HOME » NEWS » Trend » MAN SURVIVES 14 HOURS IN PACIFIC OCEAN CLINGING TO SEA RUBBISH STG LG

ಪೆಸಿಫಿಕ್ ಮಹಾಸಾಗರದಲ್ಲಿ 14 ಗಂಟೆಗಳ ಕಾಲ ಸಮುದ್ರದ ಕಸ ಹಿಡಿದು ಪ್ರಾಣ ಉಳಿಸಿಕೊಂಡ ಭೂಪ..!

ವಿಡಮ್ ಅವರು ಹಡಗಿನಿಂದ ಸಮುದ್ರಕ್ಕೆ ಬಿದ್ದರೂ ಹಡಗು ತನ್ನ ಪಾಡಿಗೆ ಹೊರಟಿತು. ಇದರಿಂದ ಆತಂಕಪಡದೇ ಆತ ಸೂರ್ಯ ಉದಯಿಸುವವರೆಗೂ ತೇಲುತ್ತಾ ಇರಲು ಹೆಣಗಾಡಿದನು. ಕೊನೆಗೆ ಸಮುದ್ರದಲ್ಲಿ ದೂರದಲ್ಲಿ ಕಪ್ಪು ದ್ವೀಪ ಗಮನಿಸಿ ಆ ಕಡೆಗೆ ಈಜಿದರು. ಆಗ ಕೈಗೆ ಸಿಕ್ಕ ಸಮುದ್ರದ ಕಸವನ್ನು ಹಿಡಿದು 14 ಗಂಟೆಗಳ ಕಾಲ ತಮ್ಮ ಜೀವ ಉಳಿಸಿಕೊಂಡಿದ್ದರು ಎಂದು ಮರಾಟ್ ಹೇಳಿದರು

news18-kannada
Updated:February 26, 2021, 10:19 AM IST
ಪೆಸಿಫಿಕ್ ಮಹಾಸಾಗರದಲ್ಲಿ 14 ಗಂಟೆಗಳ ಕಾಲ ಸಮುದ್ರದ ಕಸ ಹಿಡಿದು ಪ್ರಾಣ ಉಳಿಸಿಕೊಂಡ ಭೂಪ..!
ಸಾಂದರ್ಭಿಕ ಚಿತ್ರ
  • Share this:
ಅತಿಯಾದ ಆತ್ಮವಿಶ್ವಾಸ ಅಪಾಯಕ್ಕೆ ಆಹ್ವಾನಿಸುತ್ತದೆ ಎಂಬ ಮಾತು ಕೇಳಿರುತ್ತೇವೆ. ಈ ಮಾತಿಗೆ ಪೂರಕವೆಂಬಂತೆ ಲೈಫ್ ಜಾಕೆಟ್ ಧರಿಸದ 52 ವರ್ಷದ ವ್ಯಕ್ತಿಯೊಬ್ಬರು ಸರಕು ಹಡಗಿನಿಂದ ಬಿದ್ದು 14 ಗಂಟೆಗಳ ಕಾಲ ಪೆಸಿಫಿಕ್ ಮಹಾಸಾಗರದಲ್ಲಿ ಅಂಟಿಕೊಂಡಿದ್ದ ಸಮುದ್ರ ಕಸವನ್ನು ಹಿಡಿದುಕೊಂಡು ಜೀವ ಉಳಿಸಿಕೊಂಡ ಅಪರೂಪದ ಘಟನೆ ನಡೆದಿದೆ.

ಸರಕು ಸಾಗಣೆ ಹಡಗಿನಿಂದ ಎಂಜಿನಿಯರ್ ವಿಡಮ್ ಪೆರೆವರ್ಟಿಲೋವ್ ಎಂಬುವರು ಮುಂಜಾನೆ ವೇಳೆ ಪೆಸಿಫಿಕ್ ಮಹಾಸಾಗರದಲ್ಲಿ ಬಿದ್ದು ಸಮುದ್ರದಲ್ಲಿ ಸಿಕ್ಕ ಕಸ ಹಿಡಿದುಕೊಂಡು 14 ಗಂಟೆಗಳ ಕಾಲ ಪ್ರಾಣ ಉಳಿಸಿಕೊಂಡಿದ್ದನು. ಸಮುದ್ರದಲ್ಲಿ ಬಿದ್ದ ಅವರು ಸ್ವಲ್ಪ ಸಮಯ ಈಜಿ ಸಮುದ್ರದಲ್ಲಿ ಅಂಟಿಕೊಂಡಿದ್ದ ಕಡೆಗೆ ಹೋಗಿ ಕಸ ಹಿಡಿದುಕೊಂಡು ಪ್ರಾಣ ಉಳಿಸಿಕೊಂಡಿದ್ದು ಆತನ ಧೈರ್ಯಕ್ಕೆ ಮೆಚ್ಚಬೇಕು ಎಂದು ವಿಡಮ್ ಪೆರೆವರ್ಟಿಲೋವ್ ಅವರ ಮಗ ಮರಾತ್ ನ್ಯೂಜಿಲೆಂಡ್ ಸುದ್ದಿ ಸೈಟ್​​ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ತಂದೆ ನೋಡಲು 20 ವರ್ಷದವರಂತೆ ಕಾಣುತ್ತಾರೆ. ಹಡಗಿನಿಂದ ಬಿದ್ದು ತುಂಬಾ ಸುಸ್ತು ಆಗಿದ್ದರೂ ಜೀವಂತವಾಗಿದ್ದಾರೆ ಎಂದಿದ್ದಾರೆ.

ಕೇಂದ್ರದಿಂದ ಲೀಟರ್‌ಗೆ 5 ರೂ. ಇಂಧನ ತೆರಿಗೆ ಕಡಿತ ಸಾಧ್ಯತೆ!; ಇಳಿಯುತ್ತಾ ಪೆಟ್ರೋಲ್, ಡೀಸೆಲ್ ಬೆಲೆ?

ಮುಖ್ಯ ಎಂಜಿನಿಯರ್ ಆಗಿರುವ ವಿಡಮ್

ಸಮುದ್ರಕ್ಕೆ ಬಿದ್ದ ವಿಡಮ್ ಅವರು ಸಿಲ್ವರ್ ಸಪೋರ್ಟರ್‌ನ ಲಿಥುವೇನಿಯನ್ ಮುಖ್ಯ ಎಂಜಿನಿಯರ್ ಆಗಿದ್ದಾರೆ. ವಿಡಮ್ ಅವರು ಕೆಲವು ದಿನಗಳ ಹಿಂದೆ ತಲೆತಿರುಗುವಿಕೆ ಸಮಸ್ಯೆ ಅನುಭವಿಸಿದ್ದರು. ಇದರಿಂದ ಗುಣಮುಖರಾದ ಅವರು ಫೆಬ್ರವರಿ 16 ರಂದು ಬೆಳಗ್ಗೆ ನಾಲ್ಕು ಗಂಟೆಗೆ ಪೆಸಿಫಿಕ್ ಮಹಾಸಾಗರಕ್ಕೆ ಸರಕು ಸಾಗಣೆ ಹಡಗಿನ ಮೂಲಕ ಹೋಗಿದ್ದರು ಎಂದು ವಿಡಮ್ ಅವರ ಮಗ ಮರಾತ್ ಹೇಳಿದ್ದಾರೆ.

ಹಡಗಿನಲ್ಲಿದ್ದ ಸಿಬ್ಬಂದಿ ಗಮನಿಸಲು 6 ಗಂಟೆ ಸಮಯ ಬೇಕಾಯಿತು

ಇನ್ನು, ತನ್ನ ತಂದೆ ಬದುಕುಳಿದ ಬಗ್ಗೆ ವಿವರಗಳನ್ನು ಮಗ ಮರಾತ್ ಮೆಸೇಜ್ ಚಾಟ್‌ಗಳ ಮೂಲಕ ಪಡೆದಿದ್ದನು. ತನ್ನ ತಂದೆ ಮರಳಿ ಬರುತ್ತಾರೆ ಎಂಬ ನಂಬಿಕೆ ಹೊಂದಿದ್ದನು. ಇನ್ನು,  ವಿಡಮ್ ಅವರು ಹಡಗಿನಿಂದ ಸಮುದ್ರಕ್ಕೆ ಬಿದ್ದರೂ ಹಡಗು ತನ್ನ ಪಾಡಿಗೆ ಹೊರಟಿತು. ಇದರಿಂದ ಆತಂಕಪಡದೇ ಆತ ಸೂರ್ಯ ಉದಯಿಸುವವರೆಗೂ ತೇಲುತ್ತಾ ಇರಲು ಹೆಣಗಾಡಿದನು. ಕೊನೆಗೆ ಸಮುದ್ರದಲ್ಲಿ ದೂರದಲ್ಲಿ ಕಪ್ಪು ದ್ವೀಪ ಗಮನಿಸಿ ಆ ಕಡೆಗೆ ಈಜಿದರು. ಆಗ ಕೈಗೆ ಸಿಕ್ಕ ಸಮುದ್ರದ ಕಸವನ್ನು ಹಿಡಿದು 14 ಗಂಟೆಗಳ ಕಾಲ ತಮ್ಮ ಜೀವ ಉಳಿಸಿಕೊಂಡಿದ್ದರು ಎಂದು ಮರಾಟ್ ಹೇಳಿದರು. ಇನ್ನು, ಹಡಗಿನಲ್ಲಿ ತಮ್ಮ ಎಂಜಿನಿಯರ್ ಕಾಣೆಯಾಗಿದ್ದಾರೆ ಎಂದು ಹಡಗಿನಲ್ಲಿದ್ದ ಸಿಬ್ಬಂದಿ ಗಮನಿಸಲು 6 ಗಂಟೆ ಸಮಯ ಬೇಕಾಯಿತು. ಆಗ ಹಡಗನ್ನು ವಾಪಸ್ ತಿರುಗಿಸಿದರು.

ವರದಿಗಳ ಪ್ರಕಾರ, ಸಮುದ್ರಕ್ಕೆ ಬಿದ್ದ ವಿಡಮ್ ಅವರು ಮಾಡಿದ ಕೊನೆಯ ಕೆಲಸಗಳನ್ನು ನೋಡಿ ಅವರು ನೀರಿಗೆ ಬಿದ್ದಿರುವ ಅಂದಾಜು ಸ್ಥಳವನ್ನು ಪತ್ತೆಹಚ್ಚಿದ್ದರು. ಅಷ್ಟೇ ಅಲ್ಲದೇ ಹಡಗಿನ ನಿರ್ದೇಶಾಂಕಗಳು ಹಡಗು ತೊಂದರೆಯಲ್ಲಿರುವ ಸಂದೇಶಗಳನ್ನು ರೇಡಿಯೋ ಮಾಡಲಾಯಿತು. ಆಗ, ಫ್ರೆಂಚ್ ನೌಕಾಪಡೆಯ ವಿಮಾನಗಳು ಟಹೀಟಿಯಿಂದ ಹುಡುಕಾಟಕ್ಕೆ ಸೇರಿಕೊಂಡವು. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಹಡಗನ್ನು ನೋಡಿದ ವಿಡಮ್ ಕೂಗಿ ಕರೆದನು. ಅಪಾಯದಲ್ಲಿ ಸಿಲುಕಿದ್ದ ವ್ಯಕ್ತಿಯ ಧ್ವನಿಯನ್ನು ಕೇಳಿ ಹಡಗನ್ನು ಸಮುದ್ರಕ್ಕೆ ಬಿದ್ದ ವಿಡಮ್ ಕಡೆಗೆ ತರಲಾಯಿತು. ಆತನಲ್ಲಿರುವ ಧೈರ್ಯವೇ ಆತನು ಉಳಿಯಲು ಕಾರಣವಾಗಿದೆ ಎಂದು ಆತನ ಮಗ ಮರಾತ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾನೆ.
Published by: Latha CG
First published: February 26, 2021, 10:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories