ನಿಮ್ಮ ಮನೆಯಲ್ಲಿ ಇಲಿಗಳ (Rats) ಇದ್ಯಾ? ಆ ಇಲಿಗಳನ್ನು ಮನೆಯಿಂದ ಪಾರು ಮಾಡಲು ಎಷ್ಟೆಲ್ಲಾ ಹರ ಸಾಹಸಗಳನ್ನು ಪಡ್ತೀರ ಅಲ್ವಾ? ಇಲಿ ಬೋನು, ಇಲಿ ಪಾಶಾಣ ಹೀಗೆ ಅನೇಕ ರಿಸ್ಕ್ಗಳನ್ನು ನೀವು ತೆಗೆದುಕೊಂಡಿರಬಹುದು. ಆದರೆ ಪುರಾತನವಾಗಿ ಈ ಇಲಿಯನ್ನು ದೇವರು, ಗಣೇಶನ ವಾಹನ ಎಂದು ಪರಿಗಣಿಸಲಾಗಿದೆ. ಆದ್ರೆ, ಇಲಿಯನ್ನು ನಿಜಕ್ಕೂ ಈ ಇಲಿಗಳು ಚೆಂದ ಚೆಂದದ ಬಟ್ಟೆಗಳನ್ನು ತಿಂದು ಹಾಳು ಮಾಡುತ್ತವೆ. ಈ ಇಲಿಗಳಿಂದ ಅದೆಷ್ಟೋ ಜನರು ಹೈರಾಣಾಗಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಇಲಿಯನ್ನು ಹಿಡಿಯುವ ಹೊಸ ಟ್ರಿಕ್ ವಿಡಿಯೋ ವೈರಲ್ (Video Viral) ಆಗಿತ್ತು. ಇಲಿಗಳು ಬೀಲದಿಂದ ಹೊರ ಬರುತ್ತಲೇ ಅಂಟು ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಳ್ಳುವುದು. ನಿಜ, ಇದರಿಂದ ಇಲಿಗಳು ವಿಲವಿಲನೇ ಒದ್ದಾಡುತ್ತವೆ.
ದಿನಕ್ಕೆ ನೂರಾರು ಈ ರೀತಿಯಾಗಿ ಇಲಿಗಳನ್ನು ಹಿಡಿಯು ಟ್ರಿಕ್ಸ್ಗಳನ್ನು ಜನರು ಮಾಡುತ್ತಲೇ ಇರುತ್ತಾರೆ. ಕೆಲವೊಬ್ಬರು ಇಲಿಯನ್ನು ಹಿಡಿದು ಕಾಡಿಗೆ ಬಿಡುವ ಜನರು ಇರುತ್ತಾರೆ, ಇನ್ನೂ ಕೆಲವೊಬ್ಬರು ಇದರಿಂದ ಬೇಸತ್ತ, ಬಡಿದು ಸಾಯಿಸುತ್ತಾರೆ.
ಇಷ್ಟೆಲ್ಲಾ ಟ್ರಿಕ್ಸ್ಗಳನ್ನು ಬಳಸುವ ಜನರ ಮಧ್ಯೆ ಇದೀಗ ಮತ್ತೊಂದು ಇಲಿಯನ್ನು ಹಿಡಿಯುವ ವಿಡಿಯೋ ಸಖತ್ ವೈರಲ್ ಆಗ್ತಾ ಇದೆ. ಆದು ಏನು ಅಂತ ಕೇಳ್ತೀರಾ? ಅದೆಷ್ಟೋ ಜನರಿಗೆ ಈ ವಿಷಯವನ್ನು ಕೇಳಿ ಖುಷಿ ಆಗಿರಬಹುದು. ಅಯ್ಯಬ್ಬಾ! ಮತ್ತೊಂದು ಐಡಿಯಾ ಸಿಗ್ತಲ್ಲಾ ಅಂತ. ಆದ್ರೆ ನೀವು ಈ ವಿಡಿಯೋವನ್ನು ನೋಡಿದ ಮೇಲೆಯೂ ಇದೇ ರೀತಿಯಾಗಿ ನಿಟ್ಟುಸಿರು ಬಿಡುತ್ತೀರಾ ಎಂದು ಚೆಕ್ ಮಾಡಿಕೊಳ್ಳಿ.
ಇದನ್ನೂ ಓದಿ: ಈ ರೈಲು ಸೈಕಲ್ಗಿಂತ ನಿಧಾನವಾಗಿ ಚಲಿಸುತ್ತಂತೆ, ಹೀಗಿದೆ ಕಾರಣ!
ಯಾಕಂದ್ರೆ ಅದೆಷ್ಟು ವಿಚಿತ್ರವಾಗಿದೆ ಅಂದ್ರೆ ನೀವು ಕೂಡ ಒಂದು ಬಾರಿ ಬೆಚ್ಚಿ ಬಿದ್ದೇ ಬೀಳುತ್ತೀರ. ಇಲಿಗಳನ್ನು ಹೀಗೂ ಹಿಡಿಯಬಹುದಾ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂಬ ಮಾತಿದೆ. ಅದಕ್ಕೆ ಉದಾಹರಣೆ ಎಂಬಂತೆ ಈ ವಿಡಿಯೋನೇ ಸಾಕ್ಷಿ ಎನ್ನಬಹುದು.
Smart idea pic.twitter.com/CvvXbYUp9i
— Weird and Terrifying (@weirdterrifying) January 14, 2023
ಇಷ್ಟು ಈಸಿಯಾಗಿ ಇಲಿಗಳನ್ನು ನಿಮಗೆ ಹಿಡಿಯಲು ಆಗುತ್ತಾ? ಈ ವಿಡಿಯೋ ನೋಡಿ ನೀವು ಈ ತರ ಟ್ರಿಕ್ಸ್ಗಳನ್ನು ಫಾಲೋ ಮಾಡ್ತೀರ? ದಯವಿಟ್ಟು ಇಂತಹ ಸಾಹಸಗಳನ್ನು ಮಾಡಬೇಡಿ. ಯಾಕಂದ್ರೆ ಇದ್ರಲ್ಲಿ ಬಳಸಿರುವುದು ಹಾವು. ಇಲಿಯನ್ನು ಹಿಡಿಯಲು ಹೋಗಿ ಹಾವಿನಿಂದ ಕಚ್ಚಿಸಿಕೊಳ್ಳುವ ಸಾಹಸವನ್ನು ಮಾಡಿಕೊಳ್ಳಬೇಡಿ. ಬೇಕಂದ್ರೆ ಶೋಪೀಸ್ ಹಾವನ್ನು ಬಿಟ್ಟು ನೋಡಿ.
ಈಗಿನ ಕಾಲದ ಇಲಿಗಳು ಸಖತ್ ಫಾಸ್ಟ್. ಜನರ ಮೈಂಡ್ಸೆಟ್ ಗಳನ್ನು ಅರ್ಥ ಮಾಡಿಕೊಂಡಿದೆ. ಹೀಗಾಗಿ ಜನರು ಚಾಪೆಯ ಅಡಿ ನುಗ್ಗಿದರೆ, ಇಲಿಗಳು ಭೂಮಿಯ ಅಡಿಯೇ ನುಗ್ಗುತ್ತವೆ. ಈ ವಿಡಿಯೋ ನೋಡಿದ ಮೇಲೆ ಅಯ್ಯೋ ಪಾಪ ಇಲಿಗಳು ಅಂತ ನಿಮಗೆ ಅನಿಸ್ತಾ ಇದ್ಯಾ? ನಿಮ್ಮ ಮನೆಯಲ್ಲಿ ಪುಟಾಣಿ ಮಕ್ಕಳು ಇದ್ರೆ ಅವರಿಗೂ ಈ ವಿಡಿಯೋ ಒಂದು ಬಾರಿ ತೋರಿಸಿ. ಏನು ಹೇಳ್ತಾರೆ ಅಂತ ನೋಡಿ.
ಒಟ್ನಲ್ಲಿ ಈ ವಿಡಿಯೋನ ನೋಡ್ತಾ ಇದ್ರೆ ಒಂದು ಬಾರಿಗೆ ನಗು ಬರುತ್ತೆ, ವಾಹ್! ಎಂಥಾ ಉಪಾಯ ಅಂತ ಅನಿಸುತ್ತೆ ಅಲ್ವಾ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ