HOME » NEWS » Trend » MAN TIES BEDSHEETS TOGETHER TO ESCAPE QUARANTINE FROM FOURTH FLOOR HOTEL WINDOW STG KVD

ಕ್ವಾರಂಟೈನ್‍ನಿಂದ ತಪ್ಪಿಸಿಕೊಳ್ಳಲು 6 ಬೆಡ್‍ಶೀಟ್​​​ನ ಹಗ್ಗ ಮಾಡಿಕೊಂಡು ಇಳಿದ ಭೂಪ, ಆದರೆ ಅದೃಷ್ಟ ಕೈಕೊಡ್ತು!

ವ್ಯಕ್ತಿಯೊಬ್ಬ ಕ್ವಾರಂಟೈನ್‍ನಿಂದ ತಪ್ಪಿಸಿಕೊಳ್ಳಲು ಆರು ಬೆಡ್‍ಶೀಟ್‍ಗಳನ್ನು ಒಂದಕ್ಕೊಂದು ಗಂಟು ಹಾಕಿ, ಹಗ್ಗ ಮಾಡಿಕೊಂಡು ತಾನಿದ್ದ ಕೊಠಡಿಯ 4ನೇ ಮಹಡಿಯ ಕಿಟಕಿಯಿಂದ ಹೊರ ಜಿಗಿದ ಘಟನೆ ಅಸ್ಟ್ರೇಲಿಯಾದ ಪರ್ಥ್‍ನಲ್ಲಿ ನಡೆದಿದೆ.

Trending Desk
Updated:July 22, 2021, 6:16 AM IST
ಕ್ವಾರಂಟೈನ್‍ನಿಂದ ತಪ್ಪಿಸಿಕೊಳ್ಳಲು 6 ಬೆಡ್‍ಶೀಟ್​​​ನ ಹಗ್ಗ ಮಾಡಿಕೊಂಡು ಇಳಿದ ಭೂಪ, ಆದರೆ ಅದೃಷ್ಟ ಕೈಕೊಡ್ತು!
ಹೋಟೆಲ್​​ ಕಿಟಕಿಯಿಂದ ಕೆಳಗಿಳಿದ ಭೂಪ
  • Share this:

ಸಿಡ್ನಿ : ಆಸ್ಟ್ರೇಲಿಯನ್ ವ್ಯಕ್ತಿಯೊಬ್ಬ ಕ್ವಾರಂಟೈನ್‍ನಿಂದ ತಪ್ಪಿಸಿಕೊಳ್ಳಲು  ಬೆಡ್‍ಶೀಟ್‍ಗಳನ್ನು ಗಂಟು ಹಾಕಿ ಹಗ್ಗದ ಹಾಗೆ ಮಾಡಿಕೊಂಡು ಪರ್ಥ್‍ನ ಹೊಟೇಲ್ ಒಂದರ ನಾಲ್ಕನೇ ಮಹಡಿಯ ಕಿಟಕಿಯಿಂದ ಹೊರ ಬಂದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿಯು ಅಂತರರಾಜ್ಯ ವಿಮಾನದ ಮೂಲಕ ಬ್ರಿಸ್‍ಬೇನ್‍ನಿಂದ ಪರ್ಥ್‍ಗೆ ಬಂದಿಳಿದಿದ್ದ. ಕೋವಿಡ್-19 ತಡೆಯುವ ಉದ್ದೇಶದಿಂದ ರಾಜ್ಯದ ಗಡಿಯಲ್ಲಿ ಕೈಗೊಂಡಿರುವ ಕಠಿಣ ನಿಯಮಗಳ ಅಡಿಯಲ್ಲಿ ರಾಜ್ಯಕ್ಕೆ ಅವನ ಪ್ರವೇಶದ ಅರ್ಜಿಯನ್ನು ನಿರಾಕರಿಸಲಾಗಿತ್ತು.


ಬಳಿಕ ಆ ವ್ಯಕ್ತಿಗೆ 48 ಗಂಟೆಗಳ ಒಳಗೆ ರಾಜ್ಯವನ್ನು ತೊರೆಯುವಂತೆ ಆದೇಶ ನೀಡಲಾಯಿತು. ತಾತ್ಕಾಲಿಕ ಕ್ವಾರಂಟೈನ್‍ಗಾಗಿ ಹೊಟೇಲ್ ಒಂದಕ್ಕೆ ಕರೆದೊಯ್ಯಲಾಯಿತು. ಆದರೆ ಆತ ಬೆಡ್‍ಶೀಟ್‍ಗಳಿಂದ ಮಾಡಿದ ಹಗ್ಗದ ಸಹಾಯದಿಂದ ನಾಲ್ಕನೇ ಮಹಡಿಯ ಕಿಟಕಿಯಿಂದ ಇಳಿದು ತಪ್ಪಿಸಿಕೊಂಡಿದ್ದಾನೆ. ಈ ಬಗ್ಗೆ ವೆಸ್ಟರ್ನ್ ಆಸ್ಟ್ರೇಲಿಯಾ ಪೊಲೀಸ್ ಒಂದು ಫೇಸ್‍ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.



ಪೊಲೀಸರು ಆತ ಬೆಡ್‍ಶೀಟ್ ಹಗ್ಗ ಉಪಯೋಗಿಸಿಕೊಂಡು  ಕಿಟಕಿಯಿಂದ ಇಳಿಯುತ್ತಿರುವ ಫೋಟೋವನ್ನು ತಮ್ಮ ಫೇಸ್‍ಬುಕ್ ಪೋಸ್ಟ್‌ನಲ್ಲಿ ಹಾಕಿಕೊಂಡಿದೆ. ಆ ವ್ಯಕ್ತಿ ಆರು ಬೆಡ್‍ಶೀಟ್‍ಗಳನ್ನು ಒಂದಕ್ಕೊಂದು ಗಂಟು ಹಾಕಿ, ಹಗ್ಗ ಮಾಡಿಕೊಂಡು ನಾಲ್ಕನೆಯ ಮಹಡಿಯ ಕಿಟಕಿಯಿಂದ ಕೆಳಗಿಳಿಯಲು ಬಳಸಿಕೊಂಡಿದ್ದಾನೆ.
ಕ್ವಾರಂಟೈನ್‍ನಿಂದ ತಪ್ಪಿಸಿಕೊಳ್ಳಲು ಅಷ್ಟೆಲ್ಲಾ ಸರ್ಕಸ್ ಮಾಡಿದರೂ ಆತ ಪೊಲೀಸರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲ.


ಕ್ವೀನ್ಸ್‌ಲ್ಯಾಂಡ್‌ನ 39 ವಯಸ್ಸಿನ ಆ ವ್ಯಕ್ತಿಯನ್ನು, ಹೊಟೇಲ್‍ನಿಂದ ಪರಾರಿಯಾದ 8 ಗಂಟೆಗಳ ಬಳಿಕ ಬಂಧಿಸಲಾಯಿತು. “ತುರ್ತುಸ್ಥಿತಿ ನಿರ್ವಹಣಾ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ,ನಿರ್ದೇಶನವನ್ನು ಅನುಸರಿಸಲು ವಿಫಲವಾದ ಮತ್ತು ಸುಳ್ಳು/ದಾರಿ ತಪ್ಪಿಸುವ ಮಾಹಿತಿಗಳನ್ನು ನೀಡಿರುವ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಅಬ್ಬಾ ಹಾವನ್ನೇ ಹಾವು ನುಂಗಿತು.. ಕಿಂಗ್ ಕೋಬ್ರಾದ ಡೆಡ್ಲಿ ಬೇಟೆ ವೈರಲ್!

ಆದರೆ ಪೊಲೀಸರು ಈವರೆಗೆ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿಲ್ಲ. ಆತನಿಗೆ ಕೋವಿಡ್ -19 ಪರೀಕ್ಷೆ ಮಾಡಿಸಿದ್ದು, ಅದರ ವರದಿ ನೆಗೆಟಿವ್ ಬಂದಿದೆ.ಆಸ್ಟ್ರೇಲಿಯಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಡಿಗಳನ್ನು ಮುಚ್ಚಿದ್ದು, ವಿದೇಶದಿಂದ ಅಥವಾ ಹೆಚ್ಚು ಕೋವಿಡ್ ಪ್ರಕರಣಗಳಿರುವ ರಾಜ್ಯಗಳಿಂದ ಬರುವ ಜನರಿಗೆ ಕಡ್ಡಾಯ ಕ್ವಾರಂಟೈನ್ ವಿಧಿಸಲಾಗುತ್ತಿದೆ. ಹೀಗೆ ಹೊಟೇಲ್ ಕ್ವಾರಂಟೈನ್‍ನಿಂದ ತಪ್ಪಿಸಿಕೊಂಡ ಘಟನೆ ಇದೇ ಮೊದಲಲ್ಲ, ಈ ಪ್ರಯತ್ನವನ್ನು ಹಿಂದೆ ಬೇರೆಯವರು ಕೂಡ ಮಾಡಿದ್ದರು. ಈ ತಿಂಗಳ ಆರಂಭದಲ್ಲಿ , ಕ್ಯಾನ್ಸ್‍ನಲ್ಲಿ ಮಹಿಳೆಯೊಬ್ಬಳು ಹೊಟೇಲ್ ಕ್ವಾರಂಟೈನ್‍ನಿಂದ ತಪ್ಪಿಸಿಕೊಳ್ಳಲು ಎರಡು ಬಾಲ್ಕನಿಗಳನ್ನು ಇಳಿದಿದ್ದಳು.

“ಬಹುಶಃ ಆ ವ್ಯಕ್ತಿ ಎರಡು ಬಾಲ್ಕನಿಗಳಿಗೆ ಹೋಗಿ, ಹೊರ ಮೆಟ್ಟಿಲುಗಳಿಂದ ಇಳಿದು, ಬಾಗಿಲು ಮುರಿದು ತಪ್ಪಿಸಿಕೊಂಡಿರುವಂತೆ ಕಾಣಿಸುತ್ತಿದೆ” ಎಂದು ಡೆಪ್ಯುಟಿ ಪೊಲೀಸ್ ಕಮೀಷನರ್ ಸ್ಟೀವ್ ಗೋಲ್‍ಶ್ವೆಸ್ಕಿ ಹೇಳಿದ್ದಾರೆ.

First published: July 22, 2021, 6:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories