ಸಂಬಂಧಗಳಲ್ಲಿ ಅತ್ಯಂತ ನಿಷ್ಕಲ್ಮಶ ಸಂಬಂಧ ಎಂದರೆ ಅಜ್ಜ-ಅಜ್ಜಿ, ಮೊಮ್ಮಕ್ಕಳ ಸಂಬಂಧ. ಇವರಿಬ್ಬರಲ್ಲಿ ಯಾರು ಮಕ್ಕಳು, ಯಾರು ಹಿರಿಯರು ಎಂದು ಹೇಳುವುದೇ ಕಷ್ಟ ಅಷ್ಟೊಂದು ಆಪ್ತತೆ, ಒಡನಾಟ, ಒಲವು ತುಂಬಿರುತ್ತದೆ. ಅಜ್ಜ-ಅಜ್ಜಿ ಇರುವ ಮನೆಯಲ್ಲಿ ಮಕ್ಕಳು ತಾಯಿಯನ್ನು ಬಿಟ್ಟರೆ ಅಜ್ಜಿ-ಅಜ್ಜಂದಿರನ್ನೇ ಅವಲಂಬಿಸಿರುತ್ತಾರೆ. ಏಕೆಂದರೆ ಮಕ್ಕಳೊಂದಿಗೆ ಮಕ್ಕಳಾಗುವ ಪರಿ ಮಾತ್ರ ಅಜ್ಜ-ಅಜ್ಜಿಂದಿರಿಗೆ ಮಾತ್ರ ಸಾಧ್ಯ. ಮೊಮ್ಮಕ್ಕಳೊಂದಿಗೆ ಆಟವಾಡುವುದು, ಶಾಲೆಗೆ ಬಿಡುವ, ಕರೆದುಕೊಂಡು ಬರುವ, ಇವುಗಳನ್ನು ಮೊಮ್ಮಕ್ಕಳು ಜನಿಸಿದ ಮೇಲೆ ತಮ್ಮ ಜೀವನದ ಅಭ್ಯಾಸ ಎಂದೇ ರೂಢಿಸಿಕೊಂಡಿರುತ್ತಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೊಮ್ಮಕ್ಕಳ ಮತ್ತು ಅಜ್ಜನ ಪ್ರೀತಿ ಬಾಂಧವ್ಯದ ವಿಡಿಯೋ ವೈರಲ್ ಆಗಿದ್ದು, ಆ ವಿಡಿಯೋಗೆ ಅಪಾರ ಜನರು ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.
ಮನೆಯ ಮುಂದೆ ಅಜ್ಜ ಕುಳಿತುಕೊಂಡಿರುವುದನ್ನು ನೋಡಿ ಸ್ವರ್ಗವೇ ಧರೆಗಿಳಿದಷ್ಟು ಮೊಮ್ಮಕ್ಕಳು ಸಂತೋಷಪಡುವ ಪರಿ ಮಾತ್ರ ಜನರ ಮನಸೂರೆಗೊಂಡಿದೆ. ಈ ವಿಡಿಯೋವನ್ನು ಗುಡ್‍ನ್ಯೂಸ್ ಕರೆಸ್ಪಾಂಡೆಂಟ್ ಎಂಬ ಟ್ವೀಟರ್ ಖಾತೆಯು ಶೇರ್ ಮಾಡಿದೆ.
ಆರು ತಿಂಗಳ ನಂತರ ಮೊದಲ ಬಾರಿಗೆ ತಮ್ಮ ಅಜ್ಜನನ್ನು ನೋಡುವ ಆಶ್ಚರ್ಯಕ್ಕಿಂತ ಈ ಮೊಮ್ಮಕ್ಕಳಿಗೆ ಬೇರೆ ಯಾವುದು ಅಚ್ಚರಿ ಇಲ್ಲ ಎಂಬ ಅಡಿಬರಹದಡಿ 49 ಸೆಕೆಂಡ್‍ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ ಪ್ರತಿಯೊಬ್ಬ ನೆಟ್ಟಿಗರಿಗೂ ತಮ್ಮ ತಾತಾ ಅಥವಾ ಅಜ್ಜನನ್ನು ನೆನಪು ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು.
ಅಜ್ಜನು ಮನೆಯ ಮುಂದೆ ಕುಳಿತಿರುತ್ತಾನೆ. ಶಾಲೆ ಮುಗಿಸಿ ಮನೆಗೆ ಬಂದ ಮೊಮ್ಮಕ್ಕಳು ಅಜ್ಜ ಮನೆಯ ಮುಂದೆ ಕುಳಿತಿರುವುದನ್ನು ಕಂಡು ಖುಷಿ ಪಡುತ್ತಾ ಕಿರುಚುತ್ತಿದ್ದರೆ, ತಾತನು ಸಹ ಆ ಮೊಮ್ಮಕ್ಕಳನ್ನು ನಗುತ್ತಾ ತಬ್ಬಿ ಮುದ್ದಾಡುತ್ತಾರೆ. ಆ ಮೊಮ್ಮಕ್ಕಳ ಖುಷಿ ಮಾತ್ರ ಮುಗಿಲು ಮುಟ್ಟಿದೆ. ಈ ವಿಡಿಯೋವನ್ನು 10 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಟ್ವೀಟ್ ಪ್ರಕಾರ, ಅಜ್ಜ ತನ್ನ ಇಬ್ಬರು ಮೊಮ್ಮಕ್ಕಳಾದ ಜೋಯಿ ಮತ್ತು ಡ್ರೂ ಅವರನ್ನು ನೋಡಲು ಜಾರ್ಜಿಯಾದಿಂದ ಫೇರ್‍ಫೀಲ್ಡ್‍ಗೆ ತೆರಳಿದರು. ನಂತರ ಅವರು ಅವರನ್ನು ಅಚ್ಚರಿಗೊಳಿಸುವುದಕ್ಕಾಗಿ ಮೊಮ್ಮಕ್ಕಳು ಶಾಲೆಯಿಂದ ಹಿಂದಿರುಗುವ ವೇಳೆ ಮನೆಯ ಮುಂಭಾಗದಲ್ಲಿ ಕಾಯುತ್ತಿದ್ದರು.
ಈ ವಿಡಿಯೋಗೆ ನೆಟ್ಟಿಜನ್‍ಗಳಿಂದ ಕಮೆಂಟ್‍ಗಳ ಸುರಿಮಳೆಯೇ ಸುರಿದಿದೆ. ಅದರಲ್ಲಿ ಒಬ್ಬರು ಬೆಲೆಕಟ್ಟಲಾಗದ್ದು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಸರಳ ಮತ್ತು ಸುಂದರ, ಧನ್ಯವಾದಗಳು ಎಂದು ಹೇಳಿದ್ದಾರೆ, ಮತ್ತೊಬ್ಬರು, ನಾನು ಅಜ್ಜನಾಗುವುದಾದರೆ ಈ ರೀತಿಯ ಅಜ್ಜನಾಗುತ್ತೇನೆ ಎಂದಿದ್ದಾರೆ.
ಇದು ತುಂಬಾ ಸುಂದರವಾಗಿದೆ. ಈ ಮೊಮ್ಮಕ್ಕಳು ತಮ್ಮ ಅಜ್ಜನೊಂದಿಗೆ ಅಮೂಲ್ಯ ಸಮಯವನ್ನು ಕಳೆಯುತ್ತಾರೆ ಎಂದೆನಿಸುತ್ತಿದ್ದೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ನೋಡಿದ ಮತ್ತೊಬ್ಬರು ನೆಟ್ಟಿಗರು ಭಾವುಕರಾಗಿ ನಾನು ನನ್ನ ಅಜ್ಜ-ಅಜ್ಜಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ನುಡಿದಿದ್ದಾರೆ.
ಮತ್ತೊಬ್ಬರು ನಾನು ಅಳುವುದಿಲ್ಲ ಎಂದು ಹೇಳುವ ಮೂಲಕ ಅಜ್ಜ-ಅಜ್ಜಿಯ ಅಗಾಧವಾದ ಪ್ರೀತಿಯನ್ನು ಎರಡೇ ಪದಗಳಲ್ಲಿ ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ