Viral Video: ಯಾವೂರ ಸಾಹುಕಾರನಪ್ಪಾ ಇವ? ಚಾರ್ಮಿನಾರ್ ಬಳಿ ನಿಂತು ಹೇಗೆ ನೋಟ್‌ ಎಸೆಯುತ್ತಾನೆ ನೋಡಿ!

ಹೊಸ ವೀಡಿಯೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಒಬ್ಬ ವ್ಯಕ್ತಿ ಚಾರ್ಮಿನಾರ್ ಹತ್ತಿರವಿರುವ ಗುಲ್ಜಾರ್ ಹೌಸ್ ಫೌಂಟೆನ್ ಬಳಿ ನಿಂತು ಕೊಂಡು 500 ರೂಪಾಯಿಗಳ ನೋಟುಗಳನ್ನು ಹಾಗೆಯೇ ಸ್ಟೈಲ್ ಆಗಿ ಗಾಳಿಯಲ್ಲಿ ಬೀಸಾಡುತ್ತಿದ್ದಾನೆ. ಹಾಗಿದ್ರೆ ಯಾರಾತ? ಏನಿದು ನೋಟಿನ ಕಥೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಾವು ಯಾವುದಾದರೂ ದೊಡ್ಡ ಮದುವೆ ಸಮಾರಂಭಕ್ಕೆ (Marriage Function) ಹೋದಾಗ ಅಲ್ಲಿ ವಧು-ವರರ ಮದುವೆ ಮೆರವಣಿಗೆಯಲ್ಲಿ ಜನರ ಮಧ್ಯೆ ನಿಂತು ಡ್ಯಾನ್ಸ್ ಮಾಡುವವರ ಮೇಲೆ ಕೆಲವು ಯಜಮಾನರು ಸಂತಸದಿಂದ ಹಣದ ನೋಟುಗಳನ್ನು (Note) ಗಾಳಿಯಲ್ಲಿ ಹಾರಿಸುವುದನ್ನು ನಾವೆಲ್ಲಾ ನೋಡಿರುತ್ತೇವೆ. ಮೊನ್ನೆ ಯಾರೋ ಒಬ್ಬ ಹೀಗೆ ತನ್ನ ಕಾರಿನಲ್ಲಿ (Car) ಹೋಗುತ್ತಾ ಕಿಟಕಿಯಿಂದ ನೋಟುಗಳನ್ನು ಹಾಗೆ ಗಾಳಿಯಲ್ಲಿ ಬೀಸಾಡುತ್ತಿರುವುದನ್ನು ನೋಡಿದ್ದೆವು. ಇಲ್ಲೊಂದು ಅಂತಹದೇ ಒಂದು ಹೊಸ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ಹರಿದಾಡುತ್ತಿದೆ ನೋಡಿ. ಒಬ್ಬ ವ್ಯಕ್ತಿ ಹೈದರಾಬಾದಿನಲ್ಲಿರುವ ಚಾರ್ಮಿನಾರ್ (Charminar) ಹತ್ತಿರವಿರುವ ಗುಲ್ಜಾರ್ ಹೌಸ್ ಫೌಂಟೆನ್ ಬಳಿ ನಿಂತು ಕೊಂಡು 500 ರೂಪಾಯಿಗಳ ನೋಟುಗಳನ್ನು ಹಾಗೆಯೇ ಸ್ಟೈಲ್ ಆಗಿ ಗಾಳಿಯಲ್ಲಿ ಬೀಸಾಡುತ್ತಿರುವುದನ್ನು ನಾವು ನೋಡಬಹುದಾಗಿದೆ.

500 ರೂಪಾಯಿಗಳ ನೋಟುಗಳನ್ನು ಎಸೆಯುತ್ತಿರುವ ವ್ಯಕ್ತಿ
ಹೈದರಾಬಾದ್ ಮೂಲದ ವ್ಯಕ್ತಿ ಎಂದು ವರದಿಯಾಗಿರುವ ಈ ಕ್ಲಿಪ್ ನಲ್ಲಿ ಚಾರ್ಮಿನಾರ್ ಹತ್ತಿರವಿರುವಂತಹ ಗುಲ್ಜಾರ್ ಹೌಸ್ ರಸ್ತೆಯಲ್ಲಿ ಕಾರುಗಳು ಸಾಲು ಸಾಲಾಗಿ ನಿಂತಿರುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ.

ಬಿಳಿ ಕುರ್ತಾ ಮತ್ತು ಪೈಜಾಮಾ ಧರಿಸಿದ ವ್ಯಕ್ತಿಯೊಬ್ಬ ಗುಲ್ಜಾರ್ ಹೌಸ್ ಬಳಿಯಿರುವ ಫೌಂಟೆನ್ ಬಳಿ ನಿಂತು 500 ರೂಪಾಯಿಗಳ ನೋಟುಗಳ ದೊಡ್ಡ ದೊಡ್ಡ ಕಟ್ಟುಗಳನ್ನು ಹಾಗೆಯೇ ಗಾಳಿಯಲ್ಲಿ ಎಸೆಯುತ್ತಿರುವುದನ್ನು ಕಾಣಬಹುದು. ಅಲ್ಲಿರುವ ಎಲ್ಲಾ ಕಾರುಗಳನ್ನು ಅಲಂಕರಿಸಲಾಗಿದೆ, ಇದು ವ್ಯಕ್ತಿಯು ಕರೆನ್ಸಿ ನೋಟುಗಳನ್ನು ಗಾಳಿಯಲ್ಲಿ ಎಸೆಯುವ ಮೂಲಕ ಮದುವೆ ಸಮಾರಂಭವನ್ನು ಆಚರಿಸುತ್ತಿದ್ದಾನೆ ಎಂದು ಸೂಚಿಸುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು ವಿಡಿಯೋ
ಆ ಫೌಂಟೆನ್ ನಿಂದ ಕೆಳಗಿಳಿದು ಜನಸಮೂಹದೊಂದಿಗೆ ಬೆರೆಯುವ ಮೊದಲು ಅವರು ಹೀಗೆ ಒಂದೆರಡು ಬಾರಿ ಗಾಳಿಯಲ್ಲಿ ಹಣವನ್ನು ಬೀಸಾಡಿರುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದು. ಏತನ್ಮಧ್ಯೆ, ಅಲ್ಲೆ ಇದ್ದಂತಹ ಜನರು ತಮ್ಮ ಮೊಬೈಲ್ ಫೋನ್ ಗಳ ಲೈಟ್ ಗಳನ್ನು ಆನ್ ಮಾಡಿಕೊಂಡು ಆ ವ್ಯಕ್ತಿಯತ್ತ ಬಿಡುತ್ತಿರುವುದನ್ನು ಸಹ ನಾವು ಇಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ: Stranger in House: ಆ ಮಹಿಳೆಯ ಮನೆಯಲ್ಲಿ ತುಂಬಾ ದಿನ ಯಾರೋ ಜೊತೆಗೇ ವಾಸಿಸಿದ್ರಂತೆ, ಆಕೆಗೆ ಗೊತ್ತೇ ಆಗ್ಲಿಲ್ವಂತೆ!

ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅನೇಕರು ಅದನ್ನು ಆಶ್ಚರ್ಯದಿಂದ ಹಂಚಿಕೊಳ್ಳುತ್ತಿದ್ದರೆ, ಇನ್ನೂ ಕೆಲವು ಜನರು ಈ ಕೃತ್ಯವನ್ನು ಟೀಕಿಸುವ ಉದ್ದೇಶದಿಂದ ಹಂಚಿಕೊಂಡಿದ್ದಾರೆ. ವೀಡಿಯೋದ ನೈಜತೆ ಬಗ್ಗೆ ಮತ್ತು ಗಾಳಿಯಲ್ಲಿ ಹಾರಿಸುವ ಕರೆನ್ಸಿ ನೋಟುಗಳ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದರು.

ಈ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?
ಈ 30 ಸೆಕೆಂಡುಗಳ ವೀಡಿಯೋವನ್ನು ನೋಡಿ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ನಿಮ್ಮ ಬಳಿ ಇಷ್ಟೊಂದು ಹಣವನ್ನು ವ್ಯರ್ಥ ಮಾಡಲು ಇದ್ದಾಗ, ಅದನ್ನು ಅಗತ್ಯವಿರುವ ಜನರಿಗೆ ನೀಡುವ ಮೂಲಕ ಹಣದ ಸದುಪಯೋಗ ಮಾಡಬಹುದು ಮತ್ತು ಸಂಸ್ಥೆಗಳು ನಡೆಸುವ ಅನಾಥಾಶ್ರಮಕ್ಕೆ ದಾನ ಮಾಡುವುದು ಇನ್ನೂ ಉತ್ತಮ" ಎಂದು ಕಾಮೆಂಟ್ ಮಾಡಿದ್ದಾರೆ.ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಈ ಬೀಸಾಡಿದ ಹಣವನ್ನು ಯಾರು ತೆಗೆದುಕೊಳ್ಳುತ್ತಿಲ್ಲ ಎಂದರೆ ಇದರರ್ಥ ಅವು ನಕಲಿ ನೋಟುಗಳು ಇದ್ದಿರಬಹುದು" ಎಂದು ಬಲವಾದ ಅನುಮಾನವನ್ನು ವ್ಯಕ್ತ ಪಡಿಸಿದ್ದಾರೆ. ಇನ್ನೊಬ್ಬರು ಇದನ್ನು ನೋಡಿ ‘ಎಂತಹ ವ್ಯಕ್ತಿ ಇವನು, ಖಂಡಿತವಾಗಿಯೂ ಇವನು ಒಂದು ದಿನ ಭಿಕ್ಷುಕನಾಗುತ್ತಾನೆ” ಎಂದು ಕಾಮೆಂಟ್ ಮಾಡಿದ್ದಾರೆ.

ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಚಾರ್ಮಿನಾರ್ ಪೊಲೀಸರು
ಈ ವೀಡಿಯೋವನ್ನು ಪರಿಶೀಲಿಸುತ್ತಿರುವ ಜನರಲ್ಲಿ ಚಾರ್ಮಿನಾರ್ ಪೊಲೀಸರು ಇದ್ದರು, ಅವರು ಅಂತಿಮವಾಗಿ ಈ ವೀಡಿಯೋವನ್ನು ಪರಿಶೀಲಿಸಿದರು. ಈ ಪ್ರದೇಶದಲ್ಲಿ ನಿಯೋಜಿಸಲಾದ ಪೊಲೀಸರಿಗೆ ಈ ವೀಡಿಯೋದ ಸುಳಿವು ಸಿಕ್ಕಿತು ಮತ್ತು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲು ನಿರ್ಧರಿಸಿದರು.

ಇದನ್ನೂ ಓದಿ: Viral Video: ರಸ್ತೆಯಲ್ಲಿ ಕಿರುಕುಳ ನೀಡಿದವರನ್ನು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ! ಇದಪ್ಪಾ ಪವರ್

ಈ ವೀಡಿಯೋದ ಬಗ್ಗೆ ಮಾತನಾಡಿದ ಚಾರ್ಮಿನಾರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು, "ಆ ವ್ಯಕ್ತಿಯ ಗುರುತನ್ನು ಕಂಡು ಹಿಡಿಯಲು ತುಂಬಾನೇ ಹತ್ತಿರದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ತುಣುಕುಗಳನ್ನು ಪರಿಶೀಲಿಸಲಾಗುತ್ತಿದೆ. ಅವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
Published by:Ashwini Prabhu
First published: