Day Outing: ಕೆಲಸದಾಕೆಯನ್ನು ಮಾಲ್, ಶಾಪಿಂಗ್, ಸಲೂನ್​ಗೆ ಕರೆದೊಯ್ದ ಮಾಲೀಕ!

ಇವರು ನಮಗಾಗಿ ಪ್ರತಿದಿನ ಕಷ್ಟಪಟ್ಟು ದುಡಿಯುತ್ತಾರೆ ಎಂದು ಶುರುವಾಗುವ ವಿಡಿಯೋದಲ್ಲಿ ಮನೆ ಸಹಾಯಕಿಯನ್ನು ಮಾಲ್‌ಗೆ ಕರೆದುಕೊಂಡು ಹೋಗಿ ಅವರು ಅನುಭವಿಸದ, ನೋಡಿರದ ಹೊಸ ಪ್ರಪಂಚವನ್ನು ತೋರಿಸಿದ್ದಾರೆ.

ಕೆಲಸದಾಕೆಯ ಜೊತೆ ಅನೀಶ್ ಭಗತ್

ಕೆಲಸದಾಕೆಯ ಜೊತೆ ಅನೀಶ್ ಭಗತ್

  • Share this:
ಮನೆಗೆಲಸದವರು ಎಂದರೆ ಕೆಲಸದವರು ಅಷ್ಟೇ ಎಂದು ಅದೇ ರೀತಿ ನಡೆಸಿಕೊಳ್ಳುವವರೇ ಹೆಚ್ಚು. ಮನೆಗೆಲಸದವರನ್ನು (House aid) ಕುಟುಂಬದಲ್ಲಿ ಒಬ್ಬರು ಎನ್ನುವಂತೆ ನೋಡಿಕೊಳ್ಳುವ ಮಾಲೀಕರು (Owners) ಬೆರಳೆಣಿಕೆಯಲ್ಲಷ್ಟೇ ಸಿಗಬಹುದೇನೋ. ಮನೆಕೆಲಸಕ್ಕೆ ಬರುವವರು ಅವರ ಕುಟುಂಬ, ಮನೆ ಕೆಲಸಗಳನ್ನು ಬದಿಗೊತ್ತಿ ನಮ್ಮ ಮನೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡಲು ಬೆಳಗ್ಗೆ ಬೇಗ ಬರುತ್ತಾರೆ. ಅಂತಹವರ ಮೇಲೆ ಮಾಲೀಕರು ಸ್ವಲ್ಪನಾದರೂ ಕರುಣೆ, ಪ್ರೀತಿ ತೋರಿಸಬೇಕು (Love). ಕೇವಲ ಹಣ, ಸಂಬಳದಿಂದಲೇ ಎಲ್ಲವೂ ನಡೆಯುವುದಿಲ್ಲ, ಬದಲಿಗೆ ಪ್ರೀತಿ, ದಯೆ (Mercy) ಎಲ್ಲವೂ ಜೀವನ ನಡೆಸಲು ಬೇಕು.

ಕೆಲವರು ಇದಕ್ಕೆ ನಿಜಕ್ಕೂ ವ್ಯತಿರಿಕ್ತವಾಗಿರುತ್ತಾರೆ. ಮನೆಗೆಲಸದವರನ್ನೂ ತಮ್ಮವರಂತೆಯೇ ನೊಡಿಕೊಳ್ಳುತ್ತಾರೆ. ಇದಕ್ಕೆ ನಿದರ್ಶನ ಎನ್ನುವಂತೆ ಇದೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ. ತಮ್ಮ ಮನೆಕೆಲಸಗಾರರನ್ನು ಗೌರವ ಮತ್ತು ಕೃತಜ್ಞತೆಯಿಂದ ನಡೆಸಿಕೊಳ್ಳುವ ಜನರ ವಿಡಿಯೋಗಳನ್ನು ವೀಕ್ಷಿಸಲು ಯಾವಾಗಲೂ ಸಂತೋಷವಾಗುತ್ತದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮನೆಗೆಲಸದವಳಿಗಾಗಿ ತಮ್ಮ ಒಂದು ದಿನವನ್ನು ಮೀಸಲಿಡುವ ಮೂಲಕ ಏನೆಲ್ಲಾ ಮಾಡಿದ್ದಾರೆ ನೋಡಿ.

4.2 ಮಿಲಿಯನ್ ವೀಕ್ಷಣೆ

ಕಂಟೆಂಟ್ ಕ್ರಿಯೇಟರ್ ಅನೀಶ್ ಭಗತ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ಈ ವಿಡಿಯೋದಲ್ಲಿ, ಮನೆಗೆಲಸದವಳನ್ನು ಉದ್ಯೋಗದಾತರು ಹೇಗೆ ನಡೆಸಿಕೊಂಡಿದ್ದಾರೆ, ಅವಳಿಗಾಗಿ ಏನೆಲ್ಲಾ ಮಾಡಿದ್ದಾರೆ ಎಂಬುವುದನ್ನು ಇಲ್ಲಿ ನೋಡಬಹುದು. ಐದು ದಿನಗಳ ಹಿಂದೆ ಅನೀಶ್ ಭಗತ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, ಇದುವರೆಗೆ 4.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೂರಾರು ಕಾಮೆಂಟ್‌ಗಳು ಹರಿದು ಬಂದಿವೆ.

ಮನೆ ಕೆಲಸದಾಕೆಯ ವಿಶೇಷ ದಿನ

"ಇವರು ವರ್ಷಗಳಿಂದ ನಮಗಾಗಿ ಕೆಲಸ ಮಾಡುತ್ತಿದ್ದಾರೆ, ಆದರೆ ಅವರು ತನಗಾಗಿ ಸಮಯ ತೆಗೆದುಕೊಳ್ಳುವುದನ್ನು ನಾನು ನೋಡಿಲ್ಲ. ಹಾಗಾಗಿ ನಾನು ಅವಳಿಗಾಗಿ ಏನಾದರೂ ವಿಶೇಷವಾದದ್ದನ್ನು ಮಾಡಬೇಕೆಂದು ಬಯಸಿದ್ದೆ ಮತ್ತು ಅದು ಈ ರೀತಿ ಆಯಿತು” ಎಂದು ವಿಡಿಯೋದ ಪಠ್ಯವು ಹೇಳುತ್ತದೆ.

ಇದನ್ನೂ ಓದಿ: Baby Doll: ಈ ಹುಡುಗಿ 'ಬೇಬಿ ಡಾಲ್' ಆಗಬೇಕು ಅಂತ ಏನೆಲ್ಲಾ ಮಾಡಿದಳು ನೋಡಿ, ಈಗ ಮನೆಗೆ ಸೇರಿಸುತ್ತಿಲ್ಲ ಕುಟುಂಬಸ್ಥರು!

ಇವರು ನಮಗಾಗಿ ಪ್ರತಿದಿನ ಕಷ್ಟಪಟ್ಟು ದುಡಿಯುತ್ತಾರೆ ಎಂದು ಶುರುವಾಗುವ ವಿಡಿಯೋದಲ್ಲಿ ಮನೆ ಸಹಾಯಕಿಯನ್ನು ಮಾಲ್‌ಗೆ ಕರೆದುಕೊಂಡು ಹೋಗಿ ಅವರು ಅನುಭವಿಸದ, ನೋಡಿರದ ಹೊಸ ಪ್ರಪಂಚವನ್ನು ತೋರಿಸಿದ್ದಾರೆ.

ಪೆಡಿಕ್ಯೂರ್‌ನಿಂದ ಹಿಡಿದು ಸಲೂನ್, ಸ್ಪಾ, ಹೇರ್ ಸ್ಟ್ರೈಟ್ನಿಂಗ್

ಹೊಸ ಬಟ್ಟೆಯನ್ನು ನೀಡಿ ಕಾರಿನಲ್ಲಿ ಮಾಲ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಮಹಿಳೆಗೆ ಪೆಡಿಕ್ಯೂರ್‌ನಿಂದ ಹಿಡಿದು ಸಲೂನ್, ಸ್ಪಾ, ಹೇರ್ ಸ್ಟ್ರೈಟ್ನಿಂಗ್ ಎಲ್ಲವನ್ನೂ ಮನೆ ಮಾಲೀಕರು ಮಾಡಿಸಿದ್ದಾರೆ. ಮಾಲ್‌ನಲ್ಲಿ ಶಾಪಿಂಗ್ ಮಾಡಲು ಸಹ ಕರೆದೊಯ್ದಿರುವ ಮಾಲೀಕರ ಬಗ್ಗೆ ಮಹಿಳೆ ಸಂತೋಷದಲ್ಲಿ ಕಣ್ಣೀರು ಕೂಡ ಹಾಕಿದ್ದಾರೆ.


View this post on Instagram


A post shared by Anish Bhagat (@anishbhagatt)


ಮಾಲ್‌ನಲ್ಲಿ ಮಹಿಳೆ ಪಿಜ್ಜಾವನ್ನು ತಿನ್ನುತ್ತಾಳೆ, ರೋಡ್ ಸೈಡಿನಲ್ಲಿ ಪಾನಿಪುರಿಯನ್ನು ಸಹ ಮಾಲೀಕರ ಜೊತೆಗೂಡಿ ಸವಿಯುತ್ತಾರೆ. ಪ್ರತಿದಿನ ಮನೆ ಕೆಲಸ, ಇಷ್ಟೇ ನಮ್ಮ ಜೀವನ ಎಂದುಕೊಂಡಿದ್ದ ಮಹಿಳೆಗೆ ಮಾಲೀಕರು ನಿಜಕ್ಕೂ ಒಂದು ಖುಷಿ ನೀಡಿದ್ದಾರೆ.

ಕೆಲಸದವರನ್ನು ಅಗೌರವಿಸಬಾರದು

"ಅನೇಕ ಜನರು ತಮ್ಮ ಮನೆಯಲ್ಲಿ ಕೆಲಸ ಮಾಡುವ ಜನರನ್ನು ಸರಿಯಾದ ರೀತಿ ನಡೆಸಿಕೊಳ್ಳದಿರುವುದನ್ನು ನಾನು ನೋಡಿದ್ದೇನೆ. ಯಾರಾದರೂ ನಿಮ್ಮ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿರುವುದರಿಂದ, ನೀವು ಅವರನ್ನು ಬಳಸಿಕೊಳ್ಳಬಹುದು ಅಥವಾ ಅವರನ್ನು ಅಗೌರವಿಸಬಹುದು ಎಂದು ತಿಳಿದುಕೊಳ್ಳಬಾರದು.

ಕೊನೆಯಲ್ಲಿ, ನಾವೆಲ್ಲರೂ ಮನುಷ್ಯರು, ನಾವೆಲ್ಲರೂ ಬದುಕಲು ಹೋರಾಡುತ್ತಿದ್ದೇವೆ. ನಾವು ಬೇರೆಯೊಬ್ಬರ ಮೇಲೆ ದಬ್ಬಾಳಿಕೆ ಮಾಡುವುದು ಬೇಡ, ಬದಲಿಗೆ ಪ್ರೀತಿ ಹಂಚೋಣ ಎಂದು ಬರೆದುಕೊಂಡಿರುವ ಅನೀಶ್ ಭಗತ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Relationship: ಅಜ್ಜನನ್ನು ಪ್ರೀತಿಯಿಂದ ತಬ್ಬಿಕೊಂಡ ಪುಟ್ಟ ಮೊಮ್ಮಗಳು! ವೀಡಿಯೊ ವೈರಲ್

ಮನೆ ಮಾಲೀಕರ ಒಳ್ಳೆತನ ಹಲವರಿಗೆ ಉತ್ತಮ ನಿದರ್ಶನವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ವಿಡಿಯೋ ವೀಕ್ಷಿಸಿದ ನೆಟ್ಟಿಗರು ತಮ್ಮ ಕಾಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಇದು ತುಂಬಾ ಸುಂದರವಾಗಿದೆ. ನನಗೆ ಇಷ್ಟವಾಯಿತು ಅನೀಶ್” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ಓಹ್, ನೀವು ನಿಜವಾಗಿಯೂ ಅದ್ಭುತ ವ್ಯಕ್ತಿ, ಇದು ತುಂಬಾ ಅಮೂಲ್ಯವಾದ ಕೆಲಸವಾಗಿದೆ. ದೇವರು ನಿಮ್ಮನ್ನು ಆಶೀರ್ವದಿಸಲಿ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
Published by:Divya D
First published: