ್ಡು ಇರುವ ಕವರ್‌ಗಳನ್ನು ತಕ್ಷಣವೇ ಅವರ ಕೈಯಿಂದ ತೆಗೆದುಕೊಂಡು ಒಂದು ಕಡೆ ಇಡುತ್ತಾರೆ. ಇಂತಹದರಲ್ಲಿ ‘ಅವರು ವಧು ವರರ ಹಿಂದೆ ನಿಂತು ಬಂದ ಎಲ್ಲಾ ದುಡ್ಡು ಇರುವ ಕವರ್‌ಗಳನ್ನು ತಾವೇ ತೆಗೆದುಕೊಂಡರು, ತಮ್ಮ ಜೇಬಿಗೆ ಎಷ್ಟು ಇಳಿಸಿದ್ದಾರೋ ಗೊತ್ತಿಲ್ಲ’ ಎಂಬ ಮಾತುಗಳನ್ನು ನಾವು ಕೇಳಿರುತ್ತೇವೆ.
View this post on Instagram


A post shared by Meemlogy (@meemlogy)


ಈ ವಿಡಿಯೋದಲ್ಲಿ ನಡೆಯುತ್ತಿರುವ ಮದುವೆ ಸಮಾರಂಭವು ಎಲ್ಲಿ ನಡೆದದ್ದು ಮತ್ತು ಯಾವಾಗ ನಡೆದದ್ದು ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ಜನರಿಂದ ಸುತ್ತುವರೆದಿರುವ ವರನು ತನ್ನ ಸಂಬಂಧಿಕರು ಏನು ಹೇಳುತ್ತಿದ್ದಾರೆಂದು ಗಮನವಿಟ್ಟು ಕೇಳುತ್ತಿರುವುದನ್ನು ಇದರಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ:  Akshata Murty: ಬ್ರಿಟನ್ ರಾಣಿಗಿಂತಲೂ ಶ್ರೀಮಂತೆ ಅಕ್ಷತಾ ಮೂರ್ತಿ: Infosys ನಾರಾಯಣ ಮೂರ್ತಿ ಪುತ್ರಿಯ ಆಸ್ತಿ ವಿವರ

ವರನ ಗಮನ ಆ ಕಡೆ ಇರುವುದನ್ನು ನೋಡಿದ ಆತನ ಸ್ನೇಹಿತನೊಬ್ಬನು ಮೆಲ್ಲಗೆ ಅವನು ಧರಿಸಿರುವ ಹಾರದಿಂದ ಕೆಲವು ನೋಟುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾನೆ.
Published by:Mahmadrafik K
First published: