Viral Video: ಡ್ರೈವ್ ಮಾಡ್ತಾ ರಸ್ತೆಯುದ್ದಕ್ಕೂ ನೋಟು ಎಸೆದ ಯುವಕ! ಇವನೇನು ಕುಬೇರನಾ?

ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಆಡು ಮಾತೆ ಇರುವಾಗ, ಈ ವಿಡಿಯೋದಲ್ಲಿನ ಭೂಪ ಮಾತ್ರ ಹಣ ತನಗೆ ದೊಡ್ಡ ಲೆಕ್ಕವೇ ಅಲ್ಲ ಎಂಬಂತೆ, ಥಾರ್ ವಾಹನವನ್ನು ಚಲಾಯಿಸುತ್ತಾ, ದಾರಿಯುದ್ದಕ್ಕೂ ನೋಟುಗಳನ್ನು ಎಸೆಯುತ್ತಾ ಸಾಗುವುದನ್ನು ಕಾಣಬಹುದು.

ವಾಹನ ಚಲಾಯಿಸುತ್ತಾ ನೋಟು ಎಸೆದ ಯುವಕ

ವಾಹನ ಚಲಾಯಿಸುತ್ತಾ ನೋಟು ಎಸೆದ ಯುವಕ

  • Share this:
ಈ ದಿನಗಳಲ್ಲಿ ಬಹಳಷ್ಟು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವೈರಲ್ ಆಗಬೇಕೆಂದ ಹುಚ್ಚಿನಿಂದ ಚಿತ್ರ-ವಿಚಿತ್ರ ಹುಚ್ಚಾಟಗಳನ್ನು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಇಂಟರ್ನೆಟ್ ನಲ್ಲಿ (Internet) ವೈರಲ್ ಆಗಿಬಿಟ್ಟರೆ ಏನೋ ಒಂದು ಮಹಾ ಸಾಧನೆ ಮಾಡಿದಂತೆ ಎಂಬ ಭ್ರಮೆಯಲ್ಲಿ ಇರುವ ಮಂದಿ ಮಾಡುವ ಅತಿರೇಕದ ವಿಡಿಯೋಗಳು (Video) ಸಾಮಾಜಿಕ ಮಾಧ್ಯಮಗಳಲ್ಲಿ ಹೇರಳವಾಗಿರುವುದನ್ನು ನಾವು ಕಾಣಬಹುದು. ಅಂತದ್ದೇ ವಿಡಿಯೋವೊಂದು ಈಗ ಸುದ್ದಿಯಲ್ಲಿದೆ. ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಆಡು ಮಾತೆ ಇರುವಾಗ, ಈ ವಿಡಿಯೋದಲ್ಲಿನ ಭೂಪ ಮಾತ್ರ ಹಣ (Money) ತನಗೆ ದೊಡ್ಡ ಲೆಕ್ಕವೇ ಅಲ್ಲ ಎಂಬಂತೆ, ಥಾರ್ ವಾಹನವನ್ನು (Vehicle) ಚಲಾಯಿಸುತ್ತಾ, ದಾರಿಯುದ್ದಕ್ಕೂ ನೋಟುಗಳನ್ನು ಎಸೆಯುತ್ತಾ ಸಾಗುವುದನ್ನು ಕಾಣಬಹುದು.

ಸಾರ್ವಜನಿಕ ರಸ್ತೆಯಲ್ಲಿ ನೋಟುಗಳನ್ನು ಎಸೆಯುತ್ತಿದ್ದ ಯುವಕ
ಈ ಘಟನೆ ನಡೆದಿರುವುದು ನೋಯ್ಡಾದಲ್ಲಿ. ಆ ಯುವಕ ಮಹೀಂದ್ರಾ ಥಾರ್ ವಾಹನವನ್ನು ಚಲಾಯಿಸುತ್ತಾ, ವಾಹನದಿಂದ ಹೊರಕ್ಕೆ ಸಾರ್ವಜನಿಕ ರಸ್ತೆಯಲ್ಲಿ ನೋಟುಗಳನ್ನು ಎಸೆಯುತ್ತಿದ್ದ ದೃಶ್ಯವನ್ನು, ಆ ವಾಹನ ಪಕ್ಕದಲ್ಲಿ ಇನ್ನೊಂದು ವಾಹನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದಾರೆ.

ಇದೇ ವಾಹನ ಮತ್ತು ಚಾಲಕನ ಇನ್ನೊಂದು ವಿಡಿಯೋ ಕೂಡ ಇಂಟರ್ನೆಟ್‍ನಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಮಹೀಂದ್ರಾ ಥಾರ್ ವಾಹನವನ್ನು ಚಲಾಯಿಸುತ್ತಾ ಡ್ರೈವರ್ ಸೈರನ್ ಹಾಕಿರುವುದು ಕಾಣಬಹುದು. ಭಾರತದ ಕಾನೂನಿನ ಪ್ರಕಾರ, ವಾಹನಗಳಲ್ಲಿ ಹೂಟರ್ ಮತ್ತು ಸೈರನ್ ಹಾಕುವುದನ್ನು ನಿಷೇಧಿಸಲಾಗಿದೆ.

ಮಾಹಾನವನ್ನು ಜಪ್ತಿಮಾಡಿದ ಪೊಲೀಸರು
ಗೌತಮ ಬುದ್ಧ ನಗರದ ಪೊಲೀಸ್ ಕಮೀಷನರ್ ಅವರು, ಟ್ವಿಟ್ಟರ್‍ನಲ್ಲಿ, ಆ ಮಹೀಂದ್ರಾ ಥಾರ್ ವಾಹನವನ್ನು ಪೊಲೀಸ್ ಸ್ಟೇಶನ್‍ನ ಆವರಣದಲ್ಲಿ ನಿಲ್ಲಿಸಲಾಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಂದರೆ, ಪೊಲೀಸರು ಆ ವಾಹನವನ್ನು ಜಪ್ತಿ ಮಾಡಿದ್ದಾರೆ. ಚಲಿಸುತ್ತಿರುವ ವಾಹನದಲ್ಲಿ ಕರೆನ್ಸಿ ಬಿಲ್‍ಗಳನ್ನು ಎಸೆಯುತ್ತಿದ್ದ ಮತ್ತು ತನ್ನ ವಾಹನದಲ್ಲಿ ಹೂಟರನ್ನು ಹಾಕಿದ್ದ ಆ ವ್ಯಕ್ತಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: OMG: ಈ ನಾಯಿಗೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕೆಲಸ, ಭರ್ಜರಿ ಸಂಬಳ! ಹ್ಯಾಪಿನೆಸ್ ಆಫೀಸರ್ ಅಂತೆ ಈ ಡಾಗ್

ಆದರೆ ಆ ವಾಹನದ ಮಾಲೀಕನನ್ನು ಯಾವ ಸೆಕ್ಷನ್‍ಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂಬ ಕುರಿತು ಪೊಲೀಸರು ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಮತ್ತು ಇತರ ವಾಹನಗಳ ಚಾಲಕರ ದಿಕ್ಕು ತಪ್ಪಿಸಿರುವ ಪ್ರಕರಣದಂತೆ ಕಂಡು ಬರುತ್ತಿದೆ. ಅಲ್ಲದೇ, ಖಾಸಗಿ ವಾಹನಗಳಲ್ಲಿ ಹೂಟರ್ ಮತ್ತು ಸೈರನ್‍ಗಳನ್ನು ಹಾಕುವುದು ಭಾರತದಲ್ಲಿ ಕಾನೂನು ಬಾಹಿರ.



ಸರಕಾರವು ಖಾಸಗಿ ಕಾರುಗಳು ಮತ್ತು ಸರಕಾರಿ ಕಾರುಗಳಲ್ಲಿ ಎಲ್ಲಾ ರೀತಿಯ ಸ್ಟ್ರೋಬ್‍ಗಳು ಮತ್ತು ಹೂಟರ್‍ಗಳನ್ನು ನಿಷೇಧಿಸಿದೆ. ಭಾರತದಲ್ಲಿ ಕೇವಲ ಎಮರ್ಜೆನ್ಸಿ ವಾಹನಗಳು ಮಾತ್ರ ಸ್ಟ್ರೋಬ್‍ಗಳು ಮತ್ತು ಹೂಟರ್‍ಗಳನ್ನು ಬಳಸಲು ಅನುಮತಿ ಇದೆ. ಸ್ಟ್ರೋಬ್‍ಗಳು ಮತ್ತು ಹೂಟರ್‍ಗಳನ್ನು ಬಳಸುತ್ತಿರುವ ಯಾವುದೇ ವಾಹನ ಕಂಡು ಬಂದಲ್ಲಿ ಅದನ್ನು ಜಪ್ತಿ ಮಾಡಲಾಗುತ್ತದೆ.

ಡಿಜಿಟಲ್ ಚಲನ್‍ನಿಂದ ಎಚ್ಚರವಾಗಿರಿ
ಇಂತಹ ಘಟನೆಗಳು ವೈರಲ್ ಆಗುತ್ತಿವೆ ಎಂದರೆ, ಅನೇಕರಿಗೆ ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಸ್ಟಂಟ್‍ಗಳನ್ನು ಮಾಡಲು ಪ್ರೇರಣೆ ಸಿಕ್ಕಂತಾಗುತ್ತದೆ. ಅಂತಹ ಸ್ಟಂಟ್‍ಗಳನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ತಜ್ಞರ ಉಸ್ತುವಾರಿಯಲ್ಲಿ ಮಾಡಬೇಕಾಗುತ್ತದೆ ಎಂಬುದನ್ನು ಅರಿತುಕೊಳ್ಳುವುದು ಬಹಳ ಅಗತ್ಯ. ನಾವು ಆನ್‍ಲೈನ್ ಅಥವಾ ಟೀವಿಯಲ್ಲಿ ನೋಡುವ ಸ್ಟಂಟ್‍ಗಳನ್ನು ಯಾವಾಗಲೂ ಪರಿಣಿತರ ಜೊತೆಗೆ ಮಾಡಲಾಗುತ್ತದೆ, ಅದರಿಂದ ಯಾವುದೇ ಅಪಾಯ ಆಗಬಾರದು ಎಂಬ ಮುನ್ನೆಚ್ಚರಿಕೆ ವಹಿಸಲು ಸುರಕ್ಷತಾ ಸಾಧನಗಳನ್ನು ಬಳಸಲಾಗುತ್ತದೆ. ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ಸ್ಟಂಟ್‍ಗಳನ್ನು ಮಾಡಿದಾಗ, ಯಾರೂ ಬೇಕಾದರೂ ಗಂಭೀರವಾಗಿ ಗಾಯಗೊಳ್ಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ:  England Women Cricket : ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದಲ್ಲಿ ಸಲಿಂಗಿ ಮದುವೆ ಸಂಭ್ರಮ

ಘಟನೆಯ ಸಂದರ್ಭದಲ್ಲಿ ಪೊಲೀಸರ ಉಪಸ್ಥಿತಿ ಇಲ್ಲದಿದ್ದರೂ, ಅವರು ಆನ್‍ಲೈನ್ ಮೂಲಕ ಚಲನ್‍ಗಳನ್ನು ಕಳುಹಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಪೊಲೀಸರಿಗೆ ದೂರು ದಾಖಲಿಸಿಕೊಳ್ಳಲು, ಕಾನೂನು ಉಲ್ಲಂಘನೆಯ ಸಣ್ಣ ಕ್ಲಿಪ್ ಅಥವಾ ಸಿಸಿಟಿವಿ ಫೂಟೇಜ್ ಇದ್ದರೆ ಸಾಕು. ನೀವು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿರುವ ಸಣ್ಣ ವಿಡಿಯೋ ಸ್ವತಃ ನೀವೇ ಪೋಸ್ಟ್ ಮಾಡಿದ್ದರೂ, ನಿಮಗೆ ಚಲನ್ ಕಳುಹಿಸಲಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ಸ್ಟಂಟ್‍ಗಳನ್ನು ಮಾಡುವವರು ದಂಡ ಕಟ್ಟಬೇಕಾಗುತ್ತದೆ ಮಾತ್ರವಲ್ಲ, ಜೈಲಿಗೂ ಹೋಗುವ ಸಾಧ್ಯತೆ ಇರುತ್ತದೆ.
Published by:Ashwini Prabhu
First published: