ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ (Social Media) ಹರಿದಾಡುತ್ತಿದ್ದ ಒಂದು ವೀಡಿಯೋದಲ್ಲಿ (Video) ತನ್ನ ಭಾರತೀಯ ಗೆಳೆಯನ ಮದುವೆ (Marriage) ಸಮಾರಂಭಕ್ಕೆ ಹೋಗುವಾಗ ಲಂಡನ್ನಿನ (London) ಇಬ್ಬರು ಸ್ನೇಹಿತರು ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಸೀರೆಯನ್ನು (Saree) ಧರಿಸಿಕೊಂಡು ಬಂದು ಮದುವೆ (Marriage) ಸಮಾರಂಭಕ್ಕೆ ಬಂದಿರುವ ಅತಿಥಿಗಳನ್ನೆಲ್ಲಾ ಆಶ್ಚರ್ಯಗೊಳಿಸಿದ್ದುದ್ದನ್ನು ನಾವು ನೋಡಿದ್ದೆವು. ಹೀಗೆ ಈಗಂತೂ ಅನೇಕ ಜನರು ಡಿಫರೆಂಟ್ ಆದ ಗೆಟಪ್ ನಲ್ಲಿ ಇಂತಹ ಸಭೆ ಮತ್ತು ಸಮಾರಂಭಗಳಲ್ಲಿ ಕಾಣಿಸಿಕೊಂಡು ಎಲ್ಲರನ್ನು ಒಂದು ಕ್ಷಣ ದಿಗ್ಭ್ರಮೆಗೊಳಿಸುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅನೇಕರು ತಮಗೆ ಮನಸ್ಸಿಗೆ ತೋಚಿದ ಡಿಫರೆಂಟ್ ಉಡುಗೆಯನ್ನು ಧರಿಸಿಕೊಂಡು ಜನರ ಮಧ್ಯೆ ಬಂದಾಗ ಎಲ್ಲರ ಗಮನ ಒಂದು ಕ್ಷಣ ಆ ಡಿಫರೆಂಟ್ ಉಡುಗೆಯ ಮೇಲೆ ಬೀಳುವುದು ಸಹಜ.
ಡಿಫರೆಂಟ್ ಉಡುಪುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಯುವಕ-ಯುವತಿಯರು
ಹಾಗೆಯೇ ನಾವು ಅನೇಕ ಮದುವೆಗಳಲ್ಲಿ ವಧು ವರರ ಸ್ನೇಹಿತರು ತುಂಬಾನೇ ಡಿಫರೆಂಟ್ ಆದ ಉಡುಗೆಗಳನ್ನು ಧರಿಸಿಕೊಂಡು ಬರುವುದನ್ನು ನಾವು ನೋಡಿರುತ್ತೇವೆ. ಆದರೆ ಈಗ ಜನರು ಇಂತಹ ಸ್ಟೈಲಿಶ್ ಅಂತ ಅನ್ನಿಸುವ ಡಿಫರೆಂಟ್ ಉಡುಪುಗಳನ್ನು ಧರಿಸಿಕೊಂಡು ರಸ್ತೆಯ ಮೇಲೆ ರಾಜಾರೋಷವಾಗಿ ಅಡ್ಡಾಡುತ್ತಿರುವುದನ್ನು ಸಹ ನಾವು ದೊಡ್ಡ ದೊಡ್ಡ ಮಹಾ ನಗರಗಳಲ್ಲಿ ನೋಡಿರುತ್ತೇವೆ ಅಂತ ಹೇಳಬಹುದು.
ಇಂತಹ ಉಡುಪುಗಳನ್ನು ಧರಿಸಿಕೊಂಡು ಬಂದವರನ್ನು ರಸ್ತೆಯ ಮೇಲೆ ನೋಡಿದಾಗ ಕೆಲವರಿಗೆ ‘ಇವರದ್ದು ಅತಿರೇಕವಾಯಿತು’ ಅಂತ ಅನ್ನಿಸಿರುತ್ತದೆ ಮತ್ತು ಇನ್ನೂ ಕೆಲವರಿಗೆ ‘ವಾವ್..ಏನಿದು ಡಿಫರೆಂಟ್ ಸ್ಟೈಲ್’ ಅಂತ ಸಹ ಅನ್ನಿಸಿರುತ್ತದೆ.
ಸೊಂಟಕ್ಕೆ ಟವೆಲ್ ಸುತ್ತಿಕೊಂಡು ಮೆಟ್ರೋ ಹತ್ತಿದ ವ್ಯಕ್ತಿ
ಇಲ್ಲೊಂದು ಹೊಸ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದ್ದು, ಈಗ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ. ಈ ವೀಡಿಯೋದಲ್ಲಿರುವ ದೃಶ್ಯ ನೋಡಿ ಕೆಲವರಿಗೆ ಇದು ಮಜಾ ಅನ್ನಿಸಿದರೆ, ಇನ್ನೂ ಕೆಲವರಿಗೆ ಇದು ಅತಿರೇಕ ಅಂತ ಸಹ ಅನ್ನಿಸಬಹುದು. ಸಾಮಾನ್ಯವಾಗಿ ನಾವು ಸ್ನಾನ ಮಾಡುವಾಗ ಅಥವಾ ಬಟ್ಟೆ ಬದಲಿಸುವಾಗ ನಮ್ಮ ಸೊಂಟಕ್ಕೆ ಟವೆಲ್ ಅನ್ನು ಸುತ್ತಿಕೊಳ್ಳುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸೊಂಟಕ್ಕೆ ಟವೆಲ್ ಸುತ್ತಿಕೊಂಡು ದೆಹಲಿ ಮೆಟ್ರೋ ಟ್ರೈನ್ ಹತ್ತಿದ್ದಾನೆ ನೋಡಿ.
ಸೊಂಟಕ್ಕೆ ಟವೆಲ್ ಸುತ್ತಿಕೊಂಡು ಮೆಟ್ರೋ ಹತ್ತುವುದನ್ನು ಬಹುಶಃ ನೀವು ಎಲ್ಲಿಯೂ ನೋಡಿರಲು ಸಾಧ್ಯವಿಲ್ಲ. ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ನಡೆದದ್ದು ಇದೆ ಆಗಿದೆ. ಟವೆಲ್ ಧರಿಸಿ ದೆಹಲಿ ಮೆಟ್ರೋದ ಕಂಪಾರ್ಟ್ಮೆಂಟ್ ಗಳಲ್ಲಿ ಆರಾಮಾಗಿ ಅಲೆದಾಡುತ್ತಿರುವ ವ್ಯಕ್ತಿಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೋವನ್ನು ಮೋಹಿತ್ ಗೌಹರ್ ಎಂಬುವವರು ಹಂಚಿಕೊಂಡಿದ್ದಾರೆ ಮತ್ತು ಇದು ಸುಮಾರು 3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ.
ವ್ಯಕ್ತಿಯ ಉಡುಗೆ ನೋಡಿ ಬಿದ್ದು ಬಿದ್ದು ನಕ್ಕ ಸಹ-ಪ್ರಯಾಣಿಕರು
ಈಗ ವೈರಲ್ ಆಗಿರುವ ವೀಡಿಯೋದಲ್ಲಿ, ಒಬ್ಬ ವ್ಯಕ್ತಿಯು ಟೀ-ಶರ್ಟ್ ಅನ್ನು ಧರಿಸಿರುವುದನ್ನು ಮತ್ತು ಅವನ ಸೊಂಟಕ್ಕೆ ಟವೆಲ್ ಸುತ್ತಿಕೊಂಡಿರುವುದನ್ನು ನಾವು ನೋಡಬಹುದು. ಅವರು ದೆಹಲಿ ಮೆಟ್ರೋದ ಬೋಗಿಗಳಲ್ಲಿ ಅಲೆದಾಡಿದರು, ಇತರರು ತಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂಬುದರ ಬಗ್ಗೆ ಸಾಕಷ್ಟು ನಿರ್ಲಿಪ್ತರಾಗಿದ್ದರು. ವ್ಯಕ್ತಿಯನ್ನು ಟವೆಲ್ ನಲ್ಲಿ ನೋಡಿದ ನಂತರ ಅಲ್ಲಿನ ಪ್ರಯಾಣಿಕರ ಪ್ರತಿಕ್ರಿಯೆಗಳನ್ನು ಸಹ ವೀಡಿಯೋ ಸೆರೆಹಿಡಿದಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ, ಈ ಔಟ್-ಆಫ್-ದಿ-ಬಾಕ್ಸ್ ಉಡುಪಿನಲ್ಲಿ ತಿರುಗಾಡುವುದನ್ನು ನೋಡಿದ ನಂತರ ಜನರು ಜೋರಾಗಿ ನಕ್ಕಿದ್ದಾರೆ.
ಇದನ್ನೂ ಓದಿ: Wedding Viral Story: ಬೈಕ್ ಕೊಡಿಸದ್ದಕ್ಕೆ ಮಂಟಪದಿಂದ ಓಡಿಹೋದ ವರ!
"ನನ್ನ ಮನೆಯ ನೀರಿನ ಟ್ಯಾಂಕ್ ಖಾಲಿಯಾಗಿದೆ. ನಾನು ಇಂದು ಕಚೇರಿಯಲ್ಲಿ ಸ್ನಾನ ಮಾಡುತ್ತೇನೆ" ಎಂದು ಈ ವೀಡಿಯೋಗೆ ಶೀರ್ಷಿಕೆಯನ್ನು ಸಹ ಬರೆಯಲಾಗಿದೆ. ಈ ವೀಡಿಯೋ ಪೋಸ್ಟ್ ನ ಕಾಮೆಂಟ್ ವಿಭಾಗವು ಕೆಲವು ಉಲ್ಲಾಸಕರ ಕಾಮೆಂಟ್ ಗಳಿಂದ ತುಂಬಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವ್ಯಕ್ತಿಯ ಧೈರ್ಯಶಾಲಿ ನಡೆಯನ್ನು ತುಂಬಾನೇ ಶ್ಲಾಘಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ