ಆಹಾರ (Food) ಮತ್ತು ನೀರಿಲ್ಲದೆ ಮನುಷ್ಯ ಹೆಚ್ಚು ಕಾಲ ಬದುಕಲಾರ. ಅಬ್ಬಬ್ಬಾ ಅಂದ್ರೆ ನೀರು ಕುಡಿದು ಹೆಚ್ಚಂದ್ರೆ 4 ಅಥವಾ 5 ದಿನಗಳ (Days) ಕಾಲ ಬದುಕಬಹುದು. ಆದರೆ ಇಲ್ಲೊಂದು ನಡೆದ ಘಟನೆಯಲ್ಲಿ, ಬೊಲಿವಿಯಾದ ವ್ಯಕ್ತಿಯೊಬ್ಬ ಅಮೆಜಾನ್‌ನ (Amazon Rainforest) ದಟ್ಟವಾದ, ಅಪಾಯಕಾರಿ ಕಾಡಿನಲ್ಲಿ 31 ದಿನಗಳ ಕಾಲ ಆಹಾರವಿಲ್ಲದೆ ಬದುಕುಳಿದಿದ್ದಾನೆ. ಆ ನಂತರ ಆತನನ್ನು ರಕ್ಷಿಸಲಾಯಿತು. ಒಂದು ತಿಂಗಳಗಳ ಕಾಲ ಕಾಡಿನ ಕೀಟಗಳನ್ನು ತಿಂದು, ಮಳೆನೀರು (Rain Water) ಕುಡಿದು ಈ ದಿನಗಳಲ್ಲಿ ಬದುಕುತ್ತಿದ್ದರು. ಅವರ ಈ ಅನುಭವವನ್ನು ಚೆನ್ನಾಗಿ ವಿವರಿಸಿದ್ದಾರೆ. ಅಬ್ಬಬ್ಬಾ! ಇದಂತೂ ನಿಜಕ್ಕೂ ಆಶ್ಚರ್ಯಕರವಾಗಿದೆ.
ಏನಿದು ವಿಷಯ?
30 ವರ್ಷದ ಜೊನಾಥನ್ ಅಕೋಸ್ಟಾ ಜನವರಿ 25 ರಂದು ನಾಲ್ವರು ಸ್ನೇಹಿತರೊಂದಿಗೆ ಉತ್ತರ ಬೊಲಿವಿಯಾದ ಅಮೆಜಾನ್ ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದರು. ನಾಲ್ವರು ತಪ್ಪು ಮಾಡಿ ನಾಲ್ಕು ಕಡೆ ಹೋದರು. ಜೊನಾಥನ್ ಅವರ ಬಂದೂಕಿನಲ್ಲಿ ಒಂದೇ ಒಂದು ಗುಂಡು ಇತ್ತು ಮತ್ತು ಒಬ್ಬರ ಬಳಿ ಬೆಂಕಿಕಡ್ಡಿ ಅಥವಾ ಟಾರ್ಚ್ ಕೂಡ ಇರಲಿಲ್ಲ. ಜೊನಾಥನ್ ಅವರು ಬದುಕಲು ಹುಳುಗಳನ್ನು ತಿನ್ನುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
ಬದುಕಲು ಪಪ್ಪಾಯಿಯಂತಹ ಕಾಡು ಹಣ್ಣುಗಳನ್ನು ಸಹ ಸೇವಿಸಿದ್ದ ಅವರು ನಿರಂತರ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಕುಡಿಯಲು ನೀರು ಸಿಗುವಂತೆ ಬೇಡಿಕೊಳ್ಳುತ್ತಿದ್ದರು. ಮಳೆನೀರನ್ನು ಪಾದರಕ್ಷೆಯಲ್ಲಿ ಶೇಖರಿಸಿ ಕುಡಿಯುತ್ತಿದ್ದರು. ಆದರೆ ಕೆಲವು ದಿನಗಳಿಂದ ಮಳೆ ಬಾರದೆ ಜೀವಕ್ಕೆ ಅಪಾಯ ತಂದೊಡ್ಡಿದ್ದು, ಹೀಗಾಗಿ ಕೊನೇಕ್ಷಣದಲ್ಲಿ ತನ್ನ ಮೂತ್ರವನ್ನೇ ಕುಡಿದು ಬದುಕುಳಿದಿದ್ದಾರೆ.
ಕಾಡಿನಲ್ಲಿ, ಜೊನಾಥನ್ ಚಿರತೆಗಳನ್ನು ಮತ್ತು ಇತರ ಉಗ್ರ ಪ್ರಾಣಿಗಳನ್ನು ನೋಡಿದ್ದು, ಹಿಂಡಿನಲ್ಲಿರುವ ಅಪಾಯಕಾರಿ ಪ್ರಾಣಿಗಳನ್ನು ಹೆದರಿಸಲು ತನ್ನ ಕೊನೆಯ ಉಳಿದ ಗನ್ ಬುಲೆಟ್‌ಗಳಲ್ಲಿ ಒಂದನ್ನು ಬಳಸಿದ್ದೇನೆ ಎಂದು ಅವರು ಹೇಳಿದರು.
ಅವರು 31 ದಿನಗಳ ಕಾಲ ಆ ಕಾಡಿನಲ್ಲಿ ತನ್ನನ್ನು ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಅವರನ್ನು ರಕ್ಷಣಾ ತಂಡ ಪತ್ತೆ ಮಾಡಿದೆ. ಕಾಡಿನಲ್ಲಿದ್ದಾಗ, ಅವನ ಪಾದದ ಉಳುಕಿತ್ತು, ನಿರ್ಜಲೀಕರಣದಿಂದ ಅವನ ಮುಖವೂ ಊದಿಕೊಂಡಿತು. ಆತನನ್ನು ರಕ್ಷಿಸಿದ ನಂತರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.
ಇದನ್ನೂ ಓದಿ: ನೀವು OKನಾ? ಈ ಪದದ ನಿಜವಾದ ಅರ್ಥ ಗೊತ್ತಾ?
ಅಕೋಸ್ಟಾ, ಅದ್ಭುತವಾಗಿ ರಕ್ಷಿಸಲ್ಪಟ್ಟನು, ಈಗ ತನ್ನ ಜೀವನವನ್ನು ದೇವರಿಗೆ ಸಮರ್ಪಿಸುತ್ತಾನೆ. ಮತ್ತೆಂದೂ ಬೇಟೆಗೆ ಹೋಗುವುದಿಲ್ಲ ಮತ್ತು ದೇವರ ಸಂಗೀತಕ್ಕಾಗಿ ತನ್ನ ಜೀವನವನ್ನು ಕಳೆಯುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ. ಅವರ ಕಿರಿಯ ಸಹೋದರ ಹೊರಾಸಿಯೊ ಅಕೋಸ್ಟಾ ಹೇಳಿದರು, 'ನನ್ನ ಸಹೋದರ ಈಗ ದೇವರಿಗೆ ಪ್ರಾರ್ಥನೆ ಮಾಡಲು ಹೊರಟಿದ್ದಾನೆ, ಧೈರ್ಯ ಸಿಗಬೇಕು ಅಂತ ಕೇಳಿಕೊಳ್ಳುತ್ತಿದ್ದಾನೆ' ಎಂದು ಹೇಳಿದ್ದಾರೆ.
ಇದೇ ರೀತಿಯ ಘಟನೆಯು ಹಿಂದೆಯೂ ಒಂದು ಬಾರಿ ಸಂಭವಿಸಿವೆ. ಕೆರಿಬಿಯನ್ ದ್ವೀಪವಾದ ಡೊಮಿನಿಕಾದಲ್ಲಿ ಒಬ್ಬ ವ್ಯಕ್ತಿ ಸಮುದ್ರದಲ್ಲಿ ಕಳೆದು ಹೋಗಿದ್ದನು. ನಂತರ 24 ದಿನಗಳವರೆಗೆ ತನ್ನಲ್ಲಿ ಇದ್ದ ಕೆಚಪ್ ತಿಂದು ವಾಸಿಸುತ್ತಿದ್ದನು.
ಅವನು ಸಮುದ್ರದಲ್ಲಿ ಕಳೆದು ಹೋದಾಗ, ಅವನ ದೋಣಿಯಲ್ಲಿ ಕೆಚಪ್, ಬೆಳ್ಳುಳ್ಳಿ ಪುಡಿ ಮತ್ತು ಮ್ಯಾಗಿಯ ಬಾಟಲಿ ಮಾತ್ರ ಇತ್ತು. ಜೀವಂತವಾಗಿರಲು ಅವನು ಈ ವಸ್ತುಗಳೊಂದಿಗೆ ನೀರನ್ನು ಬೆರೆಸಿದನು ಮತ್ತು ಅವುಗಳನ್ನು ತಿನ್ನುವ ಮೂಲಕ ಅವನು 24 ದಿನಗಳವರೆಗೆ ಬದುಕಿದ್ದನು.
ಈ ರೀತಿಯಾಗಿ ಹಿಂದಿಯಲ್ಲಿಯೂ 'ಟ್ರ್ಯಾಪಡ್' ಅಂತ ಒಂದು ಸಿನಿಮಾ ಇದೆ. ಅದ್ರಲ್ಲಿ ಕೂಡ ಇದೇ ರೀತಿಯಾದ ಘಟನೆ ನಡೆಯುತ್ತದೆ. ಅಪಾರ್ಟ್ಮೆಂಟ್ ನೋಡಲು ಅಂತ ಹೋಗಿ ಅಲ್ಲಿಯೇ ಸಿಕ್ಕಿ ಹಾಕಿಕೊಳ್ಳುತ್ತಾನೆ. ಆತ ಲಾಸ್ಟ್ ಫ್ಲೋರ್ನಲ್ಲಿ ಇರೋದ್ರಿಂದ ಯಾರಿಗೂ ಗೊತ್ತಾಗೋದಿಲ್ಲ.
ಮತ್ತೆ ಆತ ಮನೆಯಲ್ಲಿದ್ದ ಜಿರಳೆಯನ್ನು ತಿನ್ನುತ್ತಾನೆ, ಹಾಗೆಯೇ ಆತನ ಮೂತ್ರವನ್ನು ಕುಡಿಯುತ್ತಾನೆ. ಈ ರೀತಿಯ ಸನ್ನಿವೇಶವನ್ನು ಸಿನಿಮಾದಲ್ಲಿ ನೋಡಬಹುದಾಗಿದೆ. ಆದರೆ ಇದು ಸಿನಿಮಾ ಅಲ್ಲ, ಇದು ನಿಜವಾಗಿಯೂ ನಡೆದ ಘಟನೆ, ನೀವು ಟ್ರಕ್ಕಿಂಗ್ ಅಥವಾ ಯಾವುದಾದ್ರೂ ಅಡ್ವೆಂಚರ್ ಮಾಡಬೇಕಾದ್ರೆ ಜೊತೆಯಲ್ಲಿ ನಾವಿಗೇಷನ್, ಮ್ಯಾಪ್ ಹಾಕೊಂಡು ಓಡಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ